ಪ್ರೊ ಕಬಡ್ಡಿ ಲೀಗ್: 9ನೇ ಸೋಲು ಕಂಡ ಬೆಂಗಳೂರು ಬುಲ್ಸ್‌, ಮುಂಬಾ ಎದುರು ವಿರೋಚಿತ ಸೋಲು

By Naveen Kodase  |  First Published Nov 19, 2024, 11:00 AM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವು 9ನೇ ಸೋಲು ಅನುಭವಿಸುವ ಮೂಲಕ ನಿರಾಸೆ ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನೋಯ್ಡಾ: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ 11 ಪಂದ್ಯಗಳಲ್ಲಿ 9ನೇ ಸೋಲು ಅನುಭವಿಸಿದೆ. ಸೋಮವಾರ ಯು ಮುಂಬಾ ವಿರುದ್ಧ ನಡೆದ ಪಂದ್ಯದಲ್ಲಿ 37-38 ಅಂಕಗಳಲ್ಲಿ ವೀರೋಚಿತ ಸೋಲು ಕಂಡಿತು. ಕಳೆದ ಕೆಲ ಪಂದ್ಯಗಳಲ್ಲಿ ಅಂಕಣದಿಂದ ಹೊರಗಿದ್ದ ಪ್ರದೀಪ್‌ ನರ್ವಾಲ್‌ ಈ ಪಂದ್ಯದಲ್ಲಿ ಕಣಕ್ಕಿಳಿದು ಸೂಪರ್‌-10 (10 ರೈಡ್‌ ಅಂಕ) ದಾಖಲಿಸಿದರೂ, ಬುಲ್ಸ್‌ಗೆ ಗೆಲುವು ಒಲಿಯಲಿಲ್ಲ.

ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಾಗಲೂ 1 ಅಂಕ (20-21) ಹಿಂದಿದ್ದ ಬುಲ್ಸ್‌, ಕೊನೆಗೆ 1 ಅಂಕದಿಂದಲೇ ಸೋಲುಂಡಿತು. ಮುಂಬಾರ ಪರ ರೈಡರ್‌ಗಳಾದ ಅಜಿತ್‌ ಚೌಹಾಣ್‌ 10, ಮನ್‌ಜೀತ್‌ 9 ಅಂಕ ಗಳಿಸಿ ಗೆಲುವಿಗೆ ಸಹಕರಿಸಿದರು. ಈ ಜಯರೊಂದಿಗೆ ಮುಂಬಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

Tap to resize

Latest Videos

undefined

ಕೆ ಎಲ್ ರಾಹುಲ್ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಫೇಮಸ್ ವ್ಯಕ್ತಿ ಯಾರು? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಕನ್ನಡಿಗ

ಸ್ಟೀಲರ್ಸ್‌ಗೆ ಸೋಲು: ಸತತ 5 ಜಯದೊಂದಿಗೆ ಮುನ್ನುಗ್ಗುತ್ತಿದ್ದ ಹರ್ಯಾಣ ಸ್ಟೀಲರ್ಸ್‌ಗೆ ಸೋಮವಾರ ತೆಲುಗು ಟೈಟಾನ್ಸ್ ವಿರುದ್ಧ 27-49ರ ಅಚ್ಚರಿಯ ಸೋಲು ಎದುರಾಯಿತು. ಆದರೂ, ಹರ್ಯಾಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಕಲಬುರಗಿ ಓಪನ್‌ ಟೆನಿಸ್‌: ಪ್ರಧಾನ ಸುತ್ತಿಗೆ ಭಾರತದ 7 ಆಟಗಾರರ ಪ್ರವೇಶ

ಕಲಬುರಗಿ: ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೆ ಭಾರತದ 7 ಆಟಗಾರರು ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಕರ್ನಾಟಕದ ಪ್ರಜ್ವಲ್‌ ದೇವ್‌, ಧೀರಜ್‌ ಶ್ರೀನಿವಾಸನ್‌ ಸಹ ಸೇರಿದ್ದಾರೆ. ಕರಣ್ ಸಿಂಗ್‌, ಆರ್ಯನ್‌ ಶಾ, ದೇವ್‌ ಜಾವಿಯಾ ಶ್ರೇಯಾಂಕ ಪಡೆದಿದ್ದಾರೆ. ಉಜ್ಬೇಕಿಸ್ತಾನದ ಖುಮೊಯುನ್‌ ಸುಲ್ತಾನೊವ್‌ ಅಗ್ರಶ್ರೇಯಾಂಕ ಪಡೆದಿದ್ದಾರೆ. ಮಂಗಳವಾರದಿಂದ ಇಲ್ಲಿನ ಚಂದ್ರಶೇಖರ್‌ ಪಾಟೀಲ್‌ ಕ್ರೀಡಾಂಗಣದಲ್ಲಿ ಪ್ರಧಾನ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿವೆ.

ಮಿನಿ ಒಲಿಂಪಿಕ್ಸ್‌: ಹಾಸನ, ಬೆಳಗಾವಿಗೆ ಫುಟ್ಬಾಲ್‌ ಚಿನ್ನ

ಬೆಂಗಳೂರು: 3ನೇ ಆವೃತ್ತಿಯ ರಾಜ್ಯ ಮಿನಿ ಒಲಿಂಪಿಕ್ಸ್‌ ಅಂಡರ್‌-14 ಕ್ರೀಡಾಕೂಟದಲ್ಲಿ ಸೋಮವಾರ ಬಾಲಕರ ಫುಟ್ಬಾಲ್‌ ಸ್ಪರ್ಧೆಯಲ್ಲಿ ಹಾಸನ ತಂಡ ಚಿನ್ನದ ಪದಕ ಜಯಿಸಿತು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ ಚಿನ್ನ ಬಾಚಿಕೊಂಡಿತು. ಹಾಸನ ತಂಡ ಫೈನಲ್‌ನಲ್ಲಿ ಕೊಡಗು ತಂಡವನ್ನು 1-0 ಗೋಲಿನಿಂದ ಸೋಲಿಸಿದರೆ, ಬೆಳಗಾವಿ ತಂಡವು ಉತ್ತರ ಕನ್ನಡ ತಂಡದ ವಿರುದ್ಧ 4-0 ಗೋಲುಗಳಿಂದ ಜಯಭೇರಿ ಬಾರಿಸಿತು.

ಇನ್ನು ಕಬಡ್ಡಿಯಲ್ಲಿ ತುಮಕೂರು ಬಾಲಕರ ತಂಡ ಚಿನ್ನದ ಪದಕ ಗೆದ್ದರೆ, ಬಾಲಕಿಯರ ವಿಭಾಗದಲ್ಲಿ ಹಾವೇರಿ ತಂಡಕ್ಕೆ ಸ್ವರ್ಣ ಪದಕ ದೊರೆಯಿತು. ಫೈನಲ್‌ನಲ್ಲಿ ತುಮಕೂರು ತಂಡ ಶಿವಮೊಗ್ಗ ತಂಡವನ್ನು 55-33 ಅಂಕಗಳಲ್ಲಿ ಸೋಲಿಸಿದರೆ, ಹಾವೇರಿ ತಂಡ ಬೆಂಗಳೂರು ಗ್ರಾಮಾಂತರ ವಿರುದ್ಧ 39-33 ಅಂಕಗಳ ರೋಚಕ ಗೆಲುವು ದಾಖಲಿಸಿತು.

ಕನಸಿನ ಬಲಿಷ್ಠ ಟಿ20 ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್‌! 4 ಭಾರತೀಯರಲ್ಲಿ ರೋಹಿತ್‌ಗಿಲ್ಲ ಸ್ಥಾನ

ಬಾಲಕರ ಖೋ-ಖೋನಲ್ಲಿ ಬೆಳಗಾವಿ ತಂಡ ಚಿನ್ನ ಗೆದ್ದರೆ, ಮೈಸೂರು ತಂಡ ಬೆಳ್ಳಿಗೆ ತೃಪ್ತಿಪಟ್ಟಿತು. ಬಾಗಲಕೋಟೆ ಹಾಗೂ ಹಾವೇರಿ ತಂಡಗಳು ಕಂಚು ಪಡೆದವು. ಬಾಲಕಿಯರ ವಿಭಾಗದಲ್ಲಿ ಗದಗ ತಂಡ ಚಿನ್ನ, ಮೈಸೂರು ಬೆಳ್ಳಿ, ಕೋಲಾರ ಹಾಗೂ ಧಾರವಾಡ ತಂಡಗಳು ಕಂಚು ಗಳಿಸಿದವು.

ಅಥ್ಲೆಟಿಕ್ಸ್‌ನ ಬಾಲಕರ 400 ಮೀ. ಓಟದಲ್ಲಿ ಮೈಸೂರಿನ ಅಜಯ್‌ ಪೃಥ್ವಿ ಚಿನ್ನ ಗೆದ್ದರೆ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಗೌರಿ ಪೂಜಾರಿ ಸ್ವರ್ಣಕ್ಕೆ ಮುತ್ತಿಟ್ಟರು. ಬಾಲಕರ ಡಿಸ್ಕಸ್‌ ಥ್ರೋನಲ್ಲಿ ಶಿವಮೊಗ್ಗದ ಸೂರ್ಯ ಸಮರ್ಥ್‌, ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ತನೀಷ್ಕಾ ಚಿನ್ನ ಜಯಿಸಿದರು.

click me!