
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Bollywood actress Kiara Advani) ತಮ್ಮ ಫ್ಯಾಶನ್ ಸೆನ್ಸ್‌ನಿಂದ ಫ್ಯಾನ್ಸ್ ಅಟ್ರ್ಯಾಕ್ಟ್ ಮಾಡ್ತಿರ್ತಾರೆ. ಆದ್ರೆ ಈ ಬಾರಿ ಕಿಯಾರಾ ಅಡ್ವಾಣಿ, ಸೋಶಿಯಲ್ ಮೀಡಿಯಾ ಪೋಸ್ಟ್ (social media post) ನಿಂದ ಟ್ರೋಲ್ ಆಗಿದ್ದಾರೆ. ಕಿಯಾರಾ ಅಡ್ವಾಣಿ, ಗೋಲ್ಡನ್ ಟೂತ್ ಬ್ರಷ್ (golden toothbrush) ಫೋಟೋ ಪೋಸ್ಟ್ ಮಾಡಿದ್ದು, ಅದಕ್ಕೆ ಅವರು ಹಾಕಿರುವ ಶೀರ್ಷಿಕೆ, ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕನ್ನಡಿ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಕೂದಲು ಬಿಟ್ಕೊಂಡಿರುವ ಅವರು, ಬಿಳಿ ಟೀ ಶರ್ಟ್ ಧರಿಸಿದ್ದಾರೆ. ಅವರ ಕೈನಲ್ಲಿ ಟೂತ್ ಬ್ರಷ್ ಇದೆ. ಅದು ಗೋಲ್ಡನ್ ಬಣ್ಣದಲ್ಲಿದೆ. ಈ ಫೋಟೋ ಜೊತೆ ಕಿಯಾರಾ,ನೀವು ಸಿಂಧಿ ಎಂದು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ ಎನ್ನುವ ಅರ್ಥದಲ್ಲಿ ಶೀರ್ಷಿಕೆ ಹಾಕಿದ್ದಾರೆ. ಕಿಯಾರಾ ನಾನು ಸಿಂಧಿ ಎಂಬುದನ್ನು ಗೋಲ್ಡನ್ ಬ್ರಷ್ ಹಿಡಿದು ತೋರಿಸಲು ಹೊರಟಿದ್ದಾರೆ. ಕಿಯಾರಾ ತಾನು ಸಿಂಧಿ ಎಂದು ವಿಶಿಷ್ಟ ರೀತಿಯಲ್ಲಿ ಸಾಬೀತುಪಡಿಸುವಂತೆ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.
ಸೌತ್‌ನಿಂದ ಸಿನಿಮಾಗೆ ಬಂದ ಐಶ್ವರ್ಯಾ ರೈ ಮೊದಲ ಸಿನಿಮಾದ ಹೀರೋ ಯಾರು ಗೊತ್ತಾ?
ಕಿಯಾರಾ ಅಡ್ವಾಣಿ ಪೋಸ್ಟ್ ವೈರಲ್ ಆಗ್ತಿದ್ದಂತೆ ನೆಟ್ಟಿಗರು ತಮ್ಮ ಕಮೆಂಟ್ ಶುರು ಮಾಡಿದ್ದಾರೆ. ಕಿಯಾರಾ ಏನು ಹೇಳಲು ಹೊರಟಿದ್ದಾರೆ, ಸಿಂಧಿಗಳು ಶ್ರೀಮಂತರು ಎಂದು ಸಾಬೀತುಪಡಿಸಲು ಬಯಸುತ್ತಿದ್ದಾರಾ ಅಥವಾ ಜಿಪುಣರು ಎಂದಾ ಎಂದು ಪ್ರಶ್ನಿಸಿದ್ದಾರೆ. ಇಷ್ಟು ತೋರಿಸಬೇಡಿ, ಮುಂದೊಂದು ದಿನ ಮುಳುಗುವುದು ಖಚಿತ ಎಂಬ ಕಮೆಂಟ್ ಬಂದಿದೆ. ನಾನು ಪ್ರತಿ 3 ತಿಂಗಳಿಗೊಮ್ಮೆ ನನ್ನ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುತ್ತೇನೆ, ಆದರೆ ಇವರು ತಮ್ಮ ಇಡೀ ಜೀವನಕ್ಕೆ ಅದೇ ಬ್ರಷ್ ಅನ್ನು ಬಳಸುತ್ತಾರೆ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಕೈನಲ್ಲಿ ಹೆಚ್ಚಿನ ಹಣವಿದ್ರೆ ಹೀಗೆ ಎಂದು ಮತ್ತೊಬ್ಬರು ಬರೆದಿದ್ದಾರೆ. ನನ್ನ ಪ್ರಕಾರ, ಇವರ ಹಲ್ಲೂ ಚಿನ್ನವಾಗ್ಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಇದು ಚಿನ್ನದ್ದಲ್ಲ, ಹೋಟೆಲ್ನಲ್ಲಿರುವ 10 ರೂಪಾಯಿ ಬ್ರಷ್ ಎಂದು ಬಳಕೆದಾರರು ತಮಾಷೆ ಮಾಡಿದ್ದಾರೆ. ಫೋಟೋದಲ್ಲಿ ಗೋಲ್ಡನ್ ಕಲರ್ ನಲ್ಲಿ ಕಾಣಿಸುವ ನಲ್ಲಿ ಕೂಡ ಬಂಗಾರದ್ದಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಅಂಬಾನಿ ಮನೆಯ ಟಾಯ್ಲೆಟ್ ಕೂಡ ಬಂಗಾರದ್ದು, ಬರೀ ಬ್ರಷ್ ಗೆ ಇಷ್ಟೊಂದು ಬಿಲ್ಡಪ್ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಎಷ್ಟೇ ದುಬಾರಿಯಾದ್ರೂ ಹಲ್ಲನ್ನು ಪ್ಲಾಸ್ಟಿಕ್ ಬ್ರಷ್ ನಲ್ಲೇ ತಿಕ್ಕುತ್ತಿದ್ದೀರಿಲ್ಲ, ನೀವೀಗ ಸಿಂಧಿಯಲ್ಲ ಹೀಗೆ ನಾನಾ ಕಮೆಂಟ್ಸ್ ಬಂದಿದೆ. ಬಳಕೆದಾರರಿಗೆ ಅಂಬಾನಿ ಫ್ಯಾಮಿಲಿ ಯಾವ ಬ್ರಷ್ ಬಳಕೆ ಮಾಡುತ್ತೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ಯಂತೆ. ಅದನ್ನೂ ಕಮೆಂಟ್ ಮೂಲಕ ತಿಳಿಸಿದ್ದಾರೆ.
ಮಹಾನಟಿ ಕೀರ್ತಿ ಸುರೇಶ್ ಗೆ ಕಂಕಣ ಭಾಗ್ಯ, ಪ್ರಿಯಕರನೊಂದಿಗೆ ಹಸೆಮಣೆ ಏರಲಿದ್ದಾರೆ ನಟಿ
ಕಿಯಾರಾ ಅಡ್ವಾಣಿ 31 ಜುಲೈ 1992 ರಂದು ಮುಂಬೈನಲ್ಲಿ ಜನಿಸಿದ್ರು. ಅವರ ತಂದೆಯ ಹೆಸರು ಜಗದೀಪ್ ಅಡ್ವಾಣಿ. ಅವರು ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿಯ ಬಾಲ್ಯದ ಗೆಳತಿ. ಕಿಯಾರಾ ಅಡ್ವಾಣಿ ತಮ್ಮ ಆರಂಭಿಕ ಶಿಕ್ಷಣವನ್ನು ಮುಂಬೈನಲ್ಲಿ ಪೂರ್ಣಗೊಳಿಸಿದ್ದರು. ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್ ನಲ್ಲಿ ನಟನೆಯ ಸೂಕ್ಷ್ಮಗಳನ್ನು ಕಲಿತ ಕಿಯಾರಾ, ಫಗ್ಲಿ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2019 ರಲ್ಲಿ ಬಿಡುಗಡೆಯಾದ ಕಿಯಾರಾ ಅವರ ಚಿತ್ರ ಕಬೀರ್ ಸಿಂಗ್ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ಹೊಸ ದಾಖಲೆ ಬರೆದಿತ್ತು. ಶೇರ್ಷಾ ಚಿತ್ರದ ನಂತರ, ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra), ಕಿಯಾರಾ ಡೇಟಿಂಗ್ ಸುದ್ದಿ ಚರ್ಚೆಯಲ್ಲಿತ್ತು. 2 ವರ್ಷಗಳ ನಂತರ ಫೆಬ್ರವರಿ 7, 2023 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿಯಾರಾ ಅಡ್ವಾಣಿ ಪ್ರಸ್ತುತ, ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಜೊತೆಗಿನ ಗೇಮ್ ಚೇಂಜರ್ ಚಿತ್ರದಲ್ಲಿ ಬ್ಯುಸಿಯಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.