ರಮೇಶ್ ಅರವಿಂದ್ ಥರ ಸ್ಯಾಂಡಲ್‌ವುಡ್‌ನ ತ್ಯಾಗರಾಣಿ ಆಗ್ಬಿಟ್ರಾ ರುಕ್ಮಿಣಿ ವಸಂತ್! ಏನೀ ನೋವಿನ ಕಥೆ?

By Bhavani Bhat  |  First Published Nov 19, 2024, 10:58 AM IST

 ರುಕ್ಮಿಣಿ ವಸಂತ್ ಬಗ್ಗೆ ಸೋಷಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಕಂಟಿನ್ಯುಯಸ್ ಮೂರು ವಾರ ಮೂರು ಸಿನಿಮಾ ತೆರೆಕಂಡ ಖುಷೀಲಿರೋ ರುಕ್ಮಿಣಿಗೆ ಸಡನ್ನಾಗಿ ಎಲ್ಲ ತ್ಯಾಗರಾಣಿ ಅಂತಿದ್ದಾರೆ. ಯಾರಿರಬಹುದು?


ರುಕ್ಮಿಣಿ ವಸಂತ್ ಕನ್ನಡದ ಪ್ರತಿಭಾವಂತ ನಟಿ. ಸದ್ಯಕ್ಕೀಗ ಅವರು ಸ್ಯಾಂಡಲ್‌ವುಡ್‌ನ ತ್ಯಾಗರಾಣಿಯಾಗಿದ್ದಾರೆ. ಕಾರಣ ನೀವಂದುಕೊಂಡಷ್ಟು ಸಿಂಪಲ್ ಅಂತೂ ಅಲ್ಲ. ಸದ್ಯಕ್ಕಂತೂ ಈ ರೀತಿಯ ಗುರುತರ ಆರೋಪ ರುಕ್ಮಿಣಿ ಅವರ ಮೇಲೆ ಬರೋದಕ್ಕೆ ಒಂದು ಬಲವಾದ ಕಾರಣ ಇದೆ. ಅಂದ ಹಾಗೆ ರುಕ್ಮಿಣಿ ವಸಂತ್ ಸಿನಿಮಾ ರಂಗದಲ್ಲಿ ಮಿಂಚಬೇಕು ಎಂಬ ಕನಸನ್ನು ಬಹಳ ಎಳೆಯ ಹರೆಯದಲ್ಲೇ ಕಂಡಿದ್ದರು. ಹೀಗಾಗಿ ಈ ಕ್ಷೇತ್ರದಲ್ಲೇ ಓದನ್ನು ಮುಂದುವರಿಸಿದರು. ಲಂಡನ್‌ನ ಆಕ್ಟಿಂಗ್‌ ಸ್ಕೂಲ್‌ನಲ್ಲಿ ಸಿನಿಮಾದ ಬಗ್ಗೆ ವ್ಯಾಕರಣ ಕಲಿತು ಬಂದಿರೋ ಈ ನಟಿ ಸದ್ಯ ಕನ್ನಡ ಮಾತ್ರ ಅಲ್ಲ, ದಕ್ಷಿಣ ಭಾರತದ ಬಹುಬೇಡಿಕೆಯ ಪ್ರತಿಭಾವಂತ ನಟಿ ಅಂತಲೇ ಫೇಮಸ್ ಆಗಿದ್ದಾರೆ.

ಸದ್ಯ ಅವರ ಸಿನಿಮಾ ಜರ್ನಿಯಲ್ಲಿ ಬರ್ತಾ ಇರುವ ಪಾತ್ರಗಳ ಬಗ್ಗೆ ಸೋಷಲ್ ಮೀಡಿಯಾದಲ್ಲಿ ಬಹಳ ಚರ್ಚೆ ನಡೀತಿದೆ. ನಿಮಗೆಲ್ಲ ಗೊತ್ತಿರಬಹುದು, ರಮೇಶ್ ಅರವಿಂದ್ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ತ್ಯಾಗರಾಜ ಅನ್ನೋ ಬಿರುದು ಇದೆ. ಇದಕ್ಕೆ ಕಾರಣ ಅವರು ಮಾಡಿರೋ ಪಾತ್ರಗಳು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ' ದಿಂದ ಹಿಡಿದು ಸಾಕಷ್ಟು ಸಿನಿಮಾಗಳಲ್ಲಿ ಅವರು ಭಗ್ನಪ್ರೇಮಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ರಮೇಶ್ ರೊಮ್ಯಾಂಟಿಕ್ ಪಾತ್ರಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ವೈವಿಧ್ಯಮಯವಾದ ಬೇರೆ ಬೇರೆ ರೋಲ್‌ಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಚಿಕ್ಕ ವಯಸ್ಸಿನ ರುಕ್ಮಿಣಿ ವಸಂತ್ ವೃತ್ತಿ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರುತ್ತಿದ್ದಾರೆ. ಆದರೆ ಕನ್ನಡ ಸಿನಿಮಾದಲ್ಲಿ ಮಾತ್ರ ಅವರು ತ್ಯಾಗರಾಣಿ ಅಂತಲೇ ಫೇಮಸ್ ಆಗ್ತಿದ್ದಾರೆ.

Tap to resize

Latest Videos

undefined

ಛಾಯಾ ಸಿಂಗ್ 12 ವರ್ಷಗಳ ದಾಂಪತ್ಯ; 10 ದಿನ ಒಟ್ಟಿಗೆ ಕಳೆಯೋದೂ ಕಷ್ಟ!

ಇದಕ್ಕೆ ಕಾರಣ ಅವರಿಗೆ ಬರುತ್ತಿರುವ ಪಾತ್ರಗಳು. ಬೀರ್‌ಬಲ್ ಚಿತ್ರದ ಮೂಲಕವೇ ರುಕ್ಮಿಣಿ ವಸಂತ್ ಕನ್ನಡಕ್ಕೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿ ಜಾಹ್ನವಿ ಅನ್ನೋ ಪಾತ್ರವನ್ನ ಮಾಡಿದ್ದರು. ಆದರೆ, ಈ ಚಿತ್ರ ಆದ್ಮೇಲೆ ಬಂದ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ರುಕ್ಮಿಣಿ ವಸಂತ್ ತುಂಬಾನೆ ಅದ್ಭುತವಾದ ಪಾತ್ರವನ್ನೆ ಮಾಡಿದ್ದರು. ಈ ಚಿತ್ರದಲ್ಲಿ ಪ್ರಿಯಾ ಅನ್ನುವ ರೋಲ್ ಮಾಡಿದ್ದರು. ರಕ್ಷಿತ್ ಶೆಟ್ಟಿ ಮನುವಾಗಿ ಈ ಚಿತ್ರದಲ್ಲಿ ಅದ್ಭುತ ಲವ್ ಸ್ಟೋರಿಯನ್ನ ಅಷ್ಟೇ ಹೃದಯ ಸ್ಪರ್ಶಿಯಾಗಿಯೇ ಅಭಿನಯಿಸಿದ್ದರು. ಆದರೆ, ಇಲ್ಲಿ ಮನುಗೆ ಪ್ರಿಯಾ ಸಿಗೋದೇ ಇಲ್ಲ. ಮನು ಈ ಪ್ರಿಯಾಗೋಸ್ಕರವೇ ಪ್ರೀತಿಯಲ್ಲಿಯೇ ಕಳೆದು ಹೋಗ್ತಾನೆ..

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರದಲ್ಲಿ ರುಕ್ಮಿಣಿ ವಸಂತ್ ಲೀಲಾ ಅನ್ನೋ ಪಾತ್ರವನ್ನೆ ಅಷ್ಟೇ ಸೊಗಸಾಗಿ ನಟನೆ ಮಾಡಿದ್ದಾರೆ. ಆದರೆ, ಈ ಪಾತ್ರಕ್ಕೆ ಇಲ್ಲಿ ದುರಂತ ಅಂತ್ಯವೇ ಇದೆ. ಹಾಗಾಗಿಯೇ ನಾಯಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ ರುಕ್ಮಿಣಿ ವಸಂತ್ ಇಲ್ಲೂ ಸಿಗೋದೇ ಇಲ್ಲ. ಮೊನ್ನೆ ರಿಲೀಸ್ ಆದ ಬಘೀರ ಚಿತ್ರದಲ್ಲೂ ರುಕ್ಮಿಣಿ ವಸಂತ್ ಇದ್ದಾರೆ. ಡಾಕ್ಟರ್ ಸ್ನೇಹಾ ಆಗಿಯೇ ರುಕ್ಮಿಣಿ ವಸಂತ್ ಇಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಎರಡನೇ ಸಲ ಡಾಕ್ಟರ್ ಪಾತ್ರವನ್ನೆ ಮಾಡಿದ್ದಾರೆ. ಆದರೆ, ಇಲ್ಲೂ ನಾಯಕ ಬಘೀರನಿಗೆ ಈ ಡಾಕ್ಟರ್ ಸಿಗೋದೇ ಇಲ್ಲ ಅನ್ನೋದು ಅಷ್ಟೇ ಸ್ಯಾಡ್ ಅಂತಲೇ ಹೇಳಬಹುದು.

 24 ಗಂಟೆಗಳ ಕಾಲ ಕಾರಿನಲ್ಲಿ ಸ್ನೇಹಿತರ ಜೊತೆ ಲಾಕ್‌ ಆದ ವರುಣ್ ಆರಾಧ್ಯ; ಸುಸ್ಸು- ಊಟ-ನಿದ್ರೆ ಒಂದೇ ಜಾಗದಲ್ಲಿ!

ಕಳೆದ ವಾರ ರಿಲೀಸ್‌ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರೋ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದಲ್ಲು ರುಕ್ಮಿಣಿ ವಸಂತ್ ಇದ್ದಾರೆ. ಈ ಚಿತ್ರದಲ್ಲೂ ರುಕ್ಮಿಣಿ ವಸಂತ್ ಡಾಕ್ಟರ್ ಪಾತ್ರವನ್ನೆ ಮಾಡಿದ್ದಾರೆ. ಈ ಪಾತ್ರದಲ್ಲೂ ರುಕ್ಮಿಣಿ ವಸಂತ್ ಸ್ಪೆಷಲ್ ಫೀಲ್ ಕೊಟ್ಟು ಹೋಗುತ್ತಾರೆ. ಆದರೆ ನಾಯಕನಿಗೆ ಸಿಗಲ್ಲ.

ಸೋ ಎಲ್ಲ ಕಾರಣಕ್ಕೆ ರುಕ್ಮಿಣಿ ವಸಂತ್ ಎಂಬ ಸ್ನಿಗ್ಧ ಸುಂದರಿ ಸದ್ಯದ ಸ್ಯಾಂಡಲ್‌ವುಡ್‌ನ ತ್ಯಾಗರಾಣಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

click me!