ಬೆಂಗ್ಳೂರಲ್ಲೂ ಪೆಟ್ರೋಲ್ ಬೆಲೆ ಹಿಂದಿಕ್ಕಲಿದೆ ಡೀಸೆಲ್..!

Jun 24, 2020, 5:29 PM IST

ಬೆಂಗಳೂರು(ಜೂ.24): ಕಳೆದೆರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಇನ್ನು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಈಗಾಗಲೇ ಪೆಟ್ರೋಲ್ ಬೆಲೆಯನ್ನು ಹಿಂದಿಕ್ಕಿದೆ.

ಇದು ಡೆಲ್ಲಿ ಕತೆಯಾದರೆ ಸಿಲಿಕಾನ್ ಸಿಟಿಗೂ ಡೀಸೆಲ್ ಬೆಲೆ ಏರಿಕೆಯ ಬಿಸಿ ತಟ್ಟುವ ಎಲ್ಲಾ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಸದ್ಯ ಒಂದು ಲೀಟರ್‌ ಪೆಟ್ರೋಲ್‌ಗೆ 82.35 ರುಪಾಯಿ ದರವಿದೆ. ಇನ್ನು ಡೀಸೆಲ್ ದರ 75.71 ರುಪಾಯಿ ಇದೆ. ಅಸಹಜ ಎನ್ನುವಂತೆ ಡೆಲ್ಲಿಯಲ್ಲಿ ಈಗಾಗಲೇ ಪೆಟ್ರೋಲ್ ದರವನ್ನು ಹಿಂದಿಕ್ಕಿ ಡೀಸೆಲ್ ದರ ಏರಿಕೆಯಾಗಿದೆ.

ಅಬ್ಬಬ್ಬಾ, ಈಗ ಪೆಟ್ರೋಲ್‌ಗಿಂತ ಡೀಸೆಲ್ ರೇಟ್ ಕಾಸ್ಟ್ಲಿ..!

ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆ ಕಡಿಮೆ ಇದೆ. ಆದರೆ ಬೆಲೆ ಏರಿಕೆಯನ್ನು ಗಮನಿಸಿದರೆ ಇನ್ನು ಕೆಲವೇ ದಿನಗಳಲ್ಲಿ ಡೀಸೆಲ್ ದರ ಉದ್ಯಾನ ನಗರಿಯ ಜನತೆಯ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗುವುದರಲ್ಲಿ ಅನುಮಾನವೇ ಇಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.