ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಕಾಂಗ್ರೆಸ್ ಸಚಿವರ ಆಪ್ತನ ವಿರುದ್ಧ ಎಫ್ಐಆರ್!

By Suvarna NewsFirst Published May 2, 2024, 7:30 PM IST
Highlights

ಪ್ರಜ್ವಲ್ ರೇವಣ್ಣ ಅವರ ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಕೋಲಾಹಲ ಸೃಷ್ಟಿಸಿದೆ. ನೂರಾರು ವಿಡಿಯೋಗಳು ಮೊಬೈಲ್ ಮೂಲಕವೂ ಹರಿದಾಡಿದೆ. ಅತ್ತ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರೆ, ಇತ್ತ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಇದರ ನಡುವೆ ಪ್ರಜ್ವಲ್ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಕಾಂಗ್ರೆಸ್ ಸಚಿವ ಜಮೀರ್ ಅಹಮ್ಮದ್ ಆಪ್ತ ನವೀನ್ ಗೌಡ ವಿರುದ್ದ ಪ್ರಕರಣ ದಾಖಲಾಗಿದೆ.

ಹಾಸನ(ಮೇ.02) ಸಂಸದ ಪ್ರಜ್ವಲ್ ರೇವಣ್ಣ ಅವರ ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯ ಮಾತ್ರವಲ್ಲ ದೇಶದಲ್ಲೂ ಇದೀಗ ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿಗಳದ್ದೇ ಚರ್ಚೆಯಾಗುತ್ತಿದೆ. ಎಸ್‌ಐಟಿ ತನಿಖೆ ಜೊತೆಗೆ ಮಹಿಳಾ ಆಯೋಗ ಕೂಡ ಈ ಪ್ರಕರಣ ಕುರಿತು ನಿಗಾವಹಿಸಿದೆ. ಇದರ ನಡುವೆ ಈ ವಿಡಿಯೋಗಳನ್ನು ವೈರಲ್ ಮಾಡಿದ ಸಚಿವ ಜಮೀರ್ ಅಹಮ್ಮದ್ ಆಪ್ತ ನವೀನ್ ಗೌಡ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ನವೀನ್ ಗೌಡ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿದ್ದ ಅನ್ನೋ ಆರೋಪದಡಿ ದೂರು ದಾಖಲಾಗಿದೆ. ನವೀನ್ ಗೌಡ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ, ಸಚಿವೆ ಜಮೀರ್ ಅಹಮ್ಮದ್ ಹಾಗೂ ನವೀನ್ ಗೌಡ ಜೊತೆಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ.

Latest Videos

ಲೈಂಗಿಕ ಕಿರುಕುಳ ಕೇಸಲ್ಲಿ ಜಾಮೀನು ಕೋರಿದ ಸಂಸದ ಪ್ರಜ್ವಲ್ ಹಾಗೂ ರೇವಣ್ಣ; ಎಸ್‌ಐಟಿಗೆ ನೋಟೀಸ್ ಕೊಟ್ಟ ಕೋರ್ಟ್

ಸಚಿವ ಜಮೀರ್ ಅಹಮ್ಮದ್ ಜೊತೆ ನವೀನ್ ಗೌಡ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾನೆ. ಇದೀಗ ಈ ಎಲ್ಲಾ ಫೋಟೋಗಳು ವೈರಲ್ ಆಗಿವೆ. ಹಾಸನದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ವಿರುದ್ದ ದೂರು ದಾಖಲಾಗಿದೆ. ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಮಾಧ್ಯಮ, ವ್ಯಾಟ್ಸ್ಆ್ಯಪ್ ಮೂಲಕ ಹರಿದಾಡುತ್ತಿದ್ದಂತೆ ಏಪ್ರಿಲ್ 23ರಂದು ನವೀನ್ ಗೌಡ ವಿರುದ್ದ ಪ್ರಕರಣ ದೂರು ದಾಖಲಾಗಿತ್ತು. ಪ್ರಜ್ವಲ್ ರೇವಣ್ಣ ಚುನಾವಣಾ ಏಜೆಂಟ್ ನೀಡಿದ ದೂರಿನ ಆಧಾರದಲ್ಲಿ ಎಫ್ಐಎರ್ ದಾಖಲಾಗಿದೆ.  

ಪ್ರಜ್ವಲ್ ರೇವಣ್ಣ ಸಂಬಂಧಿಸಿದ್ದು ಎನ್ನಲಾದ ವಿಡಿಯೋಗಳನ್ನು ಲೀಕ್ ಮಾಡುವ ಮೊದಲು ನವೀನ್ ಗೌಡ ಫೇಸ್‌ಬುಕ್ ಮೂಲಕ ಪೋಸ್ಟ್ ಹಾಕಿದ್ದ ಅನ್ನೋ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲ ಪ್ರಜ್ವಲ್ ರೇವಣ್ಣ ವಿಡಿಯೋ ನೋಡಲು ವ್ಯಾಟ್ಸಆ್ಯಪ್ ಚಾನೆಲ್ ಫಾಲೋ ಮಾಡಿ ಎಂದು ಪೋಸ್ಟ್ ಹಾಕಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಇದಾದ ಬಳಿಕ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಬಿಡುಗಡೆ ಗೆ ಕ್ಷಣ ಗಣನೆ ಎಂದು ಎರಡನೆ ಫೋಸ್ಟ್ ಹಾಕಲಾಗಿತ್ತು. ಪೋಸ್ಟ್ ಹಾಕಿದ್ದ ಬಗ್ಗೆ ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಜ್ವಲ್‌ ರೇವಣ್ಣನಿಂದ 400 ಮಹಿಳೆಯರ ಮೇಲೆ ಅತ್ಯಾಚಾರ: ರಾಹುಲ್‌ ಗಾಂಧಿ ಆರೋಪ

ಈತನ ಪೋಸ್ಟ್ ಹಾಗೂ ವೈರಲ್ ವಿಡಿಯೋಗೆ ಸಂಬಂಧ ಇದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದೀಗ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

click me!