ಕನ್ನಡದ ವಿರೋಧಿ ಏಕನಾಥ್ ಶಿಂಧೆ ಅವರನ್ನ ಪ್ರಚಾರಕ್ಕೆ ಕರೆಸಿದ್ದಾರೆ. ಮಹದಾಯಿ ನೀರು ಕೊಡಲು ಆಗ್ತಿಲ್ಲ ಮಹಾರಾಷ್ಟ್ರ ಸಿಎಂಗೆ. ಕನ್ನಡಿಗರಿಗೆ ಬಿಜೆಪಿ ಅವರು ಅವಮಾನ ಮಾಡುತ್ತಿದ್ದಾರೆ. ಏಕೆ ಅವರನ್ನ ಧಾರವಾಡಕ್ಕೆ ಪ್ರಚಾರಕ್ಕೆ ಕರೆಸಿದ್ದಾರೆ. ನೇರವಾಗಿ ಬಿಜೆಪಿ ಅವರೇ ಎಲ್ಲದಕ್ಕೂ ಉತ್ತರ ಕೊಡಬೇಕು ಎಂದು ಆಗ್ರಹಿಸಿದ ಸಚಿವ ಸಂತೋಷ್ ಲಾಡ್
ಧಾರವಾಡ(ಮೇ.02): ನನಗೆ ಪ್ರಹ್ಲಾದ್ ಜೋಶಿ ಅವರು ಟಕ್ಕರ್ ಕೊಡುವ ನೆಪದಲ್ಲಿ ಸೋನಿಯಾ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಮೋಸ್ಟ್ ಪಾವರ್ ಫುಲ್ ಮನುಷ್ಯ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳ ಯುದ್ಧಗಳನ್ನ ನಿಲ್ಲಿಸುತ್ತಾರೆ. ಆದರೆ ಮಹದಾಯಿ ಯೋಜನೆ ಜಾರಿಗೆ ತರಲು ಆಗಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಸಂತೋಷ್ ಲಾಡ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, ದೇಶದ ಸಾಲ ಅಭಿವೃದ್ಧಿಗೆ ಆಗಿದೆ ಅಂತಾರೆ. 1947 ರಿಂದ 2014 ರವರೆಗೆ 55 ಲಕ್ಷ ಕೋಟಿ ಸಾಲ ಆಗಿದೆ. ಎಲ್ಲವೂ ಅಭಿವೃದ್ಧಿ ಸಾಲ ಆಗಿದೆ ಅಂತಾರೆ. 70 ವರ್ಷದಲ್ಲಾದ ಅಭಿವೃದ್ಧಿ 10 ವರ್ಷದಲ್ಲಿ ಮಾಡಿದ್ದಾರಾ?. 16 ಲಕ್ಷ ಕೋಟಿ ಉದ್ಯಮಿದಾರರ ಸಾಲ ಮನ್ನಾ ಆಗಿದೆ ಎಂದು ಕಿಡಿ ಕಾರಿದ್ದಾರೆ.
ಪ್ರಜ್ವಲ್ ವಿದೇಶಕ್ಕೆ ಹೋಗುವವರೆಗೂ ಕತ್ತೆ ಕಾಯುತ್ತಿದ್ದರಾ?: ಪ್ರಲ್ಹಾದ್ ಜೋಶಿ
ಪ್ರಜ್ವಲ್ ರೇವಣ್ಣ ವಿಚಾರದದಲ್ಲಿ ನಾವು ಅವರನ್ನ ಬಿಟ್ಟಿಲ್ಲ. ಅಮಿತ್ ಶಾ ಅವರು ನಾವು ಪ್ರಜ್ವಲ್‌ನನ್ನ ಬಿಟ್ಟು ಕಳಸಿದ್ದೇವೆ ಅಂತಾರೆ. ಜೋಶಿ ಅವರು ದೇಶದಿಂದ ದೇಶಕ್ಕೆ ಹಾರಿ ಹೋಗಿದ್ದಾರೆ. ಮೋದಿ ಅವರು ಮಲಗುವ ಮುನ್ನ ದೇಶದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಯಾವೊಬ್ಬ ವ್ಯಕ್ತಿ ದೇಶ ಬಿಟ್ಟು ಹೋದರೆ ಎಲ್ಲವೂ ಕೇಂದ್ರಕ್ಕೆ ಗೊತ್ತಿರುತ್ತೆ. 25 ಜನ ದೇಶ ಬಿಟ್ಟು ಹೋಗಿದ್ದಾರೆ, ಗುಜರಾತ್‌ನವರೇ 12 ಜನ ದೇಶ ಬಿಟ್ಟೋಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕನ್ನಡದ ವಿರೋಧಿ ಏಕನಾಥ್ ಶಿಂಧೆ ಅವರನ್ನ ಪ್ರಚಾರಕ್ಕೆ ಕರೆಸಿದ್ದಾರೆ. ಮಹದಾಯಿ ನೀರು ಕೊಡಲು ಆಗ್ತಿಲ್ಲ ಮಹಾರಾಷ್ಟ್ರ ಸಿಎಂಗೆ. ಕನ್ನಡಿಗರಿಗೆ ಬಿಜೆಪಿ ಅವರು ಅವಮಾನ ಮಾಡುತ್ತಿದ್ದಾರೆ. ಏಕೆ ಅವರನ್ನ ಧಾರವಾಡಕ್ಕೆ ಪ್ರಚಾರಕ್ಕೆ ಕರೆಸಿದ್ದಾರೆ. ನೇರವಾಗಿ ಬಿಜೆಪಿ ಅವರೇ ಎಲ್ಲದಕ್ಕೂ ಉತ್ತರ ಕೊಡಬೇಕು ಎಂದು ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.