ಅದಾನಿ ಗ್ರೂಪ್‌ನ ಅತಿದೊಡ್ಡ ಕಂಪನಿಗೆ 449 ಕೋಟಿ ರೂಪಾಯಿ ನಷ್ಟ!

By Santosh NaikFirst Published May 2, 2024, 7:29 PM IST
Highlights


ಅದಾನಿ ಎಂಟರ್‌ಪ್ರೈಸಸ್ ತನ್ನ ಬಿಎಸ್‌ಇ ಫೈಲಿಂಗ್‌ನಲ್ಲಿ ತನ್ನ ಒಟ್ಟು ಆದಾಯ 29,630 ಕೋಟಿ ರೂ.ಗೆ ತಲುಪಿದೆ ಎಂದು ತಿಳಿಸಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 29,311 ಕೋಟಿ ರೂಪಾಯಿ ಲಾಭ ಮಾಡಿತ್ತು. ತ್ರೈಮಾಸಿಕದಲ್ಲಿ ಎಬಿಟಾ ಶೇ.8ರಷ್ಟು ಕುಸಿದು ರೂ.3,974 ಕೋಟಿಯಿಂದ ರೂ.3,646 ಕೋಟಿಗೆ ತಲುಪಿದೆ.

ಮುಂಬೈ (ಮೇ.2):  ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ 2024 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳನ್ನು ಗುರುವಾರ ಪ್ರಕಟಿಸಿದೆ. ವಾರ್ಷಿಕ ಆಧಾರದ ಮೇಲೆ ಕಂಪನಿಯ ಲಾಭದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 735 ಕೋಟಿ ರೂ.ಗಳಷ್ಟಿದ್ದ ಆದಾಯ ಈ ತ್ರೈಮಾಸಿಕದಲ್ಲಿ ಶೇ. 39ರಷ್ಟು ಕುಸಿದು 449 ಕೋಟಿ ರೂ.ಗೆ ತಲುಪಿದೆ. ಹಾಗಿದ್ದರೂ, ಕಂಪನಿಯ ಒಟ್ಟು ಆದಾಯವು ಶೇಕಡಾ 1 ರಷ್ಟು ಹೆಚ್ಚಾಗಿದೆ.ಅದಾನಿ ಎಂಟರ್‌ಪ್ರೈಸಸ್ ತನ್ನ ಬಿಎಸ್‌ಇ ಫೈಲಿಂಗ್‌ನಲ್ಲಿ ತನ್ನ ಒಟ್ಟು ಆದಾಯ 29,630 ಕೋಟಿ ರೂ.ಗೆ ತಲುಪಿದೆ ಎಂದು ತಿಳಿಸಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 29,311 ಕೋಟಿ ರೂಪಾಯಿ ಆದಾಯ ಪ್ರಕಟಿಸಿತ್ತು. ತ್ರೈಮಾಸಿಕದಲ್ಲಿ ಎಬಿಟಾ (ಬಡ್ಡಿ, ತೆರಿಗೆಗಳು, ಸವಕಳಿ ಮತ್ತು ಭೋಗ್ಯದ ಮೊದಲು ಗಳಿಕೆಗಳು) ಶೇ.8ರಷ್ಟು ಕುಸಿದು ರೂ.3,974 ಕೋಟಿಯಿಂದ ರೂ.3,646 ಕೋಟಿಗೆ ತಲುಪಿದೆ. ಎಎನ್‌ಐಎಲ್ ಇಕೋಸಿಸ್ಟಮ್ ಎಬಿಟಾ 6.2 ಪಟ್ಟು ಹೆಚ್ಚಿದ್ದು, 641 ಕೋಟಿ ರೂ.ಗೆ ತಲುಪಿದ್ದರೆ, ಏರ್‌ಪೋರ್ಟ್ಸ್ ಎಬಿಟಾ  ಶೇ.130ರಷ್ಟು ಏರಿಕೆಯಾಗಿ 662 ಕೋಟಿ ರೂ.ಗೆ ತಲುಪಿದೆ.

ಅದಾನಿ ಎಂಟರ್‌ಪ್ರೈಸಸ್ ಡಿವಿಡೆಂಡ್: 2023-24 ರ ಆರ್ಥಿಕ ವರ್ಷಕ್ಕೆ ಪ್ರತಿ ಷೇರಿಗೆ ರೂ 1 ರ ಮುಖಬೆಲೆಯಲ್ಲಿ ರೂ 1.30 ಡಿವಿಡೆಂಡ್ ನೀಡಲಾಗುವುದು ಎಂದು ಅದಾನಿಯ ಪ್ರಮುಖ ಕಂಪನಿಯ ಮಂಡಳಿಯು ತಿಳಿಸಿದೆ. ಇದರರ್ಥ ನೀವು ಅದಾನಿ ಎಂಟರ್‌ಪ್ರೈಸಸ್‌ನ ಒಂದು ಷೇರನ್ನು ಹೊಂದಿದ್ದರೆ, ನೀವು ರೂ 1.30 ಅನ್ನು ಲಾಭಾಂಶವಾಗಿ ಪಡೆಯುತ್ತೀರಿ.  ಲಾಭಾಂಶದ ದಾಖಲೆ ದಿನಾಂಕವನ್ನು ಜೂನ್ 30  ಎಂದು ನಿಗದಿಪಡಿಸಲಾಗಿದೆ.

ಗೌತಮ್ ಅದಾನಿ ಹೇಳಿದ್ದೇನು?: ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮಾತನಾಡಿ, ಅದಾನಿ ಎಂಟರ್‌ಪ್ರೈಸಸ್ ತನ್ನ ಸ್ಥಾನವನ್ನು ಭಾರತದಲ್ಲಿ ಪ್ರಮುಖ ವ್ಯಾಪಾರ ಇನ್ಕ್ಯುಬೇಟರ್ ಆಗಿ ಮಾತ್ರವಲ್ಲದೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನಾಗಿಯೂ ಮಾನ್ಯ ಮಾಡಿದೆ. ಇಂದು ಕಂಪನಿಯ ರೇಟಿಂಗ್‌ ಉತ್ತವಾಗಿದ್ದು ಸಂಪೂರ್ಣವಾಗಿ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ. ಕಾರ್ಪೊರೇಟ್ ಕಾರ್ಪೊರೇಟ್ ಆಡಳಿತ, ನಿಖರವಾದ ಅನುಸರಣೆ, ಬಲವಾದ ಕಾರ್ಯಕ್ಷಮತೆ ಮತ್ತು ನಗದು ಹರಿವಿಗೆ ನಾವು ಸಮರ್ಪಿತರಾಗಿದ್ದೇವೆ ಎಂದು ಅವರು ಹೇಳಿದರು.

ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯ ಕಿರಿ ಸೊಸೆ ಈ ವಜ್ರದ ವ್ಯಾಪಾರಿ ಮಗಳು!

ದಿನದ ವಹಿವಾಟಿನಲ್ಲಿ, ಅದಾನಿ ಎಂಟರ್‌ಪ್ರೈಸಸ್ ಷೇರುಗಳು ನೆಗೆಟಿವ್‌ ಆಗಿ ಮುಕ್ತಾಯವಾಗುದೆ. ಇದರ ಷೇರುಗಳು ಇಂದು 0.56 ಶೇಕಡಾ ಕುಸಿತದೊಂದಿಗೆ 3,037.15 ರೂಪಾಯಿಗೆ ತಲುಪಿದೆ. ಇಂದು ಈ ಷೇರು ಗರಿಷ್ಠ 3,119.55 ರೂ.ಗೆ ತಲುಪಿತ್ತು. ಕಳೆದ ಒಂದು ವರ್ಷದಲ್ಲಿ ಶೇ.64.71ರಷ್ಟು ಆದಾಯ ನೀಡಿದೆ.

'ಇಲ್ಲಿ ಸೊಳ್ಳೆನಾದ್ರೂ ಕಾಣುತ್ತಾ ನೋಡಿ ..' ಎಂದ ಬರಡು ಭೂಮಿಯಲ್ಲಿ 1.5 ಲಕ್ಷ ಕೋಟಿ ಹೂಡಿಕೆ ಮಾಡಿದ ಅದಾನಿ!

click me!