ಸ್ಟಿಕ್ ಮುರಿದ ವಿದ್ಯಾರ್ಥಿಗೆ ಅಟ್ಟಾಡಿಸಿ ಹೊಡೆದ ಲೆಕ್ಚರರ್, ವಿಡಿಯೋ ವೈರಲ್

Oct 18, 2019, 2:24 PM IST

ಬೆಂಗಳೂರು[ಅ.18]: ಲೆಕ್ಚರರ್ ಒಬ್ಬ ವಿದ್ಯಾರ್ಥಿಯನ್ನು ಕ್ಲಾಸ್ ರೂಮಲ್ಲೇ ಅಟ್ಟಾಡಿಸಿಕೊಂಡು ಹೋಗಿ ಮನ ಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ.

ರವಿ ಎಂಬ ವಿದ್ಯಾರ್ಥಿ ಸ್ಟಿಕ್ ಮುರಿದ ಎಂಬ ಕಾರಣಕ್ಕೆ ಕೋಪಗೊಂಡ ಲೆಕ್ಚರರ್ ಹರೀಶ್ ಮನ ಬಂದಂತೆ ಥಳಿಸಿದ್ದಾರೆ. ಶಿಕ್ಷಕನ ಏಟು ತಡೆಯಲಾರದೆ ವಿದ್ಯಾರ್ಥಿ ಓಡಲಾರಂಭಿಸಿದಾಗ ಕೈಗೆ ಸಿಕ್ಕ ಬ್ಯಾಗ್ ಎಸೆದು ಹಲ್ಲೆ ನಡೆಸಿದ್ದಾರೆ.

ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಹಲ್ಲೆಗೊಳಗಾದ ವಿದ್ಯಾರ್ಥಿ ಕಾಲೇಜಿಗೆ ಬರುತ್ತಿಲ್ಲ. ಅತ್ತ ಶಿಕ್ಷಕನೂ ಎಸ್ಕೇಪ್ ಆಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರೂ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ