ಈ ಬ್ಯೂಟಿ ವಯಸ್ಸು 60 ಅಂದ್ರೆ ನಂಬೋಕಾಗುತ್ತಾ? ಇಳಿವಯಸ್ಸಲ್ಲಿ ಸೌಂದರ್ಯ ಸ್ಪರ್ಧೆ ಗೆದ್ದ ಅರ್ಜೆಂಟೀನಾ ಚೆಲುವೆ

First Published | Apr 26, 2024, 7:53 PM IST

ಸೌಂದರ್ಯ ಸ್ಪರ್ಧೆ ಎಂದರೆ ಮೊದಲಿಗೆ ಯೋಚನೆ ಬರುವುದು ಸ್ಪರ್ಧಿಗಳ ಯೌವ್ವನ, ಹದಿಹರೆಯದ ವಯಸ್ಸು, ದೇಹ, ಮೈಕಟ್ಟು ಇತ್ಯಾದಿ, ಆದರೆ ಈ ಎಲ್ಲಾ ಅಡೆತಡೆಗಳನ್ನು ರೂಲ್ಸ್‌ಗಳನ್ನು ಬ್ರೇಕ್ ಮಾಡಿ 60 ವರ್ಷದ ಮಹಿಳೆಯೊಬ್ಬರು ಸೌಂದರ್ಯ ಸ್ಪರ್ಧೆ ಗೆದ್ದಿದ್ದಾರೆ.

ಸೌಂದರ್ಯ ಸ್ಪರ್ಧೆ ಎಂದರೆ ಮೊದಲಿಗೆ ಯೋಚನೆ ಬರುವುದು ಸ್ಪರ್ಧಿಗಳ ಯೌವ್ವನ, ಹದಿಹರೆಯದ ವಯಸ್ಸು, ದೇಹ, ಮೈಕಟ್ಟು ಇತ್ಯಾದಿ, ವಯಸ್ಸು ದಾಟಿದ ನಂತರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದು ಎಂದರೆ ಅದು ಭ್ರಮೆ ಎಂದು ಭಾವಿಸುವವರೆ ಹಲವರು. 

ಆದರೆ ಈ ಎಲ್ಲಾ ಅಡೆತಡೆಗಳನ್ನು ರೂಲ್ಸ್‌ಗಳನ್ನು ಬ್ರೇಕ್ ಮಾಡಿ 60 ವರ್ಷದ ಮಹಿಳೆಯೊಬ್ಬರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಅಂದಹಾಗೆ ಈ ಅಪರೂಪದ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ ದೂರದ ಅರ್ಜೆಂಟೀನಾದಲ್ಲಿ...

Tap to resize

ವಕೀಲೆ ಹಾಗೂ ಜರ್ನಲಿಸ್ಟ್ ಆಗಿ ಕೆಲಸ ಮಾಡುವ 60 ವರ್ಷ ಪ್ರಾಯದ ಅಲೆಜಾಂಡ್ರಾ ಮರೀಸಾ ರೊಡ್ರಿಗಸ್ ಎಂಬುವವರು ಸೌಂದರ್ಯ ಸ್ಪರ್ಧೆಗೆ ಬೇರೆಯದೇ ಭಾಷ್ಯ ಬರೆದಿದ್ದಾರೆ. ಇವರು ಅರ್ಜೆಂಟೀನಾದ ಲಾ ಪ್ಲಾಟಾದವರಾಗಿದ್ದುಅರ್ಜೆಂಟೀನಾದ ರಾಜಧಾನಿಯಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುವ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆ 2024ರ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ. 

ಅವರ ಈ ಗೆಲುವು ಪ್ರಪಂಚದಾದ್ಯಂತ ಅನೇಕರಿಗೆ ಸ್ಫೂರ್ತಿ ನೀಡಿದ್ದಲ್ಲದೇ ಸೌಂದರ್ಯ ಸ್ಪರ್ಧೆಯ ಬಗ್ಗೆ ಇದ್ದ ಹಲವು ರೂಲ್ಸ್‌ಗಳನ್ನು ಬ್ರೇಕ್ ಮಾಡಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ  ರೋಡ್ರಿಗಸ್ ಅವರ ಗೆಲುವು  ಐತಿಹಾಸಿಕ ಕ್ಷಣ ಎನಿಸಿದೆ,  ಏಕೆಂದರೆ ಅವರು 60ರ ಇಳಿ ಪ್ರಾಯದಲ್ಲಿ ಈ ರೀತಿ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ಮೊದಲ ಮಹಿಳೆ ಎನಿಸಿದ್ದಾರೆ. 

ಸೌಂದರ್ಯ ಸ್ಪರ್ಧೆಗಿದ್ದ ಎಲ್ಲ ಎಡರು ತೊಡರುಗಳನ್ನು ಮೀರಿ ಅವರ  ಹೊಳೆಯುವ ನಗು ಮತ್ತು ಆಕರ್ಷಕವಾದ ವರ್ತನೆ ತೀರ್ಪುಗಾರರ ಮತ್ತು ಪ್ರೇಕ್ಷಕರ ಹೃದಯವನ್ನು ಸೆಳೆದಿದೆ ಎಂದು ವರದಿಯಾಗಿದೆ.

ಈ ಗೆಲುವಿನ ಮೂಲಕ ಮುಂದೆ  ರಾಡ್ರಿಗಸ್ ಅವರು ಮೇ ತಿಂಗಳಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಅರ್ಜೆಂಟೀನಾ ರಾಷ್ಟ್ರೀಯ ಆಯ್ಕೆ ಸ್ಪರ್ಧೆಯಲ್ಲಿ  ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲಿದ್ದಾರೆ. ಇಲ್ಲೂ ಅವರು ಆಯ್ಕೆಯಾದರೆ ಮಿಸ್ ಯೂನಿವರ್ಸ್ ವರ್ಲ್ಡ್ ಸ್ಪರ್ಧೆಯಲ್ಲಿ ಅವರು ಅರ್ಜೆಂಟೀನಾವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಅರ್ಜೆಂಟೈನಾ ಸ್ಪರ್ದೆಯೂ ಸೆಪ್ಟೆಂಬರ್ 28 ರಂದು ಮೆಕ್ಸಿಕೋದಲ್ಲಿ ನಡೆಯಲಿದೆ. 

ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸೌಂದರ್ಯ ಸ್ಪರ್ಧೆಯನ್ನು ಗೆದ್ದಿರುವುದರಿಂದ ರೋಡ್ರಿಗಸ್ ಅವರು ಮಿಸ್ ಅರ್ಜೆಂಟೀನಾ ಕಿರೀಟಕ್ಕೆ ಅಭಿಮಾನಿಗಳ ನೆಚ್ಚಿನ ಆಯ್ಕೆಯಾಗಿದ್ದಾರೆ.  ಇದರಲ್ಲಿ ಗೆದ್ದಿದ್ದೆ ಆದರೆ ಅವರಿಗೆ ಅಂತರರಾಷ್ಟ್ರೀಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅವಕಾಶ  ಸಿಗಲಿದೆ. ಹಿಂದೆ, ವಿಶ್ವ ಸುಂದರಿ ಸ್ಪರ್ಧೆಯು ಕೇವಲ 18 ರಿಂದ 28 ವರ್ಷದೊಳಗಿನವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡುತ್ತಿತ್ತು.

60 ವರ್ಷದ ರೊಡ್ರಿಗಸ್‌ ಅವರ ಈ ಸೌಂದರ್ಯದ ಪ್ರಯಾಣವು ಸೌಂದರ್ಯದ ಬಗೆಗಿರುವ ಸಾಂಪ್ರದಾಯಿಕ ಮಾನದಂಡಗಳನ್ನು ಮುರಿದು ಹಾಕುತ್ತದೆ ಜೊತೆಗೆ  ಆತ್ಮವಿಶ್ವಾಸ, ಸೊಬಗು ಮತ್ತು ಮೋಡಿ ವಯಸ್ಸಿನ ಅಡೆತಡೆಗಳನ್ನು ಮೀರಿದೆ ಎಂಬುದನ್ನು ತೋರಿಸುತ್ತದೆ.

ಇನ್ನು ತಮ್ಮ ಈ ಗೆಲುವಿಗೆ ಭಾರಿ ಸಂತಸ ವ್ಯಕ್ತಪಡಿಸಿರುವ ಅವರು ಇದು ನನಗೆ ಸಿಕ್ಕಿರುವ ಅತ್ಯಂತ ದೊಡ್ಡ ಗೌರವ ಎಂದು ಹೇಳಿದ್ದಾರೆ. ನಾನು ಎಲ್ಲ ಮಹಿಳೆಯರಿಗೆ ಸೌಂದರ್ಯಕ್ಕೆ ವಯಸ್ಸಿನ ಹಂಗಿಲ್ಲ ಹಾಗೂ ಅಡೆತಡೆಗಳನ್ನು ದಾಟಿ ಮುಂದೆ ಸಾಗಬಹುದು ಎಂದು ಹೇಳಲು ಬಯಸುವೆ ಎಂದಿದ್ದಾರೆ.

Latest Videos

click me!