Karnataka Lok Sabha elections 2024 ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತದಾನ ಹಕ್ಕು ಕಳೆದುಕೊಂಡ ಯುವತಿ!

By Suvarna NewsFirst Published Apr 26, 2024, 8:16 PM IST
Highlights

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯುವತಿಯೊಬ್ಬಳು ಮತದಾನದ ಹಕ್ಕು ಕಳೆದುಕೊಂಡಿದ್ದಾಳೆ. 

ಮಂಗಳೂರು (ಏ.26): ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯುವತಿಯೊಬ್ಬಳು ಮತದಾನದ ಹಕ್ಕು ಕಳೆದುಕೊಂಡಿದ್ದಾಳೆ. ಸಮಯ ಮೀರಿದ ಬಳಿಕ ಮತದಾನ ಕೇಂದ್ರಕ್ಕೆ ಬಂದು ಯುವತಿ ಮತದಾನದ ಹಕ್ಕು ಕಳೆದುಕೊಂಡಿದ್ದು, ಮಂಗಳೂರು ಕಪಿತಾನಿಯೋ ಮೂಲದ ಯುವತಿ ಎಂದು ತಿಳಿದುಬಂದಿದೆ.

ಸಂಜೆ 5ರ ವರೆಗೂ 71.83% ದಷ್ಟು ಮತದಾನ ಪೂರ್ಣವಾಗಿದ್ದು, 6 ಗಂಟೆಯಾದ ಹಿನ್ನೆಲೆ ಅಧಿಕಾರಿಗಳು ಎಲ್ಲಾ ಮತಗಟ್ಟೆಗಳ ಗೇಟ್ ಕ್ಲೋಸ್ ಮಾಡಿದ್ದಾರೆ. ಜಿಲ್ಲೆಯ ಮತಪೆಟ್ಟಿಗೆಗಳು  ಸುರಕ್ಷಿತವಾಗಿ  ಡಿ ಮಸ್ಟರಿಂಗ್ ಕೇಂದ್ರ ತಲುಪಲಿದೆ.

LIVE: ಮಂಡ್ಯ Elections 2024: ಸಂಜೆ 5 ಗಂಟೆಗೆ ಮಂಡ್ಯದಲ್ಲಿ ಅತೀ ಹೆಚ್ಚು 74.87% ಮತದಾನ

ಮೊದಲು ಡಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ತಂಡಕ್ಕೆ ಭರ್ಜರಿ ಸ್ವಾಗತ ಕೋರಲಾಗಿದೆ. ಮಂಗಳೂರು ಅತ್ತಾವರ ಪೋಲಿಂಗ್ ಸೆಂಟರ್ 143ಯ ಸಿಬ್ಬಂದಿಗೆ ಸ್ವಾಗತ ಮಾಡಲಾಯ್ತು.  ಜಿಲ್ಲಾಡಳಿತದ ಸಿಬ್ಬಂದಿಯಿಂದ ಪೋಲಿಂಗ್ ಸೆಂಟರ್ ಸಿಬ್ಬಂದಿಗೆ ಚಪ್ಪಾಳೆಯ ಮೂಲಕ ಸ್ವಾಗತ ಕೋರಿದರು.

LIVE: ಹಾಸನ Elections 2024: ಮಾಜಿ ಪ್ರಧಾನಿಗಳ ತವರಲ್ಲಿ ಸಂಜೆ 5ಗಂಟೆ ವೇಳೆಗೆ 72.13% ಮತದಾನ

ಸ್ವಾಗತದ ಬಳಿಕ ವಿವಿಪ್ಯಾಟ್ ಹಾಗೂ ಇವಿಎಂಗಳನ್ನು ಸುರಕ್ಷಿತವಾಗಿ ಭದ್ರತಾ ಕೊಠಡಿಗೆ ರವಾನೆ ಮಾಡಲಾಯ್ತು. ವಿವಿಧ ಕೇಂದ್ರಗಳಿಂದ ಒಂದೊಂದಾಗಿಯೇ  ಮತಪೆಟ್ಟಿಗೆ ಬರಲಿದ್ದು, ಜಿಲ್ಲಾಡಳಿತದ ಸಿಬ್ಬಂದಿ ಸಿಬ್ಬಂದಿಗಳಿಂದ ಮಾಹಿತಿ ಹಾಗೂ ಮತಯಂತ್ರಗಳನ್ನು ಪಡೆಯಲಿದ್ದಾರೆ.

click me!