ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ. ಜೈಲಿನಿಂದಲೇ ಅಧಿಕಾರ ನಡೆಸುತ್ತಿರುವ ಕುರಿತು ಅಕ್ಷೇಪ ವ್ಯಕ್ತಪಡಿಸಿರುವ ಕೋರ್ಟ್, ನಿಮಗೆ ದೇಶಕ್ಕಿಂತ ಅಧಿಕಾರವೇ ಮುಖ್ಯವಾಯಿತಾ ಎಂದು ಪ್ರಶ್ನಿಸಿದೆ.
ದೆಹಲಿ(ಏ.26) ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅನ್ನೋ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ಕೇದ್ರಿವಾಲ್‌ಗೆ ರಿಲೀಫ್ ನೀಡಿತ್ತು. ಆದರೆ ಇದೀಗ ಶಾಲಾ ಪಠ್ಯ ಪುಸ್ತಕ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಹೈಕೋರ್ಟ್ ಚಾಟಿ ಬೀಸಿದೆ. ಜೈಲಿನಿಂದ ಅಧಿಕಾರ ನಡೆಸುತ್ತಿರುವ ಕೇಜ್ರಿವಾಲ್‌ಗೆ ದೇಶಕ್ಕಿಂತ ಅಧಿಕಾರವೇ ಮುಖ್ಯವಾಯಿತೂ ಎಂದು ಪ್ರಶ್ನಿಸಿದೆ. ಈ ಮೂಲಕ ಸಿಎಂ ಕುರ್ಚಿಗ ಅಂಟಿಕೊಂಡು ಜನಸಾಮಾನ್ಯರಿಗೇಕೆ ತೊಂದರೆ ಕೊಡುತ್ತೀದ್ದೀರಿ ಎಂದು ಪ್ರಶ್ನಿಸಿದೆ.
ದೆಹಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ವಿಳಂಬ, ಸಮವಸ್ತ್ರ ವಿತರಣೆ ವಿಳಂಭ ಸೇರಿದಂತೆ ಶಾಲಾ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ , ಆಪ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಜವಾಬ್ದಾರಿಯುತ ಸರ್ಕಾರ ಜನರಿಗೆ ಅಗತ್ಯವಸ್ತುಗಳು, ಶಿಕ್ಷಣ, ಆರೋಗ್ಯ ಸೇವೆ ನೀಡಬೇಕು. ಆದರೆ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಅಧಿಕಾರ ನಡೆಸುವ ಮೂಲಕ ತಮಗೆ ದೇಶದ ಹಿತಕ್ಕಿಂತ ತಮ್ಮ ಅಧಿಕಾರವೇ ಮುಖ್ಯ ಅನ್ನೋ ರೀತಿ ವರ್ತಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಕೇಜ್ರಿವಾಲ್ ಬಂಧನ ಬಳಿಕ ಸಚಿವ ಆಪ್ ಸಚಿವ ಸೌರಬ್ ಭಾರದ್ವಾಜ್, ಅತೀಶ್ ಪೊಲೀಸ್ ವಶಕ್ಕೆ!
ದೆಹಲಿ ಸರ್ಕಾರ ಮಕ್ಕಳ ಶಿಕ್ಷಣದ ಬಗ್ಗೆ, ಅವರ ಭವಿಷ್ಯದ ಬಗ್ಗೆ ಯಾವುದೇ ಚಿಂತೆ ಇಲ್ಲ. ಮಕ್ಕಳಿಗೆ ಪಠ್ಯ ಪುಸ್ತಕ ಸಿಗುತ್ತಿಲ್ಲ, ಮೂಲಭೂತ ಹಕ್ಕಾದ ಶಿಕ್ಷಣ ಪಡೆಯಲು ಸಮಸ್ಯೆಯಾಗುತ್ತಿದೆ. ಆದರೆ ಆಪ್ ಸರ್ಕಾರ ಸಿಎಂ ಸ್ಥಾನಕ್ಕೆ ಅಂಟಿಕೊಂಡು ಅಧಿಕಾರವೇ ಮುಖ್ಯ ಎಂದು ಮುನ್ನಡೆಯುತ್ತಿದೆ. ನೋಟ್ ಬುಕ್, ಶಾಲಾ ಬ್ಯಾಗ್, ಶೂ, ಇತರ ವಸ್ತುಗಳ ವಿತರಣೆ ಆಗುತ್ತಿಲ್ಲ ಯಾಕೆ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.
ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿಯಲ್ಲಿದ್ದಾರೆ. ಶಿಕ್ಷಣ ಸಚಿವಾಲಯದ ಕುರಿತು ಜವಾಬ್ದಾರಿ ಹೊತ್ತಿರುವ ಸಚಿವ ಸೌರಬ್ ಭಾರದ್ವಾಜ್ ಕೂಡ ಇಡಿ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಶಾಲಾ ಮಕ್ಕಳ ಸ್ಟೇಶನರಿ ವಸ್ತುಗಳ ವಿತರಣೆಯಲ್ಲಿ ನಿರ್ಧಾರ ತೆಗೆದುಕೊಲ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಅಧಿಕಾರ ಅರವಿಂದ್ ಕೇಜ್ರಿವಾಲ್ ಹಾಗೂ ಸೌರಭ್ ಭಾರದ್ವಾಜ್ ಅವರಿಗೆ ಮಾತ್ರ ಇದೆ ಎಂದು ಆಪ್ ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿದ್ದಾರೆ.
ದಿಲ್ಲಿ ಅಬಕಾರಿ ಹಗರಣ : ಸಾಕ್ಷ್ಯ ನಾಶಕ್ಕಾಗಿ ಕೇಜ್ರಿಯಿಂದ 173 ಮೊಬೈಲ್ ಫೋನ್ ನಾಶ ?
ಆದರೆ ಆಪ್ ಸರ್ಕಾರದ ಮಾತುಗಳನ್ನು ಕೇಳಿ ಗರಂ ಆದ ಕೋರ್ಟ್, ಮುಖ್ಯಮಂತ್ರಿ, ಸಚಿವರು ಜೈಲಿನಲ್ಲಿದ್ದುಕೊಂಡು ಉತ್ತಮ ಆಡಳಿ, ಜನರಿಗೆ ಸ್ಪಂದನೆ ನೀಡಲು ಸಾಧ್ಯವೇ? ನಿಮ್ಮ ಮಾತಿನ ಪ್ರಕಾರ, ಕೋರ್ಟ್ ಜನರ ಮುಂದೆ ಹೋಗಿ ಸಮಸ್ಯಗಳನ್ನು ಕೇಳಿ, ಪರಿಹಾರ ಸೂಚಿಸಬೇಕಾ ಎಂದು ಆಪ್ ಸರ್ಕಾರಕ್ಕೆ ಪ್ರಶ್ನಿಸಿದೆ.