ಈ ಚುನಾವಣೆ ಸಂವಿಧಾನ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಬಿಜೆಪಿ ಗೆದ್ದರೆ ಸಂವಿಧಾನ ಉಳಿಸುವುದಿಲ್ಲ. ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅವರ ನಾಯಕರೇ ಹೇಳಿದ್ದಾರೆ. ಸಂವಿಧಾನ ರಕ್ಷಣೆ, ಅಧಿಕಾರ ನೀಡುತ್ತದೆ. ಆದರೆ ಅದನ್ನೆ ಮುಗಿಸಲು ಬಿಜೆಪಿ ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಬಳ್ಳಾರಿ (ಏ.26): ಈ ಚುನಾವಣೆ ಸಂವಿಧಾನ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಬಿಜೆಪಿ ಗೆದ್ದರೆ ಸಂವಿಧಾನ ಉಳಿಸುವುದಿಲ್ಲ. ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅವರ ನಾಯಕರೇ ಹೇಳಿದ್ದಾರೆ. ಸಂವಿಧಾನ ರಕ್ಷಣೆ, ಅಧಿಕಾರ ನೀಡುತ್ತದೆ. ಆದರೆ ಅದನ್ನೆ ಮುಗಿಸಲು ಬಿಜೆಪಿ ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಬಳ್ಳಾರಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ವೇದಿಕೆಗೆ ಆಗಮಿಸುತ್ತಲೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಅವರು, ದೇಶಕ್ಕೆ ಸಂವಿಧಾನ ಬರೋದಕ್ಕಿಂತ ಮುಂಚೆ ದಲಿತರಿಗೆ ಅಧಿಕಾರ ಇರಲಿಲ್ಲ. ರಾಜ ಮಹಾರಾರ ಸರ್ಕಾರದಲ್ಲಿ ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಇತ್ತು. ಕಾಂಗ್ರೆಸ್ ಜನರ ಜೊತೆಗೆ ಸೇರಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ರು ಬಳಿಕ ಸಂವಿಧಾನ ಜಾರಿ ಮಾಡಿದ್ರು. ಆದರೆ ಬಿಜೆಪಿಯವರ ಆಲೋಚನೆ ಸಂವಿಧಾನವನ್ನು ತೆಗೆಯುವುದಾಗಿ ಎಂದು ಆರೋಪಿಸಿದರು.
undefined
ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ: ಕೆಎಚ್ ಮುನಿಯಪ್ಪ
ಈ ಬಾರಿ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆ ರದ್ದು ಮಾಡ್ತೇವೆ. ವಿವಿಧ ರೀತಿಯ ಐದು ಜಿಎಸ್ಟಿ ಟ್ಯಾಕ್ಸ್ ತೆಗೆದು ಹಾಕುವ ಮೂಲಕ ಸರಳೀಕರಣ ಮಾಡುತ್ತೇವೆ. ಮಹಾಲಕ್ಷ್ಮೀ ಯೋಜನೆ ಮೂಲಕ ವರ್ಷಕ್ಕೆ ಒಂದು ಲಕ್ಷ ಹಣ ನೀಡ್ತೇವೆ. ಗೃಹಲಕ್ಷ್ಮೀ ಯೋಜನೆಯಡಿ ಹೇಗೆ ಎರಡು ಸಾವಿರ ಹಣ ನೀಡ್ತೇವೆಯೋ ಅದೇ ರೀತಿ ದೇಶದ ಬಡ ಕುಟುಂಬಗಳಿಗೆ ವಾರ್ಷಿಕ ಒಂದು ಲಕ್ಷ ನೀಡ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯ ಯೋಜನೆಗಳ ವಿವರವಾಗಿ ಮಾಹಿತಿ ನೀಡಿದರು ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು ಬಿಜೆಪಿಯನ್ನ ಭಾರತೀಯ ಚೊಂಬು ಪಾರ್ಟಿ ಎಂದು ಲೇವಡಿ ಮಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದು ದೇಶದ ಜನರಿಗೆ ಖಾಲಿ ಖಾಲಿ ಚೊಂಬು ಕೊಟ್ಟಿದ್ದಾರೆ. ಕರ್ನಾಟಕ 100 ರೂಪಾಯಿ ನೀಡಿದ್ರೇ ಅದರಲ್ಲಿ ಕೇವಲ 13 ರೂಪಾಯಿ ವಾಪಸ್ ಬರುತ್ತಿದೆ. ಬರ ಪರಿಹಾರ ನೀಡುವಲ್ಲಿ ಮೋದಿ ಕರ್ನಾಟಕಕ್ಕೆ ಚೊಂಬು ನೀಡಿದ್ದಾರೆ. ಬಳ್ಳಾರಿ ಜೀನ್ಸ್ ಕ್ಯಾಪಿಟಲ್ ಮಾಡ್ತೇನೆ ಎಂದು ಮಾತು ನೀಡಿದ್ದೇನೆ. ಅದನ್ನು ಪೂರ್ಣ ಮಾಡಿಕೊಡ್ತೇನೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಅಳುಕು ಬೇಡ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರ ಬಳಿ ಮಾತನಾಡಿದ್ದೇನೆ. ಈ ಕೆಲಸ ಅವರು ಮಾಡೇ ಮಾಡ್ತಾರೆ ಎಂದು ಭರವಸೆ ನೀಡಿದರು.
ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ:
ಸಂವಿಧಾನ ಬದಲಾವಣೆ ಮಾಡುವ ಬಿಜೆಪಿಯವರ ಕುತಂತ್ರ ನಡೆಯೊಲ್ಲ. ಯಾರಿಂದಲೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಂವಿಧಾನ ಉಳಿವಿಗೆ ನಮ್ಮ ಹೋರಾಟವಿದ್ರೆ, ಮತ್ತೊಂದು ಗುಂಪು ಮುಗಿಸಲು ನಿಂತಿದೆ. ಆಯ್ದ 23 ಜನರಿಗೆ ಬಿಜೆಪಿ ಸಂಪತ್ತು ನೀಡಿದೆ. ಅದಾನಿ ಅಂಬಾನಿಯಂತಹವರಿಗೆ ದೇಶದ ಸಂಪತ್ತು ನೀಡಿದೆ. ಬಿಜೆಪಿಯವರು ದೇಶದ ಬಡವರ ಹಣವನ್ನು ಶ್ರೀಮಂತರಿಗೆ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶ್ರೀಮಂತರ ಹಣ ಬಡವರಿಗೆ ನೀಡುತ್ತೇವೆ. 22 ಶ್ರೀಮಂತರಿಗೆ ಮೋದಿ ಎಷ್ಟು ಹಣ ನೀಡಿದ್ರೋ ಅಷ್ಟು ಹಣಕಾಸು ನಾವು ಬಡವರಿಗೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ Election 2024 Live: ಲೋಕಸಭಾ ಚುನಾವಣೆಯ ಕ್ಷಣ ಕ್ಷಣದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕೋವಿಡ್ ಮಾದರಿಯಲ್ಲಿ ಮೋದಿ ದೇಶಾದ್ಯಂತ ನಿರುದ್ಯೋಗ ಹರಡಿಸಿದ್ದಾರೆ. ಉದ್ಯೋಗ ನೀಡಿ ಎಂದರೆ ಪಕೋಡೆ ಮಾರಾಟ ಮಾಡಿ, ಗಂಟೆ ಬಾರಿಸಿ, ಚೆಪ್ಪಾಳೆ ಹೊಡೆಯಿರಿ ಎನ್ನುತ್ತಾರೆ ಮೋದಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶಿಕ್ಷಣ ಮುಗಿದ ಕೂಡಲೇ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡ್ತೇವೆ. ದೇಶದ ಕೋಟ್ಯಂತರ ಯುವಕರಿಗೆ, ಮಹಿಳೆಯರಿಗೆ ಹೊಸ ಹೊಸ ಯೋಜನೆ ಮೂಲಕ ಲಕ್ಷಾಧೀಶರನ್ನಾಗಿ ಮಾಡುತ್ತೇವೆ. ಮೋದಿ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.