
ದೆಹಲಿ(ಏ.26) ಟಿವಿ ಜಗತ್ತಿನಲ್ಲಿ ನಿರಂತರವಾಗಿ ವೀಕ್ಷರನ್ನು ರಂಜಿಸುತ್ತಿರುವ ತಾರಕ್ ಮೆಹ್ತಾ ಚಶ್ಮಾ ಕಾಮಿಡಿ ಸೀರಿಯಲ್ ಅತ್ಯಂತ ಜನಪ್ರಿಯವಾಗಿದೆ. ಯಶಸ್ವಿಯಾಗಿ ಮುನ್ನಡೆಯುತ್ತಿರುವ ತಾರಕ್ ಮೆಹ್ತಾ ಧಾರವಾಹಿಯ ಖ್ಯಾತ ನಟ ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದಾರೆ. ಕೆಲಸದ ನಿಮಿತ್ತ ದೆಹಲಿಯಿಂದ ಮುಂಬೈ ತೆರಳಿದ ನಟ ನಾಪತ್ತೆಯಾಗಿದ್ದಾರೆ. ಈ ಕುರಿತು ಗುರುಚರಣ್ ಸಿಂಗ್ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದಾರೆ. 50 ವರ್ಷದ ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ ಗುರುಚರಣ್ ಸಿಂಗ್ ಅತ್ತ ಮುಂಬೈ ತಲುಪಿಲ್ಲ. ಇತ್ತ ಫೋನ್ ಸ್ವಿಚ್ ಆಫ್ ಆಗಿದೆ. ಮನೆಗೂ ಹಿಂತಿರುಗಿಲ್ಲ. ಗುರುಚರಣ್ ಸಿಂಗ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಲೈಂಗಿಕ ಕಿರುಕುಳ: 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ನಿರ್ಮಾಪಕ, 2 ಸಿಬ್ಬಂದಿ ವಿರುದ್ಧ ದೂರು
ಮಗನನ್ನು ಹುಡುಕಿಕೊಡುವಂತೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಮಯ ಕಳೆದಂತೆ ಗುರುಚರಣ್ ಸಿಂಗ್ ಜೀವಕ್ಕೆ ಅಪಾಯ ಹೆಚ್ಚು. ಹೀಗಾಗಿ ಶೋಧ ಕಾರ್ಯಾಚರಣೆ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಇತ್ತ ಪೊಲೀಸರು ಹರ್ಜಿತ್ ಸಿಂಗ್‌ಗೆ ಕ್ಷಿಪ್ರ ಕಾರ್ಯಾಚರಣೆ ಭರವಸೆ ನೀಡಿದ್ದಾರೆ.
ಕೆಲ ವರ್ಷಗಳ ಹಿಂದೆ ತಾರಕ್ ಮೆಹ್ತಾ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಧಾರವಾಯಿಂದ ಹೊರಬಂದು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಶೂಟಿಂಗ್ ಕಾರಣ ಹೆಚ್ಚಿನ ಸಮಯ ಮುಂಬೈನಲ್ಲಿ ಕಳೆಯುತ್ತಿದ್ದ ಕಾರಣ ಕುಟಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಇದೇ ವೇಳೆ ಗುರುಚರಣ್ ಸಿಂಗ್ ತಂದೆಯ ಆರೋಗ್ಯ ಕೂಡ ಕ್ಷೀಣಿಸಿತ್ತು. ಹೀಗಾಗಿ ಸೀರಿಯಲ್‌ನಿಂದ ಹೊರಬಂದಿದ್ದರು.
ಕಳೆದೊಂದು ವರ್ಷದಿಂದ ಕುಟುಂಬದ ಜೊತೆಗಿದ್ದ ಗುರಚರಣ್ ಸಿಂಗ್ ಏಕಾಏಕಿ ನಾಪತ್ತೆಯಾಗಿದ್ದಾರೆ. ಮಾನಿಸಿಕವಾಗಿ ಸದೃಢವಾಗಿದ್ದು, ಇದರ ಹಿಂದೆ ಉದ್ದೇಶಿತ ಕೈವಾಡದ ಶಂಕೆಯನ್ನು ಗುರುಚರಣ್ ಸಿಂಗ್ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕರ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದೆ: ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಕಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.