ಪತಿಯೊಂದಿಗೆ ಜಗಳ, ಕೆರೆ ನೀರಿನಲ್ಲಿ ಕೂತ ಪತ್ನಿ!

May 15, 2022, 6:06 PM IST

ಸಾಮಾನ್ಯವಾಗಿ ಹೆಂಡತಿ ಗಂಡನ ಜೊತೆ ಮುನಿಸಿಕೊಂಡರೆ ಒಂದೆರಡು ದಿನ ಮಾತು ಬಿಡ್ತಾಳೆ, ಅದೂ ಸಾಲದಾದಾಗ ಬ್ಯಾಗ್ (Bag) ಹಿಡ್ಕೊಂಡು ತವರರು ಮನೆಬೆ ಹೋಗ್ತಾಳೆ. ಜಗಳ ವಿಪರೀತಕ್ಕೆ ಹೋದ್ರೆ ಡಿವೋರ್ಸ್‌ವರೆಗೂ (Divorce) ಹೋಗಬಹುದು. ಆದ್ರೆ ಇಲ್ಲೊಬ್ಬಳು ಮಹಿಳೆ ಗಂಡನೊಂದಿಗೆ ಜಗಳ ಮಾಡಿಕೊಂಡು ಆತನಿಗೆ ಬುದ್ದಿ ಕಲಿಸದೇ ಬಿಡಲ್ಲ ಅಂತ ನಿರ್ಧರಿಸಿ ಕೆರೆ ಮಧ್ಯದಲ್ಲಿ ಹೋಗಿ ಕುಳಿತಿದ್ದಾಳೆ. ಗಂಡ, ಹೆಂಡತಿ ಇಬ್ಬರೂ ಕೋರಮಂಗಲದ ಮೇಡರಪಾಳ್ಯದ ನಿವಾಸಿಗಳಾಗಿದ್ದಾರೆ. ಇಂದು ಬೆಳಗ್ಗೆ ಗಂಡ, ಹೆಂಡತಿ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಗಂಡನ ಜೊತೆ ಮುನಿಸಿಕೊಂಡ ಹೆಂಡತಿ, ಕೋರಮಂಗಲ ಕೆರೆಗೆ ಬಂದು, ಕೆರೆ ಮಧ್ಯದಲ್ಲಿ ಕುಳಿತಿದ್ದಾಳೆ. ಬೆಳಗ್ಗೆ 7 ಗಂಟೆಗೆ ಕುಳಿತವಳು 9 ಗಂಟೆ ವರೆಗೂ ಅಲ್ಲೇ ಕುಳಿತಿದ್ದಳು. ಘಟನೆಯ ವಿಡಿಯೋ ಇಲ್ಲಿದೆ.