ಏನಾದರೂ ಕೆಲಸ ಗಿಟ್ಟಿಸಿಕೊಂಡು ಜೀವನ ಮಾಡ್ತೀನಿ ಆದ್ರೆ ಕೆಟ್ಟ ನಿರ್ಧಾರ ತೆಗೆದುಕೊಳ್ಳಲ್ಲ: ರಾಘವೇಂದ್ರ

By Vaishnavi ChandrashekarFirst Published Apr 25, 2024, 2:42 PM IST
Highlights

ಕನಸಿನ ಮನೆಯನ್ನು ಕಟ್ಟಿಸಿದ ರಾಘವೇಂದ್ರ.. ಕೈ ತುಂಬಾ ಅವಕಾಶ ಕೊಟ್ಟವರಿಗೆ ವಂದನೆ ತಿಳಿಸಿದ ನಟ
 

ಕನ್ನಡ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2ರಲ್ಲಿ ಸ್ಪರ್ಧಿಸಿರುವ ರಾಘು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಹುಡುಗನಾಗಿ ಹುಡುಗಿ ಪಾತ್ರ ಮಾಡುವುದು ತುಂಬಾನೇ ಕಷ್ಟ ಹೀಗಿರುವಾಗ ರಾಘು ನಟನೆಯನ್ನು ಕೋಟ್ಯಾಂತರ ಜನರು ಮೆಚ್ಚಿಕೊಂಡಿದ್ದಾರೆ. ಹುಡುಗಿ ಪಾತ್ರಗಳನ್ನು ಮಾಡಲು ಕಾರಣ ಏನು? ಹುಡುಗರ ಪಾತ್ರ ಸಿಗುತ್ತಿಲ್ವಾ ಅಥವಾ ಅವಕಾಶ ಕಡಿಮೆ ಇದ್ಯಾ? ಅದಕ್ಕೆ ಇಲ್ಲಿದೆ ಉತ್ತರ... 

ಕೈಯಲ್ಲಿ ಒಂದಲ್ಲಾ ಒಂದು ಕೆಲಸ ಇದ್ದೇ ಇರುತ್ತೆ. ಒಂದು ಶೋ ಮುಗಿಯುತ್ತಿದ್ದಂತೆ ಮುಂದೆ ಏನು ಮಾಡಬೇಕು ಎಂದು ಆಲೋಚನೆ ಮಾಡುವಷ್ಟರಲ್ಲಿ ಒಂದು ಕೆಲಸ ಸಿಕ್ಕಿರುತ್ತದೆ. ಜೀವನ ಪೂರ್ತಿ ಆಕ್ಟಿಂಗ್ ಮಾಡಬೇಕು ಅದು ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ ಎಂದು ನಾನು ಹೇಳುವುದಿಲ್ಲ. ಆಕ್ಟಿಂಗ್ ಅಂದ್ರೆ ತುಂಬಾ ಇಷ್ಟ ಆಕ್ಟಿಂಗ್ ನನ್ನ ದೇವರು ಆದರೆ ಆಕ್ಟಿಂಗ್ ಕ್ಷೇತ್ರದಲ್ಲಿ ನನಗೆ ಏನೂ ಸಿಕ್ಕಿಲ್ಲ ಅಂದ್ರೆ ಬೇರೆ ಕೆಲಸ ಮಾಡುವೆ. ನಾನು ಚಿಕ್ಕವಯಸ್ಸಿನಲ್ಲೇ ಮನೆಯಲ್ಲಿ ಸುಮಾರು 20 ಜನ ಮಕ್ಕಳಿಗೆ ಡ್ರಾಯಿಂಗ್ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದೆ, ಮದುವೆ ಮನೆಯಲ್ಲಿ ___ ವೆಡ್ಸ್‌ ___ ಎಂದು ಬೋರ್ಡ್‌ ಬರೆದಿರುತ್ತಾರೆ ಆ ಕೆಲಸ ಮಾಡುದ್ದೆ. ಎರಡು ಮೂರು ವರ್ಷಗಳ ಹಿಂದೆ ಏನೋ ಟೆನ್ಶನ್‌ ಎಂದು ಅಪ್ಪನಿಗೆ ಫೋನ್ ಮಾಡಿದಾಗ ಊರಿಗೆ ಬಂದು ಡ್ರಾಯಿಂಗ್ ಕ್ಲಾಸ್ ತೆಗೆದುಕೋ ಎಂದು ಹೇಳುತ್ತಿದ್ದರು. ಏನೋ ಒಂದು ಕೆಲಸ ಹುಡುಕಿಕೊಂಡು ಜೀವನ ಸಾಗಿಸುತ್ತೀನಿ ಆದರೆ ಯಾವ ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮನುಷ್ಯ ಅಂದ ಮೇಲೆ ಪ್ರತಿಯೊಬ್ಬರಿಗೂ ಸಮಸ್ಯೆ ಇದ್ದೇ ಇರುತ್ತದೆ ಆದರೆ ಈ ಕಾಲದಲ್ಲಿ ಜನರು ಬೇಗ ಹೆದರಿಕೊಳ್ಳುತ್ತಾರೆ. ಎದುರಿಗೆ ನಾವು ನಗುತ್ತಿದ್ದರೂ ಮನಸ್ಸಿನಲ್ಲಿ ಏನೋ ನೋವು ಅಡಗಿರುತ್ತದೆ ಎಂದು ರಾಘವೇಂದ್ರ ಖಾಸಗಿ ಯುಟ್ಯೂಬ್ ಸಂದರ್ಶನಲ್ಲಿ ಮಾತನಾಡಿದ್ದಾರೆ. 

ಹುಡುಗಿ ಪಾತ್ರ ಮಾಡೋದೇ ಇಲ್ಲ ಜನರು ಅಣಕಿಸುತ್ತಿದ್ದಾರೆ: ಗಿಚ್ಚಿ ಗಿಲಿಗಿಲಿ ರಾಘು ಕಣ್ಣೀರು!

ಸಾಗರದಲ್ಲಿ ಇರುವ ನಮ್ಮ ಊರಿನಲ್ಲಿ ಹೊಸ ಮನೆ ಕಟ್ಟಿದ್ದೀವಿ ಜನವರಿಯಲ್ಲಿ ಓಪನಿಂಗ್ ಮಾಡಿದೆವು. ಮನೆ ಕಟ್ಟಬೇಕು ಅಂತ ಆಸೆ ತುಂಬಾ ಇತ್ತು. ಒಂದು ದಿನ ಕನಸಿನಲ್ಲಿ ಒಂದು ಮನೆ ಕಾಣಿಸಿಕೊಂಡಿತ್ತು ಮರು ದಿನ ಥರ್ಮಕೋಲ್‌ ತಂದು ಕನಸಿನಲ್ಲಿ ಕಂಡ ಮನೆಯಲ್ಲಿ ನಿರ್ಮಾಣ ಮಾಡಿ ಮನೆಯಲ್ಲಿ ಎಲ್ಲರಿಗೂ ತೋರಿಸಿದೆ ಆಗ ನಮ್ಮ ಕೈಯಲ್ಲಿ ಹೇಗೆ ಈ ರೀತಿ ಮನೆ ಕಟ್ಟಲು ಸಾಧ್ಯವಾಗುತ್ತದೆ ಎಂದರು. ಏಕೆಂದರೆ ಎರಡು ವರ್ಷದ ಹಿಂದೆ ಕೂಡ ನಾನು ಮಣ್ಣಿನ ಗೋಡೆ ಇರುವ ಮನೆಯಲ್ಲಿ ವಾಸ ಮಾಡುತ್ತಿದ್ದೆವು..ಅದೇ ರೀತಿಯಲ್ಲಿ ಮನೆ ಕಟ್ಟಿದ್ದೀನಿ. ನನಗೆ ಮನೆ ಕತ್ತಲು ಕತ್ತಲು ಇಷ್ಟವಾಗುವುದಿಲ್ಲ ಹೀಗಾಗಿ ಜಾಸ್ತಿ ಟಿಕಟಿಗಳನ್ನು ಇಟ್ಟು ಬೆಳಕು ಬರುವಂತೆ ಮಾಡಿದ್ದೀನಿ ಎಂದು ರಾಘವೇಂದ್ರ ಹೇಳಿದ್ದಾರೆ.

click me!