ಇಬ್ಬರು ಹುಡುಗಿಯರ ಮಧ್ಯೆ ಸಣ್ಣದೊಂದು ಅಸೂಯೆ ಇದ್ದೇ ಇರುತ್ತೆ. ಅದಕ್ಕೆ ಬಾಲಿವುಡ್ ನಟಿಯರು ಹೊರತಾಗಿಲ್ಲ. ಆದ್ರೆ ಸ್ಟಾರ್ ನಟಿಯರು ಗಲಾಟೆಯಾಗಿ ಇಷ್ಟು ವರ್ಷವಾದ್ಮೇಲೂ ದ್ವೇಷ ಸಾಧಿಸ್ತಿರೋದು ಮಾತ್ರ ವಿಪರ್ಯಾಸ.
ಬಾಲಿವುಡ್ ಇಂಡಸ್ಟ್ರಿಯಲ್ಲಿ ನಟಿಯರ ಕ್ಯಾಟ್‌ಫೈಟ್ ಸಾಮಾನ್ಯ. ನಟಿಯರಾದ ಸೋನಂ ಮತ್ತು ದೀಪಿಕಾ ನಡುವೆ ಇಂತಹದೊಂದು ಕ್ಯಾಟ್‌ಫೈಟ್ ಇದೆ. ಇದಕ್ಕೆ ಕಾರಣವಾಗಿದ್ದು ಒಬ್ಬ ನಟ. ಇಬ್ಬರ ಮುನಿಸಿಗೆ ಕಾರಣವಾದ ನಟ ಈಗ ಮತ್ತೊಂದು ನಟಿ ಮದುವೆ ಆಗಿ ಹಾಯಾಗಿದ್ದಾನೆ. ಆದ್ರೆ ಈ ನಟಿಯರ ಫೈಟ್ ಮಾತ್ರ ಮುಗಿದಿಲ್ಲ. ಒಂದು ಬಾರಿ ಒಂದಾಗಿದ್ದ ಈ ನಟಿಯರು ಮತ್ತೆ ಮುಖ ತಿರುಗಿಸಿಕೊಂಡು ಓಡಾಡ್ತಿದ್ದಾರೆ. ಇಬ್ಬರು ಯಾವುದೇ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋದಿಲ್ಲ. ಯಾವುದೇ ಚಿತ್ರದಲ್ಲಿ ಒಟ್ಟಿಗೆ ನಟಿಸೋದಿಲ್ಲ. ಹಾಗಿದ್ರೆ ದೀಪಿಕಾ ಹಾಗೂ ಸೋನಂ ಮಧ್ಯೆ ಗಲಾಟೆಯಾಗಲು ಕಾರಣವಾದ ನಟ ಯಾರು, ಅವರಿಬ್ಬರ ಮಧ್ಯೆ ಮತ್ತೆ ಜಗಳವಾಗಿದ್ದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.
ಅವರಿಬ್ಬರ ಗಲಾಟೆ ನಡೆದಿದ್ದು ಈಗಲ್ಲ. ಇಬ್ಬರ ಚೊಚ್ಚಲ (Debut) ಚಿತ್ರದಿಂದಲೇ ಮುನಿಸು ಶುರುವಾಗಿದೆ. ಸಾವರಿಯಾ ಸೋನಂ (Sonam) ಮೊದಲ ಚಿತ್ರ. ಈ ಚಿತ್ರ 2007ರಲ್ಲಿ ತೆರೆಕಂಡಿತು. ಅದೇ ಸಮಯದಲ್ಲಿ ಓಂ ಶಾಂತಿ ಚಿತ್ರದ ಮೂಲಕ ದೀಪಿಕಾ (Deepika) ಬಾಲಿವುಡ್‌ಗೆ ಪ್ರವೇಶಿಸಲು ತಯಾರಾಗಿದ್ದರು. ಸಾವರಿಯಾ ಚಿತ್ರದಲ್ಲಿ ಸೋನಂ ಜೊತೆ ನಟಿಸಿದ್ದು ರಣಬೀರ್ ಕಪೂರ್ (Ranbir Kapoor). ಸೋನಂ, ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡ್ತಿದ್ದಳು ಎನ್ನುವ ಸುದ್ದಿ ಆಗ ಇತ್ತು. ಆದ್ರೆ ರಣಬೀರ್, ಸೋನಂಗೆ ಕೈ ಕೊಟ್ಟು ದೀಪಿಕಾ ಪಡುಕೋಣೆ ಜೊತೆ ಓಡಾಡ್ತಿದ್ದರು. ಇದೇ ಇವರಿಬ್ಬರ ಕೋಪಕ್ಕೆ ಕಾರಣವಾಯ್ತು. ಸಾವರಿಯಾ ಪ್ಲಾಪ್ ಆದ್ರೆ ಓಂ ಶಾಂತಿ ಓಂ ಚಿತ್ರ ಸೂಪರ್ ಹಿಟ್ ಆಯ್ತು. ಇದು ಕೂಡ ವೈಮನಸ್ಸು ಜಾಸ್ತಿ ಮಾಡಿತ್ತು. ಇಬ್ಬರು ಪರಸ್ಪರ ಕಮೆಂಟ್ ಮಾಡ್ತಾ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಿದೆ. ಆಗ ಒಬ್ಬ ಹಿರೋನಿಗಾಗಿ ಶುರುವಾದ ಮನಸ್ತಾಪ ಇನ್ನೂ ದಿ ಆಂಡ್ ಆಗಿಲ್ಲ.
ಮುಖದಲ್ಲಿರೋ ಕೂದಲಿಗಿಂತ ಮಾರ್ಕ್ಸ್ ಮುಖ್ಯ..ನೆಟ್ಟಿಗರಿಗೆ ಉತ್ತರ ಪ್ರದೇಶ 10TH ಟಾಪರ್ ಪ್ರಾಚಿ ತಿರುಗೇಟು
ಒಂದು ಬಾರಿ ದೀಪಿಕಾ ಪಡುಕೋಣೆ ಹಾಗೂ ಸೋನಂ ಒಂದಾದ ಸುದ್ದಿ ಅಭಿಮಾನಿಗಳ ಮುಖದಲ್ಲಿ ಸಂತೋಷ ತರಿಸಿತ್ತು. ಕಾಫಿ ವಿತ್ ಕರಣ್ ಶೋನಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಎಲ್ಲೆಡೆ ಸುದ್ದಿ ಮಾಡಿತ್ತು. ಆದ್ರೆ ಇನ್ನೇನು ಎಲ್ಲ ಸರಿ ಆಯ್ತು ಎನ್ನುವಾಗ್ಲೇ ದೀಪಿಕಾ ಹಾಗೂ ಸೋನಂ ಮತ್ತೆ ದೂರವಾದ್ರು.
ಇದೇ ರಣಬೀರ್ ಕಪೂರ್ ಮತ್ತೆ ಇವರನ್ನು ಒಂದು ಮಾಡಿದ್ರು ಅಂದ್ರೆ ತಪ್ಪೇನಿಲ್ಲ. ಯಾಕೆಂದ್ರೆ ರಣಬೀರ್ ಕಪೂರ್ ಜೊತೆ ಒಂದಲ್ಲ ಎರಡಲ್ಲ ಐದಾರು ನಟಿಯರು ಡೇಟ್ ಮಾಡಿದ್ದಾರೆ. ಯಾವಾಗ ರಣಬೀರ್, ದೀಪಿಕಾ ಬಿಟ್ಟು ಕತ್ರಿನಾ ಕೈಫ್ ಜೊತೆ ಹೋದ್ರೋ ಆಗ್ಲೇ ದೀಪಿ ಮತ್ತು ಸೋನಂ ಹತ್ತಿರವಾದ್ರು. ಕಾಫಿ ವಿತ್ ಕರಣ್ ಶೋನಲ್ಲಿ ಇಬ್ಬರು, ರಣಬೀರ್ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದರು.
ಒಂದೇ ನಟನ ಕಾರಣಕ್ಕೆ ಇವರಿಬ್ಬರ ಮಧ್ಯೆ ಹೊಂದಾಣಿಕೆ, ದ್ವೇಷ ನಡೀತಾನೆ ಇತ್ತು. ಇನ್ನೇನು ಈ ಜೋಡಿ ಒಂದಾಗಿದ್ದಾರೆ ಎನ್ನುವಷ್ಟರಲ್ಲೇ ಯೇ ಜವಾನಿ ಹೈ ದೀವಾನಿ ಚಿತ್ರದಲ್ಲಿ ರಣಬೀರ್ – ದೀಪಿಕಾ ಕಾಣಿಸಿಕೊಂಡ್ರು. ಅಷ್ಟೆ.. ಮತ್ತೆ ಇಬ್ಬರ ಮಧ್ಯೆ ಆರಿದ್ದ ದ್ವೇಷದ ಕಿಡಿ ಹೊತ್ತಿಕೊಂಡ್ತು.
ಮದುವೆಯಾದ ಗಂಡಸರಿಗೆ ಪಕ್ಕದ್ಮನೆ ಹೆಂಗಸರ ಮೇಲೆ ಏಕೆ ಕಣ್ಣು
ಒಂದ್ಕಡೆ ಸೋನಂ, ಕತ್ರಿನಾ ಕೈಫ್ ಹೊಗಳಿದ್ರೆ ಇನ್ನೊಂದು ಕಡೆ ದೀಪಿಕಾ, ನಾನು ಬಿಟ್ಟ ಚಿತ್ರ ಸೋನಂಗೆ ಸಿಗ್ತಿದೆ ಎನ್ನುವ ಮೂಲಕ ಮನಸ್ತಾಪಕ್ಕೆ ಕಾರಣವಾದ್ರು. ವಿಶೇಷ ಅಂದ್ರೆ ಇಬ್ಬರು ನಟಿಯರೂ ರಣಬೀರ್ ಕಪೂರ್ ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದಾರೆ. ಸಂಸಾರದ ದೋಣಿ ಸುಖವಾಗಿ ಸಾಗ್ತಿದೆ. ಆದ್ರೆ ಹಳೆ ದ್ವೇಷ ಮಾತ್ರ ಇನ್ನೂ ಆರಿಲ್ಲ. ಇಬ್ಬರು ಮುಖಾಮುಖಿಯಾಗೋದನ್ನು ತಪ್ಪಿಸಿಕೊಳ್ತಾರೆ.