ಲೋಕಸಭಾ ಚುನಾವಣೆ 2024: ಕೊಡಗಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿಶೇಷ ಮತಗಟ್ಟೆ

By Girish Goudar  |  First Published Apr 25, 2024, 3:05 PM IST

ಮತದಾರರನ್ನ ಸೆಳೆಯಲು ಕೊಡಗು ಜಿಲ್ಲಾಡಳಿತದಿಂದ ಹೊಸ ಪ್ಲಾನ್ ಮಾಡಿದ್ದು, ಥೀಮ್ ಬೇಸ್ಡ್ ಆಧಾರದಲ್ಲಿ ಮತಗಟ್ಟೆಗಳ ನಿರ್ಮಾಣ ಮಾಡಿದೆ. ಜಿಲ್ಲೆಯ ವಾಣಿಜ್ಯ ಬೆಳೆಯಾಗಿರುವ ಕಾಫಿ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನರು ಹೆಚ್ಚಿರುವುದರಿಂದ ಹಾಡಿ ಥೀಮ್ ಬೇಸ್ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಒಟ್ಟು 23 ವಿಶೇಷ ಮತಗಟ್ಟೆಗಳನ್ನು ರಚನೆ ಮಾಡಲಾಗಿದೆ. 


ವರದಿ: ರವಿ.ಎಸ್. ಹಳ್ಳಿ,  ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಏ.25): ಸ್ವತಃ ಸಿಎಂ ತವರು ಲೋಕಸಭಾ ಕ್ಷೇತ್ರವಾಗಿರುವ ಮೈಸೂರು ಕೊಡಗು ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗೆ ಮತದಾನಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಮತದಾರರ ಸೆಳೆಯಲು ಕೊಡಗಿನಲ್ಲಿ ವಿಶೇಷ ಮತಗಟ್ಟೆಗಳು ಸಿದ್ಧಗೊಂಡಿವೆ.  ಮತದಾರರ ಸೆಳೆಯಲು ಕೊಡಗು ಜಿಲ್ಲಾಡಳಿತದಿಂದ ಹೊಸ ಪ್ಲಾನ್ ಮಾಡಿದ್ದು, ಥೀಮ್ ಬೇಸ್ಡ್ ಆಧಾರದಲ್ಲಿ ಮತಗಟ್ಟೆಗಳ ನಿರ್ಮಾಣ ಮಾಡಿದೆ. ಜಿಲ್ಲೆಯ ವಾಣಿಜ್ಯ ಬೆಳೆಯಾಗಿರುವ ಕಾಫಿ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನರು ಹೆಚ್ಚಿರುವುದರಿಂದ ಹಾಡಿ ಥೀಮ್ ಬೇಸ್ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಒಟ್ಟು 23 ವಿಶೇಷ ಮತಗಟ್ಟೆಗಳನ್ನು ರಚನೆ ಮಾಡಲಾಗಿದೆ. 

Tap to resize

Latest Videos

10 ಸಖಿ ಬೂತ್

10 ಸಖಿ ಬೂತ್, 6 ಸಾಂಪ್ರದಾಯಿಕ ಮತಗಟ್ಟೆ, 2 ದಿವ್ಯಾಂಗ ಮತಗಟ್ಟೆ, ಮತ್ತು ಯುವ ಮತದಾರರ ಸೆಳೆಯಲು 2 ಯುವಮತದಾರರ ಬೂತ್ ಗಳನ್ನು ಸ್ಥಾಪಿಸಲಾಗಿದೆ. ಮಡಿಕೇರಿಯ ಹಿಲ್ ರಸ್ತೆ ಶಾಲೆಯಲ್ಲಿ ಇರುವ ಮತಗಟ್ಟೆಯಲ್ಲಿ ಕಾಫಿ ಥೀಮ್ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಕೊಡಗಿನಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾಸ್ಟ್ರಿಂಗ್ ಸೆಂಟರ್ ಗಳಿಗೆ ಕೊಡಗು ಡಿಸಿ ವೆಂಕಟರಾಜ ಭೇಟಿ ಪರಿಶೀಲನೆ ನಡೆಸಿದರು. 
ಮಡಿಕೇರಿಯ ಸಂತ ಜೋಸೆಫ್ ಕಾನ್ವೆಂಟ್ ನಲ್ಲಿ ಮಸ್ಟರಿಂಗ್ ಕಾರ್ಯ ಭರದಿಂದ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳಿದ್ದು, 546 ಮತಗಟ್ಟೆಗಳಿಗೆ 2416 ಚುನಾವಣಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಭದ್ರತೆಗೆ 1600 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಸ್ಟರಿಂಗ್ ಕಾರ್ಯದ ಬಗ್ಗೆ ಉಪ ಚುನಾವಣಾಧಿಕಾರಿ ವಿನಾಯಕ ನಾರ್ವಡೆ ಮಾಹಿತಿ ನೀಡಿದರು. ವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. 

ನಿನ್ನೆ ಒಂದೇ ದಿನ ಅಲ್ಪಸಂಖ್ಯಾತರಿಂದ ರಾಜ್ಯದ ಏಳು ಕಡೆ ಕೊಲೆ, ಹಲ್ಲೆ ಘಟನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಜಿಲ್ಲೆಯಲ್ಲಿ ಒಟ್ಟು 4.70 ಲಕ್ಷ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಚುನಾವಣೆ ನಡೆಸುವ ಸಂಬಂಧ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರು ಮತದಾನದ ಮೂಲಕ ಹಕ್ಕು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು. 

ಜಿಲ್ಲೆಯಲ್ಲಿ ಒಟ್ಟು 4,70,766 ಮತದಾರರು ಮತದಾನಕ್ಕೆ ಅರ್ಹರಿದ್ದು, ಮಡಿಕೇರಿ ಕ್ಷೇತ್ರದಲ್ಲಿ 1,16,143 ಪುರುಷ, 1,14,425 ಮಹಿಳೆ, 9 ಇತರರು ಸೇರಿ 2,30,568 ಮಂದಿ, ವೀರಾಜಪೇಟೆ ಕ್ಷೇತ್ರದಲ್ಲಿ 1,14,425 ಪುರುಷರು, 1,17,601 ಮಹಿಳೆಯರು, 7 ಇತರರು ಸೇರಿ 2,32,033 ಮಂದಿ ಮತದಾರರಿದ್ದಾರೆ. 2 ಕ್ಷೇತ್ರಗಳಲ್ಲಿ ತಲಾ 273 ರಂತೆ ಒಟ್ಟು 546 ಮತಗಟ್ಟೆಗಳಿವೆ ಎಂದು ಮಾಹಿತಿ ನೀಡಿದರು. 2 ಕ್ಷೇತ್ರಗಳು ಒಳಗೊಂಡಂತೆ 604 ಪಿ.ಆರ್.ಓ., 604 ಎ.ಪಿ.ಆರ್.ಓ., 1208 ಪಿ.ಓ.ಗಳು ಸೇರಿ ಒಟ್ಟು 2416 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 108 ಮತಗಟ್ಟೆಗಳನ್ನು ವಲ್ನರೇಬಲ್, ಕ್ರಿಟಿಕಲ್ ಎಂದು ಗುರುತಿಸಲಾಗಿದೆ. 

ತವರು ಕ್ಷೇತ್ರ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಸಿಎಂ ಸಕಲ ಯತ್ನ!

ವೆಚ್ಚ ಪರಿಶೀಲನೆ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿಯೂ ತಂಡಗಳು ಕಾರ್ಯೋನ್ಮುಖಗೊಂಡಿವೆ. ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶಗಳಾಗಿ ಪರಿವರ್ತಿಸಲಾಗಿದೆ. ಇದರ ಹೊರಗಡೆ 2 ಚೇರ್, ಒಂದು ಟೇಬಲ್, ಸಣ್ಣ ಶಾಮೀಯಾನ ಅಳವಡಿಸಿಕೊಂಡು ಪ್ರಚಾರ ಮಾಡಬಹುದಾಗಿದ್ದು 2X3 ಅಳತೆಯನ್ನು ಬ್ಯಾನರ್ ನಷ್ಟೆ ಬಳಕೆ ಮಾಡಬೇಕು. 

26 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ತನಕ ಮತದಾನ ನಡೆಯಲಿದೆ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಜವಾಬ್ದಾರಿ ನಿರ್ವಹಿಸಬೇಕೆಂದು ಕರೆ ನೀಡಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ 32 ಪ್ರಕರಣಗಳಲ್ಲಿ ಎಫ್.ಐ.ಆರ್. ಮಾಡಲಾಗಿದೆ. ಒಟ್ಟು ರೂ. 16,54, 220 ಹಾಗೂ ರೂ. 1.27 ಲಕ್ಷ ಮೌಲ್ಯದ  42, 318.805 ಲೀಟರ್ ಅಕ್ರಮ ಮದ್ಯ 4,605  ಕೆಜಿ ಮಾದಕ ವಸ್ತು  ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

click me!