ಅಕ್ರಮ ಸಂಬಂಧದ ಬಾಯಿ ಬಿಡು ಪೂಜಾ ಎನ್ನುವಷ್ಟು ರಿಯಲ್​ ಲೈಫ್​ನಲ್ಲೂ ಸುಲಭನಾ?

By Suvarna News  |  First Published Apr 25, 2024, 2:40 PM IST

ಭಾವನ ಅಕ್ರಮ ಸಂಬಂಧದ ಬಗ್ಗೆ ಮನೆಯವರಿಗೆ ವಿಷಯ ತಿಳಿಸೋಣ ಎಂದುಕೊಂಡಿದ್ದಾಳೆ ಪೂಜಾ. ಆದರೆ ನಿಜಕ್ಕೂ ಅದು ಅಷ್ಟು ಸುಲಭನಾ?
 


ಶ್ರೇಷ್ಠಾಳಿಗೆ ಇನ್ನು ಸುಮ್ಮನೆ ಇರಲು ಸಾಧ್ಯವಾಗುತ್ತಿಲ್ಲ. ನೇರವಾಗಿ ತಾಂಡವ್​ ಮನೆಗೆ ಬಂದಿದ್ದಾಳೆ. ಇದನ್ನು ನೋಡಿ ಎಲ್ಲರಿಗೂ ಶಾಕ್​ ಆಗಿದೆ. ಆದರೆ ಇವರಿಬ್ಬರೂ ಮದುವೆಯಾಗುತ್ತಿದ್ದಾರೆ, ಇದಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸತ್ಯ ಗೊತ್ತಿರುವುದು ಭಾಗ್ಯ ತಂಗಿ ಪೂಜಾಳಿಗೆ ಮಾತ್ರ. ತಾಂಡವ್​ ಮತ್ತು ಶ್ರೇಷ್ಠಾಳ ಲವ್ ಸ್ಟೋರಿಗೆ ಫುಲ್​ಸ್ಟಾಪ್​ ಹಾಕಲು ಇತ್ತ ಪೂಜಾ ಪ್ಲ್ಯಾನ್​ ಮಾಡುತ್ತಿದ್ದರೆ, ಇನ್ನು ಹತ್ತೇ ದಿನಗಳಲ್ಲಿ ಮದುವೆಯಾಗುವುದಾಗಿ ಶ್ರೇಷ್ಠಾ ಚಾಲೆಂಜ್​ ಹಾಕಿದ್ದಾಳೆ. ಹತ್ತು ದಿನಗಳಲ್ಲಿ ಮದುವೆಯಾಗಬೇಕು ಎಂದು ತಾಂಡವ್​ ಬಳಿ ಹೇಳುತ್ತಿರುವಾಗಲೇ ಪೂಜಾ ಎಂಟ್ರಿ ಕೊಟ್ಟು ಇಬ್ಬರ ಮುಖಕ್ಕೂ ಮಂಗಳಾರತಿ ಮಾಡಿದ್ದಾಳೆ. 16 ವರ್ಷದ ಮಗಳನ್ನು ಮನೆಯಲ್ಲಿ ಇಟ್ಟುಕೊಂಡು ಹೀಗೆ ಹೇಳಲು ನಾಚಿಕೆ ಆಗಲ್ವಾ ಎಂದು ಭಾವಂಗೆ ಕೇಳಿದರೆ, ಊರಲ್ಲಿ ಎಲ್ಲಾ ಗಂಡಸರು ಬಿಟ್ಟು ಮದುವೆಯಾದ ಭಾವನೆ ಬೇಕಿತ್ತಾ ಎಂದು ಶ್ರೇಷ್ಠಾಳಿಗೆ ಝಾಡಿಸಿದ್ದಾಳೆ. ಉರಿದುಕೊಂಡಿರೋ ಶ್ರೇಷ್ಠಾ ಪೂಜಾಳಿಗೆ ಇಲ್ಲಸಲ್ಲದ್ದನ್ನೆಲ್ಲಾ ಹೇಳಿದ್ದಾಳೆ. ಎಲ್ಲಾ ವಿಷಯವನ್ನು ಮನೆಯವರಿಗೆ ಹೇಳುವೆ ಎಂದು ಸಿಟ್ಟಿನಿಂದ ಪೂಜಾ ಹೋಗಿದ್ದಾಳೆ.

ಮನೆಗೆ ಹೋಗಿ ಅತ್ತೆ ಕುಸುಮಾಗೆ ಎಲ್ಲಾ ವಿಷಯ ತಿಳಿಸಬೇಕು ಎನ್ನುವಷ್ಟರಲ್ಲಿಯೇ ಮಕ್ಕಳು ಬಂದಿದ್ದಾರೆ. ಅದೇ ಇನ್ನೊಂದೆಡೆ ಶ್ರೇಷ್ಠಾ ಕೂಡ ಅಲ್ಲಿಗೆ ಬಂದಿದ್ದಾಳೆ. ಶ್ರೇಷ್ಠಾಳನ್ನು ನೋಡಿ ತನ್ವಿ ಉರಿದುಕೊಂಡಿದ್ದಾಳೆ. ಬಾಯಿಗೆ ಬಂದ ಹಾಗೆ ಮಾತನಾಡಿದ್ದಾಳೆ. ಇದನ್ನೆಲ್ಲಾ ಸಹಿಸಿಕೊಂಡಿದ್ದಾಳೆ ಶ್ರೇಷ್ಠಾ. ಈಗ ಏನೇ ಆಗಲಿ ನಡೆದದ್ದು ನಡೆದು ಹೋಗಲಿ ಎನ್ನುವಂತಿದೆ ಶ್ರೇಷ್ಠಾಳ ಮಾತು.

Tap to resize

Latest Videos

ಆಹಾ! ಗಂಡನ ಸತಾಯಿಸುವುದು ಎಂದ್ರೆ ಹೆಂಡ್ತಿಗೆ ಎಷ್ಟು ಖುಷಿ ಅಲ್ವಾ? ಸೀರಿಯಲ್​ ಪ್ರೇಮಿಗಳು ಹೇಳ್ತಿರೋದೇನು?

ಇದನ್ನು ನೋಡಿದ ಸೀರಿಯಲ್​ ಫ್ಯಾನ್ಸ್​ ಪೂಜಾಳಿಗೆ ಬಯ್ಯುತ್ತಿದ್ದಾರೆ. ಬೇಗ ನಿಜ ಹೇಳಬಾರ್ದಾ ಹಾಗೆ ಹೀಗೆ ಎನ್ನುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಹೀಗೆಯೇ ಆಗಿದ್ದರೆ ಈ ವಿಷಯವನ್ನು ಪೂಜಾಳ ಸ್ಥಾನದಲ್ಲಿ ಇರುವವರು ಹೇಳಿದರೆ ಅದು ಯಾವ ರೂಪ ಪಡೆಯುತ್ತಿತ್ತು ಒಮ್ಮೆ ಯೋಚಿಸಿ ಎನ್ನುವುದು ಕೆಲವರ ಅಭಿಮತ. ಏಕೆಂದ್ರೆ, ಪೂಜಾ ಈ ಬಗ್ಗೆ ಹಿಂದೊಮ್ಮೆ ಭಾಗ್ಯಳ ಬಳಿ ಹೇಳಲು ಹೋದಾಗ, ಅವಳು ಇದನ್ನು ಯೋಚನೆ ಮಾಡಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಹೆಣ್ಣಾದವಳು ಏನನ್ನೇ ಸಹಿಸಿಕೊಳ್ಳಬಹುದು, ಆದರೆ ಗಂಡನ ಅಕ್ರಮ ಸಂಬಂಧದ ಬಗ್ಗೆ ಸಹಿಸಿಕೊಳ್ಳುವುದು ಎಂದರೆ? ಅದೂ ಭಾಗ್ಯಳಂಥ ಹೆಣ್ಣುಮಗಳಿಗೆ ಸಾಧ್ಯವೇ ಇಲ್ಲ. 

ಇದೀಗ ಇದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾಳೆ ಪೂಜಾ. ಭಾವನ ಅಕ್ರಮ ಸಂಬಂಧದ ಕುರಿತು ಅವಳಿಗೆ ಹೇಳಲು ಒಂದೇ ನಿಮಿಷ ಸಾಕು. ಆದರೆ ಅದು ಮಾಡುವ ಇಂಪ್ಯಾಕ್ಟ್​ ಬಗ್ಗೆಯೇ ಯೋಚಿಸಿ ಕಂಗಾಲಾಗಿದ್ದಾಳೆ. ಅತ್ತೆ ಕುಸುಮಾಳಿಗೆ ಹೇಳುವುದೂ ಕಷ್ಟವೇ. ಏಕೆಂದರೆ ಆಕೆಗೆ ಗೊತ್ತಾದರೆ ಅದು ಭಾಗ್ಯಳಿಗೆ ಗೊತ್ತಾಗದೇ ಇರದು. ಸಾಲದು ಎನ್ನುವುದಕ್ಕೆ ಭಾಗ್ಯಳ ತಾಯಿಯೂ ಅಲ್ಲಿಯೇ ಇದ್ದಾಳೆ. ಒಂದೇ ಕ್ಷಣದಲ್ಲಿ ಇಡೀ ಮನೆ ಅಲ್ಲೋಲ ಕಲ್ಲೋಲವಾಗುವುದು ಗ್ಯಾರೆಂಟಿ. ವಿಷಯ ತಿಳಿದ ಕುಸುಮಾ ಮಗನಿಗೆ ಬೈಯಬಹುದು, ಅಬ್ಬಬ್ಬಾ ಎಂದರೆ ಕೈ ಮಾಡಬಹುದು. ಇಷ್ಟೆಲ್ಲಾ ಆದ ಮೇಲೆ ತಾಂಡವ್​ನಂಥ ಗಂಡು ಮಕ್ಕಳು ಸುಮ್ಮನೇ ಇರುತ್ತಾನೆಯೇ? ಹೇಗೆ ಎಲ್ಲರಿಗೂ ಗೊತ್ತಾಯ್ತಲ್ಲಾ ಎಂದು ಪ್ರೇಯಸಿಯನ್ನು ಕರೆದುಕೊಂಡು ಮನೆಬಿಟ್ಟು ಹೋದರೆ? ಒಂದೇ ಒಂದು ಮಾತು ಇಷ್ಟೆಲ್ಲಾ ಮಾಡುವ ಸಾಧ್ಯತೆ ಇರುವಾಗ ಪೂಜಾ ಮಾಡುತ್ತಿರುವುದೇ ಸರಿ, ಏಕಾಏಕಿ ಅವಳು ಎಲ್ಲವನ್ನೂ ಹೇಳಿಬಿಟ್ಟರೆ ಆಗುವ ಅನಾಹುತ ಅಷ್ಟಿಷ್ಟಲ್ಲ. ಅದರ ಬದಲು ಹೇಗಾದರೂ ಭಾವನಿಗೆ ಬುದ್ಧಿ ಕಲಿಸಬೇಕು ಎನ್ನುವ ಅವಳ ನಿರ್ಧಾರವೂ ಸರಿ ಎನ್ನುತ್ತಾರೆ ಕೆಲ ಅಭಿಮಾನಿಗಳು. ಇದು ಕೂಡ ನಿಜ ಅಲ್ವೆ? 

ಅಬ್ಬಾ ನೋವಾಗ್ತಿದೆ ಎಂದ ನಿವೇದಿತಾ: ಅಳ್ಬೇಡ ಕಣೆ... ನಮ್​ ಹಾರ್ಟೇ ಕಿತ್ತು ಬರ್ತಿದೆ ಎಂದ ಫ್ಯಾನ್ಸ್​!

 


click me!