ಕಂಕುಳ ಕೂದಲು‌ ಮಾರಿ‌ ಲಕ್ಷ ಗಳಿಸ್ತಿದ್ದಾಳೆ.. ಖರೀದಿಸೋದು ಯಾರು?

By Suvarna News  |  First Published Apr 25, 2024, 2:54 PM IST

ಜನರು ಅದೇನ್ ಏನ್ ಮಾರಾಟ ಮಾಡ್ತಾರೋ ದೇವರೇ ಬಲ್ಲ. ಜನರು ಹುಚ್ಚು ಬಿದ್ದು ಅದನ್ನು ಖರೀದಿ ಕೂಡ ಮಾಡ್ತಾರೆ. ಈ ಮಹಿಳೆ ತನ್ನ ದೇಹದ ಕೂದಲು ಸೇಲ್ ಮಾಡಿ ಲಕ್ಷ ಸಂಪಾದನೆ ಮಾಡ್ತಾಳೆ ಅಂದ್ರೆ  ನೀವು ನಂಬ್ಲೇಬೇಕು.
 


ಕೆಲವೊಂದು ಸುದ್ದಿಯನ್ನು ಓದಿದಾಗ ಜನ ಹೀಗೂ ಇರ್ತಾರ ಎನ್ನುವ ಪ್ರಶ್ನೆ ಮೂಡೋದು ಸಹಜ. ನಮ್ಮ ಸಮಾಜದಲ್ಲಿ ಪುರುಷ ಮತ್ತು ಮಹಿಲೆಗೆ ಅವರದೇ ಆದ ನಿಯಮಗಳಿವೆ. ದೇಹದಲ್ಲಿ ಬೆಳೆಯುವ ಕೂದಲಿನ ವಿಚಾರದಲ್ಲಿ ಕೂಡ ಅವರು ನಿಯಮ ಪಾಲನೆ ಮಾಡ್ತಾರೆ. ಮಹಿಳೆಯರು ದೇಹದಲ್ಲಿ ಬೆಳೆಯುವ ಕೂದಲನ್ನು ಶೇವ್ ಮಾಡ್ಬೇಕು, ಪುರುಷರು ಹಾಗೆ ಬಿಡ್ಬೇಕು. ಅಪ್ಪಿತಪ್ಪಿ ಮಹಿಳೆ ದೇಹದ ಕೂದಲು ಕಣ್ಣಿಗೆ ಬಿದ್ರೆ ಜನರು ಅದನ್ನೇ ದೊಡ್ಡ ಸುದ್ದಿ ಮಾಡಿ, ಮಹಿಳೆಗೆ ಅವಮಾನ ಮಾಡುವ ಪ್ರಯತ್ನ ನಡೆಸ್ತಾರೆ. ಎಲ್ಲ ಮಹಿಳೆಯಂತೆ ಈ ಮಹಿಳೆ ಸಮಾಜದ ನಿಯಮ ಪಾಲಿಸೋಕೆ ಇಷ್ಟಪಡೋದಿಲ್ಲ. ತನ್ನ ದೇಹದ ಕೂದಲನ್ನು ಶೇವ್ ಮಾಡದೆ ಬಿಟ್ಟ ಮಹಿಳೆ ಅದ್ರಿಂದಲೇ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. 

ತನ್ನ ದೇಹದ ಕೂದಲಿಂದಲೇ ಹಣ (Money) ಸಂಪಾದನೆ ಮಾಡ್ತಿರುವ ಯುವತಿ ಹೆಸರು ಕ್ಯಾಮಿಲ್ಲೆ ಅಲೆಕ್ಸಾಂಡರ್. ವಯಸ್ಸು 27 ವರ್ಷ. ಲಂಡನ್‌ (London) ನಲ್ಲಿ ವಾಸಿಸುವ ಕ್ಯಾಮಿಲ್ಲೆ ಅಲೆಕ್ಸಾಂಡರ್ ಸಂಗೀತಗಾರ್ತಿ ಮತ್ತು ಮಾಡೆಲ್. ಆರು ವರ್ಷಗಳ ಹಿಂದೆ ಕ್ಯಾಮಿಲ್ಲೆ ಅಲೆಕ್ಸಾಂಡರ್ ಶೇವ್ ಮಾಡದಿರಲು ನಿರ್ಧರಿಸಿದ್ಲು. ಸಮಾಜದ ಕಟ್ಟುಪಾಡಿನಿಂದ ಹೊರ ಬಂದ ಕ್ಯಾಮಿಲ್ಲೆ, ಕೂದಲ (Hair) ನ್ನು ಕತ್ತರಿಸುವುದಿಲ್ಲ.

Tap to resize

Latest Videos

ಸೀರೆಯುಟ್ಟು ಸೆರಗು ಮುಚ್ಚಿಕೊಳ್ಳದೆ ಹಾಟ್‌ ಫೋಸ್ ಕೊಟ್ಟ ಮಲಯಾಳಂ ನಟಿ!

ಕೊರೊನಾ ಸಂದರ್ಭದಲ್ಲಿ ಕ್ಯಾಮಿಲ್ಲೆ ಕೂಡ ಸಂಕಷ್ಟ ಎದುರಿಸಬೇಕಾಯ್ತು. ಆಕೆ ಕ್ಯಾಮಿಲ್ಲೆ ಎ ವಾಯ್ಡ್ ಎಂಬ ಬ್ಯಾಂಡ್ ನಡೆಸ್ತಿದ್ದಳು. ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಬ್ಯಾಂಡ್ ಖಾಲಿ ಕುಳಿತುಕೊಳ್ಬೇಕಾಯ್ತು. ಈ ಸಮಯದಲ್ಲಿ ಹೊಟ್ಟೆ ಪಾಡಿಗೆ ಕ್ಯಾಮಿಲ್ಲೆ, ವಯಸ್ಕ ಚಂದಾದಾರಿಕೆ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ತನ್ನ ಖಾತೆಯನ್ನು ತೆರೆದಳು. ಓನ್ಲಿ ಫ್ಯಾನ್ಸ್ ನ ಹೇರ್ ಸೆಲ್ಲಿಂಗ್ ಬ್ಯುಸಿನೆಸ್ ನಲ್ಲಿ ಕ್ಯಾಮಿಲ್ಲೆ ಖಾತೆ ತೆರೆದು ವ್ಯಾಪಾರ ಶುರು ಮಾಡಿದ್ಲು. 

ಕ್ಯಾಮಿಲ್ಲೆ ಕೂದಲಿಗೆ ಬಹುಬೇಡಿಕೆ : ಕ್ಯಾಮಿಲ್ಲೆ ದೇಹದ ಮೇಲಿರುವ ಕೂದಲನ್ನು ನೋಡಲು ಅಭಿಮಾನಿಗಳು ಆಸಕ್ತಿ ತೋರುತ್ತಾರೆ. ಈ ಕೂದಲಿಗೆ ಬಾರೀ ಬೇಡಿಕೆ ಇದ್ದು, ಅನೇಕರು ದುಬಾರಿ ಬೆಲೆ ನೀಡಿ ಇದನ್ನು ಖರೀದಿ ಮಾಡ್ತಾರೆ. ತಮ್ಮ ದೇಹದಲ್ಲಿ ಬೆಳೆಯುವ ಕೂದಲನ್ನು ಕತ್ತರಿಸದೆ ಹಾಗೆ ಇರುವ ಮಹಿಳೆಯರಿಗೆ ಹಣ ಸಂಪಾದನೆ ಮಾಡಲು ಉತ್ತಮ ಮಾರ್ಗವಿದೆ ಎನ್ನುತ್ತಾಳೆ ಕ್ಯಾಮಿಲ್ಲೆ. ಆಕೆ ಪ್ರಕಾರ, ಶೇವ್ ಮಾಡದ ಮಹಿಳೆಯನ್ನು ನೋಡಲು ಅನೇಕ ಪುರುಷರು ಇಷ್ಟಪಡ್ತಾರೆ. ಅವರಿಗೆ ಅಂಥಹದ್ದೊಂದು ಗೀಳಿರುತ್ತದೆ. ಅವರು ಕೂದಲನ್ನು ದುಬಾರಿ ಬೆಲೆಗೆ ಖರೀದಿಸಲೂ ಸಿದ್ಧವಿರುತ್ತಾರೆ ಎಂಬುದು ಕ್ಯಾಮಿಲ್ಲೆ ಅಭಿಪ್ರಾಯ. 

ವ್ಯಕ್ತಿಯೊಬ್ಬ, ಕ್ಯಾಮಿಲ್ಲೆ ಕೂದಲಿರುವ ಹೇರ್ ಬ್ರೆಷ್ ಖರೀದಿ ಮಾಡುವ ಆಸಕ್ತಿ ತೋರಿದ್ದ. ಅಷ್ಟೇ ಅಲ್ಲ ಇನ್ನೊಬ್ಬ ವ್ಯಕ್ತಿ ಸ್ವಲ್ಪ ಮುಂದೆ ಹೋಗಿ, ಖಾಸಗಿ ಅಂಗದ ಹೇರ್ ಕಟ್  ಮಾಡಿದ ಸಮಯದಲ್ಲಿ ತನಗೆ ಕಳುಹಿಸುವಂತೆ ಮನವಿ ಮಾಡಿದ್ದನಂತೆ. ಇನ್ನೊಬ್ಬರು 30 ಸಾವಿರ ರೂಪಾಯಿಗೆ ಕ್ಯಾಮಿಲ್ಲೆ ಒಳ ಉಡುಪನ್ನು ಖರೀದಿ ಮಾಡಿದ್ದರು. 

ಕ್ಯಾಮಿಲ್ಲೆ, ಓನ್ಲಿ ಫ್ಯಾನ್ಸ್ ಖಾತೆಯಲ್ಲಿ ಯಾವುದೇ ನಗ್ನ ವಿಡಿಯೋ ಅಥವಾ ವಿಡಿಯೋವನ್ನು ಹಂಚಿಕೊಳ್ಳೋದಿಲ್ಲ. ಆಕೆ ತನ್ನ ದೇಹದ ಕೂದಲು ಕಾಣಿಸಿಕೊಳ್ಳುವ ಫೋಟೋಗಳನ್ನು ಕ್ಲಿಕ್ಕಿಸಿ ಹಾಕ್ತಿರುತ್ತಾಳೆ. ಆಕೆ ಫೋಟೋ ಹಾಗೂ ಆಕೆ ಕೂದಲಿಗೆ ಬೇಡಿಕೆ ಇದ್ದು, ಜನರು ಕ್ಯಾಮಿಲ್ಲೆ ವಸ್ತುಗಳನ್ನು ಖರೀದಿ ಮಾಡ್ತಾರೆ. ಕ್ಯಾಮಿಲ್ಲೆ ಈ ವಸ್ತುಗಳ ಮಾರಾಟದ ಮೂಲಕವೇ ತಿಂಗಳಿಗೆ ಎರಡು ಲಕ್ಷಕ್ಕಿಂತ ಹೆಚ್ಚು ರೂಪಾಯಿ ಸಂಪಾದನೆ ಮಾಡ್ತಾಳೆ. 

ಅಬ್ಬಾ ನೋವಾಗ್ತಿದೆ ಎಂದ ನಿವೇದಿತಾ: ಅಳ್ಬೇಡ ಕಣೆ... ನಮ್​ ಹಾರ್ಟೇ ಕಿತ್ತು ಬರ್ತಿದೆ ಎಂದ ಫ್ಯಾನ್ಸ್​!

ಕ್ಯಾಮಿಲ್ಲೆ ಮಾತ್ರವಲ್ಲ ಓನ್ಲಿ ಫ್ಯಾನ್ಸ್ ನಲ್ಲಿ ಮಹಿಳೆಯರ ಬೆವರು, ಬಳಸಿದ ವಸ್ತುಗಳನ್ನು ಖರೀದಿ ಮಾಡುವ ಅನೇಕ ಜನರಿದ್ದಾರೆ. ಕೆಲ ಮಹಿಳೆಯರು ಇದ್ರಿಂದಲೇ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. 

click me!