ಅಯ್ಯೋ.. CRPF ಯೋಧನಿಗೆ ಬಾಸುಂಡೆ ಬರುವಂತೆ ಥಳಿತ..!

Apr 29, 2020, 6:42 PM IST

ಬೆಳಗಾವಿ(ಏ.29): ಇಲ್ಲಿನ ಸದಲಗ ಠಾಣೆಯ ಪೊಲೀಸರು ಸಿಆರ್‌ಪಿಎಫ್ ಯೋಧನಿಗೆ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಪೊಲೀಸರ ವಶದಲ್ಲಿ ಇದ್ದಂತ ಯೋಧನ ಮೇಲೆ ಹಲ್ಲೆ ನಡೆದಿದೆ.

ಏಪ್ರಿಲ್ 23ರಂದು ಪೊಲೀಸರು ಹಾಗೂ ಯೋಧನ ನಡುವೆ ಗಲಾಟೆ ನಡೆದಿತ್ತು. ಬಳಿಕ ಸಿಆರ್‌ಪಿಎಫ್ ಯೋಧ ಸಚಿನ್ ಅವರನ್ನು ಪೊಲೀಸರು ಆರೆಸ್ಟ್ ಮಾಡಿದ್ದರು. ನಿನ್ನೆಯಷ್ಟೇ(ಮಂಗಳವಾರ) ಜಾಮೀನಿನ ಮೇಲೆ ಯೋಧ ಬಿಡುಗಡೆಯಾಗಿದ್ದಾರೆ.

ಕಮಾಂಡೋ-ಪೊಲೀಸ್‌ ಜಟಾಪಟಿ ಕೇಸ್‌: CRPF ಯೋಧನಿಗೆ ಷರತ್ತುಬದ್ಧ ಜಾಮೀನು

ಸಿಆರ್‌ಪಿಎಫ್ ಯೋಧ ಠಾಣೆಯಲ್ಲಿದ್ದಾಗ ಪೊಲೀಸರು ಮನಬಂದಂತೆ ದಂಡಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.