ಉಪಚುನಾವಣೆ ಪ್ರಚಾರ; ಮರ್ಸಿಡೀಸ್ ಬೆಂಝ್ ಕಾರು ಡ್ರೈವ್ ಮಾಡಿ ಮಿಂಚಿದ ಹೆಬ್ಬಾಳ್ಕರ್!

Nov 30, 2019, 9:49 PM IST

ಬೆಳಗಾವಿ(ನ.30): ರಾಜ್ಯದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಬಿರುಸಿನ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಭರದಿಂದ ಸಾಗಿದೆ. ಅಥಣಿ ಉಪಚುನಾವಣೆ ಪ್ರಚಾರದ ನಡುವೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮರ್ಸಿಡೀಸ್ ಬೆಂಝ್ ಕಾರು ಡ್ರೈವ್ ಮಾಡೋ ಮೂಲಕ ಮಿಂಚಿದ್ದಾರೆ. 

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರಿನ ಮೂಲಕ ಸಂಸತ್ತಿಗೆ ಆಗಮಿಸಿದ ಪರಿಸರ ಸಚಿವ!

ಹೆಬ್ಬಾಳ್ಕರ್ ಪರಿಚಿತರಾದ ಡಾ| ಪದ್ಮರಾಜರ ಅವರ ಕಾರನ್ನು ಡ್ರೈವ್ ಮಾಡಲು ಹೆಬ್ಬಾಳ್ಕರ್‌ಗೆ ಅಹ್ವಾನ ನೀಡಲಾಗಿತ್ತು.  ಕೋರಿಕೆಯ ಮೇರೆಗೆ ಹೆಬ್ಬಾಳ್ಕರ್ ಬೆಂಝ್ ಕಾರು ಚಲಾಯಿಸಿ ಅವರಿಗೆ ಶುಭ ಕೋರಿದ್ದಾರೆ. ಕಾರು ಡ್ರೈವ್ ಮಾಡುವ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.