ಸೀರೆಯುಟ್ಟು ಹೂನಗು ಚೆಲ್ಲಿದ ಕೃಷಿ ತಾಪಂಡ… ನಿಮ್ಮ ನಗುವಿಗೆ ಫಿದಾ ಆಗೋದೆ ಅಂತಿದ್ದಾರೆ ಯುವಕರು

First Published | Nov 28, 2024, 11:01 AM IST

ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ ಸೀರೆಯಲ್ಲಿ ಪೋಸ್ ಕೊಟ್ಟಿದ್ದು, ನಟಿಯ ಮುದ್ದಾದ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

ಚಂದನವನದ ಸುಂದರಿ, ಕೊಡಗಿನ ಬ್ಯೂಟಿ ಕೃಷಿ ತಾಪಂಡ  (Krishi Thapanda) ಸಿನಿಮಾ, ನಟನೆಯಿಂದ ದೂರ ಉಳಿದಿದ್ದರೂ ಸಹ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ ಈ ಕೂರ್ಗ್ ಬ್ಯೂಟಿ. 
 

ಮಾಡರ್ನ್ ಡ್ರೆಸ್ ಗೂ ಸೈ, ಸಾಂಪ್ರದಾಯಿಕ ಸೀರೆ ಲುಕ್ ಗೂ ಸೈ ಎನ್ನುವ ಕೃಷಿ ತಾಪಂಡ, ಇತ್ತೀಚಿನ ದಿನಗಳಲ್ಲಂತೂ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಕೂಡ ವಿವಿಧ ರೀತಿಯ ಹ್ಯಾಂಡಲೂಮ್ ಸೀರೆಗಳಲ್ಲಿ (handloom saree) ನಟಿ ಮಿಂಚುತ್ತಿರುತ್ತಾರೆ. 
 

Tap to resize

ಇದೀಗ ಕೃಷಿ, ಒಂದಷ್ಟು ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ತಿಳಿ ಗುಲಾಬಿ ಬಣ್ಣದ ಮೈಸೂರು ಸಿಲ್ಕ್ ಸೀರೆಯಲ್ಲಿ ಕೃಷಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ನಗು ನಟಿಯ ಅಂದವನ್ನು ಇಮ್ಮಡಿ ಗೊಳಿಸಿದೆ ಅಂದ್ರೆ ತಪ್ಪಾಗಲ್ಲ. 
 

ಕೃಷಿ ತಾಪಂಡ ಫೋಟೊಗಳನ್ನು ನೋಡಿ ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್ ಮಾಡಿದ್ದು, ಸೀರೆಯುಟ್ಟ ನವಿಲು ನೀನು, ಗಾರ್ಜಿಯಸ್, ಬ್ಯೂಟಿಫುಲ್, ನಿಮ್ಮ ನಗುವಿಗೆ ಹುಚ್ಚನಾಗೋದೆ, ವಾವ್ ಎಷ್ಟು ಚಂದದ ನಗು, ಆ ನಗುವಿಗೆ ಫಿದಾ ಆಗೋದೆ ನಾ, ಗುಲಾಬಿ ಹೂವಿನ ಇನ್ನೊಂದು ಹೆಸರು ನೀನು  ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಇನ್ನು ಕೃಷಿ ತಾಪಂಡ ಬಗ್ಗೆ ಹೇಳೋದಾದ್ರೆ, ಅಖಿರಾ ಸಿನಿಮಾದ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಕೃಷಿ ತಾಪಂಡ.  ಕಹಿ, ಎರಡು ಕನಸು, ಇರಾ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಭರಾಟೆ, ಲಂಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿದ್ರೂ, ನಟಿ ತಮ್ಮದೇ ಆದ ಬ್ಯುಸಿನೆಸ್ ಆರಂಭಿಸಿ ಅದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ನಟನೆ, ಮಾಡೆಲಿಂಗ್ ಗೂ ಮುನ್ನ ಯುಎಸ್ ಕಂಪನಿಯೊಂದರಲ್ಲಿ ಕೆಅಲ್ಸ ಮಾಡುತ್ತಿದ್ದರು, 
 

ಕೃಷಿ ಹೆಚ್ಚಾಗಿ ತಮ್ಮ ಸ್ನೇಹಿತೆಯರಾದ ಅನುಪಮಾ ಗೌಡ, ಇಶಿತಾ ವರ್ಷ ಜೊತೆ ಬೇರೆ ಬೇರೆ ದೇಶಗಳಲ್ಲಿ ಸಫಾರಿ ಮಾಡೋದಕ್ಕೆ ಹೋಗುತ್ತಿರುತ್ತಾರೆ. ಕೃಷಿ ಸದ್ಯ ಫೋಟೊಗ್ರಫಿಯಲ್ಲೂ ಸಹ ಎಕ್ಸ್ ಪರ್ಟ್ ಆಗಿದ್ದಾರೆ. 
 

Latest Videos

click me!