ಜೆಡಿಎಸ್‌ನ ಶಾಸಕರು, ಮುಖಂಡರನ್ನು ಎಳೆಯುವುದು ಅಷ್ಟು ಸುಲಭದ ಮಾತಲ್ಲ. ಹಣದಿಂದ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ವಾಭಿಮಾನವಿದೆ. ನಿಮ್ಮ ಹಣದ ಗಾಳಕ್ಕೆ ಎಲ್ಲರೂ ಬೀಳುತ್ತಾರೆ ಎಂದು ಭ್ರಮಿಸಿದ್ದರೆ ಅದು ನಿಮ್ಮ ಮೂರ್ಖತನ. ಈಗಷ್ಟೇ ಗೆದ್ದಿದ್ದೀರಿ. ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಿ: ಮಾಜಿ ಸಚಿವ ಸಿ.ಎಸ್. ಪುಟ್ಟರಾಜು
ಮಂಡ್ಯ(ನ.28): ಶಾಸಕ ಸಿ.ಪಿ.ಯೋಗೇಶ್ವರ್‌ಗೆ ತಾಕತ್ತಿದ್ದರೆ ಜೆಡಿಎಸ್‌ನಿಂದ ಒಬ್ಬನೇ ಒಬ್ಬ ಮುಖಂಡ ಅಥವಾ ಶಾಸಕರನ್ನು ತಮ್ಮ ಕಡೆಗೆ ಸೆಳೆಯಲಿ ನೋಡೋಣ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜೆಡಿಎಸ್‌ನ ಶಾಸಕರು, ಮುಖಂಡರನ್ನು ಎಳೆಯುವುದು ಅಷ್ಟು ಸುಲಭದ ಮಾತಲ್ಲ. ಹಣದಿಂದ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ವಾಭಿಮಾನವಿದೆ. ನಿಮ್ಮ ಹಣದ ಗಾಳಕ್ಕೆ ಎಲ್ಲರೂ ಬೀಳುತ್ತಾರೆ ಎಂದು ಭ್ರಮಿಸಿದ್ದರೆ ಅದು ನಿಮ್ಮ ಮೂರ್ಖತನ. ಈಗಷ್ಟೇ ಗೆದ್ದಿದ್ದೀರಿ. ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಿ. ಅದನ್ನು ಬಿಟ್ಟು ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ಮುಗಿಸಿ ಬಿಡುವೆನೆಂಬ ಮಾತುಗಳು ನಿಮ್ಮ ದುರಹಂಕಾರದ ಪರಮಾವಧಿಯನ್ನು ಸಾಕ್ಷೀಕರಿಸುತ್ತದೆ ಎಂದು ಕುಟುಕಿದರು.
undefined
ಜಿಟಿ ದೇವೇಗೌಡರನ್ನು ಬಂಧಿಸಲು ಕಾಂಗ್ರೆಸ್ ಮಾಡಿತ್ತಾ ಪ್ಲಾನ್? ಬಾಂಬ್ ಸಿಡಿಸಿದ ಹೆಚ್‌ಡಿ ರೇವಣ್ಣ!
ತಾವೇ ತುಳಿದ ಹಾವಿನ ಹುತ್ತಕ್ಕೇ ಸೇರಿರುವ ಸಿ.ಪಿ. ಯೋಗೇಶ್ವರ್ ಎಚ್ಚರದಿಂದ ಇರಬೇಕು. ಕಾಂಗ್ರೆಸ್ ಹುತ್ತದೊಳಗೆ ಎಂತೆಂಥಾ ಘಟ ಸರ್ಪಗಳಿವೆ ಎನ್ನುವುದು ನಿಮಗೆ ಗೊತ್ತಿಲ್ಲ. ನೀವಿರುವ ಕ್ಷೇತ್ರದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಇದ್ದಾರೆ. ಇಬ್ಬರನ್ನೂ ಎದುರಿಸಿ ರಾಜಕೀಯ ಬದುಕನ್ನು ಕಟ್ಟಿಕೊಂಡು ತೋರಿಸಿ ಎಂದು ಸಿಪಿವೈಗೆ ಸವಾಲು ಹಾಕಿದರು.
ಜೆಡಿಎಸ್ ಪಕ್ಷ ಮುಗಿಸಲು ಸಾಧ್ಯವಿಲ್ಲ: ರೇವಣ್ಣ ಗುಡುಗು
ಬೆಂಗಳೂರು: ನಮ್ಮ ಪಕ್ಷವನ್ನು ಯಾರಿಂದಲೂ ಮುಗಿ ಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷ ಮಾರಾಟಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತೀಕ್ಷ್ಮವಾಗಿ ಹೇಳಿದ್ದಾರೆ.
ಬುಧವಾರ ವಿಧಾನಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಲವು ಏಳು-ಬೀಳುಗಳನ್ನು ನೋಡಿ ದ್ದಾರೆ. 2014ರಲ್ಲಿ ಮೋದಿಯವರ ಮಾತು ಕೇಳಿದ್ದರೆ ಮತ್ತು 2007ರಲ್ಲಿ ಕುಮಾರಸ್ವಾಮಿಹಾಗೂಯಡಿಯೂರಪ್ಪ ಒಟ್ಟಾಗಿ ಹೋಗಿದ್ದರೆ ಇಂದು ಕಾಂಗ್ರೆಸ್ ಇರುತ್ತಿರಲಿಲ್ಲ ಎಂದರು.
ಡಿಸಿಎಂ ಆಫರ್ ಬಂದಿತ್ತು:
ಕುಮಾರಸ್ವಾಮಿ 2008ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ನನಗೂ ಒಬ್ಬ ನಾಯಕರು ಡಿಸಿಎಂ ಆಫರ್ ನೀಡಿದ್ದರು ಎಂದು ರೇವಣ್ಣ ಸ್ಫೋಟಕ ಹೇಳಿಕೆ ನೀಡಿದರು. ಡಿಸಿಎಂ ಹುದ್ದೆಗೆ ಆಹ್ವಾನ ನೀಡಿದರೂ ನಾನು ಒಪ್ಪಲಿಲ್ಲ. ಅಧಿಕಾರದ ಆಸೆಗೆ ಬೀಳುವ ವ್ಯಕ್ತಿ ನಾನಲ್ಲ. ಆಹ್ವಾನ ನೀಡಿದವರ ಹೆಸರು ಬಹಿರಂಗ ಪಡಿಸು ವುದು ಬೇಡ. ಮುಂದೆ ಮಾತಾಡೋಣ. ಕುಮಾರ ಸ್ವಾಮಿ ಜತೆ ಹೊಡೆದಾಡುತ್ತೇನೆ ಎಂದು ಭಾವಿಸಿದರೆ ಅದು ಕೇವಲ ಭ್ರಮೆ ಅಷ್ಟೇ. ಅವರ ಜತೆ ಯಾವಾಗಲೂ ಇರುತ್ತೇನೆ ಎಂದರು.
ಯೋಗೇಶ್ವರ್ ರಾಜಕೀಯ ವ್ಯಾಪಾರಿ: ನಿಖಿಲ್ ಕಿಡಿ
ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಗೆಲುವಿ ನಲ್ಲಿಯೂ ವಿಕೃತಿ ಮೆರೆಯು ತಿದ್ದು, ಜೆಡಿಎಸ್ ಖಾಲಿ ಮಾಡಿಸುತ್ತೇನೆ ಎಂದ ವ್ಯಕ್ತಿ ರಾಜಕೀಯ ವ್ಯಾಪಾರಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧ ಎಂದ ಸೈನಿಕ.. ಬಂಡೆ ಮೌನ ಸಮ್ಮತಿ?
ಉಪಚುನಾವಣೆ ಫಲಿತಾಂಶ ಬಳಿಕ ಜೆಡಿಎಸ್ ಕಾರ್ಯಕರ್ತರಿಗೆ ಪತ್ರ ಬರೆದಿ ರುವ ಅವರು, ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿ ಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈ ಹಿಡಿದವರನ್ನೇ ಕಚ್ಚಿ, ವಿಷಕಾ ರುವ ರಾಜಕೀಯ ವಿಷಜಂ ತುಗಳಿಗೆ ನಾವು ಹೆದರುವುದಿಲ್ಲ ಎಂದು ಯೋಗೇಶ್ವರ್ ಹೆಸರು ಉಲ್ಲೇಖಿಸದೇ ಕಿಡಿಕಾರಿದ್ದಾರೆ.
'ಪಕ್ಷ ನನಗೆ ಟಾಸ್ ಕೊಡಲಿ, ಕೇವಲ 15 ದಿನದಲ್ಲಿ ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ' ಎನ್ನುವ ದರ್ಪ, ಅಹಂಕಾರ ಆ ಗೆಲುವಿ ನಲ್ಲಿ ವ್ಯಕ್ತವಾದ ವಿಕೃತಿ. ಎದುರಾಳಿಯ ಸೋಲನ್ನು ಅವಹೇಳನ ಮಾಡುವ ವಿಕಾರಿ ಅವಸ್ಥೆಗೆ ಹೋಗಬಾರದಿತ್ತು ಎಂದು ಹೇಳಿದ್ದಾರೆ.