ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ ಬೇರೆಯಾಗಿರೋದು ಕನ್ಫರ್ಮ್ ಆದಂತಿದೆ. ಐಶ್ ಸರ್ನೇಮ್ ನಲ್ಲಿ ಬದಲಾವಣೆಯಾಗಿದೆ.
ಬಾಲಿವುಡ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ (Bollywood couple Abhishek Bachchan and Aishwarya Rai Bachchan) ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಮಹತ್ವದ ಸಾಕ್ಷ್ಯವೊಂದು ಸಿಕ್ಕಿದೆ. ಅಭಿಷೇಕ್ ರಿಂದ ಐಶ್ ದೂರವಾಗಿದ್ದಾರೆ ಎನ್ನುವ ವದಂತಿ ಇತ್ತು. ಈಗ ಐಶ್ವರ್ಯ ತಮ್ಮ ಹೆಸರಿನಿಂದ ಬಚ್ಚನ್ ಸರ್ನೇಮ್ (Bachchan surname) ತೆಗೆದು ಹಾಕಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಐಶ್, ಅಭಿಷೇಕ್ ಬಚ್ಚನ್ ಮದುವೆಯಾದ್ಮೇಲೆ ತಮ್ಮ ಹೆಸರನ್ನು ಐಶ್ವರ್ಯ ರೈ ಬಚ್ಚನ್ ಎಂದು ಬದಲಿಸಿಕೊಂಡಿದ್ದರು. ಆದ್ರೆ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯ ಹೆಸರಿನ ಮುಂದಿದ್ದ ಬಚ್ಚನ್ ಹೆಸರನ್ನು ತೆಗೆದುಹಾಕಲಾಗಿದೆ. ಬೋರ್ಡ್ ಮೇಲೆ ಬರೀ ಐಶ್ವರ್ಯ ರೈ ಎಂದು ಬರೆಯಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು, ಐಶ್ವರ್ಯ ರೈ ಹಾಗೂ ಅಭಿಷೇಕ್ ಬರೀ ದೂರವಾಗಿಲ್ಲ, ಇಬ್ಬರ ಮಧ್ಯೆ ಡಿವೋರ್ಸ್ (divorce) ಆಗಿದೆ ಎನ್ನುತ್ತಿದ್ದಾರೆ.
ದುಬೈನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ತಾರೆಯಾಗಿ ಆಗಮಿಸಿದ್ದ ಐಶ್ವರ್ಯಾ ರೈ ಅವರ ಫೋಟೋ, ಸ್ಕ್ರೀನ್ ಮೇಲೆ ಗೋಚರಿಸುತ್ತಿತ್ತು. ಐಶ್ ಫೋಟೋ ಕೆಳಗೆ ಅವರ ಹೆಸರನ್ನು ಹಾಕಲಾಗಿತ್ತು. ಆದ್ರೆ ಈ ಹೆಸರು ಎಲ್ಲರ ಗಮನ ಸೆಳೆದಿದೆ. ಐಶ್ವರ್ಯ ರೈ ಬಚ್ಚನ್ ಬದಲು ಕೇವಲ ಐಶ್ವರ್ಯ ರೈ ಎಂಬ ನಾಮಪಲಕವನ್ನು ನೀವು ನೋಡಬಹುದು.
ಆಟದಲ್ಲಿ ಸೋತಿದ್ದಕ್ಕೆ ವಿಷ್ಣುವರ್ಧನ್ ನೋಡಿಕೊಂಡು ಹೋದ ಸುಹಾಸಿನಿ!
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಬಳಕೆದಾರರು, ಐಶ್ ಹಾಗೂ ಅಭಿ ಡಿವೋರ್ಸ್ ಪಡೆದಿದ್ದು, ಇದು ಅಧಿಕೃತ ಘೋಷಣೆ ಎನ್ನುತ್ತಿದ್ದಾರೆ. ಐಶ್ ವಿಚ್ಛೇದನಕ್ಕೆ ಬಹುತೇಕ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ನಿಮಗೆ ಸದಾ ನಮ್ಮ ಬೆಂಬಲವಿದೆ, ನಿಮ್ಮನ್ನು ನೋಡಲು ಸಂತೋಷವಾಗ್ತಿದೆ, ನೀವು ಅಭಿಷೇಕ್ ರಿಂದ ದೂರ ಬನ್ನಿ, ಇದು ಅಧಿಕೃತ ಘೋಷಣೆಯೇ ಹೀಗೆ ಅನೇಕ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದ್ರೆ ಈವರೆಗೆ ಐಶ್ವರ್ಯ ರೈ ಆಗ್ಲಿ ಅಭಿಷೇಕ್ ಆಗ್ಲಿ ತಮ್ಮ ವಿಚ್ಛೇದನದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
ರಾಮ್‌ಚರಣ್ ಡೆಬ್ಯುಟ್ ಸಿನಿಮಾ ಮಾಡಲು ರಾಜಮೌಳಿ ನಿರಾಕರಿಸಿದ್ದೇಕೆ?
ಕಳೆದ ಕೆಲ ತಿಂಗಳಿಂದ ಐಶ್ವರ್ಯ ಮತ್ತು ಅಭಿಷೇಕ್ ವಿಚ್ಛೇದನ ವಿಚಾರ ಹೆಚ್ಚು ಸುದ್ದಿಯಲ್ಲಿದೆ. ಅವರಿಬ್ಬರು ದೂರವಾಗಿದ್ದು, ಬೇರೆ ಮನೆಯಲ್ಲಿ ವಾಸವಾಗಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷ್ಯ ಸಿಕ್ಕಿದೆ. ಅನಂತ್ ಅಂಬಾನಿ ಮದುವೆಗೆ ಬೇರೆಯಾಗಿ ಬಂದಿದ್ದ ಜೋಡಿ ಚರ್ಚೆಗೆ ಬಂದಿದ್ದರು. ಅದಾದ ಮೇಲೆ ಯಾವುದೇ ಕಾರ್ಯಕ್ರಮದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮಗಳು ಆರಾಧ್ಯ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಐಶ್ವರ್ಯ, ಮಗಳ ಹುಟ್ಟುಹಬ್ಬವನ್ನೂ ಅಭಿಷೇಕ್ ಇಲ್ಲದೆ ಆಚರಿಸಿದ್ದರು. ವಿದೇಶಿ ಪ್ರವಾಸಗಳಲ್ಲೂ ಐಶ್ವರ್ಯಗೆ ಆರಾಧ್ಯ ಜೊತೆಯಾಗುತ್ತಿದ್ದಾರೆ. ಇತ್ತ ಅಭಿಷೇಕ್ ಬಚ್ಚನ್, ತಮ್ಮ ಕುಟುಂಬದ ಜೊತೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ತಮ್ಮ ಹೊಸ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದು, ಈ ಸಂದರ್ಭದಲ್ಲಿ ಮನಸ್ಸಿಗೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಪರೋಕ್ಷವಾಗಿ ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಐಶ್ವರ್ಯ ಹಾಗೂ ಮಗಳನ್ನು ಹೊಗಳಿದ್ದೂ ಇದೆ. ಕೆಲ ದಿನಗಳ ಹಿಂದೆ ತಮ್ಮ ಕೈನಲ್ಲಿರುವ ಉಂಗುರವನ್ನು ತೋರಿಸಿ ನಾನಿನ್ನೂ ಡಿವೋರ್ಸ್ ಪಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಐಶ್ವರ್ಯ ರೈ ಕೂಡ ತಮ್ಮ ಉಂಗುರವನ್ನು ಪರೋಕ್ಷವಾಗಿ ಕಾಣಿಸಿದ್ದರು. ಆದ್ರೆ ಐಶ್ವರ್ಯ, ತಮ್ಮ ತಾಯಿ ಮನೆಯಲ್ಲಿ ವಾಸವಾಗಿದ್ದು, ಅಭಿಷೇಕ್ ರಿಂದ ದೂರವಾಗಿದ್ದಾರೆ ಎಂಬ ವದಂತಿ, ಸತ್ಯವಾಗುವಂತೆ ಕಾಣ್ತಿದೆ. ಈಗ ತಮ್ಮ ಹೆಸರಿನ ಮುಂದಿದ್ದ ಬಚ್ಚನ್ ಸರ್ ನೇಮ ತೆಗೆದಿರುವ ಐಶ್ವರ್ಯ, ಏನು ಹೇಳ ಹೊರಟಿದ್ದಾರೆ ಎಂಬುದನ್ನು ಕಾದು ನೋಡ್ಬೇಕಿದೆ.