ಟೊಮ್ಯಾಟೋ, ಜೆರಾಕ್ಸ್, ಸ್ಮಾರ್ಟ್ ಫೋನ್‌ಗೆಲ್ಲಾ ಕನ್ನಡದಲ್ಲಿ ಏನಂತಾರೆ ಹೇಳಿ ನೋಡೋಣ?

By Suvarna NewsFirst Published Jan 9, 2021, 4:07 PM IST
Highlights

ಕನ್ನಡತಿ ಸೀರಿಯಲ್ ನ ಕನ್ನಡ ಪಾಠ ಈ ಕಾಲದ ಹುಡುಗ್ರಿಗೂ ಸಖತ್ ಇಷ್ಟ. ಅದ್ಯಾಕೆ ಗೊತ್ತಾ?

ಚಿಗುರು ಮೀಸೆ, ಹುರಿ ಮೀಸೆ, ರಾಜಾ ಮೀಸೆ.. ಅಂತ ಹೇಳಿದ್ರೆ ಸಾಕು, ವಿವರಣೆ ಬೇಕಿಲ್ಲ, ಅರ್ಥ ಗೊತ್ತಾಗುತ್ತೆ. ಆದರೆ ಈ ಗಿರಿಜಾ ಮೀಸೆ ವಿಷಯ ಅಷ್ಟು ಸರಳ ಅಲ್ಲ. ಹುಡುಗಿಯರಿಗೂ ಮೀಸೆಗೂ ಏನು ಸಂಬಂಧ? ಅದರಲ್ಲೂ ದಪ್ಪ ಮೀಸೆಗೆ ಗಿರಿಜಾ ಮೀಸೆ ಅಂತ ಯಾಕೆ ಕರೀತಾರೆ? ಯಾರಿಗಾದ್ರೂ ಕುತೂಹಲ ಮೂಡಿಸೋದೆನೇ. ಗಿರಿ ಅಂದರೆ ಬೆಟ್ಟ. ಗಿರಿಜಾ ಅಂದರೆ ಬೆಟ್ಟದಲ್ಲಿ ಹುಟ್ಟಿದ್ದು. ಬೆಟ್ಟದಲ್ಲಿ ಹುಟ್ಟೋದು ಸೊಂಪಾದ ಪೊದೆಗಳು ಅಲ್ವಾ.. ಹಾಗಾಗಿ ಪೊದೆ ಥರ ದಪ್ಪಕ್ಕೆ ಬೆಳೆಸಿರುವ ಮೀಸೆ ಗಿರಿಜಾ ಮೀಸೆ. ಇಂಗ್ಲೀಷ್‌ನಲ್ಲಿ ಕೂಡ ಬುಷೀ ಮುಸ್ಟಾಚ್‌ ಇದೆ. ಇನ್ನೊಂದು ವಿವರಣೆ ಪ್ರಕಾರ ಅದು ಗಿರಿಜಾ ಮೀಸೆ ಅಲ್ಲ, ಗುಜುರು ಮೀಸೆ, ಗುಜುರು ಅನ್ನೋ ಪದ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಕಾರಣ ಜನರ ಬಾಯಲ್ಲಿ ಅದು ಗಿರಿಜಾ ಮೀಸೆ ಆಯ್ತು. ಗಿರಿಜಾ ಮೀಸೆ ಬಗ್ಗೆ ನಂಗೆಲ್ಲಾ ಗೊತ್ತು ಅಂತ ಇನ್ಮುಂದೆ ನೀವೂ ಮೀಸೆ ತಿರುವಬಹುದು!

.. ಇದೇನಿದು, ಕನ್ನಡತಿ ಬಗ್ಗೆ ಹೇಳೋದು ಬಿಟ್ಟು ಗಿರಿಜಾ ಮೀಸೆ ಬಗ್ಗೆ ಹೇಳ್ತಿದ್ದೀರಲ್ಲಾ.. ಅಂದ್ಕೋತಿದ್ದೀರಾ? ಆದರೆ ನಿಜಕ್ಕೂ ಇದು ಕನ್ನಡತಿ ಭುವನೇಶ್ವರಿ ಹೇಳಿರುವ ಮಾತುಗಳು. ಕನ್ನಡತಿ ಸೀರಿಯಲ್ ಅನ್ನು ನೀವು ಆನ್‌ಲೈನ್‌ನಲ್ಲಿ ನೋಡಿದ್ರೆ ನಿಮಗೆ ಈ ಭಾಗ ಸಿಕ್ಕೇ ಸಿಗುತ್ತೆ ಅನ್ನೋ ಗ್ಯಾರೆಂಟಿ ಇಲ್ಲ. ಆದರೆ ಮನೆಯಲ್ಲಿ ಟಿವಿಯಲ್ಲಿ ನೋಡಿದ್ರೆ ಕನ್ನಡತಿಯಂಥಾ ಸದಭಿರುಚಿಯ ಸೀರಿಯಲ್ನ ಜೊತೆಗೆ ನಮ್ಮ ಕನ್ನಡ ಭಾಷೆಯ ಬಗ್ಗೆ ಸಖತ್ ಆಸಕ್ತಿದಾಯಕ ವಿಚಾರಗಳನ್ನೂ ತಿಳ್ಕೊಬಹುದು. ಈಗ ಇಂಚು ಅನ್ನೋ ಇನ್ನೊಂದು ಪದದ ಬಗ್ಗೆ ವಿವರಣೆ ಎಷ್ಟು ಚೆನ್ನಾಗಿ ಬಂದಿದೆ ನೋಡಿ..

ಸೀರೆಯಲ್ಲಿ ರೌಡಿ 'ಸತ್ಯ', ಫ್ಯಾನ್ಸ್ ಫಿದಾ; ಹೇಗಿದೆ ಬದಲಾವಣೆ? ...

'ಮಿಂಚು, ಅಂಚು, ಸಂಚು ಇರೋ ಥರನೇ ಇಂಚು ಕೂಡ ಕನ್ನಡ ಪದನೇ ಅಂತ ಅನಿಸಿಬಿಡುತ್ತೆ. ಇಂಚಿಂಚೂ ಅನ್ನೋದಂತೂ ಅಪ್ಪಟ ಕನ್ನಡ ಪದನೇ ಅಂದ ಅದ್ಕೊಂಡಿರ್ತೀವಿ. ಆದರೆ ಇಂಚು ಅನ್ನೋ ಪದಕ್ಕೆ ಕನ್ನಡದಲ್ಲಿ ಅಂಗುಲ ಅಂತೀವಿ. ಇಂಚು ಬಂದಿದ್ದು ಲ್ಯಾಟೀನ್‌ನಿಂದ. ನಮ್ಮ ಅಂಗುಲ ಅದಕ್ಕಿಂತ ಮೊದಲಿಂದನೂ ಇತ್ತು. ಇಂಚು ನಮ್ಮ ಹಳೆಯ ಅಂಗುಲಕ್ಕಿಂತ ಸ್ವಲ್ಪ ದೊಡ್ಡದು. ಅಂಗುಲ ಅಂದರೆ ಬೆರಳು. ನೀವು ಅಂಗುಲಿಮಾಲನ ಕಥೆ ಕೇಳಿರಬಹುದು. ಹೋದಲ್ಲೆಲ್ಲ ಅಳತೆಯ ಸಾಧನಗಳನ್ನು ತಗೊಂಡು ಹೋಗಕ್ಕಾಗುತ್ತಾ, ಹಾಗಾಗಿ ನಮ್ಮ ಹಿಂದಿನವರು ನಮ್ಮ ದೇಹದಿಂದಲೇ ಎಲ್ಲವನ್ನೂ ಅಳೆಯೋದಕ್ಕೆ ಶುರು ಮಾಡಿದ್ರು. ಬೆರಳಿನಷ್ಟು ಅಳತೆ ಅಂಗುಲವಾಯ್ತು. ಪಾದದಷ್ಟು ಅಳತೆ ಅಡಿಯಾಯ್ತು, ಮೊಣಕೈಯಿಂದ ಹಸ್ತದವರೆಗಿನ ಅಳತೆ ಒಂದು ಮೊಳವಾಯ್ತು. ಎರಡೂ ಕೈಯನ್ನು ಅಗಲ ಮಾಡಿದರೆ ಬರುವ ಉದ್ದ ಒಂದು ಮಾರು ಆಯ್ತು. ಎರಡು ಬೆರಳುಗಳನ್ನು ಹಿಗ್ಗಿಸಿದ್ರೆ ಒಂದು ಗೇಣು ಆಯ್ತು. ತುಂಬ ಹಿಗ್ಗಿಸಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಮೈಲಿ ಕೂಡಾ ಹೀಗೇನೆ. ಮೈಲಿಗಲ್ಲಿನಲ್ಲಿ ಇಂಗ್ಲೀಷ್ ನ ಸುಳಿವೇ ಕಾಣಿಸೋದಿಲ್ಲ. ಸಿಗನ್ನಡಂ ಗೆಲ್ಗೆ!'

Xerox - ನೆರಳಚ್ಚು/ ಚಿತ್ರ ಪ್ರತಿ. Email - ಮಿಂಚಂಚೆ / ಮಿಂಚೆ / ಮಿಂಚೋಲೆ. Smart phone - ಜಾಣುಲಿ. Tomato - ತಕ್ಕಾಳಿ /...

Posted by Ranjani Raghavan on Monday, November 30, 2020

ಮೂಗು ಕುಯಿಸ್ಕೊಂಡ ಅಮೃತವರ್ಷಿಣಿ ಅಮೃತಾ ಈಗ ಹೇಗಿದ್ದಾರೆ! ...

ಈ ಕಾಲದ ಹುಡುಗ್ರು ಕನ್ನಡ ಅಂದ್ರೆ ಅಷ್ಟು ದೂರ ಓಡ್ತಿದ್ರು. ಕೆಲವರಿಗೆ ಕನ್ನಡದ ಬಗ್ಗೆ ಆಸಕ್ತಿ ಇದ್ದರೂ ಶುದ್ಧ ಕನ್ನಡ ಕಲಿಯೋಕೆ ಅವಕಾಶವೇ ಸಿಕ್ತಿರಲಿಲ್ಲ. ಆದರೆ ಮನೆಹಾಳು ಮಾಡೋದು ಸೀರಿಯಲ್ ಅನ್ನೋ ಹಣೆಪಟ್ಟೀನ ಕಿತ್ತು ಹಾಕಿ ಕನ್ನಡತಿ ಧಾರಾವಾಹಿ ಸದ್ಯಕ್ಕೀಗ ಮನೆ ಮಾತ್ರ ಅಲ್ಲ, ಮನದ ಮಾತೂ ಆದ ಕನ್ನಡವನ್ನು ಉದ್ಧರಿಸೋ ಕೆಲಸಕ್ಕೆ ಕೈ ಹಾಕಿದೆ. 'ಏ, ಕನ್ನಡದ ಬಗ್ಗೆ ಎಲ್ಲ ಟೀಚಿಂಗ್ ಕೊಟ್ರೆ ಯಾರ್ ಕೇಳ್ತಾರೆ' ಅಂತ ಮೂಗ್ ಮುರೀತಿದ್ದವರೂ ಅಚ್ಚರಿ ಪಡೋ ಹಾಗೆ ಮಾಡಿದೆ. ಏಕೆಂದರೆ ಈ ಕಾಲದ ಹುಡುಗರು ನಮ್ಮ ಕನ್ನಡತಿ ಹೇಳೋ ಪಾಠವನ್ನು ಶ್ರದ್ಧೆಯಿಂದ ಕೇಳ್ತಿದ್ದಾರೆ. ಇದರಿಂದ ಅವರ ಕನ್ನಡವೂ ಸುಧಾರಿಸುತ್ತಿದೆ, ಅವರಿಗೆ ಕನ್ನಡದ ಬಗ್ಗೆ ಪ್ರೀತಿಯೂ ಹೆಚ್ಚಾಗ್ತಿದೆ.

'ಮಗಾ, ನಮ್ ಭುವಿ ಮಾತಾಡೋ ಕನ್ನಡ ಕೇಳ್ಬೇಕು' ಅಂತ ಹುಡುಗ್ರು ಮಾತಾಡಿಕೊಳ್ಳೋ ಹಾಗಾಗಿದೆ. ಏಕೆಂದರೆ ಇಲ್ಲಿ ವಿವರಿಸೋ ಎಲ್ಲ ಪದಗಳು ನಾವು ನಿತ್ಯ ಬದುಕಿನಲ್ಲಿ ಬಳಸೋ ಸರಳ ಕನ್ನಡದ ಪದಗಳು. ಎಷ್ಟೋ ಪದ ನಾವು ಬಳಸ್ತೀವಿ, ಆದರೆ ಅದರ ಬಗ್ಗೆನೇ ಗೊತ್ತಿರಲ್ಲ. ಆದರೆ ಈ ಪಾಠದ ಮೂಲಕ ನಾವು ಮಾತಾಡೋ ಕನ್ನಡವನ್ನು ಸಂಪೂರ್ಣ ಅರ್ಥ ಮಾಡ್ಕೊಳ್ಳೋದು ಸಾಧ್ಯವಾಗ್ತಿದೆ. ಸಿರಿಗನ್ನಡಂ ಗೆಲ್ಗೆ, ಜೈ ಕನ್ನಡ ಮಾತೆ !

ಏಂಜೆಲಿನಾ ಜೋಲಿ ಜೇಡ, ಚೇಳು ಹಸಿಹಸಿಯಾಗಿ ತಿಂತಾಳಾ! ...

 

 

click me!