ರಾಮಾಚಾರಿಗೆ ಪ್ರೇಮದ ಪಾಠ ಕಲಿಸಲು ಕ್ರೇಜಿ ಸ್ಟಾರ್ ರವಿಮಾಮ ಹತ್ರ ಕಳಿಸಬೇಕಂತೆ!

By Suvarna News  |  First Published May 4, 2024, 12:31 PM IST

ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಎಷ್ಟೇ ರೊಮ್ಯಾಂಟಿಕ್ ಆಗಿ ಬಂದರೂ ರಾಮಾಚಾರಿ ಸ್ವಲ್ಪವೂ ಎಮೋಶನ್‌ ಇಲ್ದೇ ಗುಂಡರ ಗೋವಿ ಥರ ಇರ್ತಾನೆ. ಈ ವಯ್ಯನ್ನ ಒಸಿ ರವಿಮಾಮಾ ಹತ್ರ ಕಳ್ಸಿ ಅಂತಿದ್ದಾರೆ ವೀಕ್ಷಕರು.


ರಾಮಾಚಾರಿ ಸೀರಿಯಲ್‌ನಲ್ಲಿ ಬಿರುಬಿಸಿಲಿನ ನಡುವೆ ನಿನ್ನೆ ತಾನೇ ಹೊಡೆದ ಮಳೆ ಹಂಗೆ ಒಂದು ರೊಮ್ಯಾಂಟಿಕ್ ಸೀನ್ ಬಂದಿದೆ. ಬರೀ ಗೋಳು, ಸೀರಿಯಸ್ ಡ್ರಾಮಾ ನೋಡಿ ಬೇಸತ್ತಿದ್ದ ಪ್ರೇಕ್ಷಕರಿಗೆ ಈ ರೊಮ್ಯಾಂಟಿಕ್ ಸೀನ್ ಸಖತ್ ಹಾಯ್ ಫೀಲ್ ಕೊಟ್ಟಿದೆ. ಹಾಗೆ ನೋಡಿದರೆ ಈಗ ಹೆಚ್ಚಿನೆಲ್ಲ ಸೀರಿಯಲ್‌ಗಳಲ್ಲೂ ಸೀರಿಯಸ್ ಕಥೆನೇ ನಡೀತಿದೆ. ಬಾಗ್ಯಲಕ್ಷ್ಮೀಯಲ್ಲಿ ಭಾಗ್ಯ ಕೆಲಸ ಸಿಗದೇ ಒದ್ದಾಟದಲ್ಲಿದ್ದಾಳೆ, ಪುಟ್ಟಕ್ಕನ ಮಕ್ಕಳಲ್ಲಿ ಸಹನಾ ಮನೆಬಿಟ್ಟು ಹೋಗಿ ಎಲ್ಲರೂ ಆ ಚಿಂತೆಯಲ್ಲಿ ಮುಳುಗಿದ್ದಾರೆ. ಸೀತಾರಾಮದಲ್ಲಿ ಸೀತೆ ರಾಮನ ನಡುವೆ ಮಗುವಿನ ವಿಚಾರಕ್ಕೆ ಸಮಸ್ಯೆ ಎದುರಾಗಿದೆ. ಸದ್ಯ ರಾಮ ಕಾಂಪ್ರೋಮೈಸ್ ಆದ ಹಾಗೆ ಕಾಣಿಸಿದರೂ ಇದು ಲಾಂಗ್ ಟೈಮ್ ಇರಲ್ಲ ಅನಿಸುತ್ತದೆ.

ಇಂಥದ್ದರಲ್ಲಿ ರಾಮಾಚಾರಿಯಲ್ಲೂ ಬಹಳ ಸೀರಿಯಸ್ ಕಥೆ ನಡೆಯುತ್ತಿತ್ತು. ಸದ್ಯ ಇಲ್ಲಿ ದೊಡ್ಡ ಸಮಸ್ಯೆಯೊಂದು ಬಗೆಹರಿದಿದೆ. ಈ ನಡುವೆ ಚಾರುವಿಗೆ ತಾನು ತಾಯಿಯಾಗಬೇಕು ಅನ್ನೋ ಆಸೆ ಹೆಚ್ಚಾಗಿದೆ. ಆದರೆ ಅವಳಿಗೆ ಒಂದೇ ಚಿಂತೆ.‌ ನನ್ನ ಗಂಡ ಬದಲಾಗೋದು ಯಾವಾಗ, ನಮ್ಮ ಸಂಸಾರ ಶುರುವಾಗುವುದು ಯಾವಾಗ, ನಮಗೂ ಒಂದು ಮಗು ಆಗುವುದು ಯಾವಾಗ ಎಂಬುದೇ ಯೋಚನೆಯಾಗಿಬಿಟ್ಟಿದೆ. ಇದೆಲ್ಲವನ್ನು ರಾಮಾಚಾರಿಗೆ ಅರ್ಥ ಮಾಡಿಸುವುದೇ ದೊಡ್ಡ ಸವಾಲಾಗಿ ಕಾಡುತ್ತಿದೆ.

Tap to resize

Latest Videos

ಜಗಳ ಮಾಡೋ ಮೊದ್ಲು ವಿಷ್ಯ ಏನಂತ ಗಂಡನಿಗೆ ಸರಿಯಾಗಿ ಹೇಳ್ಬಾರ್ದಾ? ಹೆಂಡತಿಯರಿಗೆ ನೆಟ್ಟಿಗರ ಕ್ಲಾಸ್‌!

ರಾಮಾಚಾರಿ ಕುಟುಂಬಕ್ಕೆ ಬಹಳ ಕಷ್ಟ ಬಂದಿತ್ತು. ಮನೆ ಮಗ ಕಿಟ್ಟಿ ಎಂಟ್ರಿ ಆಗಿತ್ತು. ಶತ್ರುಗಳ ಕಾಟದಿಂದ ಬಚಾವ್ ಆಗಿ, ರಾಮಚಾರಿ ಮತ್ತು ಕಿಟ್ಟಿ ಇಬ್ಬರೂ ಬಚಾವ್ ಆಗಿ ಮನೆಗೆ ಬಂದಿದ್ದರು. ಸೋ ಈ ಮನೆಯಲ್ಲಿ ಎರಡನೇ ಮಗನೂ ಸಿಕ್ಕಿದನಲ್ಲ ಎಂಬ ಸಂತಸವಿದೆ. ಆ ಶತ್ರುಗಳನ್ನು ಹುಡುಕಬೇಕೆಂಬ ಹಠವೂ ಇದೆ. ಆದರೆ ಇದೆಲ್ಲಾ ಜಂಜಾಟದ ನಡುವೆ ಚಾರುಗೆ ಮುದ್ದಾದ ಮಗುವಿನ ತಾಯಿಯಾಗಬೇಕೆಂಬ ಮಹಾದಾಸೆ ಹೆಚ್ಚಾಗಿದೆ.

ರಾಮಚಾರಿ ಇನ್ನು ಕೂಡ ಬದಲಾಗಿಲ್ಲ. ಮದುವೆಯಾದರೂ ಬ್ರಹ್ಮಚಾರಿಯಾಗಿಯೇ ಉಳಿದುಕೊಂಡಿದ್ದಾನೆ. ಆದರೆ ಚಾರು ಮಾತ್ರ ಸಾಧ್ಯವಾದಷ್ಟು ರಾಮಚಾರಿಯನ್ನು ಕೆಣಕುವುದಕ್ಕೆ ಪ್ರಯತ್ನ ಪಡುತ್ತಾ ಇರುತ್ತಾಳೆ. ಈಗಲೂ ರಾಮಾಚಾರಿ ಫೋನ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರೆ ಚಾರು ಬಂದು‌ ಸಿಕ್ಕಾಪಟ್ಟೆ ಡಿಸ್ಟರ್ಬ್ ಮಾಡಿದ್ದಾಳೆ. ಇದು ರಾಮಾಚಾರಿಗೆ ಕೋಪ ತರಿಸಿದೆ. ಎದ್ದು ಹೋಗುವಾಗ ಚಾರು ಕೈ ಬೀಸಿದ್ದಾನೆ. ಮೊದಲೇ ರಾಮಾಚಾರಿಯನ್ನು ತನ್ನ ದಾರಿಗೆ ತರಬೇಕೆಂದುಕೊಳ್ಳುತ್ತಿರುವ ಚಾರುಗೆ ಇದೇ ಒಂದು ನೆವ ಸಿಕ್ಕಿದೆ.

ಅರೆರೆ... ಇಷ್ಟು ಬೇಗ ಶ್ರೀರಸ್ತು ಶುಭಮಸ್ತು ಮುಗಿದು ಬಿಡುತ್ತಾ? ಸೀರಿಯಲ್‌ನಲ್ಲಿ ಇದೇನಿದು ಹೊಸ ಟ್ವಿಸ್ಟ್‌?

ಕಣ್ಣಿಗೆ ಹೊಡೆದೆಯಲ್ಲ ಅಂತ ಕಣ್ಣು‌ ಉಜ್ಜಿಕೊಂಡು ನೋವಾದ ಹಾಗೆ ಆಕ್ಟಿಂಗ್ ಮಾಡುತ್ತಿದ್ದಾಳೆ. ಇದನ್ನರಿಯದ ರಾಮಾಚಾರಿ ತನ್ನ ಎಂದಿನ ಕಾಳಜಿಯಿಂದ ಕಣ್ಣನ್ನು ಊದುವುಕ್ಕೆ ಪ್ರಯತ್ನ ಪಟ್ಟಿದ್ದಾನೆ.‌ ಈ ವೇಳೆ ಸುಮ್ಮನೆ ಇರದ ಚಾರು, ರಾಮಾಚಾರಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದಾಳೆ. ಈ ಮುತ್ತಿನ ಬಳಿಕ ಇನ್ನೇನೋ ಆಗಲಿದೆ ಎಂದೇ ನಿರೀಕ್ಷೆ ಇಟ್ಟುಕೊಂಡಿದ್ದಳು ಚಾರು. ಆದರೆ ಒಂದು ಕ್ಷಣ ವಿಚಲಿತನಾದರೂ ಮರುಕ್ಷಣ ಕೆನ್ನೆ ಉಜ್ಜಿಕೊಂಡು ತನಗೇನು ಆಗಲೇ ಇಲ್ಲ ಎಂಬಂತೆ ಮೊಬೈಲ್ ನೋಡುತ್ತಾ ಕೂತಿದ್ದಾನೆ. ಇದನ್ನು ಕಂಡ ಚಾರುಗೆ ಪಿತ್ತ ನೆತ್ತಿಗೇರಿದೆ. ಅವಳು ರಾಮಾಚಾರಿಯನ್ನು ಅನ್‌ ರೊಮ್ಯಾಂಟಿಕ್ ಫೆಲೋ (romantic fellow) ಅಂತ ಬೈದು ರವಿಮಾಮನ ಸಿನಿಮಾ ನೋಡುವಂತೆ ಹೇಳಿದ್ದಾಳೆ.

 

ರಾಮಾಚಾರಿಯ ಈ ವರ್ತನೆ ನೋಡಿ ವೀಕ್ಷಕರೂ ರಾಮಾಚಾರಿಗೆ ರವಿಚಂದ್ರನ್ ಸಿನಿಮಾ ತೋರಿಸಬೇಕು, ಸ್ವಲ್ಪ ಸಮಯ ರವಿಚಂದ್ರನ್ ಹತ್ರ ಟ್ರೈನಿಂಗ್ ಕೊಡಿಸಬೇಕು ಅಂತೆಲ್ಲ ಕಾಮೆಂಟ್ ಪಾಸ್ ಮಾಡ್ತಿದ್ದಾರೆ. ಕೆಲವರಿಗೆ ರಾಮಾಚಾರಿ ಇನ್ನೂ ಬದಲಾಗದ್ದು ಬೇಸರ ತಂದಿದೆ. ಕೊನೇವರೆಗೂ ಈ ಪಾತ್ರ ಹೀಗೇ ಇರುತ್ತಾ ಅಂತ ಬೇಸರ ತೋಡಿಕೊಂಡಿದ್ದಾರೆ.

click me!