ಶ್ವೇತಾ ಕಮ್‌ ಬ್ಯಾಕ್‌; ಟ್ರಾನ್ಸಫಾರ್ಮೇಶನ್‌ ಹೇಗಿದೆ ನೋಡಿ!

Suvarna News   | Asianet News
Published : Jan 21, 2020, 01:26 PM IST
ಶ್ವೇತಾ ಕಮ್‌ ಬ್ಯಾಕ್‌; ಟ್ರಾನ್ಸಫಾರ್ಮೇಶನ್‌ ಹೇಗಿದೆ ನೋಡಿ!

ಸಾರಾಂಶ

ಮದರ್‌ಹುಡ್‌ ಎಂಜಾಯ್‌ ಮಾಡುತ್ತಾ ಕೇವಲ ಎರಡೇ ತಿಂಗಳಲ್ಲಿ ಕ್ಯಾಮೆರಾ ಎದುರಿಸಲು ಶ್ವೇತಾ ಸಿದ್ಧರಾಗಿದ್ದಾರೆ. ಈ ಅದ್ಭುತ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  

ಮಜಾ ಟಾಕೀಸಿನ ಸುಂದರಿ ರಾಣಿ ಶ್ವೇತಾ ಚಂಗಪ್ಪಾ ಸೆಪ್ಟೆಂಬರ್‌ 9,2019ರಂದು ತಮ್ಮ ಕುಟುಂಬಕ್ಕೆ ಮುದ್ದು ಕೃಷ್ಣನನ್ನು ಬರಮಾಡಿಕೊಂಡಿದ್ದಾರೆ. 'we are 3 now, ತಂದೆ ,ತಾಯಿ, ಫ್ಯಾಮಿಲಿ ಹಾಗೂ ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆ ಹೀಗೆ ಇರಲಿ' ಎಂದು ಬರೆದುಕೊಂಡಿದ್ದರು.

ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ವಾರಸುದಾರನ ಆಗಮನ!

ಇಲ್ಲೀವರೆಗೂ ಎಲ್ಲಿಯೂ ತಮ್ಮ ಮಗನ ಮುಖದ ಫೋಟೋ ರಿವೀಲ್‌ ಮಾಡದೇ ಅಭಿಮಾನಿಗಳ ಕುತೂಹಲ ಕೆರಳಿಸಿದ್ದಾರೆ ಕೊಡಗಿನ ಬೆಡಗಿ. ಕೆಲವು ದಿನಗಳ ಹಿಂದೆ ನಡೆದ ಪುತ್ತರಿ ಹಬ್ಬದಲ್ಲಿ ಮಗನೊಟ್ಟಿಗೆ ಡ್ಯಾನ್ಸ್‌ ಮಾಡಿದ ವೀಡಿಯೋ ಹಾಕಿದರೂ, ಮಗನ ಮುಖ ಕಾಣಿಸದಂತೆ ಎಚ್ಚರ ವಹಿಸಿದ್ದರು. 

ಪುತ್ತರಿ ಹಬ್ಬದಲ್ಲಿ ಮಗನೊಂದಿಗೆ ಕುಣಿದ ಶ್ವೇತಾ ಚೆಂಗಪ್ಪ!

ಅಲ್ಲದೇ ಕೆಲವು ದಿನಗಳ ಹಿಂದೆ ಶ್ವೇತಾ ತಾವು ಮಗುವಿಗೆ ಜನ್ಮ ನೀಡಿ ಕೇವಲ ಎರಡೇ ತಿಂಗಳಲ್ಲಿ ಕ್ಯಾಮೆರಾ ಎದುರಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 'ಒಂದು ಮಗುವಿಗೆ ಜನ್ಮ ನೀಡುವ ಮೂಲಕ ನಮ್ಮಲೆಷ್ಟೋ ಹೊಸತನಕ್ಕೆ ಜನ್ಮ ನೀಡುತ್ತೇವೆ. ದಿನೇ ದಿನೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಧೃಡವಾಗುತ್ತೇವೆ. ನಮ್ಮ ಕಂದಮ್ಮಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲವನ್ನೂ ಎದುರಿಸಲು ಸಿದ್ಧವಾಗುತ್ತೇವೆ. ಏನೋ ಬದಲಾವಣೆ ಎದುರಾದರೂ ಸಂತೋಷದಿಂದ ಅದನ್ನು ಒಪ್ಪಿಕೊಳ್ಳುತ್ತೇವೆ. ಈ ಫೋಟೋವನ್ನು ನಾನು ಜನ್ಮ ನೀಡಿದ ಎರಡೇ ತಿಂಗಳಲ್ಲಿ ಸೆರೆ ಹಿಡಿದಿದ್ದು. ತಕ್ಷಣವೇ ಕ್ಯಾಮೆರಾ ಎದುರಿಸುವುದು ಕಷ್ಟ. ನನಗೆ ತಿಳಿಯದ ಹಾಗೆ ಎಷ್ಟೋ ಬದಲಾವಣೆಗಳು ಆಗಿವೆ. Yes  I have accepted the changes my body and mind went throught in this pregnancy process and I will cherish it positivity forever' ಎಂದು ಬರೆದುಕೊಂಡಿದ್ದಾರೆ.

ಆ ಮೂಲಕ ತಾಯಿಯಾಗುವ ಹಂಬಲದಲ್ಲಿದ್ದು, ಫಿಸಿಕ್ ಹಾಳಾಗುತ್ತೆ ಎನ್ನುವ ಹೆಣ್ಣು ಮಕ್ಕಳಿಗೆ ಶ್ವೇತಾ ಮನೋಸ್ಥೈರ್ಯ ತುಂಬಿದ್ದಾರೆ. ಇವೆಲ್ಲ ಸಹಜ ಬದಲಾವಣೆಗಳು, ಎಲ್ಲವನ್ನೂ ಎದುರಿಸಿ, ಮುಂದೆ ಸಾಗಿ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ ಈ ಕರುನಾಡ ನಟಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?