ಮದುವೆ ಹಾಗೂ ಫಾರಿನ್ ಟ್ರಿಪ್ ಬಗ್ಗೆ ಅಪ್ಡೇಟ್ ಕೊಟ್ಟ ಬಿಗ್‌ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ

Published : May 07, 2024, 02:51 PM IST
ಮದುವೆ ಹಾಗೂ ಫಾರಿನ್ ಟ್ರಿಪ್ ಬಗ್ಗೆ ಅಪ್ಡೇಟ್ ಕೊಟ್ಟ ಬಿಗ್‌ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ

ಸಾರಾಂಶ

ನಾನು ಮದುವೆ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ. ಮನಶಾಂತಿಗಾಗಿ ವಿದೇಶಕ್ಕೆ ಹೋಗಬೇಕೆಂದರೂ ದತ್ತು ಮಗು ಪಡೆದ ಕೇಸಿನಿಂದಾಗಿ ಹೋಗಲಾಗುತ್ತಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿಕೊಂಡಿದ್ದಾರೆ.

ಬೆಂಗಳೂರು (ಮೇ 07): ಬಿಗ್ ಬಾಸ್ ಒಟಿಟಿ ಸ್ಪರ್ಧಿಯಾಗಿರುವ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್ ರಾಣಿ ಎಂದೇ ಖ್ಯಾತಿಯಾಗಿರುವ ಸೋನು ಶ್ರೀನಿವಾಸ್ ಗೌಡ ಅವರು ನಾನು ಮದುವೆ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, 30 ವರ್ಷದೊಳಗೆ ಖಂಡಿತವಾಗಿಯೂ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಸೋಶಿಯಲ್ ಮಿಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಅವರು, ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್‌ಗೆ ಬಂದು ಅಭಿಮಾನಿಗಳು ಹಾಗೂ ತಮ್ಮ ಫಾಲೋವರ್ಸ್‌ಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಬಾಗಲಕೋಟೆಯ ಸಾಧನಾ ಎನ್ನುವವರು ನಿಮ್ಮ ಜೀವನದ ಗುರಿ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು ಶ್ರೀನಿವಾಸ್ ಗೌಡ, ನನಗೆ ಮೊದಲು ಹೀರೋಯಿನ್‌ ಆಗಬೇಕು ಎಂದು ಆಸೆಯಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿ ಕೂಡ ಇಷ್ಟವಾಗುತ್ತಿಲ್ಲ. ಈಗ 30 ವರ್ಷದೊಳಗೆ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.

ಈಕೆ 20 ವರ್ಷದ ಮಗಳ ತಾಯಿನಾ ಅಲ್ಲ ಇಪ್ಪತ್ತರ ತರುಣಿನಾ..ಶ್ವೇತಾ ಹಾಟ್‌ಲುಕ್‌ಗೆ ಬೆರಗಾದ ನೆಟ್ಟಿಗರು!

ಮದುವೆ ಯಾವಾಗ? ಲವ್ ಅಥವಾ ಅರೇಂಜ್ ಮ್ಯಾರೇಜ್ ಆಗ್ತೀರಾ?
ತುಂಬಾ ಜನರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಆದರೆ, ನನಗೆ ಮದುವೆ ಬಗ್ಗೆ ಆಸೆಯೇ ಇಲ್ಲದಂತಾಗಿದೆ. ಯಾಕೆ ಎನ್ನುವುದು ನನಗೂ ಗೊತ್ತಾಗುತ್ತಿಲ್ಲ. ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ. ಆದರೆ, ಮತ್ತೊಬ್ಬರು ಡ್ರೀಮ್ ಬಾಯ್ ಹೇಗಿರಬೇಕು ಎಂದು ಕೇಳಿದ್ದಾರೆ. ನಾನು ಮದುವೆ ಆಗಿಲ್ಲ ಎಂದರೆ ಡ್ರೀಮ್ ಬಾಯ್ ಬಗ್ಗೆ ಹೇಗೆ ಉತ್ತರಿಸಬೇಕು ತಿಳಿಯುತ್ತಿಲ್ಲ. ಆದರೆ, ನಾನು ಮೊದಲು ಅಂದುಕೊಂಡಂತೆ ವ್ಯಕ್ತಿಯ ಬಣ್ಣ ಕಪ್ಪು, ಬಳುಪು ಹೇಗಿದ್ದರೂ ಪರವಾಗಿಲ್ಲ. ನಾವು ಅವರ ಮೇಲೆ ಎಷ್ಟು ನಂಬಿಕೆ ಇಟ್ಟುಕೊಂಡು ನಿಯತ್ತಾಗಿ ಇರುತ್ತೇವೆಯೋ, ಅವರೂ ಹಾಗೆಯೇ ಇರಬೇಕು. ಪರಸ್ಪರ ಇಬ್ಬರಲ್ಲಿಯೂ ಗೌರವ ಮತ್ತು ನಂಬಿಕೆ ಇರಬೇಕು ಎಂದು ಹೇಳಿದರು.

ನಾನು ಒಳ್ಳೆಯ ಕೆಲಸ ಮಾಡಿದರೂ ಜೈಲಿಗೆ ಹೋಗಿಬಂದೆ: ಈ ಪ್ರಪಂಚದಲ್ಲಿ ಒಳ್ಳತನಕ್ಕೆ ಬೆಲೆ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಪ್ರತಿಕ್ರಿಯೆ ಮಾಡಿದ ಸೋನು ಶ್ರೀನಿವಾಸ್‌ ಗೌಡ, ನಾನು ಒಳ್ಳೆ ಕೆಲಸ ಮಾಡಿದಕ್ಕೆ ಜೈಲಿಗೆ ಹೋಗಿ ಬಂದಿದ್ದೇನೆ. ನನ್ನ ಪರಿಸ್ಥಿತಿಯನ್ನು ನೀವು ಎಲ್ಲರೂ ಟಿವಿಯಲ್ಲಿ ನೋಡಿರುತ್ತೀರಿ. ನಾನು ಚಿಕ್ಕವಳಿದ್ದಾಗಿನಿಂದಲೂ ಸಿನಿಮಾದಲ್ಲಿ ದೊಡ್ಡ ನಾಯಕಿ ಆಗಬೇಕು ಎಂದುಕೊಂಡಿದ್ದೆನು. ಆದರೆ, ಈಗ ಅದು ಇಷ್ಟವಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಸಿನಿಮಾದ ನಾಯಕಿ ಆಗಬೇಕೆಂಬ ಕನಸ್ಸನ್ನು ಬಿಟ್ಟುಬಿಟ್ಟಿದ್ದೇನೆ ಎಂದು ಸೋನು ತಿಳಿಸಿದರು. 

ಮದ್ವೆ ಆಗೋಕೆ ಆಸೆ ಇಲ್ಲ, ರಾಜಕೀಯಕ್ಕೆ ಇಳಿಯಬೇಕು ಅಂದ್ಕೊಂಡಿದ್ದೀನಿ: ಸೋನು ಶ್ರೀನಿವಾಸ್ ಗೌಡ

ವಿದೇಶಕ್ಕೆ ಹೋಗಲು ಆಸೆಯಿದ್ದರೂ ಕೇಸ್ ಸಂಬಂಧ ಹೋಗುವಂತಿಲ್ಲ: ನಾನು ಈ ಹಿಂದೆಯೂ ವಿದೇಶಕ್ಕೆ ಹೋಗಿ ಬಂದಿದ್ದೇನೆ. ಮೈಂಡ್ ರಿಲ್ಯಾಕ್ಸ್ ಆಗುವುದಕ್ಕೆ ಪ್ರವಾಸ ಮಾಡಬೇಕೆಂದು ಪಟ್ಟಿ ಮಾಡಿಟ್ಟುಕೊಂಡಿದ್ದೆನು. ಅದರಲ್ಲಿ ವಿದೇಶ ಪ್ರವಾಸಗಳೂ ಇದ್ದವು. ಆದರೆ, ದತ್ತು ಮಗು ಪ್ರಕರಣದಲ್ಲಿ ನಾನು ಯಾವುದೇ ವಿದೇಶಕ್ಕೆ ಹೋಗುವಂತಿಲ್ಲ. ಹೀಗಾಗಿ, ಎಲ್ಲಿಗೂ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ನನ್ನ ಕೇಸಿನ ಅಪ್ಡೇಟ್ಸ್ ಏನಾಗಿದೆ, ಆ ಚಿಕ್ಕ ಮಗು ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಆ ಚಿಕ್ಕ ಹುಡುಗಿ ಅವರ ಕುಟುಂಬದೊಂದಿಗೆ ಚೆನ್ನಾಗಿದ್ದಾಳೆ. ಇದರ ಬಗ್ಗೆ ಕಾನೂನು ನಿಯಮಾವಳಿ ಅನ್ವಯ ನಾನು ಹೆಚ್ಚು ಮಾಹಿತಿ ನೀಡುವಂತಿಲ್ಲ. ಈ ಕೇಸಿನ ಸಂಬಂಧ ಆಗಿಂದಾಗ್ಗೆ ನ್ಯಾಯಾಲಯ ವಿಚಾರಣೆಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ