ಮದ್ವೆ ಆಗೋಕೆ ಆಸೆ ಇಲ್ಲ, ರಾಜಕೀಯಕ್ಕೆ ಇಳಿಯಬೇಕು ಅಂದ್ಕೊಂಡಿದ್ದೀನಿ: ಸೋನು ಶ್ರೀನಿವಾಸ್ ಗೌಡ

By Vaishnavi ChandrashekarFirst Published May 7, 2024, 10:24 AM IST
Highlights

ನಾಯಕಿ ಆಗ್ಬೇಕು ಅಂತಿದ್ದ ಸೋನು ಗೌಡ ಈಗ ರಾಜಕಾರಣಿ ಆಗ್ಬೇಕು ಅಂತಿದ್ದಾರೆ...ತಿಂಗಳ ಸಂಪಾದನೆ ಎಷ್ಟು...

ಬಿಗ್ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿ ಬಂದ ಮೇಲೆ ಫ್ಯಾನ್ಸ್‌ ಹೆಚ್ಚಾಗಿದ್ದಾರೆ. ದಿನದಿಂದ ದಿನಕ್ಕೆ ಪರ್ಸನಲ್ ಮೆಸೇಜ್‌ಗಳು ಹೆಚ್ಚಾಗುತ್ತಿದೆ ಎಂದು ಯುಟ್ಯೂಬ್ ವಿಡಿಯೋ ಮೂಲಕ ಜನರಿಗೆ ಉತ್ತರ ಕೊಟ್ಟಿದ್ದಾರೆ. ಸುಮಾರು 30 ನಿಮಿಷಗಳ ವಿಡಿಯೋ ಅದಾಗಿದ್ದು...ಸಾರಾಂಶ ಇಲ್ಲಿದೆ.....

'ನಾನು ಇನ್ಫ್ಲೂಯನ್ಸರ್‌ ಅಲ್ಲ ನಾನು ಆಕ್ಟರ್. ಡಿಪ್ಲಮೋ ಮುಗಿಸಿ ಇಂಜಿನಿಯರಿಂಗ್ ಮಾಡುವಾಗ ಅರ್ಧಕ್ಕೆ ನಿಲ್ಲಿಸಿರುವೆ. ಈ ಯುಟ್ಯೂಬ್‌ ವ್ಲಾಗ್ ಮಾಡಿಕೊಂಡು ದಿನ ಕಳೆಯುತ್ತಿರುವೆ. ನನಗೆ ಶಾರ್ಟ್‌ ಮೂವಿಗಳನ್ನು ಮಾಡುವುದಕ್ಕೆ ಇಷ್ಟವಿಲ್ಲ ಅದಕ್ಕೆ ಸ್ಪಷ್ಟವಾಗಿರುವ ಕಾರಣವೂ ಇಲ್ಲ. ಈ ಪ್ರಪಂಚದಲ್ಲಿ ಒಳ್ಳತನಕ್ಕೆ ಬೆಲೆ ಇಲ್ಲ ನಾನು ಒಳ್ಳೆ ಕೆಲಸ ಮಾಡಿದಕ್ಕೆ ಜೈಲಿಗೆ ಹೋಗಿ ಬಂದಿದ್ದು, ನನ್ನ ಪರಿಸ್ಥಿತಿಯನ್ನು ಎಲ್ಲರೂ ನೋಡಿರುತ್ತೀರಾ. 30 ವರ್ಷದ ಒಳಗೆ ನಾನು ನಾಯಕಿ ಆಗಬೇಕು ಅಂತ ಮೊದಲು ಇಷ್ಟ ಪಟ್ಟಿದ್ದೆ ಆದರೆ ಈಗ ಇಂಡಸ್ಟ್ರಿನೂ ಇಷ್ಟ ಆಗುತ್ತಿಲ್ಲ. ರಾಜಕೀಯದಲ್ಲಿ ಬ್ಯುಸಿಯಾಗಬೇಕು ಅಂದುಕೊಂಡಿರುವೆ ...ದೇವರ ಆಟದ ಮುಂದೆ ನಾನು ಏನೂ ಪ್ಲ್ಯಾನ್ ಮಾಡಲು ಆಗಲ್ಲ. 

ವಿಡಿಯೋಗಳಿಂದ ಕೇವಲ 50 ಸಾವಿರ ರೂ. ಬರ್ತಿದೆ, ಆಚೆ ಬಂದ್ರೆ 10 ಸಾವಿರ ತರ್ತೀನಿ: ಸೋನು ಶ್ರೀನಿವಾಸ್ ಗೌಡ

'ನನ್ನ ಮದುವೆ ಯಾವಾಗ ಅಂತ ಗೊತ್ತಿಲ್ಲ ನನಗೆ ಮದುವೆ ಆಗಲು ಆಸೆನೂ ಇಲ್ಲ. ಹುಡುಗ ಹೇಗಿರಬೇಕು ಅಂದ್ರೆ ಯಾವ ಬಣ್ಣ ಇದ್ರೂ ಪರ್ವಾಗಿಲ್ಲ ಅವರಲ್ಲಿ ನಂಬಿಕೆ ಇಡಬೇಕು...ನಮ್ಮಿಬ್ಬರ ನಡುವೆ ಗೌರವ ಹೆಚ್ಚಿರಬೇಕು. ರಾಜಕೀಯಕ್ಕೆ ಹೋಗಬೇಕು ಅನ್ನೋದು ಅಷ್ಟೇ ನನ್ನ ಪ್ಲ್ಯಾನ್. ನನ್ನ ಮನೆಯಲ್ಲಿ ನನ್ನ ಜೊತೆ ಇಬ್ಬರು ಕಸಿಬ್ ಅಣ್ಣ-ತಮ್ಮ ಇದ್ದಾರೆ ಏಕೆಂದರೆ ಜನವರಿಯಿಂದ ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೀವಿ ಅದಿಕ್ಕೆ ಇಲ್ಲಿ ಇದ್ದಾರೆ...ಏನೇ ಕೆಲಸ ಇದ್ದರು ಸಹಾಯ ಮಾಡುತ್ತಾರೆ ಹಾಗೂ ಮನೆಯಲ್ಲಿ ಎರಡು ನಾಯಿ ಇರುವುದರಿಂದ ಯಾರಾದರೂ ಒಬ್ಬರು ಇರಬೇಕು. ಸೋಷಿಯಲ್ ಮೀಡಿಯಾದಲ್ಲಿ ಜನರು ಸಾವಿರ ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ತಲೆ ಕೊಡುವುದಿಲ್ಲ.

ನನಗೆ ಯಾರೂ ಇಲ್ಲ; ನೆಗೆಟಿವ್ ಕಾಮೆಂಟ್‌ ನೋಡಿ ಸೋನು ಗೌಡ ತಾಯಿ ಆರೋಗ್ಯದಲ್ಲಿ ಏರುಪೇರು

ಕಾನೂನು ಪ್ರಕಾರ ನಾನು ಕೇಸ್‌ ಬಗ್ಗೆ ಮಾತನಾಡುವಂತಿಲ್ಲ. ಆ ವ್ಯಕ್ತಿ ಅವರಪ್ಪ ಅಮ್ಮ ಜೊತೆ ಇದ್ದಾರೆ ನಾನು ನನ್ನ ಮನೆಯಲ್ಲಿ ನೆಮ್ಮದಿಯಾಗಿ ಇದ್ದೀನಿ. ಕೇಸ್ ಇದ್ದಾಗ ಕೋರ್ಟ್‌ಗೆ ಹೋಗಿ ಬರ್ತೀನಿ. ಜೈಲಿನಿಂದ ಹೊರ ಬರುವಾಗ ಮೀಡಿಯಾದವರನ್ನು ನೋಡಿ ಶಾಕ್ ಆಗಿಲ್ಲ ಏಕೆಂದರೆ ಮೀಡಿಯಾ ನನಗೆ ಹೊಸದಲ್ಲ ಆದರೆ ಅವರಿಗೆ ಇದೇ ನ್ಯೂಸ್‌ ಬೇಕು ಅಂತ ಬಂದಿದ್ದಾರೆ ಎಂದು ನಕ್ಕಿ ಸುಮ್ಮನಾದೆ. ಮೊದಲು ತುಂಬಾ ಪ್ರಮೋಷನ್‌ಗಳನ್ನು ಮಾಡಿ ಹಣ ಸಂಪಾದನೆ ಮಾಡುತ್ತಿದ್ದೆ ಈಗ ಸ್ವಲ್ಪ ಕಡಿಮೆ ಆಗಿದೆ..ಹೇಗೆ ಲೆಕ್ಕಚಾರ ಮಾಡಿದ್ರೂ ತಿಂಗಳಿಗೆ 50 ಸಾವಿರ ಅಷ್ಟೇ.

click me!