
ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ಪ್ರಸಿದ್ಧ ಜೋಗ್ ಫಾಲ್ಸ್ ಮತ್ತು ಬೆಂಗಳೂರಿನಿಂದ ಸೋಮನಾಥಪುರಕ್ಕೆ ಎರಡು ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ರಾಜ್ಯ-ಚಾಲಿತ ಸಾರಿಗೆ ನಿಗಮವು ಸಮಯ, ಸ್ಥಳ ಮತ್ತು ಪ್ರವಾಸಗಳ ವೇಳಾಪಟ್ಟಿಯನ್ನು ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಸೂಚನೆಯಲ್ಲಿ ಪಟ್ಟಿ ಮಾಡಿದೆ. 'ಬೆಂಗಳೂರಿನಿಂದ ಜೋಗ್ ಫಾಲ್ಸ್‌ಗೆ ಮತ್ತು ಬೆಂಗಳೂರಿನಿಂದ ಸೋಮನಾಥಪುರಕ್ಕೆ ಪ್ಯಾಕೇಜ್ ಟೂರ್‌ಗಳು' ಎಂದು KSRTC ಪೋಸ್ಟ್‌ಗೆ ಶೀರ್ಷಿಕೆ ನೀಡಿದೆ.
ಬೆಂಗಳೂರಿನಿಂದ ಜೋಗ ಜಲಪಾತ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 11/08/2023ರಂದು ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) A/C ಸ್ಲೀಪರ್ ಸೇವೆಯೊಂದಿಗೆ ಬೆಂಗಳೂರಿನಿಂದ ಶಿವಮೊಗ್ಗ, ಸಾಗರದ ಮೂಲಕ ಜೋಗ್ ಫಾಲ್ಸ್‌ಗೆ ಹೊಸ ಪ್ಯಾಕೇಜ್ ಪ್ರವಾಸವನ್ನು ಪರಿಚಯಿಸಿದೆ. ವೇಳಾಪಟ್ಟಿ ಮತ್ತು ದರದ ವಿವರಗಳನ್ನು ಈ ಕೆಳಗಿನಂತೆ ಒದಗಿಸಲಾಗಿದೆ ಎಂದು ನಿಗಮದ ನೋಟಿಸ್ ತಿಳಿಸಿದೆ.
ಚಾಮರಾಜನಗರ: ಬಂಡೀಪುರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್...!
ಪ್ಯಾಕೇಜ್ ಟೂರ್‌ಗೆ ವಯಸ್ಕರು 2,500 ರೂ. ಮತ್ತು ಮಕ್ಕಳಿಗೆ (6 ರಿಂದ 12 ವರ್ಷ ವಯಸ್ಸಿನವರು) 2,300 ರೂ. ಪಾವತಿಸಬೇಕಾಗುತ್ತದೆ.
ರಾತ್ರಿ 9:30 ರಿಂದ ಮರುದಿನ ಬೆಳಿಗ್ಗೆ 5 ಗಂಟೆಯ ನಡುವೆ ಬೆಂಗಳೂರಿನಿಂದ ಸಾಗರಕ್ಕೆ ರಾತ್ರಿಯ ಪ್ರಯಾಣ ಮಾಡಲಾಗುತ್ತದೆ. ನಂತರ, ಬೆಳಗ್ಗೆ ಏಳು ಗಂಟೆಗೆ ಪ್ರಯಾಣಿಕರು ಹೋಟೆಲ್‌ನಲ್ಲಿ ಉಪಾಹಾರ (Breakfast) ಮಾಡಬಹುದು. ವರದಹಳ್ಳಿ, ವರದಮೂಲ, ಇಕ್ಕೇರಿ ಮತ್ತು ಕೆಳದಿಯ ಮೊದಲಾದ ಸ್ಥಳಗಳಲ್ಲಿ ಪ್ರವಾಸಿಗರನ್ನು (Tourist) ಕರೆದೊಯ್ಯಲಾಗುತ್ತದೆ. ಮಧ್ಯಾಹ್ನ 12:45ಕ್ಕೆ ಊಟಕ್ಕೆ ಸಾಗರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಪ್ರಯಾಣಿಕರನ್ನು (Passengers) ಸಾಗರದಿಂದ ಜೋಗ್ ಫಾಲ್ಸ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ರಾತ್ರಿ 8:30 ಕ್ಕೆ ಭೋಜನವನ್ನು ನೀಡಲಾಗುತ್ತದೆ, ನಂತರ ಬಸ್ ಸಾಗರದಿಂದ ಬೆಂಗಳೂರಿಗೆ ರಾತ್ರಿ 10 ಗಂಟೆಗೆ ಹಿಂತಿರುಗುತ್ತದೆ.
ಬೆಂಗಳೂರಿನಿಂದ ಸೋಮನಾಥಪುರ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊಸ ಪ್ಯಾಕೇಜ್ ಪ್ರವಾಸವನ್ನು ಬೆಂಗಳೂರಿನಿಂದ ಸೋಮನಾಥಪುರಕ್ಕೂ ಪರಿಚಯಿಸಿದೆ. 12/08/2023ರಂದು ಈ ಪ್ಯಾಕೇಜ್ ವ್ಯವಸ್ಥೆ (Facility) ಮಾಡಲಾಗಿದೆ. ಬೆಂಗಳೂರು-ಸೋಮನಾಥಪುರ ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಮೊದಲಾದ ಜಾಗಗಳಿಗೆ ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಸಬಹುದು ವೇಳಾಪಟ್ಟಿ ಮತ್ತು ದರದ ವಿವರಗಳನ್ನು ಈ ಕೆಳಗಿನಂತೆ ಒದಗಿಸಲಾಗಿದೆ.
ಪ್ರಯಾಣಿಕರು ಶನಿವಾರ ಬೆಳಿಗ್ಗೆ 6:30 ಕ್ಕೆ ಬೆಂಗಳೂರಿನಿಂದ ಹೊರಟು ಎರಡು ಗಂಟೆಗಳಲ್ಲಿ ಮದ್ದೂರು ತಲುಪಿ ಅಲ್ಲಿನ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಾರೆ. ಪ್ರವಾಸವು ನಂತರ ಸೋಮನಾಥಪುರಕ್ಕೆ ಸೋಮನಾಥೇಶ್ವರ ದೇವಸ್ಥಾನದಲ್ಲಿ (Temple) ದರ್ಶನಕ್ಕೆ ತೆರಳುತ್ತದೆ. ನಂತರ ಬಸ್ ಪಂಚಲಿಂಗ ದರ್ಶನಕ್ಕಾಗಿ ತಲಕಾಡು ಕಡೆಗೆ ಚಲಿಸುತ್ತದೆ. ಪ್ರಯಾಣಿಕರು ತಲಕಾಡಿನಲ್ಲಿ ಊಟ ಮಾಡಿ ನಂತರ ರಂಗನಾಥಸ್ವಾಮಿ ದರ್ಶನಕ್ಕಾಗಿ ಮಧ್ಯರಂಗಕ್ಕೆ ತೆರಳಲಿದ್ದಾರೆ.
ನಂದಿ ಹಿಲ್ಸ್‌ನಲ್ಲಿ ಮಾತ್ರವಲ್ಲ ಬೆಂಗಳೂರಿನ ಈ ಸ್ಥಳಗಳಲ್ಲೂ ಸನ್‌ರೈಸ್ ಸಖತ್ತಾಗಿರುತ್ತೆ, ಮಿಸ್ ಮಾಡ್ಬೇಡಿ
ಪ್ರವಾಸವು ನಂತರ ಭರಚುಕ್ಕಿ ಮತ್ತು ಗಗನಚುಕ್ಕಿಯ ಅವಳಿ ಜಲಪಾತಗಳಿಗೆ ಭೇಟಿ ನೀಡಲಿದೆ. ಅಲ್ಲಿ ಪ್ರಯಾಣಿಕರು ಸಂಜೆ 4ರಿಂದ 6ರ ವರೆಗೆ ದೃಶ್ಯ ವೀಕ್ಷಣೆಗೆ ಹೋಗಬಹುದು. ಪ್ಯಾಕೇಜ್‌ಗಳು ಗಗನಚುಕ್ಕಿಯಿಂದ ಬೆಂಗಳೂರಿಗೆ ಹಿಂತಿರುಗುವ ಪ್ರಯಾಣದೊಂದಿಗೆ ಸಂಜೆ 6 ರಿಂದ ರಾತ್ರಿ 9 ರವರೆಗೆ ಕೊನೆಗೊಳ್ಳುತ್ತವೆ. ಇದು ವಯಸ್ಕರಿಗೆ ತಲಾ 450 ರೂ. ವೆಚ್ಚವಾಗಲಿದ್ದು , 6 ರಿಂದ 12 ವರ್ಷದೊಳಗಿನ ಮಕ್ಕಳು ತಲಾ 300 ರೂ. ಪಾವತಿಸಿದರೆ ಸಾಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.