ಭಾರತದಲ್ಲಿರುವ ಈ ಐದೂ ನಗರಗಳಿಗೆ ದೇವರ ಹೆಸರಲ್ಲ, ರಾಕ್ಷಸರ ಹೆಸರಿಡಲಾಗಿದೆ!

Published : Apr 21, 2025, 06:29 PM ISTUpdated : Apr 21, 2025, 07:43 PM IST
ಭಾರತದಲ್ಲಿರುವ ಈ ಐದೂ ನಗರಗಳಿಗೆ ದೇವರ ಹೆಸರಲ್ಲ, ರಾಕ್ಷಸರ ಹೆಸರಿಡಲಾಗಿದೆ!

ಸಾರಾಂಶ

ಭಾರತದಲ್ಲಿ ಅನೇಕ ಸ್ಥಳಗಳಿಗೆ ರಾಕ್ಷಸರ ಹೆಸರಿಡಲಾಗಿದೆ. ತಿರುಚಿರಾಪಳ್ಳಿ (ತಿರಿಸಿಕ್ಕರಪುರಂ), ಮೈಸೂರು (ಮಹಿಷ ಉರು), ಗಯಾ (ಗಯಾಸುರನಿಂದ), ಜಲಂಧರ್ (ಪ್ರಭಾವಿ ರಾಕ್ಷಸನಿಂದ) ಮತ್ತು ಪಲ್ವಾಲ್ (ಪಲಂಬರ್‌ಪುರ) ಈ ಪಟ್ಟಿಯಲ್ಲಿವೆ. ಕಾಲಕ್ರಮೇಣ ಈ ಹೆಸರುಗಳು ಬದಲಾಗಿವೆ.

ಭಾರತೀಯರಿಗೆ ಭಾರತದ ಸಂಸ್ಕೃತಿ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದರೆ ಇಲ್ಲಿನ  ಆಹಾರ, ಭಾಷೆ, ಶೈಲಿ, ಬಟ್ಟೆ, ಎಲ್ಲವೂ ಬಹಳ ಭಿನ್ನ. ಪ್ರತಿಯೊಂದು ನಗರವು ತನ್ನದೇ ಆದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ವಿಶೇಷತೆಗಳಿಂದ ಕೂಡಿದೆ. ಕೆಲವು ಧಾರ್ಮಿಕ  ವಿಚಾರಕ್ಕೆ ಖ್ಯಾತಿ ಗಳಿಸಿದರೆ, ಮತ್ತೆ ಕೆಲವು ಪ್ರಕೃತಿಯ ಮಡಿಲಿನಲ್ಲಿರುವ ಕಾರಣಕ್ಕೇ ಪ್ರಸಿದ್ಧವಾಗಿವೆ. ಹಾಗಾಗಿಯೇ ಆ ಸ್ಥಳಗಳ ವಿಶೇಷವನ್ನು ಗಮನಿಸಿ ಅವುಗಳಿಗೆ ಹೆಸರನ್ನು ನಮ್ಮ ಹಿರಿಯರು ಸೂಚಿಸಿದ್ದಾರೆ. ಆದರೆ ನಾವಿಂದು ದೇವರು, ರಾಜ ಅಥವಾ ಯಾವುದೋ ವಿಶೇಷ ವಸ್ತುವಿನ ಹೆಸರಿನ ಬದಲು ರಾಕ್ಷಸರ ಹೆಸರಿಡಲಾದ ಊರುಗಳ ಪರಿಚಯ ಮಾಡಿಕೊಡುತ್ತಿದ್ದೇವೆ. ಈ ಪಟ್ಟಿಯಲ್ಲಿ ನಮ್ಮ ರಾಜ್ಯದ ಪ್ರಖ್ಯಾತ ಜಿಲ್ಲೆಯೂ ಇದೆ. 

ತಿರುಚಿರಾಪಳ್ಳಿ: ತಿರುಚಿರಾಪಳ್ಳಿ ತಮಿಳುನಾಡು ರಾಜ್ಯದಲ್ಲಿರುವ ಜನಪ್ರಿಯ ನಗರ. ಈ ಪಟ್ಟಣಕ್ಕೆ  ರಾಕ್ಷಸನ ಹೆಸರಿಡಲಾಗಿದೆ. ಕಾಲ ಬದಲಾದಂತೆ ನಗರದ ಹೆಸರೂ ಬದಲಾಯಿತು. ಮೊದಲು ಇದರ ಹೆಸರು ತಿರಿಸಿಕ್ಕರಪುರಂ ಎಂದಾಗಿತ್ತು. ನಂತರ ಇದನ್ನು ತ್ರಿಸ್ಸಿಪುರಂ ಎಂದು ಕರೆಯಲಾಗುತ್ತಿತ್ತು, ಆದರೆ ನಂತರ ಅದನ್ನು ತಿದ್ದುಪಡಿ ಮಾಡಿ ತಿರುಚಿರಾಪಳ್ಳಿ ಎಂದು ಹೆಸರಿಸಲಾಯಿತು. 

ಮೈಸೂರು: ಮೈಸೂರು ಕೂಡ ಮಹಿಷಾಸುರ ಎಂಬ ರಾಕ್ಷಸನ ಹೆಸರಿನೊಂದಿಗೆ ಸಂಬಂಧ ಹೊಂದಿದೆ.ಮಹಿಷಾಸುರ ರಾಕ್ಷಸನ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಅವನ ವಧೆಗಾಗಿ ದೇವಿಯು ಜನಿಸಿದಳು.ಮೈಸೂರು ನಗರಕ್ಕೆ ಅದೇ ಮಹಿಷಾಸುರನ ಹೆಸರಿಡಲಾಗಿದೆ.ಸನಾತನ ಧರ್ಮದ ಪ್ರಕಾರ, ಮಹಿಷಾಸುರನ ಕಾಲದಲ್ಲಿ ಈ ನಗರವನ್ನು ಮಹಿಷ ಉರು ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಮಹಿಷೂರು ಎಂದು ಕರೆಯಲಾಯಿತು, ಆದರೆ ಕಾಲ ಬದಲಾದಂತೆ, ಅದರ ಹೆಸರನ್ನು ಮತ್ತೆ ಮೈಸೂರು ಎಂದು ಬದಲಾಯಿಸಲಾಯಿತು. 

ಗಯಾ: ಬಿಹಾರದಲ್ಲಿರುವ ಈ ಸ್ಥಳವನ್ನು ನೋಡಲು ದೇಶದ ಜನರು ಮಾತ್ರವಲ್ಲದೆ ವಿದೇಶಿಯರೂ ಬರುತ್ತಾರೆ. ಈ ನಗರಕ್ಕೆ ಗಯಾಸುರ ರಾಕ್ಷಸನ ಹೆಸರಿಡಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಒಮ್ಮೆ ಬ್ರಹ್ಮನು ಗಯಾಸುರನ ತಪಸ್ಸಿನಿಂದ ಸಂತಸಗೊಂಡು, ಅವನು ದೇವತೆಗಳಿಗಿಂತ ಹೆಚ್ಚು ಪರಿಶುದ್ಧನಾಗುತ್ತಾನೆ ಮತ್ತು ಅವನನ್ನು ಯಾರು ನೋಡುತ್ತಾರೋ ಅಥವಾ ಮುಟ್ಟುತ್ತಾರೋ ಅವರ ಎಲ್ಲಾ ಪಾಪಗಳು ತೊಳೆಯಲ್ಪಡುತ್ತವೆ ಎಂದು ಆಶೀರ್ವದಿಸಿದನು. ಅಂದಿನಿಂದ ಈ ನಗರವು ಗಯಾ ಎಂದು ಪ್ರಸಿದ್ಧವಾಯಿತು.

ಜಲಂಧರ್: ಇದು ಪಂಜಾಬ್ ರಾಜ್ಯದ ಜನಪ್ರಿಯ ನಗರ. ಚರ್ಮದ ಉದ್ಯಮಕ್ಕೆ ಸಾಕಷ್ಟು ಪ್ರಸಿದ್ಧವಾಗಿದೆ.ಜಲಂಧರ್ ಕೂಡ ರಾಕ್ಷಸನ ಹೆಸರನ್ನೇ ಹೊಂದಿದೆ. ಇತಿಹಾಸಕಾರರ ಪ್ರಕಾರ, ಆ ಸಮಯದಲ್ಲಿ ಈ ರಾಕ್ಷಸನು ನಗರದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದನು. ಎಲ್ಲರೂ ಅವನಿಗೆ ಹೆದರುತ್ತಿದ್ದರು. ಕೆಲವರು ಅವನ ಹತ್ತಿರ ಹೋಗಲು ಸಹ ಹಿಂಜರಿಯುತ್ತಿದ್ದರು. ಹೀಗಾಗಿ, ಅವನ ಭಯದಿಂದಾಗಿ ಈ ಸ್ಥಳಕ್ಕೆ ಜಲಂಧರ್ ಎಂದು ಹೆಸರಿಸಲಾಯಿತು.

ಮಹಿಳೆಯ ರಿವರ್‌ ರಾಫ್ಟಿಂಗ್ ವೀಡಿಯೋ ಕೂಡಲೇ ಡಿಲೀಟ್ ಮಾಡಿ: ಫೇಸ್‌ಬುಕ್ ಗೂಗಲ್‌ ಎಕ್ಸ್‌ಗೆ ಹೈಕೋರ್ಟ್ ಆದೇಶ

ಪಲ್ವಾಲ್: ಹರಿಯಾಣದ ಪಲ್ವಾಲ್ ಜಿಲ್ಲೆಯ ಹೆಸರು ಈ ಪಟ್ಟಿಯಲ್ಲಿ ಸೇರಿದೆ, ಇದಕ್ಕೆ ರಾಕ್ಷಸ ಪಲಂಬಸುರನ ಹೆಸರಿಡಲಾಗಿದೆ. ಮೊದಲು ಇದನ್ನು ಪಲಂಬರ್‌ಪುರ ಎಂದು ಕರೆಯಲಾಗುತ್ತಿತ್ತು ಆದರೆ ಕಾಲಕ್ರಮೇಣ ಹೆಸರು ಬದಲಾಯಿತು ಮತ್ತು ಈಗ ಇದನ್ನು ಪಲ್ವಾಲ್ ಎಂದು ಕರೆಯಲಾಗುತ್ತದೆ.

ಮೀನುಗಳ ಜೊತೆ ವಾಕಿಂಗ್ ಬರ್ತಾನೆ ಈ ವ್ಯಕ್ತಿ!

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!