ಆನ್‌ಲೈನ್ ಹಗರಣದಲ್ಲಿ ₹64 ಲಕ್ಷ ಕಳೆದುಕೊಂಡ ಉದ್ಯಮಿ: ಖಾತೆಯಲ್ಲಿ ಉಳಿದಿದ್ದು ಕೇವಲ ₹300

By Suvarna NewsFirst Published Feb 19, 2022, 8:31 AM IST
Highlights

ವರದಿಗಳ ಪ್ರಕಾರ, ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ ಕಳುವು ಮಾಡಲಾಗಿದೆ. ಉದ್ಯಮಿ ಎರಡು ದಿನಗಳಿಂದ ತಮ್ಮ ಮೊಬೈಲ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದರು. ಫೋನ್ ಹ್ಯಾಕ್ ಮಾಡುವ ಮೂಲಕ ಹಣ ಕದ್ದಿರುವ ಸಾಧ್ಯತೆ ಇದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ. 

ಜೈಪುರ (ಫೆ. 19): ಜೈಪುರ ಮೂಲದ ಉದ್ಯಮಿ ಆನ್‌ಲೈನ್ ಹಗರಣದಲ್ಲಿ (Online Scam) 64 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವರದಿಗಳ ಪ್ರಕಾರ ಸಿಮ್ ಸ್ವಾಪಿಂಗ್‌ (Sim Swapping) ಮೂಲಕ  ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ. ಕಳವು ಮಾಡಲಾಗಿದೆ.  ಉದ್ಯಮಿ ಎರಡು ದಿನಗಳಿಂದ ತಮ್ಮ ಮೊಬೈಲ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದರು. ಫೋನ್ ಹ್ಯಾಕ್ ಮಾಡುವ ಮೂಲಕ ಹಣ ಕದ್ದಿರುವ ಸಾಧ್ಯತೆ ಇದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ. 

ಟೈಮ್ಸ್‌ ಆಫ್‌ ಇಂಡಿಯಾ (TOI) ವರದಿಯ ಪ್ರಕಾರ, 68 ವರ್ಷ ವಯಸ್ಸಿನ ಜೈಪುರ ಮೂಲದ ರಾಲೇಶ್ ತಾಟುಕಾ (Ralesh Tatuka) ಅವರು‌ ಅನೇಕ ಟ್ರ್ಯಾನ್ಸಾಕ್ಶನ್ ವಿಫಲವಾದ ನಂತರ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ವಿಚಾರಿಸಲು ತಮ್ಮ ಬ್ಯಾಂಕ್‌ಗೆ ಕರೆ ಮಾಡಿದಾಗ ಆಘಾತಕ್ಕೆ ಒಳಗಾಗಿದ್ದರು. 

Latest Videos

ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 700 ರೂಪಾಯಿ ಉಳಿದಿದೆ ಎಂದು ಬ್ಯಾಂಕ್‌ನಿಂದ ಅವರಿಗೆ ತಿಳಿಸಲಾಯಿತು. ಆದರೆ ಅವರ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಕೇವಲ 300 ಉಳಿದಿರುವುದು ತಿಳಿದಿಬಂದಿತ್ತು. ಈ ಬಳಿಕ  ತಾಟುಕಾ ಪೊಲೀಸ್ ದೂರು ದಾಖಲಿಸಿದರು.

ಇದನ್ನೂ ಓದಿ: Bengaluru: ಡೆಲಿವರಿ ಬಾಯ್‌ಗೆ ಇರಿದು ಹಣ ದೋಚಿದ್ದ ಕಿಡಿಗೇಡಿಗಳ ಬಂಧನ

ಹೊಸ ಸಿಮ್ ಕಾರ್ಡ್‌ ಖರೀದಿ: ಶುಕ್ರವಾರ ಸಂಜೆ ಅವರ ಮೊಬೈಲ್ ಫೋನ್ ಸಂಪರ್ಕ ಕಳೆದುಕೊಂಡಿದೆ ಎಂದು ತಟುಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ವ್ಯಾಪಾರ ಪಾಲುದಾರರ ಮೊಬೈಲ್ ಫೋನ್‌ನಲ್ಲಿಯೂ ಅದೇ ದೋಷ ಕಂಡುಬಂದಿದೆ. ಅನೇಕ ವಿಫಲ ಪ್ರಯತ್ನಗಳ ನಂತರ, ಇಬ್ಬರು ತಮ್ಮ ಸಿಮ್ ಕಾರ್ಡ್‌ಗಳನ್ನು (Sim Card) ಬದಲಾಯಿಸಲು ನಿರ್ಧರಿಸಿದರು. 

ತಟುಕಾ ಮತ್ತು ಅವರ ಪಾಲುದಾರರು ನಂತರ ಟೆಲಿಕಾಂ ಕಂಪನಿಯ (Telecom) ಕಚೇರಿಗೆ ಭೇಟಿ ನೀಡಿದರು ಮತ್ತು ಅವರ ಮೊಬೈಲ್ ಫೋನ್‌ಗಳಿಗಾಗಿ ಎರಡು ಹೊಸ ಸಿಮ್ ಕಾರ್ಡ್‌ಗಳನ್ನು ಪಡೆದರು. ಆದಾಗ್ಯೂ, ಸಕ್ರಿಯಗೊಳಿಸುವಿಕೆ ವಿಳಂಬವಾಗಿದ್ದರಿಂದ ಅವರು ತಕ್ಷಣವೇ ಹೊಸ ಸಿಮ್ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗಿರಲಿಲ್ಲ.

ಬ್ಯಾಂಕ್ ಖಾತೆಗಳಿಗೆ ಲಾಗ್ ಇನ್ ವಿಫಲ: ತಮ್ಮ ಸಿಮ್ ಕಾರ್ಡ್‌ ಬಗ್ಗೆ ಹೆಚ್ಚು ಗಮನ ಕೊಡದೆ, ಇಬ್ಬರು ವ್ಯಾಪಾರ ಪಾಲುದಾರರು ವಹಿವಾಟು ಮಾಡಲು ತಮ್ಮ ಸಂಸ್ಥೆಯ ಬ್ಯಾಂಕ್ ಖಾತೆಗಳಿಗೆ ಲಾಗ್ ಇನ್ ಮಾಡಿದ್ದಾರೆ. ಆದರೆ ಅವರು ತಮ್ಮ ಕಂಪನಿಯ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಲಾಗ್ ಇನ್ (Log In) ಮಾಡಲು ಪ್ರಯತ್ನಿಸಿದರು ಆದರೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. 

ಇದನ್ನೂ ಓದಿ: Chits Fund Fraud: ದುಬಾರಿ ಬಡ್ಡಿಯ ಆಸೆ ತೋರಿಸಿ 500 ಜನರಿಗೆ 40 ಕೋಟಿ ವಂಚನೆ

ನಿರಂತರ ವೈಫಲ್ಯಗಳ ನಂತರ, ಇಬ್ಬರು ಪಾಲುದಾರರು ತಮ್ಮ ಬ್ಯಾಂಕ್‌ಗೆ ಕರೆ ಮಾಡಿದರು ಮತ್ತು ಅವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ವಿಚಾರಿಸಿದರು. ತಮ್ಮ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ ಕೇವಲ 700 ಮಾತ್ರ ಉಳಿದಿವೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದರು. ಈ ಬಳಿಕ ಆನ್‌ಲೈನ್ ಹಗರಣದಲ್ಲಿ ಉದ್ಯಮಿ  64 ಲಕ್ಷ ರೂಪಾಯಿ ಕಳೆದುಕೊಂಡಿರುವುದು ತಿಳಿದಿಬಂದಿತ್ತು. 

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಎಚ್‌ಒ, ಸತೀಶ್ ಚಂದ್, "ಪ್ರಸ್ತುತ ತನಿಖೆ ನಡೆಯುತ್ತಿದೆ ಮತ್ತು ನಿಖರವಾದ ಕಾರಣವನ್ನು ನಿರ್ಧರಿಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ. ಎರಡು ಮೊಬೈಲ್ ಫೋನ್‌ಗಳ ಹ್ಯಾಕ್‌ ಅಥವಾ ಇನ್ನಿತರ ಚಟುವಟಿಕೆ ಪರಿಕ್ಷೀಸಲು  ಪೊಲೀಸರು ಪ್ರಸ್ತುತ ತಾಂತ್ರಿಕ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಮೊಬೈಲ್ ಫೋನ್‌ಗಳು ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿವೆ ಎಂದು ವರದಿ ಹೇಳಿದೆ.

click me!