
ತಂತ್ರಜ್ಞಾನವು ಜೀವನವನ್ನು ಹೆಚ್ಚು ಸುಲಭಗೊಳಿಸಿ ಜಗತ್ತಿನಾದ್ಯಂತ ಜನರನ್ನು ಸಂಪರ್ಕಿಸಿದೆಯೋ ಅದಕ್ಕಿಂತ ಹೆಚ್ಚಿಗೆ ಸೈಬರ್ ಕ್ರೈಮ್ ಎಂಬ ಕರಾಳ ಮುಖವನ್ನೂ ಇದು ಹೊತ್ತಿದೆ. ಸ್ಕ್ಯಾಮರ್‌ಗಳು ವಿಭಿನ್ನ ತಂತ್ರಗಳನ್ನು ಬಳಸುವ ಮೂಲಕ ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಜನರು ಬಲಿಯಾಗುತ್ತಿರುವ ಹೊಸ ಹಗರಣವೆಂದರೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಾಲ್ ಸ್ಕ್ಯಾಮ್. ಅದು ಏನು, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದೇ ಬಗ್ಗೆ ಇಲಾಖೆ ಹೊರಡಿಸಿದ ಎಚ್ಚರಿಕೆ ಏನು ಎಂಬುದನ್ನು ಇಲ್ಲಿ ತಿಳಿಯಿರಿ.
ಇದಾಗಲೇ ಹಲವಾರು ರೀತಿಯಲ್ಲಿ ಮೊಬೈಲ್‌ಗೆ ಕರೆಗಳು ಬಂದು ಗ್ರಾಹಕರನ್ನು ಮೋಸದ ಬಲೆಯಲ್ಲಿ ಸಿಲುಕಿಸಿರುವ ಘಟನೆಗಳು ನಡೆದಿವೆ. ಫೋನ್ ಬಂದ ಸಂದರ್ಭದಲ್ಲಿ, ಇದನ್ನು ಒತ್ತಿ, ಅದನ್ನು ಒತ್ತಿ ಎಂದು ಹೇಳಿದರೆ ಅದು ಖಂಡಿತವಾಗಿಯೂ ಸ್ಕ್ಯಾಮ್ ಆಗಿರುತ್ತದೆ ಎಂಬುದನ್ನು ಗಮನಿಸಬೇಕು. ಕೂಡಲೇ ಈ ಸಂಖ್ಯೆ ಒತ್ತದಿದ್ದರೆ ಹಾಗಾಗತ್ತೆ, ಹೀಗಾಗತ್ತೆ ಎನ್ನುವ ಹೆದರಿಸುವ ಕರೆಗಳೇ ಬಂದರೆ ಅದನ್ನು ಕಡ್ಡಾಯವಾಗಿ ನಿರ್ಲಕ್ಷಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟದ್ದೇ. ಈಗ ಕೆಲ ದಿನಗಳಿಂದ ಹೊಸ ಸ್ಕ್ಯಾಮ್ ಶುರುವಾಗಿದೆ. ಅದರಲ್ಲಿ ನೀವು ಫೋನ್ ರಿಸೀವ್ ಮಾಡಿದ ಕೂಡಲೇ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಈ ಮೊಬೈಲ್ ಸಂಖ್ಯೆ ಇನ್ನು ಎರಡು ಗಂಟೆಯಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9 ಒತ್ತಿ ಎಂದು ಅತ್ತ ಕಡೆಯಿಂದ ಕರೆ ಬರುತ್ತದೆ. ಸಾಮಾನ್ಯವಾಗಿ ಇಂಥ ಕರೆ ಬಂದಾಗ ಗ್ರಾಹಕರು ಗಲಿಬಿಲಿಗೊಳ್ಳುವುದು ಸಹಜ.
ನನಗೆ ಹೀಗೆ ಮೋಸ ಮಾಡಿ ಮದ್ವೆಯಾಗ್ತಿರೋದು ಸರಿಯಲ್ಲ... ನಟಿ ರಂಜನಿ ಪೋಸ್ಟ್ಗೆ ಯುವಕನ ಕಣ್ಣೀರು!
ಒಂದು ವೇಳೆ, ಭಯದಿಂದ ಕೂಡಲೇ 9 ಒತ್ತಿದ್ದೇ ಆದರೆ, ಮೋಸದ ಬಲೆಯೊಳಗೆ ಸಿಲುಕುವ ಮೊದಲ ಹೆಜ್ಜೆಗೆ ನೀವು ಹೊಕ್ಕಿದ್ದೀರಿ ಎಂದೇ ಅರ್ಥ. ನಂತರ ಕರೆಯನ್ನು 'ಟ್ರಾಯ್ ಅಧಿಕಾರಿ'ಗಳಿಗೆ ರವಾನಿಸಿದಂತೆ ನಿಮ್ಮನ್ನು ನಂಬಿಸಲಾಗುತ್ತದೆ. ಅಲ್ಲಿಂದ ವಂಚಕರು ತಮ್ಮನ್ನು ಟೆಲಿಕಾಮ್‌ನ ಸಿಬ್ಬಂದಿಯೋ, ಅಧಿಕಾರಿಯೋ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿನಲ್ಲಿ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲಾಗಿದೆ ಮತ್ತು ಕಿರುಕುಳದ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಆ ಸಂಖ್ಯೆಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ನಿಮ್ಮಲ್ಲಿ ಭಯ ಹುಟ್ಟಿಸುತ್ತಾರೆ. ನೀವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಇದಕ್ಕಾಗಿ ನೀವು ಪೊಲೀಸರಿಂದ ಸ್ಪಷ್ಟೀಕರಣ ಪತ್ರ ನೀಡಬೇಕಾಗುತ್ತದೆ. ಆ ಬಳಿಕವೇ ನಿಮ್ಮ ಸಂಖ್ಯೆಯು ಅನ್‌ಬ್ಲಾಕ್ ಆಗುತ್ತದೆ. ಆದ್ದರಿಂದ ಕೂಡಲೇ ಪೊಲೀಸರಿಂದ ಸ್ಪಷ್ಟೀಕರಣದ ಅಗತ್ಯವಿದೆ ಎಂದು ನಿಮಗೆ ತಿಳಿಸಲಾಗುತ್ತದೆ.
ನೀವು ಇದನ್ನು ನಂಬಬೇಕು ಎಂದು ನಿಮಗೆ ಎಫ್‌ಐಆರ್ ಸಂಖ್ಯೆ, ಎರಡನೇ ಸಿಮ್ ಖರೀದಿಸಿದ ಅಂಗಡಿಯ ವಿಳಾಸ ಮತ್ತು ನಿಮ್ಮೊಂದಿಗೆ ಮಾತನಾಡುವ ಅಧಿಕಾರಿಯ ಹೆಸರು ಮತ್ತು ಸ್ಥಾನದಂತಹ ಮಾಹಿತಿಯನ್ನು ಸಹ ನೀಡಲಾಗುತ್ತದೆ. ಕರೆ ಮಾಡಿದವರು ನಿಮ್ಮ ಕರೆಯನ್ನು ಪೊಲೀಸರಿಗೆ ವರ್ಗಾಯಿಸಲು ಪ್ರಯತ್ನಿಸುತ್ತಾರೆ. ನಂತರ ಅದರಿಂದ ತಪ್ಪಿಸಿಕೊಳ್ಳಲು ನಿಮ್ಮ ಬ್ಯಾಂಕ್ ವಿವರ ಇತ್ಯಾದಿಗಳನ್ನು ಕೇಳಲಾಗುತ್ತದೆ. ಹಣದ ವರ್ಗಾವಣೆ ಮಾಡುವಂತೆ ಹೇಳಲಾಗುತ್ತದೆ. ಕೇಸ್‌ನಿಂದ ತಪ್ಪಿಸಿಕೊಂಡರೆ ಸಾಕು ಎಂದು ನೀವು ಎಲ್ಲಾ ದಾಖಲೆ ನೀಡಿದರೆ, ಇಲ್ಲವೇ ಅವರು ಹೇಳಿದಂತೆ ನಿಮ್ಮ ನಂಬರ್ಗೆ ಬರುವ ಓಟಿಪಿಯನ್ನು ಅವರಿಗೆ ತಿಳಿಸಿದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ಖಾಲಿಯಾಗುವುದು ಖಚಿತ!
ಆ್ಯಂಕರ್ ಅನುಶ್ರೀಗೆ ಈ ಪರಿ ಮೋಸ ಮಾಡೋದಾ ತೀರ್ಪುಗಾರರು? ಒಬ್ಬಂಟಿಯಾದ ನಟಿ ಕಣ್ಣೀರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ