ದೀಪಾವಳಿ ಆಫರ್, ಐಫೋನ್ ಖರೀದಿಸುವ ಗ್ರಾಹಕರಿಗೆ 6,900 ರೂ ಇಯರ್ ಬಡ್ಸ್ ಉಚಿತ!

By Chethan Kumar  |  First Published Oct 3, 2024, 7:36 PM IST

ಆ್ಯಪಲ್ ಈಗಾಗಲೇ ದೀಪಾವಳಿ ಸೇಲ್ ಆರಂಭಿಸಿದೆ. ಅ.3ರಿಂದ ಡಿಸ್ಕೌಂಟ್ ಜೊತೆಗೆ ಕೆಲ ಆಫರ್ ನೀಡುತ್ತಿದೆ. ಈ ಪೈಕಿ ಐಫೋನ್ ಖರೀದಿಸುವ ಗ್ರಾಹಕರಿಗೆ 6,900 ರೂಪಾಯಿ ಇಯರ್ ಬಡ್ಸ್ ಉಚಿತವಾಗಿ ನೀಡುತ್ತಿದೆ.


ಬೆಂಗಳೂರು(ಅ.03) ಆ್ಯಪಲ್ ಸ್ಟೋರ್‌ಗಳಲ್ಲಿ ಇಂದಿನಿಂದ ದೀಪಾವಳಿ ಆಫರ್ ಆರಂಭಗೊಂಡಿದೆ. ಐಫೋನ್, ಮ್ಯಾಕ್‌ಬುಕ್ ಸೇರಿದಂತೆ ಆ್ಯಪಲ್ ಉತ್ಪನ್ನ ಖರೀದಿಸುವ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ಪನ್ನಗಳು ಲಭ್ಯವಿದೆ. ಜೊತೆಗೆ ಅತ್ಯಾಕರ್ಷ ಉಡುಗೊರೆಗಳನ್ನು ನೀಡಲಾಗುತ್ತಿದೆ. ಈ ಪೈಕಿ ದೀಪಾವಳಿ ಆಫರ್ ಮೂಲಕ ಐಫೋನ್ ಖರೀದಿಸುವ ಗ್ರಾಹಕರಿಗೆ 6,900 ರೂಪಾಯಿ ಬೆಲೆಯ ಇಯರ್ ಬಡ್ಸ್ ಉತಿತವಾಗಿ ನೀಡಲಾಗುತ್ತಿದೆ. ಅಕ್ಟೋಬರ್ 3ರಿಂದ ದೀಪಾವಳಿ ಆಫರ್ ಆರಂಭಗೊಂಡಿರುವ ಕಾರಣ ಇದೀಗ ಆ್ಯಪಲ್ ಸ್ಟೋರ್‌ಗಳಲ್ಲಿ ಜನ ಖರೀದಿಗೆ ಮುಗಿಬಿದ್ದಿದ್ದಾರೆ.

ಐಫೋನ್ 16 ಫೋನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಐಫೋನ್ 16ಗೆ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ನೀಡಲಾಗಿದೆ. ಇದರ ಬೆನ್ನಲ್ಲೇ ಆ್ಯಪಲ್ ಸ್ಟೋರ್ ಇದೀಗ ಡಿಸ್ಕೌಂಟ್ ಆಫರ್ ಘೋಷಿಸಿದೆ. ದೀಪಾವಳಿ ಆಫರ್ ಪ್ರಯುಕ್ತ ಆ್ಯಪಲ್ ಉತ್ಪನ್ನಗಳ ಮೇಲೆ ಆಫರ್ ಘೋಷಿಸಿದೆ. ಆ್ಯಪಲ್ ಕಂಪನಿಯ ಬೀಟ್ಸ್ ಅನ್ನೋ ಇಯರ್ ಬಡ್ಸ್ ಉಚಿತವಾಗಿ ನೀಡಲಾಗುತ್ತದೆ. ಇದರ ಬೆಲೆ 6,900 ರೂಪಾಯಿ. ಈ ಆಫರ್ ಐಫೋನ್ 15 ಹಾಗೂ ಐಫೋನ್ ಪ್ಲಸ್ ಫೋನ್ ಖರೀದಿಸುವ ಗ್ರಾಹಕರಿಗೆ ಅನ್ವಯವಾಗಲಿದೆ.

Tap to resize

Latest Videos

undefined

ಆ್ಯಪಲ್‌ನಿಂದ ದೀಪಾವಳಿ ಡಿಸ್ಕೌಂಟ್ ಸೇಲ್: ಐಫೋನ್, ಏರ್‌ಪಾಡ್,ಮ್ಯಾಕ್‌ಬುಕ್‌ಗೆ ಭಾರಿ ರಿಯಾಯಿತಿ!

ವಿಶೇಷ ಅಂದರೆ ಈ ಉಚಿತ ಇಯರ್ ಬಡ್ಸ್ ಖ್ಯಾತ ಕಲಾವಿದ ಅಕ್ಯೂಬ್ ವಾನಿ ಹಬ್ಬದ ಸಂಭ್ರಮದ ಪ್ಯಾಕೇಜಿಂಗ್ ಥೀಮ್‌ನಲ್ಲಿ ಉಡುಗೊರೆ ನೀಡಲಾಗುತ್ತದೆ. ಈ ಆಫರ್ ಆ್ಯಪಲ್ ಸ್ಟೋರ್ ಹಾಗೂ ಆ್ಯಪಲ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದರ ಜೊತೆಗೆ ಬ್ಯಾಂಕ್ ಕಾರ್ಡ್ ಆಫರ್, ಎಕ್ಸ್‌ಚೇಂಜ್ ಬೋನಸ್ , 12 ತಿಂಗಳ ನೋ ಕಾಸ್ಟ್ ಇಎಂಐ ಸೇರಿದಂತೆ ಇತರ ಕೆಲ ಆಫರ್ ಕೂಡ ಲಭ್ಯವಿದೆ.

ಐಫೋನ್ 15 ಫೋನ್ ಆರಂಭಿಕ ಬೆಲೆ 69,900 ರೂಪಾಯಿ. ಐಫೋನ್ 15ಗೆ ಬ್ಯಾಂಕ್ ಕಾರ್ಡ್ ಆಫರ್ ಲಭ್ಯವಿಲ್ಲ. ಆದರೆ ಐಫೋನ್ 16 ಸೀರಿಸ್ ಯಾವುದೇ ಫೋನ್ ಖರೀದಿಸುತ್ತಿದ್ದರೂ ಭರ್ಜರಿ ಆಫರ್ ಲಭ್ಯವಿದೆ. ಐಫೋನ್ 16 ಸೀರಿಸ್ ಬಿಡುಗಡೆಯಾದ ಬೆನ್ನಲ್ಲೇ ಐಫೋನ್ 15 ಫೋನ್ ಬೆಲೆಯನ್ನ 10,000 ರೂಪಾಯಿ ಕಡಿತ ಮಾಡಲಾಗಿದೆ. ಇದರ ಜೊತೆಗೆ ಇದೀಗ ಇಯರ್ ಬಡ್ಸ್ ಉಚಿತವಾಗಿ ನೀಡುತ್ತಿದೆ.

ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !

ಬೀಟ್ಸ್ ಬ್ರ್ಯಾಂಡ್ ಆ್ಯಪಲ್ ಮಾಲೀಕತ್ವದ ಬ್ರ್ಯಾಂಡ್ ಆಗಿದೆ. ಇತ್ತೀಚೆಹೆ ಬೀಟ್ಸ್ ಬ್ರ್ಯಾಂಡ್ ಮಾರುಕಟ್ಟೆಗೆ ಮರು ಎಂಟ್ರಿಕೊಟ್ಟಿದೆ. ಇದೀಗ ಐಫೋನ್ 16 ಸೀರಿಸ್ ಭರಾಟೆಯಲ್ಲಿ ಐಫೋನ್ 15 ಕೂಡ ಮಾರಾಟ ದಾಖಲೆ ಮುಂದುವರಿಸಲು ಇಯರ್ ಬಡ್ಸ್ ಆಫರ್ ನೀಡಿದೆ. ಇಷ್ಟೇ ಅಲ್ಲ ಬೀಟ್ಸ್ ಇತ್ತೀಚೆಗೆ ರೀ ಎಂಟ್ರಿಕೊಟ್ಟಿರುವ ಕಾರಣ ಬೀಟ್ಸ್ ಇಯರ್ ಬಡ್ಸ್ ಪ್ರಮೋಶನ್ ರೂಪದಲ್ಲಿ ಈ ಆಫರ್ ನೀಡಲಾಗಿದೆ. ಇದು ಗ್ರಾಹಕರಿಗೆ ಉಚಿತ ಇಯರ್ ಬಡ್ಸ್ ಸಿಗುವಂತೆ ಮಾಡಿದೆ.
 

click me!