ಚಂದ್ರನ ಮೇಲೆಯೂ ಪರಿಣಾಮ ಬೀರಿತ್ತು ಕೋವಿಡ್ ಲಾಕ್‌ಡೌನ್; ಅಧ್ಯಯನದಲ್ಲಿ ಅಚ್ಚರಿ ವಿಷಯ

By Kannadaprabha News  |  First Published Oct 1, 2024, 8:02 AM IST

2020ರ ಕೋವಿಡ್‌ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು ಎಂದು ಅಧ್ಯಯನವೊಂದು ಹೇಳುತ್ತದೆ. ಮಾನವ ಚಟುವಟಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆಯಾದ ಪರಿಣಾಮ ಇದಾಗಿರಬಹುದು ಎಂದು ಸಂಶೋಧಕರು ನಂಬಿದ್ದಾರೆ.


ಬೆಂಗಳೂರು: ಜನರ ದೈನಂದಿನ ಜೀವನದಲ್ಲಿ ತಲ್ಲಣ ಸೃಷ್ಟಿಸಿದ್ದ 2020ರ ಕೋವಿಡ್‌ ಲಾಕ್ಡೌನ್‌, ಚಂದ್ರನ ತಾಪಮಾನದ ಮೇಲೆಯೂ ಪರಿಣಾಮ ಬೀರಿತ್ತು ಎಂದು ಅಚ್ಚರಿಯ ಸಂಗತಿಯನ್ನು ವರದಿಯೊಂದು ಬಹಿರಂಗಪಡಿಸಿದೆ.

ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ಕೆ. ದುರ್ಗಾ ಪ್ರಸಾದ್‌ ಮತ್ತು ಜಿ. ಅಂಬಿಲಿ 2017ರಿಂದ 2023ರ ನಡುವೆ ಚಂದ್ರನ 6 ಭಾಗಗಳಲ್ಲಿ ರಾತ್ರಿ ವೇಳೆ ಇರುವ ತಾಪಮಾನವನ್ನು ವಿಶ್ಲೇಷಿಸಿದ್ದರು. ನಾಸಾಸ ಲೂನಾರ್‌ ಆರ್ಬಿಟರ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು.

Latest Videos

undefined

ಸ್ವದೇಶಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ದೈತ್ಯ ರಾಕೆಟ್‌; ಮಂಗಳ ಬಳಿಕ ಶುಕ್ರ ಗ್ರಹಕ್ಕೆ ನೌಕೆ

ಆ ಸಮಯದಲ್ಲಿ ಮಾನವ ಚಟುವಟಿಕೆ ಕಡಿಮೆಯಾಗಿ, ಹಸಿರುಮನೆ ಅನಿಲ ಹೊರಸೂಸುವಿಕೆ, ಭೂಮಿಯಿಂದ ಹೊರಹೋಗುವ ವಿಕಿರಣಗಳಲ್ಲಿ ಇಳಿಕೆಯಾದ ಕಾರಣ ಕಡಿಮೆ ಶಾಖ ಉತ್ಪಾದನೆಯಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. 2020ರ ಅವಧಿಯಲ್ಲಿ ಕನಿಷ್ಠ 96.2 ಕೆಲ್ವಿನ್‌ ತಾಪಮಾನ ವರದಿಯಾಗಿದ್ದು, ಇದು ಕ್ರಮೇಣ 2021-2022ರ ಲಾಕ್ಡೌನ್‌ ತೆರವಿನೊಂದಿಗೆ ಏರಿಕೆಯಾಯಿತು.

‘ಈ ಅಧ್ಯಯನದಿಂದ ಮಾನವ ಚಟುವಟಿಕೆಗಳಲ್ಲಿನ ಬದಲಾವಣೆಗಳು ಭೂಮಿಯ ಹತ್ತಿರದ ಆಕಾಶಕಾಯಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಅರಿಯಲು ಸಾಧ್ಯವಾಯಿತು. ಅಂತೆಯೇ ಸೌರ ಚಟುವಟಿಕೆಗಳು ಮತ್ತು ಋತು ಬದಲಾವಣೆನ್ನೂ ಗಮನಿಸಿದ್ದು, ಅವು ಇಂತಹ ಬದಲಾವಣೆಗೆ ಕಾರಣವಾಗಿಲ್ಲ’ ಎಂದು ಪ್ರಸಾದ್‌ ತಿಳಿಸಿದ್ದಾರೆ.

ಚಂದ್ರಯಾನ-3 ರಹಸ್ಯ ಬೇಧಿಸಿದ ಇಸ್ರೋ: ಭಾರತದ ಹೊಸ ಬಾಹ್ಯಾಕಾಶ ಮೈಲಿಗಲ್ಲು

click me!