India Semiconductor Mission: ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ!

By Manjunath Nayak  |  First Published Feb 7, 2022, 10:24 AM IST

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಗಾಗಿ CEO, CTO ಮತ್ತು CFOನಂತಹ ವಿವಿಧ ಹುದ್ದೆಗಳನ್ನು ತುಂಬಲು ಉನ್ನತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಿದೆ. 


Tech Desk: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ದೇಶದಲ್ಲಿ ಎಲೆಕ್ಟ್ರಾನಿಕ್ ಚಿಪ್ ಮತ್ತು ಡಿಸ್ಪ್ಲೇ ಮಾರುಕಟ್ಟೆ  ವ್ಯವಸ್ಥೆಯ ಅಭಿವೃದ್ಧಿಗಾಗಿ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬೆನಲ್ಲೇ 'ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಗಾಗಿ CEO (Chief Executive office), CTO (Cheif technical officer) ಮತ್ತು CFO (Chief financial officer)  ನಂತಹ ವಿವಿಧ ಹುದ್ದೆಗಳನ್ನು ತುಂಬಲು ಉನ್ನತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. .

ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟವು ಸೆಮಿಕಂಡಕ್ಟರ್ ಇಂಡಿಯಾ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದ್ದು, ದೇಶದಲ್ಲಿ ಅರೆವಾಹಕ (Semiconductor) ಮತ್ತು ಡಿಸ್ಪ್ಲೇ (Display) ಉತ್ಪಾದನಾ ಮಾರುಕಟ್ಟೆ ವ್ಯವಸ್ಥೆಯ ಅಭಿವೃದ್ಧಿಗಾಗಿ  ಒಟ್ಟು 76,000 ಕೋಟಿ ರೂ ವೆಚ್ಚ ಮಾಡುವುದಾಗಿ ತಿಳಿಸಿದೆ. 

Latest Videos

undefined

ಇದನ್ನೂ ಓದಿ: Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿ ಹಂಚಿಕೊಂಡ ವಿವರಗಳ ಪ್ರಕಾರ, ಸಚಿವಾಲಯವು ಸೆಮಿಕಂಡಕ್ಟರ್ ಉದ್ಯಮದಲ್ಲಿ 25 ವರ್ಷಗಳ ಅನುಭವ ಮತ್ತು ಜಾಗತಿಕ ಮಟ್ಟದಲ್ಲಿ 10 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ವ್ಯಕ್ತಿಯನ್ನು ಭಾರತ ಸೆಮಿಕಂಡಕ್ಟರ್ ಮಿಷನ್‌ನ (ISM) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಸೇವೆ ಸಲ್ಲಿಸಲು ಹುಡುಕುತ್ತಿದೆ. ಸಿಇಒ ಹುದ್ದೆಗೆ ಅರ್ಜಿದಾರರು ಕನಿಷ್ಠ ಉಪಾಧ್ಯಕ್ಷ ಸ್ಥಾನದಲ್ಲಾದರೂ ನಾಯಕತ್ವದ ಸ್ಥಾನದಲ್ಲಿ ಸೇವೆ ಸಲ್ಲಿಸಿರಬೇಕು. ಸಿಇಒ ಅವರು ಮಿಷನ್ ಮುಖ್ಯಸ್ಥರಾಗಿರುತ್ತಾರೆ.

ISM ನ ವ್ಯಾಪಾರ ವಿಭಾಗವನ್ನು ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ತಂತ್ರಜ್ಞಾನ ಅಧಿಕಾರಿ (CTO), ಮುಖ್ಯ ಕಾರ್ಯತಂತ್ರ ಅಧಿಕಾರಿ (CSO), ಮುಖ್ಯ ಹಣಕಾಸು ಅಧಿಕಾರಿ (CFO), ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿ (CBDO) ಸೇರಿದಂತೆ ವೃತ್ತಿಪರರ ಮಾರ್ಗದರ್ಶನದಲ್ಲಿ ನಡೆಸಲಾಗುವುದು. ಇವೆಲ್ಲಕ್ಕೂ ನಿರ್ದಿಷ್ಟ ಉದ್ಯಮದ ತಜ್ಞರು ಸಹಾಯ ಮಾಡಲಿದ್ದಾರೆ.

ಇದನ್ನೂ ಓದಿ: KPSC Selection List 2022 announced: ವಿವಿಧ ಇಲಾಖೆಯ ಹುದ್ದೆಗಳಿಗೆ ಹೊಸದಾಗಿ ಆಯ್ಕೆಪಟ್ಟಿ ಪ್ರಕಟಿಸಿದ ಕೆಪಿಎಸ್‌ಸಿ

ಸೆಮಿಕಂಡಕ್ಟರ್ ಉದ್ಯಮದಲ್ಲಿ 20 ವರ್ಷಗಳ ಅನುಭವ ಹೊಂದಿರುವ ವ್ಯಕ್ತಿಯನ್ನು ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಗಾಗಿ  ಸಚಿವಾಲಯ ನೇಮಕ ಮಾಡಿಕೊಳ್ಳಲಿದೆ. ಸಿಇಓ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕನಿಷ್ಠ 10 ವರ್ಷಗಳ ಜಾಗತಿಕ ಅನುಭವ ಮತ್ತು‌ ಸೆಮಿಕಂಡಕ್ಟರ್ ವಿಭಾಗ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ 10 ವರ್ಷಗಳ ಸಲಹಾ ಅನುಭವವನ್ನು  ಹೊಂದಿರಬೇಕು. 

ವಿವರಗಳ ಪ್ರಕಾರ CTO ಕನಿಷ್ಠ ಉಪಾಧ್ಯಕ್ಷ ಸ್ಥಾನದಲ್ಲಿ ಅಥವಾ CTO, CSO ಅಥವಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿರಬೇಕು. ಸಚಿವಾಲಯ ಕಾರ್ಯದರ್ಶಿ ನೇತೃತ್ವದ ಹುಡುಕಾಟ ಮತ್ತು ಆಯ್ಕೆ ಸಮಿತಿಯ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ.ಅರ್ಜಿ ಸಲ್ಲಿಸಲು ಫೆಬ್ರವರಿ 20 ರವರೆಗೆ ಅವಕಾಶವಿದೆ.

click me!