11ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಭಾರತ ಹಾಗೂ ವಿಶ್ವಾದ್ಯಂತ ನಡೆಯುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಆಯೋಜಿಸಿರುವ ಯೋಗಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಬರೋಬ್ಬರಿ 3 ಲಕ್ಷ ಮಂದಿ ಭಾಗಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಮೋದಿ, ದೇಶದ ಜನತೆಗೆ ಯೋಗಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. 175 ದೇಶಗಳು ಯೋಗದ ಮೂಲಕ ಒಂದಾಗಿದೆ. ಯೋಗದ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

11:19 PM (IST) Jun 21
ಬಿ-2 ಅಮೆರಿಕದ 30,000 ಪೌಂಡ್ ತೂಕದ ಜಿಬಿಯು-57 ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್ ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಜಗತ್ತಿನ ಏಕೈಕ ಜೆಟ್. ಇದನ್ನು ಆಳವಾದ ಭೂಗತ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ.
10:18 PM (IST) Jun 21
ಒಂಬತ್ತನೇ ದಿನವೂ ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ ಇರಾನ್‌ನ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತಮ್ಮ ಉತ್ತರಾಧಿಕಾರಿಯನ್ನು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
10:00 PM (IST) Jun 21
ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದ 15 ವರ್ಷದ ಬಾಲಕಿ 8 ತಿಂಗಳು ಗರ್ಭಿಣಿ ಎಂದು ತಿಳಿದುಬಂದಿದೆ. 2 ವರ್ಷಗಳ ಕಾಲ 14 ಜನರಿಂದ ನಿರಂತರ ದೌರ್ಜನ್ಯಕ್ಕೊಳಗಾಗಿದ್ದಳು ಎಂದು ತನಿಖೆಯಿಂದ ಬಹಿರಂಗವಾಗಿದೆ.
08:58 PM (IST) Jun 21
ತನು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿರುವ ಪಬ್ಲಿಕ್ ಲೈನ್‌ನಲ್ಲಿ ಹೊಸದಾಗಿ ಹಾಕಲಾದ ಕಾಂಕ್ರೀಟ್ ಅಡಿಯಲ್ಲಿ ಶವವನ್ನು ಹೂತುಹಾಕಲಾಗಿತ್ತು.
08:43 PM (IST) Jun 21
ಜಿಯೋ ಮತ್ತು ಏರ್‌ಟೆಲ್ 11 ರೂಪಾಯಿಗೆ ಒಂದು ಗಂಟೆಗೆ 10 ಜಿಬಿ ಡೇಟಾ ನೀಡುವ ಯೋಜನೆಗಳು ಸಮಯ ಆಧಾರಿತ ಟೆಲಿಕಾಂ ಬೆಲೆಯತ್ತ ಬದಲಾವಣೆಯನ್ನು ಸೂಚಿಸುತ್ತವೆ, ಇದು ಭಾರತದಲ್ಲಿ ಡೇಟಾ ಹಣಗಳಿಕೆಯ ಭವಿಷ್ಯವನ್ನು ಸೂಚಿಸುತ್ತದೆ.
08:33 PM (IST) Jun 21
07:52 PM (IST) Jun 21
ಜೂನ್ 21 ರಂದು ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಿದರು. ಸಮುದಾಯದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನವರು ಸಕ್ರಿಯವಾಗಿ ಭಾಗವಹಿಸಿ, ದೈನಂದಿನ ಜೀವನದಲ್ಲಿ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು.
07:49 PM (IST) Jun 21
ಮುಕೇಶ್ ಅಂಬಾನಿಯವರ ಆಪ್ತ ಸಹಾಯಕರಾಗಿದ್ದ ಅವರು ಈಗ ಐಷಾರಾಮಿ ಜೀವನವನ್ನು ತ್ಯಜಿಸಿ 'ದೀಕ್ಷೆ' ತೆಗೆದುಕೊಂಡಿದ್ದಾರೆ.
07:39 PM (IST) Jun 21
07:37 PM (IST) Jun 21
07:10 PM (IST) Jun 21
06:56 PM (IST) Jun 21
06:36 PM (IST) Jun 21
06:33 PM (IST) Jun 21
ಸೌಜನ್ಯಾ ಹೆಲ್ಪ್‌ಲೈನ್ ಹೆಸರಿನಲ್ಲಿ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಬೆಳ್ತಂಗಡಿಯ ರಾಜೇಶ್ ಎಂಬುವವರಿಂದ 3.2 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
06:18 PM (IST) Jun 21
06:12 PM (IST) Jun 21
ಕುಳಿತಲ್ಲೆ ಎಲ್ಲಾ ಸಿಗುವಾಗ ಅಡುಗೆ ಯಾರು ಮಾಡಿಕೊಳ್ತಾರೆ, ಹೋಟೆಲ್ತನಕ ಯಾರು ಹೋಗ್ತಾರೆ ಎಂದೆಲ್ಲಾ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಅದರಲ್ಲಿಯೂ ಕ್ಲೌಡ್ ಕಿಚನ್ನಲ್ಲಿ ಆರ್ಡರ್ ಮಾಡ್ತೀರಾ? ಹೋಟೆಲ್ಗಳಲ್ಲಿ ಶೆಫ್ ಆಗಿರೋ, ಕೆಲಸ ಮಾಡ್ತಿರೋ ಈ ಯುವಕರ ಮಾತೊಮ್ಮೆ ಕೇಳಿಬಿಡಿ...
06:02 PM (IST) Jun 21
05:57 PM (IST) Jun 21
ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ, ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮುದ್ದಿನ ಅಳಿಯ ರಾಹುಲ್ ಬಗ್ಗೆ ಸುನಿಲ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
05:53 PM (IST) Jun 21
UPSC Pratibha Setu Portal: ಯುಪಿಎಸ್‌ಸಿ ಪರೀಕ್ಷೆಯ ಸಂದರ್ಶನದಲ್ಲಿ ಉತ್ತೀರ್ಣರಾಗದವರಿಗೆ 'ಪ್ರತಿಭಾ ಸೇತು' ಪೋರ್ಟಲ್ ಮೂಲಕ ಉದ್ಯೋಗಾವಕಾಶ. ಖಾಸಗಿ ಕಂಪನಿಗಳು ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ನೇಮಕ ಮಾಡಿಕೊಳ್ಳಬಹುದು.
05:42 PM (IST) Jun 21
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಮತ್ತು ದಕ್ಷಿಣ ಎಂದು ಎರಡು ಠಾಣೆಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. .
05:07 PM (IST) Jun 21
05:01 PM (IST) Jun 21
ಕಿರುತೆರೆ ನಟಿ ವೈಷ್ಣವಿ ಗೌಡ ತಮ್ಮ ಪತಿ ಅನುಕೂಲ್ ಜೊತೆ 117 ಅಡಿ ಎತ್ತರದಿಂದ ಪ್ರಪಾತಕ್ಕೆ ಧುಮುಕಿ ಸಾಹಸ ಮೆರೆದಿದ್ದಾರೆ. ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
04:52 PM (IST) Jun 21
04:37 PM (IST) Jun 21
04:27 PM (IST) Jun 21
04:21 PM (IST) Jun 21
ಇತ್ತೀಚಿನ ಹಣಕಾಸು ನೀತಿ ಸಭೆಯಲ್ಲಿ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ವಿದೇಶಿ ವಿನಿಮಯ ಮೀಸಲು ದೇಶದ 11 ತಿಂಗಳ ಆಮದು ಮತ್ತು ಬಾಹ್ಯ ಸಾಲದ ಸುಮಾರು 96 ಪ್ರತಿಶತವನ್ನು ಪೂರೈಸಲು ಸಾಕಾಗುತ್ತದೆ ಎಂದು ಹೇಳಿದರು.
03:58 PM (IST) Jun 21
ಅಹಮದಾಬಾದ್ ವಿಮಾನ ದುರಂತದ ನಂತರ, ಡಿಜಿಸಿಎ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದೆ. ಸುರಕ್ಷತಾ ಶಿಷ್ಟಾಚಾರ ಉಲ್ಲಂಘನೆ ಮತ್ತು ಸಿಬ್ಬಂದಿ ವೇಳಾಪಟ್ಟಿ ನಿರ್ವಹಣೆಯಲ್ಲಿನ ಲೋಪಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ
03:52 PM (IST) Jun 21
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಪೋಲೋ ಪಂದ್ಯದ ನಡುವೆ ಇತ್ತೀಚೆಗೆ ಮೃತಪಟ್ಟಿದ್ದರು. ಪಂದ್ಯ ಆಡುತ್ತಿದ್ದಂತೆ ಕುಸಿದು ಬಿದ್ದ ಸಂಜಯ್ ಕಪೂರ್ ಅಂತಿಮ ಕ್ಷಣದ ವಿಡಿಯೋ ಬಹಿರಂಗವಾಗಿದೆ.
03:02 PM (IST) Jun 21
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
03:00 PM (IST) Jun 21
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಲಾದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
02:06 PM (IST) Jun 21
ಏರ್ ಇಂಡಿಯಾ ವಿಮಾನ ದುರಂತದ ಸಾವು ನೋವು ಇನ್ನು ಕಣ್ಣಮುಂದಿದೆ. ಇದರ ಬೆನ್ನಲ್ಲೇ ಬೊಯಿಂಗ್ ಸಂಸ್ಥೆಯ ಮತ್ತೊದು ವಿಮಾನ ಅಪಘಾತಕ್ಕೀಡಾಗಿದೆ. ಇದರೊಂದಿಗೆ ಬೋಯಿಂಗ್ ವಿಮಾನ ಸುರಕ್ಷತೆ ಮೇಲೆ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
01:19 PM (IST) Jun 21
ಇಸ್ರೇಲ್ ಇರಾನ್ ಯುದ್ಧ ತೀವ್ರಗೊಳ್ಳುತ್ತಿದೆ. ಇರಾನ್ ನ್ಯೂಕ್ಲಿಯರ್ ಕುರಿತು ಮಾತುಕತೆಗೆ ನಿರಾಕರಿಸಿದ ಬೆನ್ನಲ್ಲೇ ಇತ್ತ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.ಅಂತಾರಾಷ್ಟ್ರೀಯ ಯೋಗದಿನಾಚರಣೆಯಂದೇ ಚಿನ್ನದ ಬೆಲೆ ಏರಿಕೆ ಕಂಡಿದೆ.
01:12 PM (IST) Jun 21
ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ರಾಯಘಡ ರಾಯಲ್ಸ್ ಮತ್ತು ಕೊಲ್ಲಾಪುರ ಟಸ್ಕರ್ಸ್ ನಡುವಿನ ಪಂದ್ಯದಲ್ಲಿ ನಡೆದ ವಿಚಿತ್ರ ರನೌಟ್ ಘಟನೆ ಗಲ್ಲಿ ಕ್ರಿಕೆಟ್‌ನ್ನು ನೆನಪಿಸಿತು. ಎರಡು ಬಾರಿ ರನೌಟ್ ಅವಕಾಶವನ್ನು ಕೈಚೆಲ್ಲಿದ ಫೀಲ್ಡಿಂಗ್ ತಂಡ, ಚೆಂಡನ್ನು ಓವರ್‌ಥ್ರೋ ಮಾಡಿ ಬೌಂಡರಿ ನೀಡಿತು.
01:11 PM (IST) Jun 21
12:30 PM (IST) Jun 21
ಇದಾಗಲೇ ಹಲವಾರು ಪ್ರಕೃತಿ ವಿಕೋಪಗಳು, ಸಾವು ನೋವುಗಳ ನಡುವೆಯೇ ಇದೀಗ ತಮಿಳುನಾಡಿನಲ್ಲಿ ದೇವರ ಮೀನು ಸಿಕ್ಕಿದ್ದು, ಇದು ಭಾರಿ ಆತಂಕಕ್ಕೆ ಕಾರಣವಾಗಿದೆ!
12:02 PM (IST) Jun 21
ಚಂದನವನ ಚೆಲುವೆ ಚೈತ್ರಾ ಆಚಾರ ತಮ್ಮ ಮೊದಲ ತಮಿಳು ಸಿನಿಮಾ 3BHK ಯಲ್ಲಿ ಮಿಂಚೋದಕ್ಕೆ ರೆಡಿಯಾಗ್ತಿದ್ದಾರೆ. ಈ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ.
12:01 PM (IST) Jun 21
ಏರ್ ಇಂಡಿಯಾ ವಿಮಾನ ದುರಂತ ಬಳಿಕ ವಿಮಾನದಲ್ಲಿನ ತಾಂತ್ರಿಕ ದೋಷಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇದೀಗ ಇಂಡಿಗೋ ವಿಮಾನ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎದುರಿಸಿದೆ. ಪೈಲೆಟ್ ಮೇಡೇ, ಮೇಡೇ ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ.
11:46 AM (IST) Jun 21
ನ್ಯಾಯದಾನ ವಿಳಂಬವಾದರೆ ಅದು ನ್ಯಾಯಕ್ಕೇ ಮಾಡುವ ಅನ್ಯಾಯ ಎನ್ನುವ ಮಾತಿದ್ದರೂ ನ್ಯಾಯಕ್ಕಾಗಿ ಕಾದುಕುಳಿತಿರುವ ಜೀವವಳು ಅದೆಷ್ಟೋ. ಅಂಥದ್ದೇ ಒಂದು ಕಣ್ಣೀರಿನ ಕಥೆ 104ವರ್ಷ ವಯಸ್ಸಿನ ಈ ವೃದ್ಧನದ್ದು!
11:29 AM (IST) Jun 21
ಪ್ಯಾರಿಸ್: ಎರಡು ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಬದ್ದ ಎದುರಾಳಿ ಜೂಲಿಯನ್ ವೇಬರ್ ಮಣಿಸಿ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
11:29 AM (IST) Jun 21