ಕೇವಲ 3 ವರ್ಷದಲ್ಲಿ ದೇಶದಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ, ಕರ್ನಾಟಕದಲ್ಲಿ 40 ಸಾವಿರ ಮಿಸ್ಸಿಂಗ್!

By Gowthami K  |  First Published Jul 31, 2023, 9:25 AM IST

ಕಳೆದ ಮೂರು ವರ್ಷದ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಕರ್ನಾಟಕದಲ್ಲಿ ಸುಮಾರು 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ.


ನವದೆಹಲಿ (ಜು.31): ಕಳೆದ ಮೂರು ವರ್ಷದ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಕಳೆದ ವಾರ ಸಂಸತ್ತಿನಲ್ಲಿ ಈ ಬಗ್ಗೆ ಅಂಕಿ ಅಂಶಗಳನ್ನು ಮಂಡಿಸಿದ ಕೇಂದ್ರ ಗೃಹ ಸಚಿವಾಲಯ, 2019 ರಿಂದ 2021ರವರೆಗೆ ದೇಶದಲ್ಲಿ 18 ವರ್ಷ ಮೇಲ್ಪಟ್ಟ10,61,638 ಮಹಿಳೆಯರು ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ 2,51,430 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ. ಮಧ್ಯಪ್ರದೇಶವು ಅತಿ ಹೆಚ್ಚು ಅಂದರೆ ಸುಮಾರು ಎರಡು ಲಕ್ಷ, ಪಶ್ಚಿಮ ಬಂಗಾಳವು ನಂತರದ ಸ್ಥಾನದಲ್ಲಿದೆ.

ಮಧ್ಯಪ್ರದೇಶದಲ್ಲಿ 1,98,414, ಪಶ್ಚಿಮ ಬಂಗಾಳದಲ್ಲಿ 1,93,511, ಮಹಾರಾಷ್ಟ್ರದಲ್ಲಿ 1,91,433, ಒಡಿಶಾದಲ್ಲಿ 86,871 ಮತ್ತು ಛತ್ತೀಸ್‌ಗಢದಲ್ಲಿ 59,933 ಮಹಿಳೆಯರು ಕಾಣೆಯಾಗಿದ್ದಾರೆ. ಇನ್ನು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು, 83,973, ಜಮ್ಮು- ಕಾಶ್ಮೀರದಲ್ಲಿ 9,765 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.

Latest Videos

undefined

ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್‌ ಬಾಂಬ್‌ ಕಿಂಗ್‌ಪಿನ್‌ ಬೆಳಗಾವಿ ಲಷ್ಕರ್‌ ಉಗ್ರ!

ಕರ್ನಾಟಕದಲ್ಲಿ ಸುಮಾರು 40 ಸಾವಿರ:  ಕರ್ನಾಟಕದಲ್ಲಿ 2019ರಲ್ಲಿ 18 ವರ್ಷಕ್ಕಿಂತ ಕೆಳಗಿನ 703 ಬಾಲಕಿಯರು ಹಾಗೂ 18 ವರ್ಷ ಮೇಲ್ಪಟ್ಟ 12247 ಮಹಿಳೆಯರು ನಾಪತ್ತೆಯಾಗಿದ್ದಾರೆ. 2020ರಲ್ಲಿ 834 ಬಾಲಕಿಯರು ಹಾಗೂ 11950 ಮಹಿಳೆಯರು, 2021ರಲ್ಲಿ 1237 ಬಾಲಕಿಯರು ಹಾಗೂ 12964 ಮಹಿಳೆ ಯರು ನಾಪತ್ತೆಯಾಗಿದ್ದಾರೆ.

ಆತಂಕದ ವಿಷಯವೆಂದರೆ ಈ 3 ವರ್ಷದಲ್ಲಿ ವರ್ಷದಿಂದ ವರ್ಷಕ್ಕೆ ನಾಪತ್ತೆಯಾಗಿರುವ ಬಾಲಕಿಯರ ಸಂಖ್ಯೆ ಏರುಮುಖವಾಗಿದೆ. ಮಹಿಳೆಯರ ನಾಪತ್ತೆ ಪ್ರಕರಣಗಳು ಏರಿಳಿತ ಕಂಡಿವೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಈ 3 ವರ್ಷದಲ್ಲಿ 2774 ಬಾಲಕಿಯರು ಹಾಗೂ 36891 ಮಹಿಳೆಯರು ನಾಪತ್ತೆ ಆದಂತಾಗಿದೆ.

ವರ್ಷ 18 ವರ್ಷ ಒಳಗಿನವರು  18 ವರ್ಷ ಮೇಲಿನವರು
2019  703  12247 
2020 834 11950
2021 1237 12964
ಒಟ್ಟು  2774   36891 

ಬೆಂಗ್ಳೂರಿಂದ ಕೇರಳಕ್ಕೆ ಹೊರಟ ಕಾರಿಂದ ₹4.5 ಕೋಟಿ ಲೂಟಿ!

ಮಧ್ಯಪ್ರದೇಶ ನಂ.1: ಇನ್ನು ಮಧ್ಯಪ್ರದೇಶ ಮೊದಲ ಸ್ಥಾನ ಗಳಿಸಿದ್ದು, ಅಲ್ಲಿ 1,98,414 ಬಾಲಕಿಯರು ಹಾಗೂ ಮಹಿಳೆಯರು ನಾಪತ್ತೆ ಆಗಿದ್ದಾರೆ. ನಂತರದ ಸ್ಥಾನಗಳಲ್ಲಿ ರುವ ಪಶ್ಚಿಮ ಬಂಗಾಳದಲ್ಲಿ 1,93,511, ಮಹಾರಾಷ್ಟ್ರ ದಲ್ಲಿ 1,91,433, ಒಡಿಶಾದಲ್ಲಿ 86,871 ಮತ್ತು ಛತ್ತೀಸ್ ಗಢದಲ್ಲಿ 59,933 ಮಹಿಳೆಯರು ಕಾಣೆಯಾಗಿದ್ದಾರೆ. ಇನ್ನು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು, 83,973, ಜಮ್ಮು- ಕಾಶ್ಮೀರದಲ್ಲಿ 9,765 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.

ಎಲ್ಲಿ ಹೋದರು?

  • 2019ರಿಂದ 2021ರ ನಡುವೆ ದೇಶಾದ್ಯಂತ 13.13 ಲಕ್ಷಕ್ಕೂ ಹೆಚ್ಚು ಮಹಿಳೆಯರ ಕಣ್ಮರೆ
  • ಈ ಪೈಕಿ 18 ವರ್ಷ ಮೇಲ್ಪಟ್ಟ ವರು 10.61 ಲಕ್ಷ, 18ರೊಳಗಿ ನವರು 2.5 ಲಕ್ಷ ಮಂದಿ
  • 1.98 ಲಕ್ಷ ಮಹಿಳೆಯರ ನಾಪತ್ತೆಯೊಂದಿಗೆ ಮಧ್ಯ ಪ್ರದೇಶ ದೇಶದಲ್ಲೇ ಮೊದಲ ಸ್ಥಾನ
  • 1.93 ಲಕ್ಷ ಸ್ತ್ರೀಯರು, ಬಾಲಕಿಯರ ಕಣ್ಣರೆಯೊಂದಿಗೆ ಪಶ್ಚಿಮ ಬಂಗಾಳಕ್ಕೆ 2ನೇ ಸ್ಥಾನ
  • ರಾಷ್ಟ್ರೀಯ ಅಪರಾಧ ದಳದ ದಾಖಲೆ ಆಧರಿಸಿ ಸಂಸತ್ತಿಗೆ ಗೃಹ ಸಚಿವಾಲಯ ಮಾಹಿತಿ

ಲೈಂಗಿಕ ಅಪರಾಧಗಳ ವಿರುದ್ಧ ಪರಿಣಾಮಕಾರಿ ತಡೆಗಟ್ಟುವಿಕೆಗಾಗಿ ಕ್ರಿಮಿನಲ್ ಕಾನೂನು (ತಿದ್ದುಪಡಿ), ಕಾಯಿದೆ, 2013 ರ ಜಾರಿಗೊಳಿಸುವಿಕೆಯನ್ನು ಒಳಗೊಂಡಂತೆ ದೇಶಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸರ್ಕಾರವು ಸಂಸತ್ತಿಗೆ ತಿಳಿಸಿದೆ. 

click me!