
ಬೆಂಗಳೂರು (ನ.16): ಬಿಗ್ ಬಾಸ್ ಖ್ಯಾತಿಯ ನಟ ಒಳ್ಳೆ ಹುಡುಗ ಪ್ರಥಮ್ ಅವರ ಮೇಲೆ ನಟ ದರ್ಶನ್ ಅಭಿಮಾನಿಗಳು ಹೋಟೆಲ್‌ನಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ನಟ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಇದೀಗ ಪೊಲೀಸರಿಗೆ ನಟ ದರ್ಶನ್ ಅವರ 60 ಅಭಿಮಾನಿಗಳ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಪಶ್ಚಿಮ ಸೆನ್ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ದೂರು ದಾಖಲಿಸಿದ್ದಾರೆ. ಇನ್ನು ನಟ ಪ್ರಥಮ್ ದೂರಿನ ಅನ್ವಯ ಪೊಲೀಸರು ದರ್ಶನ್ ಅಭಿಮಾನಿಗಳ ವಿರುದ್ಧ ಎಫ್.ಐ.ಆರ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಥಮ್, ಇದು 2ನೇ ಸಲ ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮೊದಲ ಸಲ ಹಲ್ಲೆ ಯತ್ನ ನಡೆದಿತ್ತು. ಆಗ ನಾನೇ ಬೇಡ ಅಂತ ದೂರು ನೀಡಿರಲಿಲ್ಲ. ಆದರೆ, ನಿನ್ನೆ ಪ್ರತಿಷ್ಠಿತ ಹೋಟೆಲ್ ನಲ್ಲಿ ಊಟಕ್ಕೆ ಹೋಗಿದ್ದಾಗ ದರ್ಶನ್ ಅಭಿಮಾನಿಗಳೇ ಬಂದು ಬಂದು ಕಿರುಚಾಡಿ ಗಲಾಟೆ ಮಾಡಿ, ಹಲ್ಲೆಗೆ ಮುಂದಾಗಿದ್ದರು.
ಈ ಘಟನೆಯ ನಂತರ ನಾನು ಸಾಮಾಜಿಜ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದೆನು. ನನ್ನ ಫೋಸ್ಟ್ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆ ಬೆಂಗಳೂರು ವೆಸ್ಟ್ ಡಿಸಿಪಿ ಕರೆ ಮಾಡಿದ್ದಾರೆ. ಹೀಗಾಗಿ, ನಾನು ಡಿಸಿಪಿ ಬಳಿ ಮಾತನಾಡಿ ಈಗ ದೂರು ನೀಡಿದ್ದೇನೆ. ನನ್ನ ಪ್ರಕಾರ ಸುಮಾರು 50-6೦ ದರ್ಶನ್ ಅಭಿಮಾನಿಗಳು ಒಳಗೆ ಹೋಗುತ್ತಾರೆ. ಮೊದಲ ಸಲದ ಹಲ್ಲೆಯ ವಿಡಿಯೋ ಪೊಲೀಸರಿಗೆ ಕೊಟ್ಟೀದ್ದೀನಿ. ಅವತ್ತು ದೂರು ನೀಡುವುದು ಬೇಡ ಅಂತ ಸುಮ್ಮನಾದೆ. ಅವತ್ತೆ ಕಂಪ್ಲೇಟ್ ಕೊಟ್ಟಿದ್ದರೆ ದೊಡ್ಡ ಇಷ್ಯೂ ಆಗಿರೋದು ಎಂದು ಹೇಳಿದರು.
ಇದನ್ನೂ ಓದಿ: ಮತ್ತೆ ಪ್ರಥಮ್ ಜೊತೆ ದರ್ಶನ್ ಫ್ಯಾನ್ಸ್ ಕಿರಿಕ್;ಮುಚ್ಕೊಂಡು ಇರೋಕೆ ಏನೋ ರೋಗ ನಿಮ್ಗೆ ಎಂದು ವಾರ್ನಿಂಗ್ ಕೊಟ್ಟ ನಟ!
ಇನ್ನು ನನಗೆ ಯಾರಾರು ಹಲ್ಲೆ ಮಾಡಲು ಮುದಾಗಿದ್ದರು ಎಂಬ ಹೆಸರನ್ನು ಈಗ ಹೇಳಬಹುದು. ಆದರೆ, ಈಗ ಅವರ ಹೆಸರನ್ನು ಹೇಳಿದರೆ ಅವರೆಲ್ಲಾ ಅಲರ್ಟ್ ಆಗಿಬಿಡುತ್ತಾರೆ. ಮತ್ತೊಂದೆಡೆ ನನಗ ದರ್ಶನ್ ಅಭಿಮಾನಿಗಳಿಂದ ಪ್ರತಿದಿನ ಮೆಸೇಜ್‌ಗಳು ಬರುವುದು, ಬರ್ತಾ ಬರ್ತಾ ಜಾಸ್ತಿ ಆಗುತ್ತಿದೆ. ಹಾಗಾಗಿ, ಸೈಬರ್ ಕ್ರೈಂ ಅಲ್ಲಿ ಬಂದು ದೂರು ದಾಖಲಿಸಿದ್ದೇನೆ ಎಂದು ನಟ ಪ್ರಥಮ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ