ಅಲ್ಪಸಂಖ್ಯಾತರ ಐಟಿಐ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಹೊಸ ನೀತಿ

By Kannadaprabha NewsFirst Published Jan 22, 2023, 12:42 PM IST
Highlights

ರಾಜ್ಯದಲ್ಲಿ ಇನ್ನು ಮುಂದೆ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಸಂಘಗಳು ಹೊಸದಾಗಿ ‘ಕೈಗಾರಿಕಾ ತರಬೇತಿ ಸಂಸ್ಥೆ’ (ಐಟಿಐ) ಆರಂಭಿಸಬೇಕಾದರೆ ಕಡ್ಡಾಯವಾಗಿ ಒಟ್ಟು ಪ್ರವೇಶಾತಿಯಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತರ ಮಕ್ಕಳು ಇರಬೇಕು. 

ಬೆಂಗಳೂರು (ಜ.22): ರಾಜ್ಯದಲ್ಲಿ ಇನ್ನು ಮುಂದೆ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಸಂಘಗಳು ಹೊಸದಾಗಿ ‘ಕೈಗಾರಿಕಾ ತರಬೇತಿ ಸಂಸ್ಥೆ’ (ಐಟಿಐ) ಆರಂಭಿಸಬೇಕಾದರೆ ಕಡ್ಡಾಯವಾಗಿ ಒಟ್ಟು ಪ್ರವೇಶಾತಿಯಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತರ ಮಕ್ಕಳು ಇರಬೇಕು. ಈ ಪೈಕಿ ಶೇ.75ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರಾಗಿರಬೇಕು ಎಂಬುದು ಸೇರಿದಂತೆ ಹೊಸ ಅಂಶಗಳನ್ನು ಒಳಗೊಂಡ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಇಲಾಖೆ ‘ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆ (ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನೀಡುವ ಷರತ್ತು) (ತಾಂತ್ರಿಕ ಶಿಕ್ಷಣ)-2022’ ಕರಡು ನಿಯಮ ಪ್ರಕಟಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ರಾಜ್ಯ ಸರ್ಕಾರದ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಇಲಾಖೆಯು, ನವದೆಹಲಿಯ ತರಬೇತಿ ಮಹಾ ನಿರ್ದೇಶನಾಲಯದ ಮಾನ್ಯತೆ ಪಡೆದ ಕೋರ್ಸ್‌ಗಳ ತರಬೇತಿ ನೀಡುತ್ತಿರಬೇಕು. ಇಂತಹವುಗಳನ್ನು ಧಾರ್ಮಿಕ/ ಭಾಷಾ ಅಲ್ಪಸಂಖ್ಯಾತರ ಐಟಿಐ ಸಂಸ್ಥೆಗಳೆಂದು ಘೋಷಣೆ ಮಾಡಲಿದ್ದಾರೆ.

ಮನೆ ಬಾಗಿಲಿಗೆ ಮಾಸಾಶನ ಸ್ಥಗಿತದಿಂದ ಜನರ ಪರದಾಟ: ಅಂಗವಿಕಲರು, ವೃದ್ಧರಿಗೆ ಹೆಚ್ಚು ತೊಂದರೆ

ಮಾನ್ಯತೆಗೆ ಅರ್ಹತೆಗಳು: ಈಗಾಗಲೇ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಮಾನ್ಯತೆ ಪಡೆದಿರುವ ಐಟಿಐಗಳು ಹೊಸದಾಗಿ ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಆಡಳಿತ ಸಮಿತಿ ಬದಲಾದಲ್ಲಿ ಹಾಗೂ ಕಲಿಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿವರವನ್ನು ಸೂಕ್ತ ಪ್ರಮಾಣ ಪತ್ರದೊಂದಿಗೆ ಕಾಲ ಕಾಲಕ್ಕೆ ಸಲ್ಲಿಸಬೇಕಾಗುತ್ತದೆ.

ಹೊಸ ಆಡಳಿತ ಮಂಡಳಿ ಸದಸ್ಯರು, ಟ್ರಸ್ಟಿಗಳು ಇಂತಹ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರೆಂಬುದನ್ನು ತಿಳಿಸಲು ತಹಶೀಲ್ದಾರ್‌ ನೀಡಿರುವ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಐಟಿಐ ಸಂಸ್ಥೆಯ ಆಡಳಿತ ಸಮಿತಿಯ ಟ್ರಸ್ಟಿಅಥವಾ ಸದಸ್ಯರ ಪೈಕಿ ಮೂರನೇ ಎರಡಷ್ಟುಜನರು ಅಲ್ಪಸಂಖ್ಯಾತರಾಗಿರಬೇಕು. ನೋಂದಣಿಯಾದ ಮಕ್ಕಳಲ್ಲಿ ಕನಿಷ್ಠ ಶೇ. 50 ರಷ್ಟುಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಈ ಪೈಕಿ ಶೇ. 75ರಷ್ಟುಮಕ್ಕಳು ಕರ್ನಾಟಕದವರಾಗಿರಬೇಕು. ಒಟ್ಟು ಸೀಟುಗಳಲ್ಲಿ ಶೇ. 40ರಷ್ಟನ್ನು ಸರ್ಕಾರಕ್ಕೆ ನೀಡಬೇಕು.

ಅಲ್ಪಸಂಖ್ಯಾತ ಮಾನ್ಯತೆ ವಾಪಸ್‌: ‘ಅಲ್ಪಸಂಖ್ಯಾತ’ ಎಂದು ಸಕ್ಷಮ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರೆ, ಮಕ್ಕಳ ಪ್ರವೇಶಾತಿ ಸಂಬಂಧ ನೀಡಿರುವ ನಿಯಮ ಉಲ್ಲಂಘಿಸಿದ್ದಲ್ಲಿ ಅಂತಹ ಸಂಸ್ಥೆಗೆ ನೀಡಿದ್ದ ಮಾನ್ಯತೆಯನ್ನು ಸರ್ಕಾರ ಹಿಂಪಡೆಯಲಿದೆ.

ಮೇಲ್ಮವಿಗೆ ಅವಕಾಶ: ಒಂದು ವೇಳೆ ಸಕ್ಷಮ ಪ್ರಾಧಿಕಾರ ಅಲ್ಪಸಂಖ್ಯಾತ ಎಂದು ಮಾನ್ಯತೆ ನೀಡಲು ನಿರಾಕರಿಸಿದರೆ, ವಾಪಸ್‌ ಪಡೆದುಕೊಂಡರೆ ಅಥವಾ ನಿಯಮದ ಪ್ರಕಾರ ಯಾವುದೇ ಆದೇಶ ಹೊರಡಿಸಿದರೆ, ಅದನ್ನು ಪ್ರಶ್ನಿಸಿ ರಾಷ್ಟ್ರೀಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

Ballari Festival: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು

ಐದು ವರ್ಷಕ್ಕೊಮ್ಮೆ ನವೀಕರಣ: ಐಟಿಐಗಳಿಗೆ ಅಲ್ಪಸಂಖ್ಯಾತ ಎಂದು ಮಾನ್ಯತೆ ನೀಡುವ ಪ್ರಮಾಣ ಪತ್ರದ ಅವಧಿ ಐದು ವರ್ಷದ್ದಾಗಿರುತ್ತದೆ. ಆಡಳಿತ ಮಂಡಳಿ ಬದಲಾದರೆ ಅಥವಾ ಬೇರೆ ಕಡೆ ಸ್ಥಳಾಂತರವಾದರೆ 10 ಸಾವಿರ ರು. ಪಾವತಿಸಿ ನವೀಕರಣ ಮಾಡಲು ಕರಡು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

click me!