ಕಲ್ಲಡ್ಕ ಹತ್ಯೆ ಸಂಚು: ಕೇರಳ ಯುವಕನ ಬಂಧನ

By Web DeskFirst Published Jan 15, 2019, 8:41 AM IST
Highlights

 ಆರೆಸ್ಸೆಸ್‌ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪ| ಇನ್ನಷ್ಟುಆರೋಪಿಗಳ ಪತ್ತೆಗೆ ದೆಹಲಿ ಪೊಲೀಸರ ಜಾಲ| ತನಿಖೆ ಇನ್ನಷ್ಟು ಚುರುಕು

ಮಂಗಳೂರು[ಜ. 15]: ಆರೆಸ್ಸೆಸ್‌ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಸೇರಿದಂತೆ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ನೆರೆಯ ಕಾಸರಗೋಡು ನಿವಾಸಿ ಮುಹತಸಿಂ ಅಲಿಯಾಸ್‌ ತಾಸಿಂ(41) ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೆಸ್ಸೆಸ್‌ ನಾಯಕರ ಹತ್ಯೆ ಸಂಚಿನ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದ ಹಿನ್ನೆಲೆಯಲ್ಲಿ ಪ್ರಭಾಕರ ಭಟ್‌ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಇದರ ಬೆನ್ನಲ್ಲೇ ಹತ್ಯೆ ಸಂಚಿನ ಜಾಲದ ವ್ಯಕ್ತಿ ಸೆರೆ ಸಿಕ್ಕಿದ್ದು, ಈ ಜಾಲದ ಇನ್ನಷ್ಟುಸದಸ್ಯರನ್ನು ಬಂಧಿಸುವ ನಿಟ್ಟಿನಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಲ್ಲಲಾಗುತ್ತಿದೆ.

ಕಲ್ಲಡ್ಕ ಪ್ರಭಾಕರ ಭಟ್‌ಗೆ ಬಿಗಿ ಭದ್ರತೆ.. ಇರುವ ಸ್ಥಳವೇ ಗೊತ್ತಿಲ್ಲ!

ಉಗ್ರರೊಂದಿಗೆ ನಂಟು?:

ಬಂಧಿತ ಆರೋಪಿಯು ಉಗ್ರರೊಂದಿಗೆ ನಂಟು ಇಟ್ಟುಕೊಂಡಿರುವ ಶಂಕೆಯಿದ್ದು, ಆತನನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದ್ದು ಈ ಕುರಿತು ಮಾಹಿತಿ ನೀಡಲು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ದೆಹಲಿ ಪೊಲೀಸರ ಸೂಚನೆಯಂತೆ ಮುಹತಸಿಂನನ್ನು ನಾಲ್ಕು ದಿನಗಳ ಹಿಂದೆಯೇ ಚಟ್ಟಂಚಾಲ್‌ನಲ್ಲಿ ಆತನ ಪತ್ನಿಯ ಮನೆಯಿಂದ ವಿದ್ಯಾನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ದೆಹಲಿ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದಿದ್ದರು. ಗುಪ್ತಚರ ವಿಭಾಗದ ಅಧಿಕಾರಿಗಳೂ ತನಿಖೆ ನಡೆಸಿದ್ದರು ಎನ್ನಲಾಗಿದೆ.

ಸಂಘ ಪರಿವಾರ ನಾಯಕರ ಹತ್ಯೆಗೆ ಸಂಚು: ಪೊಲೀಸ್ ಇಲಾಖೆ ಬಹಿರಂಗ..!

ಯಾರೀತ ಮುಹತಸಿಂ?:

ಕಾಸರಗೋಡು ನಿವಾಸಿಯಾರುವ ಈತ ಸಣ್ಣ ಪ್ರಾಯದಲ್ಲೇ ಮುಂಬೈಗೆ ತೆರಳಿ ಕೆಲಸ ಮಾಡಿಕೊಂಡಿದ್ದ. ತಾನಿದ್ದ ಪರಿಸರದಲ್ಲಿ ಡಾನ್‌ ಎಂದೇ ತನ್ನನ್ನು ಗುರುತಿಸಿಕೊಳ್ಳುತ್ತಿದ್ದ. ಕಾಸರಗೋಡಿಗೆ ಆಗಾಗ ಬರುತ್ತಿದ್ದ. ಪದೇಪದೆ ಗಲ್ಫ್‌ಗೂ ಹೋಗುತ್ತಿದ್ದ. ಇದಕ್ಕಾಗಿ ನಕಲಿ ಪಾಸ್‌ಪೋರ್ಟ್‌ಗಳನ್ನೂ ಸಿದ್ಧಪಡಿಸಿಕೊಂಡಿದ್ದ. ಬೇನಾಮಿ ವ್ಯವಹಾರಗಳ ಮೂಲಕ ಅಪಾರ ಆಸ್ತಿಯನ್ನೂ ಸಂಪಾದಿಸಿದ್ದ ಎಂದು ತಿಳಿದುಬಂದಿದೆ.

‘ಚುನಾವಣಾ ಸಮಯದಲ್ಲಿ ಜನಿವಾರ ಹಾಕ್ಕೊಂಡ್ರೆ ಪ್ರಯೋಜನವಿಲ್ಲ’

ಕ್ರಿಮಿನಲ್‌ ಹಿನ್ನೆಲೆ:

ಮುಹತಸಿಂ ವಿರುದ್ಧ ಬೇಕಲ ಪೊಲೀಸ್‌ ಠಾಣೆಯಲ್ಲಿ 2 ನಕಲಿ ಪಾಸ್‌ಪೋರ್ಟ್‌ ಪ್ರಕರಣ, ಮನೆಗೆ ನುಗ್ಗಿ ಹಲ್ಲೆ ಮತ್ತು ಬೇಕಲ ಎಸ್‌ಐ ಆಗಿದ್ದ ವಿಪಿನ್‌ ಅವರಿಗೆ ಜೀವಬೆದರಿಕೆ ಒಡ್ಡಿರುವ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

click me!