ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಯಲ್ಲಿ ಭರ್ಜರಿ ಸಮಾವೇಶ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಏ.28): ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಯಲ್ಲಿ ಭರ್ಜರಿ ಸಮಾವೇಶ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹೇಳೊದೆ ಸುಳ್ಳು. ಕೊರೋನಾ ವೇಳೆಯಲ್ಲಿ ಲಸಿಕೆ ಕಂಡುಹಿಡಿದರೆ ಇದು ಬಿಜೆಪಿ ವ್ಯಾಕ್ಸಿನ್ ಎಂದರು. ಕಾಂಗ್ರೆಸ್ ಭಾರತದ ಪ್ರಜಾಪ್ರಭುತ್ವ ಸಂವಿಧಾನ ಬದಲಾವಣೆಗೆ ಪ್ರಯತ್ನ ಮಾಡಿತು. ಆದರೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತು. ಲೋಕತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡಿದೆ. ಬಿಜೆಪಿ ಸರ್ಕಾರ ದೇಶದಲ್ಲಿ ಜನರಿಗೆ ನ್ಯಾಯ ಸಿಗುವಂತಹ ವಾತಾವರಣ ಸೃಷ್ಟಿ ಮಾಡಿದೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಎಲ್ಲಾ ರಾಜ್ಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
undefined
ಗ್ಯಾರಂಟಿ ಯೋಜನೆಯಿಂದ ಮದ್ಯದ ದರ ಹೆಚ್ಚಳ: ಅಲ್ಕೋಡ್ ಹನಮಂತಪ್ಪ
ಬೆಳಗಾವಿಯಲ್ಲಿ ಆದಿ ವಾಸಿ ಮಹಿಳೆ ಮೇಲೆ ಹಲ್ಲೆ, ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗು ಕಾಲೇಜು ಹೋದಾಗ ಆದ ಘಟನೆ, ಕಾಂಗ್ರೆಸ್ ತುಷ್ಟಿಕರಣದ ಕಾರಣ ನೇಹಾ ಜೀವ ಹೋಯಿತು. ಚಿಕ್ಕೊಡಿಯಲ್ಲಿ ಜೈನ ಮುನಿ ಹತ್ಯೆ ಆಯ್ತು. ಇದೆಲ್ಲ ಕಾಂಗ್ರೆಸ್ ತುಷ್ಟಿಕರಣ ಕಾರಣ ಎಂದು ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ.
ಶಿವಾಜಿ ಮಹಾರಾಜ್ ಶಕ್ತಿಶಾಲಿ ಭಾರತ ಮಾಡಲು ಜೀವನ ಪೂರ್ತಿ ಸಂಘರ್ಷ ಮಾಡಿದ್ರು. ಬಸವಣ್ಣ ಅನುಭವ ಮಂಟಪ ನಿರ್ಮಿಸಿದರು. ಭಾರತ ಇಂದು ಶಕ್ತಿ ಶಾಲಿ ಆಗಿದೆ. ನಿಮಗೆ ಹೆಮ್ಮೆ ಇದೆ ಅಲ್ವಾ ಇಂದು 50 ಕೋಟಿ ಕುಟುಂಬ ಬಡತನದಿಂದ ಹೊರ ಬಂದಿದೆ. ಹೀಗಾಗಿ ಭಾರತದ ಜನ ಮತ್ತೊಮ್ಮೆ ಮೋದಿ ಎಂದು ಹೇಳುತ್ತಿದ್ದಾರೆ.
PFI ದೇಶದಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ ಆಗಿತ್ತು. ಮೋದಿ ಸರ್ಕಾರ PFI ಬ್ಯಾನ್ ಮಾಡಿದೆ. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ವೋಟ್ ಬ್ಯಾಂಕ್ ದೃಷ್ಟಿಯಲ್ಲಿರಿಸಿಕೊಂಡೆ ಕೆಲಸ ಮಾಡಿದೆ. ಕಿತ್ತೂರ್ ರಾಣಿ ಚೆನ್ನಮ್ಮ, ಶಿವಾಜಿ ಮಹಾರಾಜ ನಮಗೆ ಪ್ರೇರಣೆ. ಮೈಸೂರು ರಾಜ ಮನೆತನವನ್ನು ಇಂದು ಎಲ್ಲರೂ ಗೌರವದಿಂದ ನೋಡ್ತಾರೆ. ಆದರೆ ನಮ್ಮ ಮಂದಿರವನ್ನು ಅಪವಿತ್ರ ಮಾಡಿದ ರಾಜರನ್ನು ನಿಜಾಮರನ್ನು ಸುಲ್ತಾನ್ ರನ್ನು ಔರಂಗಜೇಬನನ್ನು ಕಾಂಗ್ರೆಸ್ ಗುಣಗಾನ ಮಾಡುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಕಮಲ ಪಾಳಯಕ್ಕೆ ಬಿಗ್ ಶಾಕ್: ಬಿಜೆಪಿ ತೊರೆದು ಕಾಂಗ್ರೆಸ್‌ನತ್ತ ವಲಸೆ ಹೆಚ್ಚಳ..!
ಕಾಂಗ್ರೆಸ್ ಬಂದಾಗೆಲ್ಲಾ ಹಾಳಾಗುತ್ತದೆ. ವಿದ್ಯುತ್ ಕಟ್, ಅಭಿವೃದ್ಧಿ ಇಲ್ಲ, ಹೀಗಾಗಿಯೇ ಜನ ಹೇಳುತ್ತಾರೆ. ಕಾಂಗ್ರೆಸ್ ಬಂದರೆ ಹಾಳಾಗುತ್ತದೆ. ಕಾಂಗ್ರೆಸ್ ವಿಶ್ವಾಸಘಾತ ಮಾಡಿದೆ. ರೈತರ ಖಾತೆಗೆ ಹತ್ತು ಸಾವಿರ ಜಮೆ ಆಗ್ತಾ ಇತ್ತು. ಕಾಂಗ್ರೆಸ್ ಬಂದ ಮೇಲೆ ಎಲ್ಲಾ ಬಂದ್ ಮಾಡಿದೆ. ಕಾಂಗ್ರೆಸ್ ಗೆ ಪಾಠ ಕಲಿಸಿ. ನಾನು ಮೋದಿ ನಿಮಗೆ ಗ್ಯಾರಂಟಿ ನೀಡುತ್ತೇನೆ.
ಕಾಂಗ್ರೆಸ್ ಹೇಳಿದೆ ಅಧಿಕಾರಕ್ಕೆ ಬಂದ್ರೆ ಎಕ್ಸರೇ ಮಾಡುತ್ತೇವೆಂದು. ನಿಮ್ಮ ಮನೆಯಲ್ಲಿ ಇರುವ ಚಿನ್ನ, ಮಂಗಳ ಸೂತ್ರ, ನಿಮ್ಮ ಸಂಪತ್ತು, ಎಲ್ಲವನ್ನೂ ದೋಚುತ್ತದೆ. ಅದನ್ನು ಹಂಚಿಕೆ ಮಾಡುತ್ತದೆ. ನಿಮ್ಮ ಸಂಪತ್ತು ಲೂಟಿ ಆಗಬೇಕಾ? ನಿಮ್ಮ ಮಂಗಳ ಸೂತ್ರ ಇನ್ನೊಬ್ಬರ ಕೈಗೆ ಇಡ್ತೀರಾ? ನಿಮ್ಮ ಚಿನ್ನವನ್ನು ಕೊಡ್ತೀರಾ? ನಾನು ನಿಮಗೆ ಭರವಸೆ ನೀಡುತ್ತೇನೆ. ಮೋದಿ ಇರುವ ತನಕ ಇದು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂತೆಂದರೆ ನೀವು ನಿಮ್ಮ ಮಕ್ಕಳಿಗೆ ಕಷ್ಟ ಪಟ್ಟು ಕೂಡಿ ಇಟ್ಟದನ್ನು ಲೂಟಿ ಮಾಡುತ್ತದೆ. ಅದನ್ನು ನಿಮ್ಮ ಮಕ್ಕಳಿಗೆ ನೀಡೋದಿಲ್ಲ. 55% ಅದಕ್ಕೆ ಟ್ಯಾಕ್ಸ್ ಮೂಲಕ ಸರ್ಕಾರ ಪಡೆಯುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ನಿಮ್ಮ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಏನ್ ಬೇಕಾದರೂ ಮಾಡುತ್ತದೆ ಕಾಂಗ್ರೆಸ್ ಗೆ ಪಾಠ ಕಲಿಸಬೇಕೊ? ಬೇಡವೊ? ನಿಮ್ಮ ಕನಸು ನನ್ನ ಸಂಕಲ್ಪ. ನಾನು ಪ್ರತಿ ಕ್ಷಣ ಭಾರತಕ್ಕಾಗಿ ಮಿಡಿಯುವೆ. 24/7 ದುಡಿಯುವೆ. 24/7 - 2047 ಗಾಗಿ ಎಂದು ಮೋದಿ ಹೇಳಿದ್ದಾರೆ.