ಹಾಲು, ಮೊಸಲು ಸೇರಿದಂತೆ ಕ್ಷೀರೋತ್ಪನ್ನಗಳ ದರ ಏರಿಕೆಯ ಭರ್ಜರಿ ಆಘಾತದ ಬೆನ್ನಲ್ಲೇ ರಾಜ್ಯದ ಜನರಿಗೀಗ ಬಸ್ ದರ ಏರಿಕೆಯ ಶಾಕ್ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ತಿಂಗಳ 5ರಿಂದ ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ ಗಳ ಪ್ರಯಾಣ ದರ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ 5 ಬಾರಿ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಇದರಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ವಾರ್ಷಿಕ 2 ಸಾವಿರ ಕೋಟಿ ರುಪಾಯಿ ನಷ್ಟ ಆಗುತ್ತಿದೆ. ಈಗಾಗಲೇ ಸಂಸ್ಥೆಗಳು 9 ಸಾವಿರ ಕೋಟಿ ರುಪಾಯಿ ನಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಆಗಿದೆ ಎಂದರು.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ದರ ಏರಿಕೆ ನಿರ್ಧಾರವನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮತ್ತು ಸಾರಿಗೆ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.
ನ.4 ರಂದು ನಿರ್ಧಾರ:
ನ. 4ರಂದು ಸಾರಿಗೆ ಇಲಾಖೆ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪರಿಷ್ಕೃತ ಪ್ರಯಾಣ ದರ ನ.5ರಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
10:24 PM (IST) Nov 02
ಕರ್ನಾಟಕ ಸರ್ಕಾರ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಮಲೆನಾಡಿನ ಮರಗಂತಿ ಕಪ್ಪೆಯನ್ನು ರಾಜ್ಯದ ಅಧಿಕೃತ ಉಭಯಜೀವಿಯಾಗಿ ಘೋಷಿಸಿದೆ. ‘ಪೆಟು’ ಎಂದೇ ಕರೆಯಲ್ಪಡುವ ಈ ಕಪ್ಪೆಯ ವೈಜ್ಞಾನಿಕ ಹೆಸರು Pedostibes tuberculosus.
10:02 PM (IST) Nov 02
ಭಾರತದಲ್ಲಿ ಯುಪಿಐ ವಹಿವಾಟುಗಳು ಹೊಸ ದಾಖಲೆ ಬರೆಯುತ್ತಿವೆ. ಆದರೆ ಡಿಜಿಟಲ್ ಪಾವತಿಯ ಸುಲಭತೆಯಿಂದ ಸಣ್ಣಪುಟ್ಟ ಖರ್ಚುಗಳು ಹೆಚ್ಚಾಗುತ್ತಿವೆಯೇ? ಪ್ರತ್ಯೇಕ ಬ್ಯಾಂಕ್ ಖಾತೆ, ಯುಪಿಐ ಲೈಟ್, ಖರ್ಚಿನ ಮಿತಿ ಹಾಗೂ..
08:28 PM (IST) Nov 02
ವಾರಾಂತ್ಯದ ರಜೆ ಕಳೆಯಲು ಗೋಕರ್ಣಕ್ಕೆ ತೆರಳಿದ್ದ ಬೆಂಗಳೂರಿನ ಐಟಿ ಕಂಪನಿಯ ಸಿಬ್ಬಂದಿ ಸಮುದ್ರದ ಬೃಹತ್ ಅಲೆಗಳಿಗೆ ಸಿಲುಕಿದ್ದಾರೆ. ಈ ದುರಂತದಲ್ಲಿ ಮೂವರು ಉದ್ಯೋಗಿಗಳು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
08:27 PM (IST) Nov 02
‘ಆನಂದ ನಿಲಯ’ ಧಾರಾವಾಹಿಯ ಭುವನ್ ಪಾತ್ರದ ನಟ ಕೌಶಿಕ್ ಅವರಿಗೆ ನವರಸ ನಾಯಕ ಜಗ್ಗೇಶ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ, ಜಗ್ಗೇಶ್ ಅವರ..
07:56 PM (IST) Nov 02
ರಾಜ್ಯದಲ್ಲಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಸಜ್ಜಾಗಿದೆ. ಕಳೆದ 11 ವರ್ಷಗಳಿಂದ ದರ ಏರಿಸಿಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಸಮರ್ಥಿಸಿಕೊಂಡಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
07:26 PM (IST) Nov 02
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಮತ್ತು ಬಸ್ ದರ ಏರಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 25 ಲಕ್ಷ ಹೈನುಗಾರರ ಹಿತರಕ್ಷಣೆ ಹಾಗೂ ಸಾರಿಗೆ ಸಂಸ್ಥೆಗಳ ಉಳಿವಿಗಾಗಿ ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
07:23 PM (IST) Nov 02
07:03 PM (IST) Nov 02
ಜನಪ್ರಿಯ ಗಾಯಕಿ ರಿಮಿ ಟಾಮಿ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿದ ಆರು ವರ್ಷಗಳ ಬಳಿಕ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮುಂಬೈ ಮೂಲದ ಬಾಡಿ ಬಿಲ್ಡರ್ ಲಿಬಿನ್ ಮ್ಯಾಥ್ಯೂ ಜೊತೆ ಇದೇ ತಿಂಗಳು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
06:51 PM (IST) Nov 02
ಚಿತ್ರದುರ್ಗದ ಬರಪೀಡಿತ ಹಿರಿಯೂರು ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸಲು ₹244 ಕೋಟಿ ವೆಚ್ಚದ ಬೃಹತ್ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದೆ. ಈ ಯೋಜನೆಯಡಿ ವೇದಾವತಿ ನದಿಯಿಂದ ನೀರೆತ್ತಿ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯವನ್ನು ತುಂಬಿಸಲಾಗುತ್ತದೆ.
06:48 PM (IST) Nov 02
06:36 PM (IST) Nov 02
06:18 PM (IST) Nov 02
Jailer 2 song Bollywood actress Nora Fatehi warned by a Delhi court not to mislead the court. ‘ಜೈಲರ್ 2’ ಚಿತ್ರದ ಹಾಡಿನಮೂಲಕ ಗಮನ ಸೆಳೆದಿದ್ದ ಬಾಲಿವುಡ್ ನಟಿ ನೋರಾ ಫತೇಹಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
06:00 PM (IST) Nov 02
300 ವರ್ಷಗಳ ಹಳೆಯ ಪಾಳುಬಿದ್ದ ಮನೆಯೊಂದು ಶಾಪಗ್ರಸ್ಥವಾಗಿದ್ದು, ಇಲ್ಲಿ ಅಪಾರ ನಿಧಿ ಇದೆ ಎಂದು ನಂಬಲಾಗಿದೆ. ಇಷ್ಟು ಮಾತ್ರವಲ್ಲ ಈ ಮನೆಗೊಂದು ದೊಡ್ಡ ಶಾಪವೊಂದು ಇರೋ ಕಾರಣ, ಇಲ್ಲಿ ಯಾರೂ ವಾಸವಾಗಿಲ್ಲ. ಆರು ಕೋಣೆ ಹೊಂದಿರುವ ಮನೆ ರಹಸ್ಯ ಇಲ್ಲಿದೆ ನೋಡಿ.
05:52 PM (IST) Nov 02
05:33 PM (IST) Nov 02
05:20 PM (IST) Nov 02
ನಟ ಉಪೇಂದ್ರ ಅವರು ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಪುಣ್ಯಕೋಟಿ ಕಥೆಯಿಂದ ಸ್ಫೂರ್ತಿ ಪಡೆದ ಈ ಸಿನಿಮಾದಲ್ಲಿ ಗೌರವ್ ಆರ್ಯನ್, ಸಿಂಚನಾ ಪಿ. ರಾವ್ ನಟಿಸಿದ್ದಾರೆ.
05:04 PM (IST) Nov 02
ಕೇಂದ್ರ ಸರ್ಕಾರವು ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ಬೆಸೆಯುವ ಹೊಸ ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಇಳಿಕೆಯಾಗಲಿದೆ. ಇದರ ಜೊತೆಗೆ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೂ ಚಾಲನೆ ನೀಡಲಾಗಿದೆ.
04:48 PM (IST) Nov 02
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಕ್ರಮಾರ್ಕ' ಚಿತ್ರದ ವಿಶೇಷ ಕನ್ನಡಾಭಿಮಾನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಜಣ್ಣನ ನೆನಪು, ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್ ನಾಗ್ ಅವರ ಶೈಲಿಯಲ್ಲಿ ಭಾರ್ಗವ್ ಮಿಂಚಿರುವ ಈ ಗೀತೆ ಗಮನ ಸೆಳೆಯುತ್ತಿದೆ.
04:31 PM (IST) Nov 02
ಉಡುಪಿಯ ಮಲ್ಪೆಯಲ್ಲಿರುವ 'ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್' ನಾರ್ವೆ ದೇಶದ ಸಂಸ್ಥೆಗಾಗಿ ತನ್ನ ಇತಿಹಾಸದಲ್ಲೇ ಅತ್ಯಂತ ಬೃಹತ್ ಸರಕು ಹಡಗನ್ನು ನಿರ್ಮಿಸಿದೆ. ₹1,041 ಕೋಟಿ ಮೌಲ್ಯದ ಒಪ್ಪಂದದ ಭಾಗವಾಗಿ ನಿರ್ಮಾಣಗೊಂಡಿರುವ 99 ಮೀಟರ್ ಉದ್ದದ ಈ ಹಡಗಿಗೆ 'ವಿಲ್ಸನ್ ಎನರ್ಜಿ 1' ಎಂದು ಹೆಸರಿಡಲಾಗಿದೆ.
04:29 PM (IST) Nov 02
ವಿಜಯ ರಾಘವೇಂದ್ರ ಅಭಿನಯದ 'ಆನ್ ಡ್ಯೂಟಿ' ಚಿತ್ರದ ಶೇ.75ರಷ್ಟು ಚಿತ್ರೀಕರಣ ಪೂರ್ಣ. ಕೃಷ್ಣಸಾಯಿ ಜೊತೆ ಸೂರ್ಯ-ಚಂದ್ರನಾಗಿ ನಟಿಸುತ್ತಿರುವ ವಿಜಯ ರಾಘವೇಂದ್ರಗೆ 20 ವರ್ಷಗಳ ಬಳಿಕ ವಿನಯಾ ಪ್ರಸಾದ್ ಜೊತೆ ಅಭಿನಯಿಸುವ ಅವಕಾಶ.
03:44 PM (IST) Nov 02
03:20 PM (IST) Nov 02
ಸು ಫ್ರಮ್ ಸೋ ಖ್ಯಾತಿಯ ರವಿ ಅಣ್ಣ ಅಲಿಯಾಸ್ ಶನೀಲ್ ಗೌತಮ್ ಇದೀಗ 'ಶ್ರೀರಾಮಚಂದ್ರ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಬಿ.ಕೆ. ಗಂಗಾಧರ್ ನಿರ್ಮಾಣದ, ಚಂದ್ರಮೋಹನ್ ನಿರ್ದೇಶನದ..
03:03 PM (IST) Nov 02
ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿರುವ ನಟಿ ನಭಾ ನಟೇಶ್, ಧ್ರುವ ಸರ್ಜಾ ಜೊತೆ 'ಕೆಮಿಸ್ಟ್ರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹೊಸ ಲವ್ ಸ್ಟೋರಿ ಬಗ್ಗೆ ನಟಿ ಏನು ಹೇಳಿದ್ದಾರೆ?
02:19 PM (IST) Nov 02
ನೂರಾರು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿ ಪ್ರೇಕ್ಷಕರನ್ನು ನಗಿಸಿದ ಈ ಕಲಾವಿದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನೆನಪಿನಲ್ಲಿಡಬೇಕಾದ ಪ್ರತಿಭೆ. ಸೋಲೂರಿನ ಮಣ್ಣಿನಲ್ಲಿ ಹುಟ್ಟಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಮಾಕಂ ಅಶ್ವತ್ಥನಾರಾಯಣ ಶೆಟ್ಟಿ ಎಷ್ಟೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ ಗೊತ್ತಾ?
01:44 PM (IST) Nov 02
ಮಲೆನಾಡು ಹಾಗೂ ಮಧ್ಯ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಾಗಿರುವ 'ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ' ಸ್ಥಾಪನೆಗಾಗಿ ಆಗ್ರಹಿಸಿ ಹೋರಾಟ ತೀವ್ರಗೊಂಡಿದೆ. ಶಿಕಾರಿಪುರದಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಸರ್ವಪಕ್ಷಗಳು, ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿವೆ.
01:11 PM (IST) Nov 02
ಕನ್ನಡ ರಾಜ್ಯೋತ್ಸವದಂದು, ಇಂಡಿಯನ್ ರೇಸಿಂಗ್ ಲೀಗ್ (IRL) ಸ್ಪರ್ಧೆಯಲ್ಲಿ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದೆ. ತಂಡದ ಮಾಲಕಿ ಪ್ರಿಯಾ ಸುದೀಪ್ ಅವರು ಮಾಡಿದ ಕೆಲಸ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಏನದು ನೋಡಿ..
12:36 PM (IST) Nov 02
12:02 PM (IST) Nov 02
ಬಸ್, ರೈಲು ಅಥವಾ ಹೆಚ್ಚು ಗದ್ದಲವಿರುವ ಸ್ಥಳಗಳಲ್ಲಿ ಹೆಡ್‌ಫೋನ್ ಬಳಸುವವರು ಹೊರಗಿನ ಶಬ್ದವನ್ನು ಮೀರಿಸಲು ಧ್ವನಿಯ ಪ್ರಮಾಣವನ್ನು ಹೆಚ್ಚಿಸುತ್ತಾರೆ. ಇದೇ ಅಭ್ಯಾಸ ಕ್ರಮೇಣ ಕಿವಿಗೆ ಅಪಾಯ ತಂದೊಡ್ಡಬಹುದು. ಏನಿದು ಹೆಡ್‌ಫೋನ್ ಸಮಾಚಾರ? ನೋಡಿ..
11:56 AM (IST) Nov 02
11:53 AM (IST) Nov 02
11:01 AM (IST) Nov 02
10:22 AM (IST) Nov 02
ಹುಬ್ಬಳ್ಳಿಯ 1 ವರ್ಷ8 ತಿಂಗಳ ಪುಟಾಣಿ ಸುವಿಕ್ಷಾ ಟ್ರೆಡ್‌ಮಿಲ್‌ನಲ್ಲಿ 600 ಮೀಟರ್ ದೂರವನ್ನು ಕೇವಲ 9 ನಿಮಿಷ 27 ಸೆಕೆಂಡುಗಳಲ್ಲಿ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದಿದ್ದಾಳೆ. ತಂದೆ ವಿನಾಯಕ ಹಳಪೇಟಿ ಅವರ ಮಾರ್ಗದರ್ಶನದಲ್ಲಿ ಮೂರು ತಿಂಗಳ ಕಾಲ ಅಭ್ಯಾಸ ನಡೆಸಿ ಈ ವಿಶಿಷ್ಟ ಸಾಧನೆ ಮಾಡಿದ್ದಾಳೆ.
10:16 AM (IST) Nov 02
"ಸಿನಿಮಾ ನೋಡಿ ಯಥರ್ವ್ ಜೋರಾಗಿ ಅಳುತ್ತಿದ್ದ. 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ನಟನೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಹಾಗೆ ಮಾಡಬಾರದಿತ್ತು ಡಾಡಾ' ಎಂದು ಹೇಳುತ್ತಿದ್ದ" ಎಂದಿದ್ದಾರೆ ಸಾಯಿ ಪಲ್ಲವಿ.
09:33 AM (IST) Nov 02
08:33 AM (IST) Nov 02
ಬೆಂಗಳೂರು ಮತ್ತು ಮುಂಬೈ ನಡುವಿನ ಮತ್ತು ರಾಜ್ಯದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಭಾನುವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಇದೇ ವೇಳೆ ಬೆಂಗಳೂರು-ಮಂಗಳೂರು ನಡುವೆ ಶೀಘ್ರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ ಎಂದು ತಿಳಿಸಿದರು.