Published : Sep 18, 2025, 06:29 AM ISTUpdated : Sep 19, 2025, 12:25 AM IST

karnataka news live: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಬೆಂಗಳೂರಿನ ಯೋಗ ತರಬೇತುದಾರ ಬಂಧನ

ಸಾರಾಂಶ

ಸಚಿವ ಸಂಪುಟ ನಿರ್ಧರಿಸಿದಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯವು ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಕಲಬುರಗಿಯಲ್ಲಿ ಇದರ ಕಚೇರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕಲಬುರಗಿಯ ಪರೇಡ್‌ ಮೈದಾನದಲ್ಲಿನ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಕಲಂ 371(ಜೆ) ರಕ್ಷಣೆಯೊಂದಿಗೆ ಅಭಿವೃದ್ಧಿ ಪಥದಲ್ಲಿರುವ ಕಲ್ಯಾಣ ಕರ್ನಾಟಕದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುದರ ಜೊತೆಗೆ ಅವುಗಳ ವೇಗ ಹೆಚ್ಚಿಸುವುದರ ಮೇಲೆ ನಿಗಾ ವಹಿಸಲು ಪ್ರತ್ಯೇಕ ಸಚಿವಾಲಯ ಆರಂಭಿಸಲು ಮಂಗಳವಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ಒಂದು ವಾರದೊಳಗೆ ಸಿಬ್ಬಂದಿ ಸಹಿತ ಸಚಿವಾಲಯ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

Yoga trainer niranjana murthy

12:25 AM (IST) Sep 19

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಬೆಂಗಳೂರಿನ ಯೋಗ ತರಬೇತುದಾರ ಬಂಧನ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ರಾಜರಾಜೇಶ್ವರಿನಗರದ ಯೋಗ ತರಬೇತುದಾರ ನಿರಂಜನ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೋಗ ಸ್ಪರ್ಧೆ ಹಾಗೂ ಉದ್ಯೋಗದ ಆಮಿಷವೊಡ್ಡಿ ಥೈಲ್ಯಾಂಡ್ ಹಾಗೂ ಬೆಂಗಳೂರಿನಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

Read Full Story

12:02 AM (IST) Sep 19

ರಾಯಚೂರು ಓಪೆಕ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕ್ಯಾನ್ಸರ್ ರೋಗಿ ದಾರುಣ ಸಾವು

ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ 35 ವರ್ಷದ ಕ್ಯಾನ್ಸರ್ ರೋಗಿ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಸ್ಕ್ಯಾನಿಂಗ್‌ಗೆ ಕರೆದೊಯ್ಯುವಾಗ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದೇ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ.

Read Full Story

11:22 PM (IST) Sep 18

ವಿಜಯಪುರದ ಸಿಂದಗಿಯಲ್ಲಿ ಒಂದೇ ದಿನ ಐದು ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ!

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಒಂದೇ ದಿನ ಐದು ಬಾರಿ ಭೂಕಂಪನ ಸಂಭವಿಸಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ್ದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. 

Read Full Story

10:59 PM (IST) Sep 18

ಭಾರತದ ಮುಂದೆ ನಡುಬಗ್ಗಿಸಿದ ಅಮೆರಿಕ; ಪ್ರಧಾನಿ ಮೋದಿ ಭೇಟಿಗಾಗಿ ಕಾಯುತ್ತಿದ್ದಾರೆ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಸುಂಕ ವಿಧಿಸಿದ ನಂತರ ತಮ್ಮ ನಿಲುವನ್ನು ಬದಲಾಯಿಸಿದ್ದು, ಪ್ರಧಾನಿ ಮೋದಿ ಜೊತೆಗಿನ ತಮ್ಮ ಸ್ನೇಹವನ್ನು ಶ್ಲಾಘಿಸಿದ್ದಾರೆ. ರಷ್ಯಾದಿಂದ ಭಾರತದ ತೈಲ ಖರೀದಿಯ ಬಗ್ಗೆ ಅಸಮಾಧಾನವಿದ್ದರೂ, ಮುಂಬರುವ ದಿನಗಳಲ್ಲಿ ಮೋದಿಯವರ ಬೇಟಿಗೆ ಎದುರು ನೋಡುತ್ತಿದ್ದಾರೆ.

Read Full Story

10:30 PM (IST) Sep 18

ನೇಲ್ ಪಾಲಿಶ್ ಎಷ್ಟು ದಿನಕ್ಕೆ ತೆಗೆಯಬೇಕು? ತೆಗೆಯದಿದ್ರೆ ಏನಾಗುತ್ತೆ?

ಪ್ರತಿಯೊಬ್ಬ ಮಹಿಳೆಯೂ ನೇಲ್ ಪಾಲಿಶ್ ಹಚ್ಚಲು ಇಷ್ಟಪಡುತ್ತಾರೆ, ಆದರೆ ನಾವು ಅದನ್ನು ತೆಗೆಯಲು ಮರೆಯುತ್ತೇವೆ. ದೀರ್ಘಕಾಲ ಹಾಗೆಯೇ ಬಿಟ್ಟರೆ, ಅದು ಉಗುರುಗಳ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಹಾನಿ ಮಾಡುತ್ತದೆ. ನೇಲ್ ಪಾಲಿಶ್ ತೆಗೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

Read Full Story

10:05 PM (IST) Sep 18

ಪ್ರತಿದಿನ ಕೆಂಪು ಮಾಂಸ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ - ಹೊಸ ಸಂಶೋಧನೆ ವರದಿ ಎಚ್ಚರಿಕೆ

ಕೆಂಪು ಮಾಂಸವು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ, ಅದರ ಅತಿಯಾದ ಸೇವನೆ, ವಿಶೇಷವಾಗಿ ಸಂಸ್ಕರಿಸಿದ ಮಾಂಸವು ಆರೋಗ್ಯಕ್ಕೆ ಹಾನಿಕಾರಕ. ಇತ್ತೀಚಿನ ಸಂಶೋಧನೆಗಳು ಇದು ಹೃದಯ ಕಾಯಿಲೆ, ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿವೆ.
Read Full Story

10:04 PM (IST) Sep 18

ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್‌ ಕೈವಾಡ ಆರೋಪ, ಪ್ರಧಾನಿ ನೆತನ್ಯಾಹು ಕೆಂಡಾಮಂಡಲ

ಅಮೆರಿಕದ ಕಾರ್ಯಕರ್ತ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಇಸ್ರೇಲ್ ಪಾತ್ರವಿದೆ ಎಂಬ ಆರೋಪವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು "ದೈತ್ಯಾಕಾರದ ದೊಡ್ಡ ಸುಳ್ಳು" ಎಂದು ಹೇಳಿದ ಅವರು, ಕಿರ್ಕ್ ಇಸ್ರೇಲ್‌ನ ಸಮರ್ಪಿತ ಬೆಂಬಲಿಗ ಎಂದು ಶ್ಲಾಘಿಸಿದರು.  

Read Full Story

09:38 PM (IST) Sep 18

ಟಾಟಾ ಕಂಪೆನಿಯ ಅದೃಷ್ಟ ಬದಲಿಸಿದ ಐಫೋನ್, ಲಾಭದಲ್ಲಿ ಭಾರೀ ಏರಿಕೆ! ಚೀನಾಗೆ ಟಕ್ಕರ್

ಆಪಲ್‌ನ ಐಫೋನ್ ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಿದ ನಂತರ, ಟಾಟಾ ಎಲೆಕ್ಟ್ರಾನಿಕ್ಸ್ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ. ಈ ಬೆಳವಣಿಗೆಯಿಂದ ಕಂಪನಿಯ ಆದಾಯ ಮತ್ತು ಲಾಭದಲ್ಲಿ ಭಾರೀ ಏರಿಕೆಯಾಗಿದ್ದು,  ಸ್ಥಾವರಗಳ ಖರೀದಿಯು ಅದರ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

09:34 PM (IST) Sep 18

ಗದಗ - ಹರ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ, ಕಾರ್-ಬಸ್ ಡಿಕ್ಕಿಯಲ್ಲಿ ಮೂವರು ಸಾವು

ಗದಗ ಜಿಲ್ಲೆಯ ಹರ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಗೋವಾ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
Read Full Story

09:14 PM (IST) Sep 18

ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್, ಭಾರಿ ಮಳೆ ಮುನ್ಸೂಚನೆ

ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್, ಭಾರಿ ಮಳೆ ಮುನ್ಸೂಚನೆ, ಇಂದು ಸಂಜೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದೆ. ಇದೀಗ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಮುನ್ಸೂಚನೆ ನೀಡಿದೆ.

Read Full Story

08:37 PM (IST) Sep 18

ಕಲಬುರಗಿ - ಕನ್ನಡ ತೆಗೆದು ಉರ್ದು ನಾಮಫಲಕ ಹಾಕಿದ್ದನ್ನ ಖಂಡಿಸಿ ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಕರವೇ

ಕನ್ನಡ ಭಾಷೆಗೆ ಅವಮಾನ ಮಾಡಿರುವುದನ್ನ ಖಂಡಿಸಿ ಕರವೇ ಕಾರ್ಯಕರ್ತರು ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Read Full Story

08:05 PM (IST) Sep 18

24, 22 ಅಥವಾ 18 ಕ್ಯಾರೆಟ್ ಚಿನ್ನ - ಯಾವುದು ಖರೀದಿಗೆ ಉತ್ತಮ, ಯಾವುದು ಹೆಚ್ಚು ಕಲಬೆರಕೆ?

ಈ ಲೇಖನವು 24, 22, ಮತ್ತು 18 ಕ್ಯಾರೆಟ್ ಚಿನ್ನದ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸುತ್ತದೆ. ಚಿನ್ನದ ಶುದ್ಧತೆ, ಬಾಳಿಕೆ, ಮತ್ತು ಬಳಕೆಯ ಆಧಾರದ ಮೇಲೆ ಹೂಡಿಕೆಗೆ ಯಾವುದು ಉತ್ತಮ ಮತ್ತು ಆಭರಣಗಳಿಗೆ ಯಾವುದು ಸೂಕ್ತ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
Read Full Story

07:39 PM (IST) Sep 18

ಅ. 1 ರಿಂದ ಬೆಂಗಳೂರಿನ ಟ್ರಾಫಿಕ್ ಡಬಲ್, ಎಲ್ಲಾ ಕಂಪನಿಗಳ ಹೈಬ್ರಿಡ್, ವರ್ಕ್ ಫ್ರಮ್ ಹೋಮ್ ಅಂತ್ಯ

ಅ. 1 ರಿಂದ ಬೆಂಗಳೂರಿನ ಟ್ರಾಫಿಕ್ ಡಬಲ್, ಎಲ್ಲಾ ಕಂಪನಿಗಳ ಹೈಬ್ರಿಡ್, ವರ್ಕ್ ಫ್ರಮ್ ಹೋಮ್ ಅಂತ್ಯವಾಗುತ್ತಿದೆ. ರಸ್ತೆಯಲ್ಲೇ ಹೆಚ್ಚಿನ ಸಮಯ ಕಳೆಯಬೇಕಿದೆ. ಕಾರಣ ಬೆಂಗಳೂರಿನ ಎಲ್ಲಾ ಕಂಪನಿಗಳು ಅಕ್ಟೋಬರ್ 1 ರಿಂದ ಕಚೇರಿಯಿಂದ ಕೆಲಸ ಕಡ್ಡಾಯ ಮಾಡಿದೆ.

Read Full Story

07:28 PM (IST) Sep 18

ಬಿರಿಯಾನಿಯಲ್ಲಿ ಚಿಕನ್ ಪೀಸ್ ಸಿಗದ್ದಕ್ಕೆ ಟ್ರಾಫಿಕ್ ಹೋಂ ಗಾರ್ಡ್‌ಗಳಿಬ್ಬರು ಮಾರಮಾರಿ!

ಚಿಕನ್ ಬಿರಿಯಾನಿಯಲ್ಲಿ ಚಿಕನ್ ಸಿಗದಿದ್ದಕ್ಕೆ ಹೊಡೆದಾಟ. ಕೊಚ್ಚಿಯ ಪಲ್ಲೂರುತಿ ಟ್ರಾಫಿಕ್ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದೆ. ಬೀಳ್ಕೊಡುಗೆ ಸಮಾರಂಭದ ವೇಳೆ ಟ್ರಾಫಿಕ್ ಹೋಂ ಗಾರ್ಡ್‌ಗಳ ನಡುವೆ ಜಗಳವಾಗಿದೆ.

Read Full Story

07:04 PM (IST) Sep 18

ಕನ್ನಡ ಹೊರತಾಗಿ ಬೇರೆ ಭಾಷೆಯಲ್ಲಿ ಶ್ರುತಿ ನಟಿಸಿದ ಚಿತ್ರಗಳು - ಇಲ್ಲಿದೆ ಪಟ್ಟಿ!

films in other languages by actress Shruthi ಸ್ಯಾಂಡಲ್‌ವುಡ್ ನಟಿ ಶ್ರುತಿ ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 'ಶ್ರುತಿ' ಚಿತ್ರದಿಂದ ಖ್ಯಾತಿ ಪಡೆದ ಅವರು, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂನ ತಲಾ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.

Read Full Story

07:04 PM (IST) Sep 18

ಸೌದಿ-ಪಾಕ್ ರಕ್ಷಣಾ ಒಪ್ಪಂದದ ತೆರೆಮರೆಯ ರಹಸ್ಯವೇನು? ಭಾರತದಲ್ಲಿ ಸೌದಿ ಮಾಡಿರೋ ಹೂಡಿಕೆ ಏನಾಗಲಿದೆ?

ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ಹೊಸ ರಕ್ಷಣಾ ಒಪ್ಪಂದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದ ಇಸ್ರೇಲ್‌ಗೆ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ, ಇದೇ ವೇಳೆ ಭಾರತದಲ್ಲಿ ಸೌದಿ ಅರೇಬಿಯಾ ಬೃಹತ್ ಹೂಡಿಕೆ ಘೋಷಿಸಿರುವುದು  ಹೊಸ ಸವಾಲುಗಳನ್ನು ಒಡ್ಡಿದೆ.

Read Full Story

07:01 PM (IST) Sep 18

ಬೈಕ್ ಓವರ್‌ಟೇಕ್ ಗಲಾಟೆ - ಚಾಕು ಚುಚ್ಚಿಸಿಕೊಂಡ ಯುವಕ ನರಳುತ್ತಿದ್ದರೂ, ಗ್ಲಾಸ್ ಹಾಕಿ ಶೋಕಿ ಮಾಡಿದ ಶೇಖ್!

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೈಕ್ ಓವರ್‌ಟೇಕ್ ಮಾಡುವ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಜಗಳ ನಡೆದು, ಓರ್ವ ಯುವಕ ಮತ್ತೊಬ್ಬನಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
Read Full Story

06:44 PM (IST) Sep 18

ಕಾಂಗ್ರೆಸ್ಸೇ ನಿಜವಾದ ಮತ ಚೋರಿ - ರಾಹುಲ್‌ ಗಾಂಧಿ ಮಾಲೂರು ಬಗ್ಗೆ ಮಾತನಾಡಲಿ ಎಂದ ಪ್ರಲ್ಹಾದ ಜೋಶಿ

ʼವೋಟ್‌ ಚೋರಿʼ ಎಂದು ಆರೋಪಿಸುವ ರಾಹುಲ್‌ ಗಾಂಧಿ, ಕರ್ನಾಟಕದ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕತ್ವವನ್ನು ಹೈಕೋರ್ಟ್‌ ಅನರ್ಹಗೊಳಿಸಿದ್ದರ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ. ಇವಿಎಂ ದೋಷಾರೋಪ ಮಾಡುವ ಕಾಂಗ್ರೆಸ್ಸೇ ನಿಜವಾದ ʼಮತ ಚೋರಿʼ ಪಕ್ಷ ಎಂದಿದ್ದಾರೆ.

Read Full Story

06:25 PM (IST) Sep 18

ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಬರ್ತ್‌ಡೇ ಸಂಭ್ರಮದಲ್ಲಿ ಪಾಲ್ಗೊಂಡ 'ದೊಡ್ಮನೆ ದೊಡ್ಮಗ.!

ಶಿವಣ್ಣ ಹಾಗೂ ಗೀತಾ ದಂಪತಿ ಇಂದು ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ವೈರಲ್ ಆಗುತ್ತಿದೆ. ಶಿವಣ್ಣ-ಗೀತಾ ದಂಪತಿ ಇಂದು ನಟ ವಿಷ್ಣುವರ್ಧನ್ ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ..

Read Full Story

06:22 PM (IST) Sep 18

ಬೆಂಗಳೂರು ಖಾಸಗಿ ಕಾಲೇಜಿನ ಜೂನಿಯರ್ಸ್ vs ಸೀನಿಯರ್ಸ್ ಫೈಟ್ - ನಿಮ್ಮ ಮಕ್ಕಳಿದ್ದಾರಾ ಒಮ್ಮೆ ನೋಡಿ!

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಓಣಂ ಹಬ್ಬದ ನಂತರ ಕೇರಳ ಮೂಲದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ಬೀದಿ ಕಾಳಗ ನಡೆದಿದೆ. ಇದರಲ್ಲಿ ನಿಮ್ಮ ಮಕ್ಕಳೂ ಇದ್ದಾರಾ ಒಮ್ಮೆ ನೋಡಿ..

Read Full Story

06:16 PM (IST) Sep 18

ಕುರುಬ ಸಮುದಾಯ ಎಸ್‌ಟಿ ಸೇರ್ಪಡೆಗೆ ವಿರೋಧ, ಪಾಲಿಟಿಕಲ್ ಫೈಟ್‌ಗೆ ಸಾಕ್ಷಿಯಾದ ವಾಲ್ಮೀಕಿ ಸಮುದಾಯದ ರಾಜ್ಯ ಮಟ್ಟದ ಸಭೆ!

ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ವಿಚಾರವು ಕಾಂಗ್ರೆಸ್ ಸಂಸದ ಇ. ತುಕಾರಾಂ ಮತ್ತು ಬಿಜೆಪಿ ನಾಯಕ ಬಂಗಾರು ಹನುಮಂತು ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು. 

Read Full Story

05:29 PM (IST) Sep 18

ಯೋಗದ ನೆಪದಲ್ಲಿ ದೌರ್ಜನ್ಯ - ಬೆಂಗಳೂರಿನ ಗುರು ಅಂದರ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ರಾಜರಾಜೇಶ್ವರಿನಗರದ ಯೋಗ ತರಬೇತುದಾರ ನಿರಂಜನ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೋಗ ಸ್ಪರ್ಧೆ ಹಾಗೂ ಉದ್ಯೋಗದ ಆಮಿಷವೊಡ್ಡಿ ಥೈಲ್ಯಾಂಡ್ ಹಾಗೂ ಬೆಂಗಳೂರಿನಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

Read Full Story

05:19 PM (IST) Sep 18

ಬಂಗ್ಲೆಗುಡ್ಡೆ ಅಸ್ಥಿಪಂಜರದ ಬಳಿ ಐಡಿ ಕಾರ್ಡ್ ಪತ್ತೆ - ಈ ವ್ಯಕ್ತಿ 7 ವರ್ಷದ ಹಿಂದೆ ಕೊಡಗಿನಿಂದ ನಾಪತ್ತೆ!

ದಕ್ಷಿಣ ಕನ್ನಡದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಅಸ್ಥಿಪಂಜರವು ಹೊಸ ತಿರುವು ಪಡೆದಿದೆ. ಸ್ಥಳದಲ್ಲಿ ಸಿಕ್ಕ ಗುರುತಿನ ಚೀಟಿಯ ಆಧಾರದ ಮೇಲೆ, ಇದು ಏಳು ವರ್ಷಗಳ ಹಿಂದೆ ಕೊಡಗಿನಿಂದ ನಾಪತ್ತೆಯಾಗಿದ್ದ ಯು.ಬಿ. ಅಯ್ಯಪ್ಪ ಅವರದ್ದಾಗಿರಬಹುದು ಎಂದು ಶಂಕಿಸಲಾಗಿದೆ.

Read Full Story

05:05 PM (IST) Sep 18

OTTಗೆ ಬಂತು ರೊಮ್ಯಾಂಟಿಕ್ ದೃಶ್ಯದಲ್ಲೇ ಧೂಳೆಬ್ಬಿಸಿದ ಸಿನಿಮಾ, ಜೊತೆಗೆ ತಲೆತಿರುಗುವ ಟ್ವಿಸ್ಟ್‌ಗಳು!

ಕರಣ್ ಬೂಲಾನಿ ನಿರ್ದೇಶನದ 'ಥ್ಯಾಂಕ್ ಯೂ ಫಾರ್ ಕಮಿಂಗ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ನೈಟ್ ಪಾರ್ಟಿಯೊಂದರಲ್ಲಿ ನಿಗೂಢ ವ್ಯಕ್ತಿಯೊಂದಿಗೆ ವಿಶೇಷ ಅನುಭವ ರೊಮ್ಯಾಂಟಿಕ್ ದೃಶ್ಯಗಳ ಕಥನ ನೀವೇ ನೋಡಿ..

Read Full Story

05:01 PM (IST) Sep 18

64 ವರ್ಷದ ವ್ಯಕ್ತಿಗೆ ಹನಿಟ್ರ್ಯಾಪ್‌ಗೆ ಯತ್ನಿಸಿದ ಸೋಶಿಯಲ್‌ ಮೀಡಿಯಾ ಬ್ಯೂಟಿ, 13 ಲಕ್ಷ ಕಳೆದುಕೊಂಡ ಉದ್ಯಮಿ!

Rajasthan Honeytrap: Businessman, 64, Loses ₹13 Lakhs; Mastermind Renuka Chaudhary Arrested ರಾಜಸ್ಥಾನದಲ್ಲಿ 64 ವರ್ಷದ ಉದ್ಯಮಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ರೇಣುಕಾ ಚೌಧರಿ ಎಂಬಾಕೆಯಿಂದ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ.

 

Read Full Story

04:30 PM (IST) Sep 18

ಜಾತಿಗಣತಿ ವಿರೋಧಿಸಿ ಹೈಕೋರ್ಟ್‌ಗೆ ಎರಡು ಪಿಐಎಲ್ ಸಲ್ಲಿಕೆ; ದಿಢೀರ್ ಸಭೆ ಕರೆದ ಸರ್ಕಾರ!

ಕರ್ನಾಟಕ ಸರ್ಕಾರದ ಜಾತಿಗಣತಿ ಯೋಜನೆಗೆ ಹೈಕೋರ್ಟ್‌ನಲ್ಲಿ ಕಾನೂನು ಸವಾಲು ಎದುರಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧಿಕಾರ ವ್ಯಾಪ್ತಿ ಮತ್ತು ಜಾತಿಗಳ ವರ್ಗೀಕರಣದಲ್ಲಿನ ದೋಷಗಳನ್ನು ಪ್ರಶ್ನಿಸಿ ಎರಡು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.  ಇದರ ಬೆನ್ನಲ್ಲೇ ಸರ್ಕಾರ ದಿಢೀರ್ ಸಭೆ ಕರೆದಿದೆ.

Read Full Story

04:27 PM (IST) Sep 18

ಶಿರಸಿಯ ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನೇಮಕ!

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾ. ರಶ್ಮಿ ಹೆಗಡೆ ಭಾರತೀಯ ಸೇನೆಯ ಮಿಲಿಟರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದ ಇವರು, ಸಿಕಂದರಾಬಾದ್‌ನಲ್ಲಿ ದೇಶ ಕಾಯುವ ಸೈನಿಕರ ವೈದ್ಯಕೀಯ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
Read Full Story

03:34 PM (IST) Sep 18

ಬೆಂಗಳೂರು ವಾಹನ ಸವಾರರೇ ಎಚ್ಚರ; 1 ವಾರ ರಿಂಗ್‌ ರೋಡ್ ಸಂಚಾರ ಬದಲು, ಪರ್ಯಾಯ ಮಾರ್ಗ ಇಲ್ಲಿದೆ ನೋಡಿ!

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಸೆಪ್ಟೆಂಬರ್ 19ರಿಂದ ಒಂದು ವಾರಗಳ ಕಾಲ ತಾತ್ಕಾಲಿಕ ಸಂಚಾರ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆ ಪ್ರವೇಶ ನಿರ್ಬಂಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.

Read Full Story

03:24 PM (IST) Sep 18

ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಲಿರುವ ಚಿನ್ನಯ್ಯ, ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿಗೆ ಕರೆತಂದ ಪೊಲೀಸರು

ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆರೋಪಿ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತಷ್ಟು ಮಾನವ ಮೂಳೆಗಳ ಅವಶೇಷಗಳು ಪತ್ತೆಯಾಗಿದ್ದು, ತನಿಖೆಯನ್ನು ದಾರಿತಪ್ಪಿಸುತ್ತಿರುವ ಆರೋಪದ ಮೇಲೆ ಹೊಸ ದೂರುಗಳು ದಾಖಲಾಗಿವೆ.
Read Full Story

02:38 PM (IST) Sep 18

ಇ-ಖಾತಾ ಮಾಡಿಕೊಡಲು ದಾಖಲೆ ಕೊಟ್ಟರೆ, ಬೇರೆಯವರ ಹೆಸರಿಗೆ ಮನೆ ಮಾಡಿಕೊಟ್ಟ ಪಿಡಿಒ!

ಕೋಲಾರದ ರಾಜೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಂಪತಿಯೊಬ್ಬರು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ತಮ್ಮ ಮನೆಯನ್ನು ಅಕ್ರಮವಾಗಿ ಬೇರೆಯವರಿಗೆ ಖಾತೆ ಮಾಡಿಕೊಟ್ಟ ಪಿಡಿಒ ವಿರುದ್ಧ ಆರೋಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ.

Read Full Story

02:03 PM (IST) Sep 18

ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ - ಡಿ.ಕೆ.ಶಿವಕುಮಾರ್‌

ಭವಿಷ್ಯದ ದೃಷ್ಟಿಯಿಂದ ನಗರ ಯೋಜನೆ ಅತ್ಯುತ್ತಮವಾಗಿರಲು ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಶಿಕ್ಷಣ ನೀಡುವ ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್ ಸ್ಕೂಲ್‌ ಆರಂಭಿಸಲು ಪ್ರಯತ್ನ ನಡೆಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

Read Full Story

01:46 PM (IST) Sep 18

ಸಮಾಜ ಒಡೆಯುವುದರ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಏಕತಾ ಸಮಾವೇಶ - ಸಂಸದ ಬೊಮ್ಮಾಯಿ

ಜಾತಿ ಸಮೀಕ್ಷೆ ಹೆಸರಿನಲ್ಲಿ ಸರ್ಕಾರ ವೀರಶೈವ ಲಿಂಗಾಯತ ಸಮಾಜ ಒಡೆಯುವ ಹುನ್ನಾರ ನಡೆಸಿದ್ದು, ಇದರ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಸ್ವಾಮೀಜಿಗಳ ಮುಂದಾಳತ್ವದಲ್ಲಿ ಸೆ.19 ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಯುತ್ತಿದೆ ಎಂದು ಸಂಸದ ಬೊಮ್ಮಾಯಿ ಹೇಳಿದರು.

Read Full Story

01:36 PM (IST) Sep 18

ಐಟಿ ಕಂಪನಿಗಳಿಗೆ ನನ್ನ ಮನವಿ ಇಷ್ಟೇ, ನೀವು ಬೆಂಗಳೂರು ಬಿಡುವುದು ಬೇಡ; ಕೇಂದ್ರ ಸಚಿವ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಬೆಂಗಳೂರು 'ಗುಂಡಿಗಳ ನಗರ'ವಾಗಿ ಮಾರ್ಪಟ್ಟಿರುವುದಕ್ಕೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವೇ ಕಾರಣವೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪನಿಗಳು ವಲಸೆ ಹೋಗುತ್ತಿದ್ದು, ಬೆಂಗಳೂರು ಬಿಡದಂತೆ ಉದ್ಯಮಿಗಳಲ್ಲಿ ಮನವಿ ಮಾಡಿದ್ದಾರೆ.

Read Full Story

01:27 PM (IST) Sep 18

ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯವರೇ ಸಿಎಂ - ಜನಾರ್ದನ ರೆಡ್ಡಿ

ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯವರೇ ಮುಖ್ಯಮಂತ್ರಿಯಾಗುತ್ತಾರೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. 2028ಕ್ಕೆ ನಾನೇ ಸಿಎಂ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದರು.

Read Full Story

01:22 PM (IST) Sep 18

ನಿಗೂಢ ಲಿಂಕ್ - ಬೆಂಗಳೂರಿಗರನ್ನು ಕಾಡುತ್ತಿರುವ ಆರ್‌ಟಿಓ ಚಲನ್‌ನ ಹೊಸ ವಂಚನೆ!

bengaluru  RTO Challan Scam ಬೆಂಗಳೂರಿನಲ್ಲಿ, ಆರ್‌ಟಿಒ ಚಲನ್ ಹೆಸರಿನಲ್ಲಿ ವಾಟ್ಸಾಪ್‌ನಲ್ಲಿ ಬಂದ ನಕಲಿ ಲಿಂಕ್ ಕ್ಲಿಕ್ ಮಾಡಿ ಉದ್ಯಮಿ ಮತ್ತು ರೈತ ಸೇರಿದಂತೆ ಹಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಎಪಿಕೆ ಫೈಲ್ ಮೂಲಕ ವಂಚಕರು ಫೋನ್‌ಗಳನ್ನು ಹ್ಯಾಕ್ ಮಾಡಿ  ದೋಚಿದ್ದಾರೆ.  

Read Full Story

01:09 PM (IST) Sep 18

ಬಿಗ್‌ಬಾಸ್‌ ರಂಜಿತ್‌ ಬಾಳಲ್ಲಿ 'ಬಾವ ಬಂದರೋ..', ಫ್ಲ್ಯಾಟ್‌ಗಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕುಟುಂಬ!

Bigg Boss Ranjith Family Files Complaint ಕಿರುತೆರೆ ನಟ ರಂಜಿತ್ ವಿರುದ್ಧ ಅವರ ಬಾವ ಜಗದೀಶ್ ಜೀವ ಬೆದರಿಕೆ ಆರೋಪದ ಮೇಲೆ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫ್ಲ್ಯಾಟ್‌ಗೆ ಸಂಬಂಧಿಸಿದ ಈ ಜಗಳದಲ್ಲಿ ಅಕ್ಕ-ತಮ್ಮನ ನಡುವೆ ಗಲಾಟೆಯಾಗಿದೆ.

Read Full Story

01:00 PM (IST) Sep 18

ನಮ್ಮ ಕುಟುಂಬದ ಬಗ್ಗೆ ಯಾರಾದ್ರು ಏನಾದ್ರು ಹೇಳಿದ್ರೆ ನಂಬಬೇಡಿ - ಭಾರತಿ ವಿಷ್ಣುವರ್ಧನ್ ಎಚ್ಚರಿಕೆ

ನಮ್ಮ ಕುಟುಂಬದ ಮೇಲೆ ಯಾರು ಏನೇ ಮಾತನಾಡಿದರು ಅವರ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದ್ರು ಅಂಥ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಎಚ್ಚರಿಕೆ ಕೊಟ್ಟರು.

Read Full Story

12:59 PM (IST) Sep 18

ಬೆಳಗಾವಿ ಕಾರಕೂನ ದುರಂತ ಅಂತ್ಯ; ಹೆಂಡತಿ ಮೇಲೆ ಕಣ್ಣಾಕಿದ ಕ್ಲರ್ಕ್ ಕಥೆ ಮುಗಿಸಿದ ಗಂಡ!

ಸ್ನೇಹಿತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜು ಕ್ಲರ್ಕ್ ಮಹಾಂತೇಶ್ ಬುಕನಟ್ಟಿ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ.

Read Full Story

12:18 PM (IST) Sep 18

ಶೃಂಗೇರಿ ಲಾಡ್ಜ್ ರಹಸ್ಯ - ಹಿಂದೂ ಮಹಿಳೆ ಸಂಬಂಧಕ್ಕಾಗಿ ರಮೇಶನಾಗಿ ಬದಲಾದ ಅಬ್ದುಲ್!

ಹಿಂದೂ ಮಹಿಳೆಯೊಂದಿಗೆ ಲಾಡ್ಜ್‌ಗೆ ಹೋಗಿದ್ದ ಅಬ್ದುಲ್ ಸಮದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ 'ರಮೇಶ್' ಎಂಬ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿರುವುದು ತನಿಖೆಯ ವೇಳೆ ಬಯಲಾಗಿದೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

12:06 PM (IST) Sep 18

Bengaluru - ಹುಡುಗಿಗಾಗಿ ನಡುರಸ್ತೆಯಲ್ಲಿ ಗೆಳೆಯನೊಂದಿಗೆ ಹೊಡೆದಾಡಿಕೊಂಡ ASI ಪುತ್ರ

ಗೆಳೆಯನೊಂದಿಗೆ ಹೊಡೆದಾಡಿಕೊಂಡ ASI ಪುತ್ರ:  ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯ ವಿಚಾರವಾಗಿ ಎಎಸ್‌ಐ ಪುತ್ರ ಅರ್ಮಾನ್ ಮತ್ತು ಸೈಯದ್ ಅಜರುದ್ದೀನ್ ನಡುವೆ ನಡೆದ ಈ ಗಲಾಟೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ.

Read Full Story

More Trending News