ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ನಕಲಿ ಔಷಧಿ ಮಾರಾಟ ಜಾಲ ಪತ್ತೆ ಪ್ರಕರಣದ ತನಿಖೆಗೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ.ವಂಶಿಕೃಷ್ಣ ಸಾರಥ್ಯದಲ್ಲಿ ‘ವಿಶೇಷ ತನಿಖಾ ತಂಡ (ಎಸ್‌ಐಟಿ)’ವನ್ನು ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ರಾಜ್ಯದ ಜನರಿಗೆ ವಿಷವುಣ್ಣಿಸುತ್ತಿದ್ದ ನಕಲಿ ಔಷಧ ದಂಧೆಕೋರರ ವಿರುದ್ಧದ ರಚಿಸಲಾದ ಎಸ್ಐಟಿಗೆ ಸಿ.ವಂಶಕೃಷ್ಣ ಅವರು ಮುಖ್ಯಸ್ಥರಾಗಿದ್ದು, ಎಸ್ಪಿ ಶಿವಪ್ರಕಾಶ್ ದೇವರಾಜು, ಸಿಐಡಿ ಎಸ್ಪಿ ಲೋಕೇಶ್.ಬಿ.ಜಗಲಾಸರ್, ಸಹಾಯಕ ಔಷಧ ನಿಯಂತ್ರಕರಾದ ಮಂಜುನಾಥ್ ರೆಡ್ಡಿ, ನಮ್ರತಾ ಹಲ್ಲೂರು ಹಾಗೂ ಔಷಧ ನಿರೀಕ್ಷಕಿ ನೇಹಾ ಮುರ್ಗಿ ಸದಸ್ಯರಾಗಿದ್ದಾರೆ. ಈ ಎಸ್‌ಐಟಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಮೇಲುಸ್ತುವಾರಿ ವಹಿಸಲಿದ್ದಾರೆ.
ಮತ್ತೊಂದೆಡೆ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, ರಾಜ್ಯಾದ್ಯಂತ ರೈಲು ನಿಲ್ದಾಣಗಳ ಹೋಟೆಲ್, ಕ್ಯಾಂಟೀನ್ ಹಾಗೂ ಇತರೆ ಆಹಾರ ಉದ್ದಿಮೆಗಳ ಮೇಲೆ ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ನಿಷೇಧಿತ ಬಣ್ಣ ಹಾಗೂ ಪ್ಲಾಸ್ಟಿಕ್ ಬಳಕೆ ಪತ್ತೆಯಾಗಿದೆ. ಜೊತೆಗೆ ಬಾಳೆಯನ್ನು ಹಣ್ಣಾಗಿಸಲು ರಾಸಾಯನಿಕ ಬಳಕೆ ಮಾಡುತ್ತಿರುವುದು ಕಂಡುಬಂದಿತ್ತು ಸರ್ಕಾರ ಎಚ್ಚರಿಕೆಯನ್ನು ರವಾನಿಸಿದೆ.
11:39 PM (IST) Aug 21
Yash Toxic Ticket Price: ಸಿನಿಮಾ ಬಿಡುಗಡೆಗೆ ನಾಲ್ಕು ದಿನಗಳು ಇರುವಾಗಲೇ ಹೀಗೆ ಬಾಕ್ಸ್ ಅಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ.
10:51 PM (IST) Aug 21
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣವು 'ಮೆಜೆಸ್ಟಿಕ್' ಎಂದೇ ಜನಪ್ರಿಯವಾಗಿದೆ. ಹಿಂದೊಮ್ಮೆ ಇಲ್ಲಿನ 'ಮೆಜೆಸ್ಟಿಕ್ ಟಾಕೀಸ್' ಬಳಿ ಬಸ್ ಕಂಡಕ್ಟರ್‌ಗಳು ಕೂಗುತ್ತಿದ್ದ ಕೂಗೇ ಈ ಪ್ರದೇಶಕ್ಕೆ ಅಡ್ಡಹೆಸರಾಗಲು ಕಾರಣವಾಯಿತು.
10:44 PM (IST) Aug 21
Sowcar Janaki Death: ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ನಿಧನರಾಗಿದ್ದಾರೆ.
10:30 PM (IST) Aug 21
09:39 PM (IST) Aug 21
ಕಾಮಗಾರಿಗಳಿಗೆ ವೈಯಕ್ತಿಕವಾಗಿ ಸುಮಾರು ₹10 ಕೋಟಿ ಅನುದಾನ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ನೀಡಿರುವ ಅನುದಾನ ದುರ್ಬಳಕೆಯಾಗಲು ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.
09:26 PM (IST) Aug 21
08:27 PM (IST) Aug 21
08:03 PM (IST) Aug 21
ದಶಕಗಳ ಬೇಡಿಕೆಯಂತೆ, ಮಂಗಳೂರು ರೈಲ್ವೇ ಪ್ರದೇಶವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಿ ಕೇಂದ್ರ ರೈಲ್ವೇ ಮಂಡಳಿ ಆದೇಶಿಸಿದೆ. 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರದಿಂದ ಕರಾವಳಿ ಭಾಗದಲ್ಲಿ ರೈಲ್ವೇ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.
07:38 PM (IST) Aug 21
Sowcar Janaki Death: ದಕ್ಷಿಣ ಭಾರತದ ಚಿತ್ರರಂಗದ ಹಿರಿಯ ಹಾಗೂ ದಿಗ್ಗಜ ನಟಿಯರಲ್ಲಿ ಒಬ್ಬರಾದ ಸಾಹುಕಾರ್ ಜಾನಕಿ ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
07:19 PM (IST) Aug 21
ಆಗಸ್ಟ್ 28ರಂದು ರಕ್ಷಾಬಂಧನ ಆಚರಿಸಲಾಗುತ್ತಿದೆ. ವಿಶೇಷವೆಂದರೆ, ಇದೇ ದಿನ ವರ್ಷದ ಕೊನೆಯ ಚಂದ್ರಗ್ರಹಣವೂ ಸಂಭವಿಸುತ್ತಿದೆ. ಕುಂಭ ರಾಶಿ ಮತ್ತು ಶತಭಿಷ ನಕ್ಷತ್ರದಲ್ಲಿ ಸಂಭವಿಸುವ ಈ ಗ್ರಹಣವು ರಕ್ಷಾಬಂಧನದ ಆಚರಣೆ ಮೇಲೆ ಪರಿಣಾಮ ಬೀರಲಿದೆಯೇ, ರಾಖಿ ಕಟ್ಟಲು ಸೂಕ್ತ ಸಮಯ ಯಾವುದು ಎಂಬ ಗೊಂದಲ ಅನೇಕರಲ್ಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
06:53 PM (IST) Aug 21
06:38 PM (IST) Aug 21
06:38 PM (IST) Aug 21
'ಟಾಕ್ಸಿಕ್' ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬುಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳೆಲ್ಲಾ 'ಹೌಸ್‌ಫುಲ್' ಬೋರ್ಡ್ ನೇತುಹಾಕಿವೆ. ಆದ್ರೆ, 'ಟಾಕ್ಸಿಕ್' ಸಿನಿಮಾಗೆ ಟಿಕೆಟ್ ಬುಕ್ ಮಾಡುವವರೇ, ಹುಶಾರು.. ಈ ಒಂದು ವಿಚಾರ ನಿಮಗೆ ಗೊತ್ತಿರಲಿ!
05:29 PM (IST) Aug 21
Wallposter Movie: ಚಿರಂಜೀವಿ ಅವರಿಗೆ ಕಿರುತೆರೆಯಲ್ಲಿ ‘ಅಣ್ಣಯ್ಯ’ ಧಾರಾವಾಹಿಯ ಪರಶು ಪಾತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ. ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
05:29 PM (IST) Aug 21
05:15 PM (IST) Aug 21
05:01 PM (IST) Aug 21
ಡಾಲಿ ಧನಂಜಯ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 23ರಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟ, ಈ ಬಾರಿ ತಮ್ಮ ಅಭಿಮಾನಿಗಳ ಜೊತೆ ವಿಶೇಷವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಲು ನಿರ್ಧರಿಸಿದ್ದಾರೆ.
04:45 PM (IST) Aug 21
ಆ ಆರಂಭಿಕ ಬ್ಯಾಟ್ಸ್‌ಮನ್ 12,472 ಟೆಸ್ಟ್ ರನ್‌ಗಳ ದಾಖಲೆ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 15 ವಿವಿಧ ಆಟಗಾರರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿಶಿಷ್ಟ ದಾಖಲೆಯನ್ನು ಹೊಂದಿದ್ದು, ಇದು ಅವರ ಸ್ಥಿರತೆಯನ್ನು ತೋರಿಸುತ್ತದೆ. ಆ ಪ್ರತಿಭೆ ಯಾರು ಗೊತ್ತಾ?
04:21 PM (IST) Aug 21
ಅವತ್ಯಾಕೋ ಅಷ್ಟೊಂದು ತೃಪ್ತಿ, ನೆಮ್ಮದಿ ಸಿಗುತ್ತಿತ್ತು, ಇವತ್ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಹುಡುಕಾಟದ ಭಾಗವಾಗಿ ಮತ್ತೆ ರಂಗಭೂಮಿಗೆ ಮರಳುತ್ತಿದ್ದೇನೆ. - ಹೀಗೆ ಹೇಳಿದ್ದು ರಾಜೇಶ್ ನಟರಂಗ.
04:08 PM (IST) Aug 21
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚರ್ಚೆ ಶುರುವಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಪಿ.ಎಸ್. ಮಿತ್ರನ್ ಅವರು ಯಶ್‌ಗೆ ಕಥೆಯೊಂದನ್ನು ಹೇಳಿದ್ದಾರೆ.
03:44 PM (IST) Aug 21
ಪ್ರಧಾನಿ ಮೋದಿಯವರ ಪ್ರೋತ್ಸಾಹದ ಮೇರೆಗೆ, ಕೇಂದ್ರ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಈ ಸ್ಟೋರಿ ಅಗ್ರ 10 ಸಚಿವರ ಸಾಮಾಜಿಕ ಜಾಲತಾಣಗಳಾದ X, ಇನ್‌ಸ್ಟಾಗ್ರಾಮ್, ಮತ್ತು ಫೇಸ್‌ಬುಕ್‌ನಲ್ಲಿನ ಅನುಯಾಯಿಗಳ ಸಂಖ್ಯೆಯನ್ನು ವಿವರಿಸುತ್ತದೆ, ಅವರ ಡಿಜಿಟಲ್ ವ್ಯಾಪ್ತಿಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
02:54 PM (IST) Aug 21
ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿದ್ದಕ್ಕೆ ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಪತ್ನಿಯ ಎದುರೇ ಹೋಟೆಲ್‌ನಲ್ಲಿ ನಡೆದ ಈ ಘಟನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
02:37 PM (IST) Aug 21
02:19 PM (IST) Aug 21
ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು, ಬೆಂಗಳೂರು–ಹುಬ್ಬಳ್ಳಿ ಸೂಪರ್‌ಫಾಸ್ಟ್ ರೈಲನ್ನು ಕುಷ್ಟಗಿವರೆಗೆ ವಿಸ್ತರಿಸಿ, ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಈ ವಿಸ್ತರಣೆಯಿಂದ ಕುಷ್ಟಗಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.
01:29 PM (IST) Aug 21
01:14 PM (IST) Aug 21
ಬೆಂಗಳೂರಿನಲ್ಲಿ 'ಬುಕ್ ಮೈ ಶೋ'ನಲ್ಲಿ ಗಂಟೆಗೆ 25 ಸಾವಿರಕ್ಕೂ ಅಧಿಕ ಟಿಕೆಟ್ ಸೇಲ್ ಆಗಿದೆ ಎನ್ನಲಾಗಿದೆ. ಚೆನ್ನೈ, ಹೈದರಾಬಾದ್, ಕೊಚ್ಚಿಯಲ್ಲಿ ಇನ್ನೂ ಬುಕಿಂಗ್ ಆರಂಭವಾಗಿಲ್ಲ. ಆದರೆ, ಎಲ್ಲಾ ಕಡೆಯೂ ಟಾಕ್ಸಿಕ್ ಸಿನಿಮಾದ ಟಿಕೆಟ್ ಬೇಡಿಕೆ ಹೇಗಿದೆ? ಈ ಸ್ಟೋರಿ ನೋಡಿ..
12:44 PM (IST) Aug 21
12:29 PM (IST) Aug 21
11:45 AM (IST) Aug 21
ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
11:44 AM (IST) Aug 21
11:14 AM (IST) Aug 21
10:36 AM (IST) Aug 21
'ಹೋಮ್‌ಮೇಕರ್' ಎಂಬ ಪದ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ, ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವ ಪುರುಷರು ಮತ್ತು ಉದ್ಯೋಗಸ್ಥರೂ ಗೃಹ ನಿರ್ವಾಹಕರೇ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಏನಿದು ಪ್ರಕರಣ? ಪುರುಷರು ಕೂಡ ಹೋಂ ಮೇಕರ್ ಎಂದು ಹೊಸ ವ್ಯಾಖ್ಯಾನ ಬರೆದ ಕೋರ್ಟ್
10:17 AM (IST) Aug 21
ರಾಜ್ಯದ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಶಿಷ್ಟಾಚಾರ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜೊತೆಗೆ, ಸರ್ಕಾರಿ ಬೆಂಗಾವಲು ಪಡೆಯನ್ನೂ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಹಾಲಿ ಶಾಸಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
09:58 AM (IST) Aug 21
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್ ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.
09:18 AM (IST) Aug 21
09:02 AM (IST) Aug 21
08:26 AM (IST) Aug 21
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಿಮಾನಯಾನ ದಟ್ಟಣೆ ನಿವಾರಿಸಲು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಹಾಗಾದರೆ, ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಬರಲಿದೆ? ಕನಕಪುರ, ನೆಲಮಂಗಲ ಬಳಿ ಗುರುತಿಸಲಾದ 3 ಸ್ಥಳಗಳ ಸಂಪೂರ್ಣ ಮಾಹಿತಿ ಮತ್ತು ಸರ್ಕಾರದ ಮುಂದಿನ ಯೋಜನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
07:27 AM (IST) Aug 21
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಗರಣ(Valmiki corporation scam)ದ ಕಿಂಗ್‌ಪಿನ್ ನೆಕ್ಕುಂಟಿ ನಾಗರಾಜ್(Nekkunte Nagaraj) ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರು ಉಪಮುಖ್ಯಮಂತ್ರಿಯಾಗಿದ್ದ ವೇಳೆ ಜತೆಗಿದ್ದ ಫೋಟೋಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.
ವಾಲ್ಮೀಕಿ ಹಗರಣದ ಕಿಂಗ್‌ಪಿನ್ ಜೊತೆ ಡಿಕೆಶಿ ಫೋಟೋ ವೈರಲ್
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ(CT Ravi) ಮತ್ತಿತರರು ನೆಕ್ಕುಂಟಿ ನಾಗರಾಜ್ ಅವರು ಡಿ.ಕೆ.ಶಿವಕುಮಾರ್, ನೂತನ ಸಚಿವ ಬಿ.ನಾಗೇಂದ್ರ(B Nagendra) ಅವರ ಜತೆಗಿರುವ ಫೋಟೋಗಳನ್ನು ಬಿಡುಗಡೆ ಮಾಡಿದರು.
07:26 AM (IST) Aug 21
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಪುತ್ರಿ ಸುಮಾ ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕೆಪಿಎಸ್‌ಸಿ ನೇಮಕಾತಿ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಾ.ಮಂಜುನಾಥ್ ಸಲ್ಲಿಸಿರುವ ಅರ್ಜಿ ಮತ್ತು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಲೋಕೇಶ್ ಸೇರಿ ಹಲವು ಯಶಸ್ವಿ ಅಭ್ಯರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿತು.