ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಬೆಂಗಳೂರಿಗೆ ಆಗಮಿಸಿದ್ದು, ಹೆಬ್ಬಾಳದ ಹೋಟೆಲ್ ಹಯಾತ್‌ನಲ್ಲಿ ತಂಗಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಇವರನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ನಾಳೆ (ಸೋಮವಾರ) ಜಿಬಿಎ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆ ಗೆಲುವಿನ ಕುರಿತು ಅವರು ರಾಜ್ಯ ನಾಯಕರೊಂದಿಗೆ ಸರಣಿ ಸಭೆ ನಡೆಸಿ ರಣತಂತ್ರ ರೂಪಿಸಲಿದ್ದಾರೆ.
17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ಹವಾಮಾನ ಇಲಾಖೆಯು ಮೇ 24ರ ಭಾನುವಾರ ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೋಲಾರ ಮತ್ತು ತುಮಕೂರು ಸೇರಿದಂತೆ ಒಟ್ಟು 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಈ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನ ಮತ್ತಷ್ಟು ಪ್ರಮುಖ ಸುದ್ದಿಗಳಿಗಾಗಿ ಲೈವ್ ಬ್ಲಾಗ್ ವೀಕ್ಷಿಸಿ.
11:51 PM (IST) May 24
ಉಪೇಂದ್ರ ಒಂದು ಸಾಮಾನ್ಯ ಕಮರ್ಷಿಯಲ್ ಚಿತ್ರವಲ್ಲ. ಇದು ಮನುಷ್ಯನ ಜೀವನ, ಅವನ ಆಸೆ, ಅಹಂಕಾರ ಮತ್ತು ಸಂಬಂಧಗಳನ್ನು ಬಹಳ ಆಳವಾಗಿ ಪ್ರಶ್ನಿಸುವ ಒಂದು ಸೈಕಲಾಜಿಕಲ್ ಡ್ರಾಮಾ. ಆಗ ಈ ಸಿನಿಮಾ ನೋಡಿದವರಿಗೆ ಇದೊಂದು ಶಾಕ್ ರೀತಿ ಅನಿಸಿತ್ತು.
10:59 PM (IST) May 24
ಆರೋಗ್ಯ ಹಾಗೂ ಸಣ್ಣ ಮಟ್ಟಿಗಿನ ಹಣಕಾಸು ಸಮಸ್ಯೆ ಇದ್ದ ಹಾಸನ ಮೂಲದ ಈ ವ್ಯಕ್ತಿ ಶುಕ್ರವಾರ ಬೆಳಗ್ಗೆ ಯಾರಿಗೂ ಹೇಳದೆ ಮನೆ ಬಿಟ್ಟು ಬಂದಿದ್ದು ಮೊಬೈಲ್ ಫೋನ್‌ನ್ನು ಮಾತ್ರ ಆನ್‌ನಲ್ಲಿ ಇಟ್ಟುಕೊಂಡಿದ್ದರು.
10:31 PM (IST) May 24
ಭಟ್ಕಳ ದುರಂತದಲ್ಲಿ ಮಡಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದುರಂತಕ್ಕೆ ಕಾರಣವೇನು? ಈ ಕುರಿತು ರಕ್ಷಣಾ ತಂಡ ಮಾಹಿತಿ ಬಹಿರಂಗಪಡಿಸಿದೆ. ಒಬ್ಬರಿಗೆ ಈಜು ಬಂದರೂ ಎಲ್ಲರ ರಕ್ಷಣೆ ಮಾಡಬಹುದಿತ್ತು ಎಂದಿದ್ದಾರೆ.
09:16 PM (IST) May 24
ತುಮಕೂರಿನಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು 55 ವರ್ಷದ ಶಾಂತಕುಮಾರ್ ಎಂದು ಗುರುತಿಸಲಾಗಿದೆ. ಕೋತಿತೋಪು ರಸ್ತೆಯಲ್ಲಿ..
09:10 PM (IST) May 24
ಭಾರತೀಯ ನಿರ್ಮಾಪಕರ ಸಂಘ ಮತ್ತು ಸಿನಿಮಾ ಒಕ್ಕೂಟಗಳು ಈಗ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ. ಫರ್ಹಾನ್ ಅಖ್ತರ್ ಅವರು ಬೇರೆ ನಟನ ಮೊರೆ ಹೋಗುತ್ತಾರಾ ಅಥವಾ ರಣವೀರ್ ಅವರನ್ನೇ ಒಪ್ಪಿಸುತ್ತಾರಾ?
08:56 PM (IST) May 24
ಭಗವಂತ ಖೂಬಾ ಅವರ ಮೇಲೆ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದವರ ಕೇಸ್ ವಾಪಸ್ ಪಡೆದು ಸರ್ಕಾರ ಏನು ಸಂದೇಶ ನೀಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
08:23 PM (IST) May 24
ಗೋವಾ ಅಂದ್ರೆ ಬರೀ ಪಾರ್ಟಿ, ಗದ್ದಲ ಅಷ್ಟೇ ಅಲ್ಲ. ಜನಜಂಗುಳಿಯಿಂದ ದೂರ ಇರಲು ಇಷ್ಟಪಡೋರಿಗೆ ಇಲ್ಲಿ ಸಖತ್ ಜಾಗಗಳಿವೆ. ಅಶ್ವೆಮ್, ಕೋಲಾ ಬೀಚ್‌ಗಳಂತಹ ಶಾಂತ ಕಡಲತೀರಗಳು, ದಿವಾರ್‌ನಂತಹ ಸುಂದರ ಹಳ್ಳಿಗಳು, ಗಡಿಬಿಡಿ ಇಲ್ಲದ ಕೆಫೆಗಳು... ಹೀಗೆ ಗೋವಾದ ಇನ್ನೊಂದು ಮುಖವನ್ನು ಇಲ್ಲಿ ಪರಿಚಯಿಸಲಾಗಿದೆ.
07:22 PM (IST) May 24
ದಿನಕ್ಕೆ ಒಂದು ಚಮಚದಷ್ಟು ಬೀಜಗಳ ಸೇವನೆ ನಿಮ್ಮ ಒಟ್ಟಾರೆ ಆರೋಗ್ಯದ ಚಿತ್ರಣವನ್ನೇ ಬದಲಿಸಬಲ್ಲದು. ನೆನಪಿಡಿ, ಆರೋಗ್ಯಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವ ಬದಲು, ಈ ಶಕ್ತಿಯುತ ಬೀಜಗಳನ್ನು ಬಳಿಸಿ, ಕುದುರೆಯ ಶಕ್ತಿ ಪಡೆದು ಸಂತೋಷವಾಗಿರಿ..
06:53 PM (IST) May 24
ಮೀಸಲಾತಿ ಸರಿಯಾಗಿ ಜಾರಿಯಾಗದಿದ್ದರಿಂದ ಶೋಷಿತ ವರ್ಗಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಸಮುದಾಯಗಳನ್ನು ಎಸ್‌ಸಿ, ಎಸ್‌ಟಿಗೆ..
06:44 PM (IST) May 24
06:34 PM (IST) May 24
06:34 PM (IST) May 24
ಯಾವುದೇ ಕಾರಣಕ್ಕೆ ಕ್ಯಾನ್ಸರ್ ಪೀಡಿತ ಮಕ್ಕಳು ಚಿಕಿತ್ಸೆಯಿಂದ ದೂರ ಉಳಿಯಬಾರದು ಎಂಬ ಉದ್ದೇಶವನ್ನು ಹೊಂದಿರುವ ನೋಂದಾಯಿತ ಭಾರತೀಯ ಲಾಭರಹಿತ ಸಂಸ್ಥೆಯಾದ ಆಕ್ಸೆಸ್ ಲೈಫ್ ಮತ್ತು ಚೆಲ್ಲಾರಾಮ್..
06:22 PM (IST) May 24
06:21 PM (IST) May 24
ಭಟ್ಕಳ ಕಡಲ ತೀರದಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಮುಳುಗಿದ ದುರಂತ ಘಟನೆಯಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿದ್ದ ಮತ್ತೊಬ್ಬರ ಮೃತದೇಹ ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.
05:48 PM (IST) May 24
05:38 PM (IST) May 24
ಬೆಂಗಳೂರು: ಇತ್ತೀಚಿಗಿನ ದಿನಗಳಲ್ಲಿ ನಡುವಯಸ್ಸಿನ ವ್ಯಕ್ತಿಗಳು ಹೃದಯಾಘಾತದಿಂದ ಕೊನೆಯುಸಿರೆಳೆಯುತ್ತಿರುವ ಆಘಾತಕಾರಿ ಘಟನೆಗಳು ನಡೆಯುತ್ತಲೇ ಇದೆ. ಇದೀಗ 2015ರ ಕರ್ನಾಟಕ ರಣಜಿ ತಂಡದ ಆಟಗಾರ ಶಿವಮೊಗ್ಗ ಮೂಲದ ಅಕ್ಷಯ್ ಎಸ್.ಎಲ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
05:35 PM (IST) May 24
ಮೋದಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಅವರ ಕರೆಗೆ ಓಗೊಟ್ಟು ಸೈಕಲ್ ಹಾಗೂ ಬೈಕ್ ಮೂಲಕ ಪ್ರಯಾಣಿಸುತ್ತಿರುವ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕೇವಲ ಎರಡು ದಿನ ಇದನ್ನು ಪಾಲಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.
05:21 PM (IST) May 24
ಸದ್ಯಕ್ಕೆ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಈ ಸುದ್ದಿಗಳು ಕೇವಲ ಮಾಧ್ಯಮಗಳಲ್ಲಿ ಸುಖಾಸುಮ್ಮನೆ ಓಡಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
05:11 PM (IST) May 24
05:08 PM (IST) May 24
04:46 PM (IST) May 24
"ಒಬ್ಬ ಮನುಷ್ಯ ತನಗೆ ಇಷ್ಟ ಬಂದ ಕಂಟೆಂಟ್ ಮಾಡುವ ಸ್ವಾತಂತ್ರ್ಯ ಇರುತ್ತದೆ. ನಾನು ಫಿಟ್ನೆಸ್ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಒಂದು ವೇಳೆ ನನ್ನ ಕಂಟೆಂಟ್ ಕೆಟ್ಟದಾಗಿದ್ದರೆ ಇನ್ಸ್ಟಾಗ್ರಾಮ್ ಅವರೇ ನನ್ನನ್ನು ಬ್ಲಾಕ್ ಮಾಡುತ್ತಿದ್ದರು. ಆದರೆ ಕೆಲವರು ಬೇಕಂತಲೇ ನನ್ನ ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
04:42 PM (IST) May 24
04:20 PM (IST) May 24
04:02 PM (IST) May 24
ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕರ ಸಭೆಯಲ್ಲಿ, ರಾಜ್ಯಸಭಾ ಸಂಸದ ನಾರಾಯಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ರೈಲು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ಹೊಸ ವಂದೇ ಭಾರತ್, ಬಾಗಲಕೋಟೆ-ಕುಡಚಿ ಮಾರ್ಗ, ಮತ್ತು ವಿಜಯಪುರ-ತಿರುಪತಿ ರೈಲು ಸೇರಿದಂತೆ ಹಲವು ಯೋಜನೆಗಳ ಕುರಿತು ಚರ್ಚಿಸಲಾಗಿದ್ದು, ಈ ಯೋಜನೆಗಳು ಪ್ರಾದೇಶಿಕ ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ.
03:47 PM (IST) May 24
03:24 PM (IST) May 24
03:12 PM (IST) May 24
02:53 PM (IST) May 24
02:11 PM (IST) May 24
ಕೆಲ ಸಿನಿಮಾಗಳು ಯಾವುದ್ಯಾವುದೋ ಕಾರಣಕ್ಕೆ ಸದ್ದು ಮಾಡೋದಿಲ್ಲ, ಆದರೆ ನಿಜಕ್ಕೂ ಅದ್ಭುತವಾದ ಕಂಟೆಂಟ್ ಹೊಂದಿರುತ್ತವೆ. ಹಾಗಿದ್ದರೆ ಕನ್ನಡದಲ್ಲಿ Most underrated Movies ಕೂಡ ಇದೆ, ಹಾಗಾದರೆ ಅವು ಯಾವುವು?
01:10 PM (IST) May 24
12:05 PM (IST) May 24
ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಇದರೊಂದಿಗೆ, ಮಂಗಳೂರು-ಬೆಂಗಳೂರು ನಡುವೆ ಜೂನ್‌ನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭವಾಗಲಿದೆ.
10:56 AM (IST) May 24
ಮಾದಾವರ-ತುಮಕೂರು ಮೆಟ್ರೋ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುಮಾರು 20 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಪಿಪಿಪಿ ಕೈಗೆತ್ತಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
10:24 AM (IST) May 24
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪೋಷಕರ ಮುಂದೆಯೇ ಬಾಲಕನನ್ನು ಎಳೆದೊಯ್ದು ಕೊಂದಿದ್ದ ಚಿರತೆಯು, 15 ದಿನಗಳ ನಿರಂತರ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಆದರೆ, ಸೆರೆಸಿಕ್ಕಿರುವುದು ಅದೇ ನರಭಕ್ಷಕ ಚಿರತೆಯೇ ಎಂಬ ಅನುಮಾನ ಮೂಡಿಸಿದೆ.
10:14 AM (IST) May 24
ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದಾರೆ. ರೆಸಾರ್ಟ್‌ನವರು ಅಳವಡಿಸಿದ್ದ ಪಂಪ್ ಸೆಟ್‌ನಿಂದ ನೀರಿಗೆ ವಿದ್ಯುತ್ ಪ್ರವಹಿಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ.
10:05 AM (IST) May 24
ಮಂಗಳೂರು-ಬೆಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವು ಜೂನ್‌ನಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಇದು ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೆ, ಕಾರವಾರದವರೆಗೆ ರೈಲು ವಿಸ್ತರಣೆ, ಶಿವಮೊಗ್ಗ-ಮಂಗಳೂರು ಹೊಸ ಮಾರ್ಗದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
09:24 AM (IST) May 24
09:13 AM (IST) May 24