ಬೆಂಗಳೂರು (ಆ.28): ಮಂಗಳೂರನ್ನು ಕರ್ನಾಟಕದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕೆಂಬುದು 30 ವರ್ಷಗಳ ಕನ್ನಡಿಗರ ಹೋರಾಟ. ಅದರಂತೆ ಇದೀಗ ರೈಲ್ವೆ ಮಂಡಳಿಯು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆಮಂಗಳೂರನ್ನು ವರ್ಗಾವಣೆ ಅಧಿಸೂಚನೆ ಮಾಡುವ ಹೊರಡಿ ಸಿದ್ದು, ಕೇರಳದ ಒತ್ತಡಕ್ಕೆ ಮಣಿದು ಯಾವ ಬದಲಾ ವಣೆ ಮಾಡಿದರೂ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.ಕೇರಳಂನಲ್ಲಿ ಕರ್ನಾಟಕದ ಬೆಳವಣಿಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದ ಯಾವ ರಾಜಕಾರಣಿಯೂ ಒಂದೇ ಒಂದು ಮಾತನ್ನೂ ಹೇಳದಿರುವುದು ಖಂಡನೀಯ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.

11:00 PM (IST) Aug 28
10:40 PM (IST) Aug 28
09:05 PM (IST) Aug 28
ಸಚಿನ್, ದ್ರಾವಿಡ್, ಸೆಹ್ವಾಗ್ ಅವರ ಮಕ್ಕಳು ಕ್ರಿಕೆಟ್‌ನಲ್ಲಿ ಮುಂದುವರಿದರೆ, ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಯಾವ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
07:02 PM (IST) Aug 28
06:43 PM (IST) Aug 28
05:25 PM (IST) Aug 28
ರಾಕಿಂಗ್ ಸ್ಟಾರ್ ಯಶ್‌ಗೆ ತಂಗಿ ನಂದಿನಿ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಟ್ಟಿದ್ದಾರೆ. ಅಣ್ಣ-ತಂಗಿಯ ಆತ್ಮೀಯ ಕ್ಷಣಗಳ ಫೋಟೋಗಳು ಹಾಗೂ ನಂದಿನಿಯ ಭಾವನಾತ್ಮಕ ಪೋಸ್ಟ್ ಇದೀಗ ವೈರಲ್ ಆಗಿದೆ.
05:03 PM (IST) Aug 28
ಮೆಕ್ಕೆಜೋಳ ಮತ್ತು ಸೋಯಾಬೀನ್ ಹಿಂಡಿ ಬೆಲೆ ಏರಿಕೆಯಿಂದ ಕೋಳಿ ಆಹಾರ ದುಬಾರಿಯಾಗಿದೆ. ಎಥೆನಾಲ್‌ಗೆ ಹೆಚ್ಚುತ್ತಿರುವ ಮೆಕ್ಕೆಜೋಳ ಬೇಡಿಕೆಯ ನಡುವೆ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
04:46 PM (IST) Aug 28
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿ.ಟಿ. ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿಗಮದ ಹಣವು 'ಕಟ್ಟಿಕೊಂಡವರ' ಮತ್ತು 'ಇಟ್ಕೊಂಡವರ' ಇಬ್ಬರ ಖಾತೆಗೂ ಹೋಗಿದೆ ಎಂದು ಆರೋಪಿಸಿರುವ ಅವರು, ಎಸ್‌ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ ಮಾಡಿದೆ ಎಂದರು.
04:39 PM (IST) Aug 28
ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಕಂಡಿದೆ. ಸಿನಿಮಾ ಕುರಿತು ಪರ-ವಿರೋಧದ ಚರ್ಚೆ ಜೋರಾಗಿರುವ ನಡುವೆಯೇ, ರಿಯಲ್ ಸ್ಟಾರ್ ಉಪೇಂದ್ರ ‘ಟಾಕ್ಸಿಕ್’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇದೀಗ ಗಮನ ಸೆಳೆದಿದೆ.
04:31 PM (IST) Aug 28
ಅಕ್ಟೋಬರ್ ತಿಂಗಳಲ್ಲಿ ಒಂದೇ ರಾಶಿಯಲ್ಲಿ ಎರಡು ಅಪರೂಪದ ಗ್ರಹ ಸಂಚಾರಗಳು ನಡೆಯಲಿವೆ. ಅಕ್ಟೋಬರ್ 6 ರಂದು ಶುಕ್ರ ಮತ್ತು ಅಕ್ಟೋಬರ್ 21 ರಂದು ಬುಧ ಗ್ರಹಗಳು ತುಲಾ ರಾಶಿಯಲ್ಲಿ ವಕ್ರಿಯಾಗಲಿವೆ. ಒಂದೇ ರಾಶಿಯಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಹಿಮ್ಮುಖ ಚಲನೆಯಿಂದ 'ಲಕ್ಷ್ಮೀನಾರಾಯಣ ಯೋಗ' ಉಂಟಾಗುತ್ತದೆ.
04:03 PM (IST) Aug 28
02:41 PM (IST) Aug 28
02:23 PM (IST) Aug 28
ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಅಂದ್ರೆ ಮನೆ ಅಲಂಕಾರ, ಮನೆಯ ಹೆಸರು, ಹೂವಿನ ಅಲಂಕಾರ, ಲೈಟಿಂಗ್ಸ್ ಇವೆಲ್ಲವೂ ಕಾಣಿಸುತ್ತವೆ. ಆದರೆ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆ ಗೃಹಪ್ರವೇಶ ಕಾರ್ಯಕ್ರಮವನ್ನ ವಿಭಿನ್ನವಾಗಿ ಮಾಡಿದ್ದಾರೆ. ಅವರ ಈ ವಿಶಿಷ್ಟ ಐಡಿಯಾ ಗಮನ ಸೆಳೆದಿದೆ.
12:43 PM (IST) Aug 28
ಸೆಪ್ಟೆಂಬರ್ 10ಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾಗಳ ಗುತ್ತಿಗೆ ಒಪ್ಪಂದ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಟೋಲ್ ಸಂಗ್ರಹವನ್ನು ನಿಲ್ಲಿಸುವುದು, ಮುಂದುವರಿಸುವುದು ಸೇರಿದಂತೆ ಹಲವು ಆಯ್ಕೆಗಳನ್ನು ಕೇಂದ್ರ ಸರ್ಕಾರ ಮತ್ತು ಎನ್‌ಹೆಚ್‌ಎಐ ಪರಿಶೀಲಿಸುತ್ತಿವೆ.
12:11 PM (IST) Aug 28
ಬೆಂಗಳೂರಿನ ಗೂಗಲ್ 'ಅನಂತ' ಕಚೇರಿಗೆ ಉದ್ಯೋಗಿಯನ್ನು ಡ್ರಾಪ್ ಮಾಡಲು ಹೋದ ಕ್ಯಾಬ್ ಚಾಲಕರೊಬ್ಬರು ಅಲ್ಲಿ ತಮಗೆ ದೊರೆತ ಸತ್ಕಾರದ ಬಗ್ಗೆ ಹಂಚಿಕೊಂಡಿದ್ದಾರೆ. ಚಾಲಕರಿಗೆ ಪ್ರತ್ಯೇಕ ಪಾರ್ಕಿಂಗ್, ಉಚಿತ ಉಪಹಾರ ಮತ್ತು ಬಫೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಗೂಗಲ್‌ನ ಸಂಸ್ಕೃತಿ ಮೆಚ್ಚುಗೆಗೆ ಪಾತ್ರವಾಗಿದೆ.
12:05 PM (IST) Aug 28
11:21 AM (IST) Aug 28
10:47 AM (IST) Aug 28
10:40 AM (IST) Aug 28
ಸೈಬರ್ ಅಪರಾಧ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಸೆನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಬಿ. ರವಿ, ಬಸ್ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ. ಭೋಪಾಲ್‌ನಿಂದ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾಗ ಬಸ್ ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ.
10:21 AM (IST) Aug 28
ಲಾಲ್‌ಬಾಗ್‌ಗೆ ಇಂದಿನ ರೂಪ ನೀಡಿದ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯ ಬಗ್ಗೆ 'ಹೆರಿಟೇಜ್ ಬೇಕು' ಸಂಘಟನೆಯು ತನಿಖೆಗೆ ಆಗ್ರಹಿಸಿದ್ದು, ತೋಟಗಾರಿಕೆ ಇಲಾಖೆ ಮತ್ತು ಪೊಲೀಸರಿಗೆ ಪತ್ರ ಬರೆದು ಸಮಾಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.
10:01 AM (IST) Aug 28
ರಾಜ್ಯ ಸಚಿವ ಸಂಪುಟ ಬದಲಾವಣೆ ವದಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದು, ಯಾವುದೇ ಫೈಲ್ ತನ್ನ ಬಳಿ ಬರಬೇಕು ಎಂದು ಸ್ಪಷ್ಟಪಡಿಸಿದರು. ಇತ್ತ, ಮಾಜಿ ಸಚಿವೆ ಹೆಬ್ಬಾಳಕರ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದು, ಸಂಪುಟದಲ್ಲಿ ಮಹಿಳೆಯರಿಲ್ಲದಿದ್ದರೆ ಅದು ಅಪೂರ್ಣ ಎಂದಿದ್ದಾರೆ.
09:36 AM (IST) Aug 28
07:52 AM (IST) Aug 28
ತೈವಾನ್‌ನಲ್ಲಿ ಪತ್ನಿಯ ಅಫೇರ್ ಬಗ್ಗೆ ಅನುಮಾನಗೊಂಡ ವ್ಯಕ್ತಿಯೊಬ್ಬ ರೋಬೋಟ್ ವ್ಯಾಕ್ಯೂಮ್‌ನ ಲೈವ್ ಕ್ಯಾಮೆರಾ ಬಳಸಿ ಆಕೆಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ. ಆ ದೃಶ್ಯಗಳಿಂದ ಸಿವಿಲ್ ಪ್ರಕರಣದಲ್ಲಿ ಪರಿಹಾರ ಪಡೆದರೂ, ಅನುಮತಿಯಿಲ್ಲದೆ ರೆಕಾರ್ಡ್ ಮಾಡಿದ ಆರೋಪದಲ್ಲಿ ಆತನಿಗೆ 5 ತಿಂಗಳ ಜೈಲು ಮತ್ತು ದಂಡ ವಿಧಿಸಲಾಗಿದೆ.
07:26 AM (IST) Aug 28
ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
07:25 AM (IST) Aug 28
ರಾಯಚೂರು ಜಿಲ್ಲಾ ಪಂಚಾಯತ್, ತೆರಿಗೆ ಸಂಗ್ರಾಹಕ ಮತ್ತು ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
07:25 AM (IST) Aug 28
ಕಾವೇರಿ ನೀರು ಸರಬರಾಜು ಯೋಜನೆಯ ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿಯಿಂದಾಗಿ ಆ.28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಲಮಂಡಳಿಯು ಸುಮಾರು 8 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಿದ್ದು, ಸಾರ್ವಜನಿಕರು ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಿದೆ.
07:25 AM (IST) Aug 28
ಕಾನ್ಪುರದ ಬಳಿ ತರಬೇತಿ ವಿಮಾನವೊಂದು ಪತನಗೊಂಡು ಕನ್ನಡಿಗ ಪೈಲಟ್ ಅಭಿಷೇಕ್ ಪೂಜಾರಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಾರ್ಗ್ ಏವಿಯೇಷನ್‌ಗೆ ಸೇರಿದ ಟೆಕ್ನಾಮ್ ಪಿ2006ಟಿ ವಿಮಾನವು ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
07:24 AM (IST) Aug 28
ಕೇರಳದ ತೀವ್ರ ವಿರೋಧದ ನಡುವೆಯೂ, ರೈಲ್ವೆ ಮಂಡಳಿಯು ಮಂಗಳೂರನ್ನು ಮೈಸೂರು ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರ್ಪಡೆಗೊಳಿಸಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ನಿರ್ಧಾರವು ಆಡಳಿತಾತ್ಮಕ ಸುಧಾರಣೆಯಾಗಿದ್ದು, ಕರ್ನಾಟಕಕ್ಕೆ ಅನುಕೂಲಕರವಾಗಿದೆ ಎಂದು ಮಂಡಳಿ ಹೇಳಿದೆ.