Published : Oct 09, 2025, 07:36 AM ISTUpdated : Oct 09, 2025, 11:41 PM IST

State News Live: BBK 12 - ನಾನ್‌ ಯಾರ ತಂಟೆಗೂ ಹೋಗಲ್ಲ, ನನ್ನ‌ ತಂಟೆಗೆ ಬಂದ್ರೆ ಬಿಡಲ್ಲ - ಫಸ್ಟ್‌ ಟೈಮ್‌ ರೆಬೆಲ್‌ ಆದ ಮಲ್ಲಮ್ಮ

ಸಾರಾಂಶ

ಬೆಂಗಳೂರು (ಅ.9): ಸಿದ್ದರಾಮಯ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ಸಿದ್ದು ಸಂಪುಟ ಕಸರತ್ತು ಶುರುವಾಗಿದೆ. ನವೆಂಬರ್‌ ತಿಂಗಳ ಅಂತ್ಯಕ್ಕೆ ಮೇಜರ್‌ ಸಂಪುಟ ಸರ್ಜರಿ ಆಗುವ ಸಾಧ್ಯತೆ ಇದೆ.15 ಹಾಲಿ ಸಚಿವರಿಗೆ ಕೊಕ್‌ ನೀಡಿ ಅವರನ್ನು ಕಾಂಗ್ರೆಸ್‌ ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡುವ ಸಂಭವ ಇದೆ. ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ಪುನಾರಚನೆಗೆ ಪ್ಲ್ಯಾನ್‌ ಮಾಡಲಾಗಿದೆ. ದೇಶಪಾಂಡೆ, ಖಾದರ್‌, ಕೃಷ್ಣಪ್ಪ, ರೂಪಾ, ಹರಿಪ್ರಸಾದ್‌ಗೆ ಚಾನ್ಸ್‌ ಸಿಗುವ ಸಾಧ್ಯತೆ ಇದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:41 PM (IST) Oct 09

BBK 12 - ನಾನ್‌ ಯಾರ ತಂಟೆಗೂ ಹೋಗಲ್ಲ, ನನ್ನ‌ ತಂಟೆಗೆ ಬಂದ್ರೆ ಬಿಡಲ್ಲ - ಫಸ್ಟ್‌ ಟೈಮ್‌ ರೆಬೆಲ್‌ ಆದ ಮಲ್ಲಮ್ಮ

Bigg Boss Kannada Season 12: ನನಗೆ ಮಾತಾಡೋಕೆ ಬರಲ್ಲ, ನಾವು ಹಳ್ಳಿಯಿಂದ ಬಂದವರು, ಬಿಗ್‌ ಬಾಸ್‌ ಮನೆ ಆಟ ಗೊತ್ತಿಲ್ಲ ಎಂದು ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿದ್ದ ಮಲ್ಲಮ್ಮ ಈಗ ರೆಬೆಲ್‌ ಆಗಿದ್ದಾರೆ. ಮಲ್ಲಮ್ಮ ‘ನಾನ್‌ ಯಾರ ಸುದ್ದಿಗೋ ಹೋಗಲ್ಲ, ನನ್ನ ಸುದ್ದಿಗೆ ಬಂದ್ರೆ ಬಿಡಲ್ಲʼ ಎಂದಿದ್ದಾರೆ.

 

Read Full Story

11:08 PM (IST) Oct 09

ವಿಜಯ್‌ ದೇವರಕೊಂಡ ಜೊತೆ ಮದುವೆಯಾದ್ರೆ ಡಿವೋರ್ಸ್‌ ಆಗತ್ತೆ ಅಂತ ರಶ್ಮಿಕಾ ಮಂದಣ್ಣಗೆ ಭವಿಷ್ಯ ಹೇಳಿದ್ದೆ - ವೇಣು ಸ್ವಾಮಿ

ನಟಿ ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್‌ ಆಗಿ ಬ್ರೇಕಪ್‌ ಮಾಡಿಕೊಂಡಿದ್ದರು. ಇದಕ್ಕೆ ಸ್ಪಷ್ಟವಾದ ಕಾರಣ ಏನು ಎಂದು ಈ ಜೋಡಿ ಎಂದೂ ಕೂಡ ಹೇಳಿಕೊಂಡಿಲ್ಲ. ಇವರ ವೈವಾಹಿಕ ಜೀವನ, ಡಿವೋರ್ಸ್‌ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಮಾತು ವೈರಲ್‌ ಆಗ್ತಿದೆ.

Read Full Story

11:06 PM (IST) Oct 09

ಪುರುಷರು ಮರೆತೂ ತಿನ್ನಬಾರದ ಆಹಾರಗಳು, ಇವುಗಳನ್ನು ಕಡ್ಡಾಯವಾಗಿ ಬಿಟ್ಟುಬಿಡಿ

Foods men should not eat: ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ತಮ್ಮ ವೀರ್ಯದ ಗುಣಮಟ್ಟ ಮತ್ತು ಸಂಖ್ಯೆಯನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳಿಂದ ದೂರವಿರಬೇಕು.

Read Full Story

11:04 PM (IST) Oct 09

ಮೈಸೂರಿನಲ್ಲಿ ಬಾಲಕಿ ಅತ್ಯಾ*ರ ಕೊಲೆ ಪ್ರಕರಣ, ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ

ಮೈಸೂರಿನಲ್ಲಿ ಬಾಲಕಿ ಅತ್ಯಾ*ರ ಕೊಲೆ ಪ್ರಕರಣ, ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ ನಡೆಸಲಾಗಿದೆ. ಅಲೆಮಾರಿ ಬಾಲಕಿ ಮೇಲಿನ ಪೈಶಾಚಿಕ ಕೃತ್ಯದ ಬೆನ್ನಲ್ಲೇ ಆರೋಪಿ ಪತ್ತೆ ಹಚ್ಚಿದ ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

Read Full Story

11:02 PM (IST) Oct 09

ರೋಚಕ ತಿರುವಿನಲ್ಲಿ Naa Ninna Bidalaare - ಹಿತಾ ಪ್ರಾಣ ಕಾಪಾಡಲು ದುರ್ಗಾ ಜೀವ ಒತ್ತೆ!

ಮಾಂತ್ರಿಕ ಶಕ್ತಿಗಾಗಿ ಮಾಳವಿಕಾ ಏಳು ವರ್ಷದ ಹಿತಾಳನ್ನು ಬ*ಲಿ ಕೊಡಲು ಸಿದ್ಧಳಾಗಿದ್ದಾಳೆ. ಮಾಂತ್ರಿಕನ ಹದ್ದು ದಾಳಿಯಿಂದ ಪ್ರಜ್ಞೆ ತಪ್ಪಿರುವ ಹಿತಾಳನ್ನು ಉಳಿಸಲು, ದುರ್ಗಾಳು ಸಾವಿರಾರು ವರ್ಷಗಳ ರಹಸ್ಯವನ್ನು ಭೇದಿಸಿ, ದೇವಿಯ ಕಾಣೆಯಾದ ಆಭರಣಗಳನ್ನು ಹುಡುಕಲು ತನ್ನ ಪ್ರಾಣ ಪಣಕ್ಕಿಡಲು ಮುಂದಾಗಿದ್ದಾಳೆ.

Read Full Story

11:00 PM (IST) Oct 09

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ - ಸಚಿವ ಸತೀಶ್‌ ಜಾರಕಿಹೊಳಿ

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ 40 ಕೋಟಿ ರು. ಮೀಸಲಿಡಲಾಗಿದೆ. ಇದು ಎಸ್ಸಿ/ಎಸ್ಟಿ ಸಮುದಾಯದ 500 ವಿದ್ಯಾರ್ಥಿಗಳಿಗೆ ಒಮ್ಮೆಗೆ ತರಬೇತಿ ನೀಡಲಾಗುವುದು ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

Read Full Story

10:35 PM (IST) Oct 09

ಬನ್ನೇರುಘಟ್ಟ ಉದ್ಯಾನವನದಲ್ಲಿ ಸೌರ ವಿದ್ಯುತ್‌ ಸ್ಥಾವರ - ಸಚಿವ ಈಶ್ವರ್ ಖಂಡ್ರೆ

ದೇಶದಲ್ಲೇ ಪ್ರಥಮ ಪರಿಸರ ಸ್ನೇಹಿ ವಿದ್ಯುತ್ ಸೌಲಭ್ಯದ ಜೈವಿಕ ಉದ್ಯಾನಕ್ಕೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಮಾನವ-ಪ್ರಾಣಿ ಸಂಘರ್ಷ ತಪ್ಪಿಸಿ: ಕರ್ನಾಟಕವು ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.

Read Full Story

10:32 PM (IST) Oct 09

ಅಸುರನ ಹುಚ್ಚು ಬಿಡಿಸಿದ ಬಿಗ್‌ ಮನೆಯ ಪುಟ್ಟಿ - ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ

Bigg Boss Kananda 12: ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿ ಅವರ ಅಡುಗೆಗೆ ಟೀ ಪುಡಿ ಸೇರಿಸಿದಾಗ ಜಗಳ ಪ್ರಾರಂಭವಾಯಿತು. ಇದು ರಕ್ಷಿತಾ, ಸುಧಿ ಮತ್ತು ಮಂಜು ಭಾಷಿಣಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ, ಕೊನೆಗೆ ರಕ್ಷಿತಾ ಕಣ್ಣೀರು ಹಾಕಿದರು.

Read Full Story

10:05 PM (IST) Oct 09

ಕುರುಬರನ್ನು ಎಸ್ಟಿಗೆ ಸೇರಿಸಲು ಹೇಗೆ ಸಾಧ್ಯ? - ಮಾಜಿ ಸಂಸದ ಉಗ್ರಪ್ಪ ಆಕ್ರೋಶ

341,342 ಸೆಕ್ಷನ್ ಅಡಿಯಲ್ಲಿ ಬರುವವರು ಎಸ್ಸಿ, ಎಸ್ಟಿ ಆಗಲು ಅವಕಾಶ ಇದೆ. ಬುಡಕಟ್ಟಿನ ಯಾವ ಲಕ್ಷಣವಿಲ್ಲದ, ಎಸ್ಸಿ ಗುಣ ಇಲ್ಲದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಹೇಗೆ ಸಾಧ್ಯ ಎಂದು ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು.

Read Full Story

10:03 PM (IST) Oct 09

ರಾಜ್ಯದ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ - ಖುಷಿಯ ಬೆನ್ನಲ್ಲೇ ವಿರೋಧ ಯಾಕೆ? ಇದರ ಹಿನ್ನೆಲೆ ಏನು?

ಕರ್ನಾಟಕ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದೆ. ಈ ನಿರ್ಧಾರವು ನೋವಿನಿಂದ ಬಳಲುವ ಮಹಿಳೆಯರಿಗೆ ವರದಾನವಾಗಿದ್ದು, ಹಲವರು ಇದನ್ನು ಸ್ವಾಗತಿಸಿದ್ದಾರೆ. ಆದಾಗ್ಯೂ,  ವಿರೋಧ ಹಾಗೂ ಚರ್ಚೆಗಳು ಕೂಡ ವ್ಯಕ್ತವಾಗುತ್ತಿವೆ.

Read Full Story

09:56 PM (IST) Oct 09

ಕರ್ತವ್ಯದ ಹಾದಿಯಲ್ಲಿ ಅಗ್ನಿಶಾಮಕ ಯೋಧನ ದುರಂತ ಅಂತ್ಯ; ಹಿರೇಮಠ ಕುಟುಂಬದಲ್ಲಿ ನೀರವ ಮೌನ!

ಹುಬ್ಬಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಈರಯ್ಯ ಹಿರೇಮಠ, ಧಾರವಾಡದ ಕವಲಗೇರಿ ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
Read Full Story

09:50 PM (IST) Oct 09

ಪೌರಕಾರ್ಮಿಕರಿಗೆ ಬಿಡದಿಯಲ್ಲಿ ನಿವೇಶನ ಕಲ್ಪಿಸಿ ಕೊಡುವೆ - ಶಾಸಕ ಎಚ್.ಸಿ. ಬಾಲಕೃಷ್ಣ

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ 3 ರಿಂದ 4 ಎಕರೆ ಜಾಗ ಗುರುತಿಸಿದರೆ ಪೌರ ಕಾರ್ಮಿಕರಿಗೆ ನಿವೇಶನ ಕಲ್ಪಿಸಲು ಕ್ರಮ ವಹಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು. ಪ್ರತಿ ಪೌರನೌಕರನಿಗೆ 30 -40 ಅಳತೆಯ ನಿವೇಶನ ನೀಡುವುದಾಗಿ ಹೇಳಿದರು.

Read Full Story

09:41 PM (IST) Oct 09

ಉಚಿತ ವೈದ್ಯಕೀಯ ಶಿಕ್ಷಣ ನೀಡುವುದು ಸರ್ಕಾರಕ್ಕೂ ಕಷ್ಟ - ಸಚಿವ ಎಚ್.ಕೆ.ಪಾಟೀಲ್

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಉಚಿತ ವೈದ್ಯಕೀಯ ಕಾಲೇಜು ಆಗಿ ಪರಿವರ್ತನೆ ಆಗಿರುವುದು ಭಾರತೀಯ ವೈದ್ಯಕೀಯ ಶಿಕ್ಷಣದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಎಚ್.ಕೆ.ಪಾಟೀಲ್ ಶ್ಲಾಘಿಸಿದರು.

Read Full Story

09:31 PM (IST) Oct 09

ಶಾಸಕ ವೀರೇಂದ್ರ ಪಪ್ಪಿ ಲಾಕರ್ ರಹಸ್ಯ ರಿವೀಲ್ - ಇ.ಡಿ ಕೈಗೆ ಸಿಕ್ಕ ಬಂಗಾರದ ನಿಧಿ ಎಷ್ಟು ಗೊತ್ತಾ!

ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಇ.ಡಿ ಅಧಿಕಾರಿಗಳು 50 ಕೋಟಿ ರೂ. ಮೌಲ್ಯದ 44 ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಈ ಕೇಸಲ್ಲಿ ವಶಕ್ಕೆ ಪಡೆದ ಆಸ್ತಿ ಮೌಲ್ಯ ₹150 ಕೋಟಿ ದಾಟಿದೆ.

Read Full Story

09:24 PM (IST) Oct 09

ಚಿರಂಜೀವಿ ಮಾಡಬಾರದಾಗಿದ್ದ 7 ಸಿನಿಮಾಗಳು ಯಾವುವು? ಕೆರಿಯರ್‌ಗೆ ಕಪ್ಪು ಚುಕ್ಕೆಯಾದ ಚಿತ್ರಗಳಿವು!

ಚಿರಂಜೀವಿ ಅವರ ಕೆರಿಯರ್‌ನಲ್ಲಿ ಮರೆಯಲಾಗದ ಕೆಲವು ಚಿತ್ರಗಳಿವೆ. ಈ ಚಿತ್ರಗಳನ್ನು ಚಿರಂಜೀವಿ ಮಾಡಲೇಬಾರದಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಾರೆ. ಆ ಸಿನಿಮಾಗಳು ಯಾವುವು ಮತ್ತು ಅಭಿಮಾನಿಗಳು ಯಾಕೆ ಹಾಗೆ ಭಾವಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

Read Full Story

09:22 PM (IST) Oct 09

ಶಿವಾಜಿ to ಹನುಮಾನ್; ರಿಷಬ್ ಶೆಟ್ಟಿ ಬಹುನಿರೀಕ್ಷಿತ ಮುಂದಿನ ಸಿನಿಮಾ ಲಿಸ್ಟ್

ಶಿವಾಜಿ to ಹನುಮಾನ್; ರಿಷಬ್ ಶೆಟ್ಟಿ ಬಹುನಿರೀಕ್ಷಿತ ಮುಂದಿನ ಸಿನಿಮಾ ಲಿಸ್ಟ್ ಕುರಿತು ಅಭಿಮಾನಿಗಳು ಹುಡುಕಾಡುತ್ತಿದ್ದಾರೆ. ಕಾಂತಾರಾ ಚಾಪ್ಟರ್ 1 ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ಇದೀಗ ಪ್ರಮುಖ ಸಿನಿಮಾಗಳ ಶೂಟಿಂಗ್ ಆರಂಭಿಸುತ್ತಿದ್ದಾರೆ. ರಿಷಬ್ ಬಹುನೀರೀಕ್ಷಿತ ಸಿನಿಮಾ ಲಿಸ್ಟ್ ಇಲ್ಲಿದೆ.

Read Full Story

09:20 PM (IST) Oct 09

ಕಣ್ಣಿಗೆ ಹೀಗಾದ್ರೂ, ಮಗು ಹುಟ್ಟಿದ ಮಾಹಿತಿ ಕೊಟ್ಟ ಕಿಪ್ಪಿ ಕೀರ್ತಿ - ವಿಡಿಯೋ ಲೀಕ್​ ಬೆನ್ನಲ್ಲೇ ಇದೇನಿದು ಘಟನೆ?

ಸೋಷಿಯಲ್ ಮೀಡಿಯಾ ಸ್ಟಾರ್ ಕಿಪ್ಪಿ ಕೀರ್ತಿ, ಖಾಸಗಿ ವಿಡಿಯೋ ಲೀಕ್ ಪ್ರಕರಣದಲ್ಲಿ ಗೆಳೆಯನ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ವಿಡಿಯೋ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ, ಮರಿ ಹುಟ್ಟಿದ ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. 

Read Full Story

09:16 PM (IST) Oct 09

Amruthadhaare Serial - ಅಯ್ಯೋ.. ಗೌತಮ್‌ ನಿಜವಾದ ಮಗಳಿಗೆ ಇಂಥ ದುಸ್ಥಿತಿ ಬಂತಾ? ಎಷ್ಟು ಕಷ್ಟ ಕೊಡ್ತೀರಾ ನಿರ್ದೇಶಕರೇ?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಮಗಳು ಸಿಕ್ಕಿದ್ದಾಳೆ. ತನ್ನ ಜೊತೆಗೆ ಇರೋದು ನನ್ನ ಮಗಳು ಅಂತ ಅವನಿಗೆ ಗೊತ್ತಾಗಿಲ್ಲ, ಆದರೆ ಅವನು ಸ್ವಂತ ಮಗಳು ಎಲ್ಲಿದ್ದಾಳೆ ಎಂದು ಹುಡುಕುತ್ತಿದ್ದಾನೆ. ಈ ಮಧ್ಯೆ ವೀಕ್ಷಕರಿಗೆ ಅತಿಯಾದ ಬೇಸರದ ವಿಷಯವೊಂದಿದೆ.

 

Read Full Story

09:05 PM (IST) Oct 09

ಮೈಸೂರು ದಸರಾದಲ್ಲಿ ಬಲೂನು ಮಾರಲು ಬಂದ 9 ವರ್ಷ ಬಾಲಕಿಯನ್ನು ಅತ್ಯಾ*ಚಾರವೆಸಗಿ, ಕೊಲೆಗೈದ ಆರೋಪಿ ಅರೆಸ್ಟ್!

ದಸರಾ ಸಂಭ್ರಮದ ವೇಳೆ ಮೈಸೂರಿನ ಅರಮನೆ ಬಳಿ 9 ವರ್ಷದ ಅಲೆಮಾರಿ ಬಾಲಕಿ ರಾಧಿಕಾ ಮೇಲೆ ಅತ್ಯಾ*ಚಾರ ನಡೆಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಕಾರ್ತಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

09:02 PM (IST) Oct 09

ಮಹೇಶ್ ಬಾಬು, ರಾಜಮೌಳಿ ಸಿನಿಮಾದ ಟೈಟಲ್ ಇದೇನಾ? ನಿಜವಾದ್ರೆ ಇದಕ್ಕಿಂತ ದೊಡ್ಡ ಶಾಕ್ ಮತ್ತೊಂದಿಲ್ಲ!

ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬೋದಲ್ಲಿ ತಯಾರಾಗುತ್ತಿರುವ ಸಿನಿಮಾದ ಟೈಟಲ್ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಗಳು ಹರಿದಾಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಟೈಟಲ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

 

Read Full Story

08:40 PM (IST) Oct 09

ವಾಲ್ಮೀಕಿ ಹೆಸರಲ್ಲಿ ರಾಜ್ಯ ಸರ್ಕಾರದಿಂದ ಲೂಟಿ - ವಿಪ ಸದಸ್ಯ ಸಿ.ಟಿ.ರವಿ ಆರೋಪ

ಬಿಜೆಪಿ ಸರ್ಕಾರವು ವಾಲ್ಮೀಕಿ ಜಯಂತಿ ಮತ್ತು ಅಭಿವೃದ್ದಿ ನಿಗಮ ಸ್ಥಾಪಿಸಿದರೆ, ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಹೆಸರಿನಲ್ಲಿ ಹಗರಣ, ಅನುದಾನ ಲೂಟಿ ಮಾಡಿ ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಕೊಡಲಿಪೆಟ್ಟು ಹಾಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

Read Full Story

08:29 PM (IST) Oct 09

ಜಾತಿಗಣತಿ ಸಮೀಕ್ಷೆ ವಿರೋಧಿಸೋದು ಸಂವಿಧಾನಕ್ಕೆ ವಿರುದ್ಧ - ಸಚಿವ ಮಧು ಬಂಗಾರಪ್ಪ

ಸಂವಿಧಾನಾತ್ಮಕವಾಗಿ ನಡೆಯುತ್ತಿರುವ ಸಮೀಕ್ಷೆಯ ಬಗ್ಗೆ ದಾರಿ ತಪ್ಪಿಸುವ ಕೆಲಸ ಖಂಡನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತೀವ್ರವಾಗಿ ಖಂಡಿಸಿದ್ದಾರೆ.

Read Full Story

08:07 PM (IST) Oct 09

ರಾಜಮಾತೆ ಅಶ್ವಿನಿ ಗೌಡಗೆ ಮುಳುವಾಗುತ್ತಾ ಎರಡು ಪದ? ಕ್ಲಾಸ್ ತೆಗೆದುಕೊಳ್ತಾರಾ ಸುದೀಪ್?

Ashwini Gowda controversial comments: ಬಿಗ್‌ಬಾಸ್ ಮನೆಯಲ್ಲಿ ಆಟ ರಂಗೇರಿದ್ದು, ಅಶ್ವಿನಿ ಗೌಡ ಅವರ ಬಳಸಿದ ಎರಡು ಪದ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಚರ್ಚೆಯಾಗಬೇಕೆಂದು ವೀಕ್ಷಕರು ಬಯಸುತ್ತಿದ್ದಾರೆ.

Read Full Story

07:59 PM (IST) Oct 09

ತೀವ್ರ ವಿಚಾರಣೆ ಹಂತ ತಲುಪಿದ ಮುರುಘಾ ಶ್ರೀ ಪೋಕ್ಸೋ ಕೇಸ್ - ಮಠದ ಹಿಂಬಾಗಿಲಿನ ರಹಸ್ಯವೇನು?

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಪಾಕ್ಸೋ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಸಂತ್ರಸ್ತೆಯರ ಪರ ಸರ್ಕಾರಿ ವಕೀಲರ ವಾದ ಪೂರ್ಣಗೊಂಡಿದ್ದು, ಮಠದಲ್ಲಿ ಸ್ಥಳ ಪರಿಶೀಲನೆ ನಡೆಸಲು ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್ 13 ರಂದು ನಡೆಯಲಿದೆ.

Read Full Story

07:56 PM (IST) Oct 09

ಮೀನುಗಾರರಿಗೆ ಕೇಂದ್ರ ಅನುದಾನ ನೀಡದಿದ್ದರೇ ರಾಜ್ಯವೇ ಭರಿಸುತ್ತದೆ - ಸಚಿವ ಮಂಕಾಳ ವೈದ್ಯ

ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಪೂರಕ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಮನವಿ ಮಾಡಲಾಗುತ್ತದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

Read Full Story

07:54 PM (IST) Oct 09

ಚಿನ್ನವನ್ನು ಅಡ ಇಟ್ಟು Bigg Bossಗೆ ಬಟ್ಟೆ ಖರೀದಿಸಿದ್ದೆ - ಕರಿಬಸಪ್ಪ ಭಾವುಕ- ಹೇಳಿದ್ದೇನು ಕೇಳಿ

ಬಿಗ್​ಬಾಸ್​ ಕನ್ನಡ ಸೀಸನ್​ 12 ರಿಂದ ಎಲಿಮಿನೇಟ್ ಆದ ಕರಿಬಸಪ್ಪ, ತಮ್ಮ ಎಲಿಮಿನೇಷನ್ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಂದರ್ಶನವೊಂದರಲ್ಲಿ, ಬಿಗ್ ಬಾಸ್ ಮನೆಗೆ ಹೋಗಲು ಬಟ್ಟೆ ಖರೀದಿಸಲು ತಮ್ಮ ಚಿನ್ನದ ಬ್ರೇಸ್ಲೆಟ್ ಅಡವಿಟ್ಟಿದ್ದ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.
Read Full Story

07:45 PM (IST) Oct 09

ನಟಿಯಾಗಿ 22 ವರ್ಷ ಪೂರೈಸಿದ ನಯನತಾರಾ... ವೃತ್ತಿಜೀವನ ರೂಪಿಸಿದ ಟಾಪ್ 8 ಸಿನಿಮಾಗಳಿವು!

ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರನ್ನು ಸ್ಟಾರ್ ನಾಯಕಿಯನ್ನಾಗಿ ಮಾಡಿದ ಕೆಲವು ಚಿತ್ರಗಳಿವೆ. ಚಂದ್ರಮುಖಿಯಿಂದ ಜವಾನ್‌ವರೆಗೆ ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

 

Read Full Story

07:33 PM (IST) Oct 09

ಯಲಹಂಕ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ, ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಲವರ್ಸ್

ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ, ಪ್ರೀತಿಗೆ ಮನೆಯವರ ವಿರೋಧದಿಂದ ನೊಂದ ಪ್ರೇಮಿಗಳಿಬ್ಬರು ಲಾಡ್ಜ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಘಟನೆಯಿಂದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

Read Full Story

07:16 PM (IST) Oct 09

ಗ್ರೀನ್ ಕಲರ್ ಆಟೋ ಓಡಿಸಿ ಅಂದ್ರೆ, ಆಟೋದ ಮೇಲೆ ಲಾಲ್‌ಬಾಗ್ ಇಟ್ಕೊಂಡು ಬಂದ ಡ್ರೈವರ್!

ಆಟೋ ಚಾಲಕ ಅಂಜಿಯವರು ತಮ್ಮ ಆಟೋ ರಿಕ್ಷಾವನ್ನು ಚಲಿಸುವ ಉದ್ಯಾನವನವನ್ನಾಗಿ ಪರಿವರ್ತಿಸಿ, ದೇಶದ ಗಮನ ಸೆಳೆದಿದ್ದಾರೆ. ಈ 'ಗೋ ಗ್ರೀನ್ ಆಟೋ' ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ವಿಶಿಷ್ಟ ಪರಿಸರ ಪ್ರೇಮವು ಎಲ್ಲರಿಗೂ ಮಾದರಿಯಾಗಿದೆ.
Read Full Story

07:14 PM (IST) Oct 09

ಕೆಎಸ್‌ಆರ್‌ಟಿಸಿ ಲಾಭದಲ್ಲಿದ್ದು, ಶೀಘ್ರದಲ್ಲೇ 900 ಬಸ್‌ಗಳ ಖರೀದಿ - ಸಚಿವ ರಾಮಲಿಂಗಾರೆಡ್ಡಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಕ್ತಿ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಇದರಿಂದಾಗಿ ಮಹಿಳಾ ಉದ್ಯೋಗದಲ್ಲಿ ಶೇ.23ರಷ್ಟು ಹೆಚ್ಚಳವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Read Full Story

06:51 PM (IST) Oct 09

ತಲೆ ಮರೆಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಸರ್ಕಾರದ ಬಲವಾದ ವಾದ ಮತ್ತು ತಿಮರೋಡಿ ಪರ ವಕೀಲರ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

Read Full Story

06:44 PM (IST) Oct 09

200ಕ್ಕೂ ಹೆಚ್ಚು ಕತೆ ರಿಜೆಕ್ಟ್ ಮಾಡಿ 'ಉಗ್ರಾಯುಧಮ್' ಒಪ್ಪಿಕೊಂಡೆ - ನಟ ಶ್ರೀಮುರಳಿ ಹೇಳಿದ್ದೇನು?

ಐತಿಹಾಸಿಕ ಕಥೆಗಾಗಿ ಕಾಯುತ್ತಿದ್ದ ನನಗೆ ಉಗ್ರಾಯುಧಮ್ ಕಥೆ ಬಹಳ ಇಷ್ಟವಾಯ್ತು. ನನ್ನ ಇನ್ನೊಂದು ಸಿನಿಮಾ ಪರಾಕ್‌ಗೂ ಮೊದಲೇ ಈ ಸಿನಿಮಾದ ಶೂಟಿಂಗ್‌ ನಡೆಯಲಿದೆ ಎಂದು ನಟ ಶ್ರೀಮುರಳಿ ತಿಳಿಸಿದರು.

Read Full Story

06:37 PM (IST) Oct 09

ಸಮುದ್ರ ಅಲೆಗಳ ಅಬ್ಬರಕ್ಕೆ ಅಂಕೋಲಾ ಬಂದರಿನಲ್ಲಿ ದೋಣಿ ಮುಳುಗಡೆ; ಭಾರಿ ಮಳೆಗೆ ಜಮಖಂಡಿಯಲ್ಲಿ ಪ್ರವಾಹ!

ಉತ್ತರ ಕನ್ನಡದ ಅಂಕೋಲಾದಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ಮತ್ತೊಂದೆಡೆ, ಬಾಗಲಕೋಟೆಯ ಜಮಖಂಡಿಯಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Read Full Story

06:17 PM (IST) Oct 09

ನನ್ನ ಮಕ್ಕಳನ್ನು ಮೇಕಪ್‌, ಹೇರ್‌ಸ್ಟೈಲ್‌ ಆರ್ಟಿಸ್ಟ್‌ ಮಾಡ್ತೀನಿ - ನಿರ್ದೇಶಕ ಕರಣ್‌ ಜೋಹರ್‌

ನನ್ನ ಮಕ್ಕಳನ್ನು ಮೇಕಪ್‌ ಆರ್ಟಿಸ್ಟ್‌, ಹೇರ್‌ಸ್ಟೈಲಿಸ್ಟ್‌ ಆಗಲು ಹೇಳಲು ಹೇಳುತ್ತೇನೆಯೇ ಹೊರತು ನಟರಾಗಿ, ನಿರ್ದೇಶಕರಾಗಿ ಅನ್ನೋದಿಲ್ಲ ಎಂದಿದ್ದಾರೆ ನಿರ್ದೇಶಕ ಕರಣ್‌ ಜೋಹರ್‌. ಅವರ ಈ ಮಾತು ಟ್ರೆಂಡಿಂಗ್‌ನಲ್ಲಿದೆ.

Read Full Story

06:09 PM (IST) Oct 09

ಇಂಗ್ಲೆಂಡ್‌ನ ಹಿಂದೂ ಶಾಲೆಗೆ ಅತ್ಯುತ್ತಮ ರೇಟಿಂಗ್ ನೀಡಿದ ಯುಕೆ ಶಿಕ್ಷಣ ಇಲಾಖೆ

First Hindu state school in UK: ಯುಕೆಯ ಮೊದಲ ಸರ್ಕಾರಿ ಅನುದಾನಿತ ಹಿಂದೂ ಶಾಲೆಯಾದ ಹ್ಯಾರೋದಲ್ಲಿರುವ ಕೃಷ್ಣ ಅವಂತಿಗೆ, ದೇಶದ ಅಧಿಕೃತ ಶಿಕ್ಷಣ ಕಾವಲು ಸಂಸ್ಥೆ ಆಫ್‌ಸ್ಟೆಡ್‌ನಿಂದ 'ಅತ್ಯುತ್ತಮ' ರೇಟಿಂಗ್ ಲಭಿಸಿದೆ.

Read Full Story

06:08 PM (IST) Oct 09

Mirai Movie OTT Release - ಭರ್ಜರಿ ಆಕ್ಷನ್‌, ದೈವತ್ವದ ನಡುವಿನ ಘರ್ಷಣೆಯ ಸಿನಿಮಾ ಒಟಿಟಿಗೆ ಬಂತು!

ಫ್ಯಾಂಟಸಿ ಆಕ್ಷನ್ ಜಾನರ್‌ನ ಮಿರಾಯ್‌ ಸಿನಿಮಾವು ಜಿಯೋಹಾಟ್‌ಸ್ಟಾರ್‌ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾದಲ್ಲಿ ಏನು ವಿಶೇಷತೆಗಳು ಇವೆ? ಯಾರಿದ್ದಾರೆ? ಈ ಸಿನಿಮಾದ ಕಥೆ ಏನು? ಮುಂತಾದ ವಿಚಾರಗಳು ಇಲ್ಲಿವೆ. 

 

Read Full Story

05:55 PM (IST) Oct 09

ಮಾಲೀಕ ಊಟಕ್ಕೆ ಹೋದಾಗ 1/2 ಕೆಜಿ ಚಿನ್ನ, 45 ಲಕ್ಷ ರೂ. ಹಣ ಕದ್ದು ಪರಾರಿ!

ಬೆಂಗಳೂರಿನ ಮುತ್ಯಾಲನಗರದ ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರನೇ ತನ್ನ ಸಹಚರನೊಂದಿಗೆ ಸೇರಿ 540 ಗ್ರಾಂ ಚಿನ್ನಾಭರಣ ಕದ್ದಿದ್ದ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಜಾಲಹಳ್ಳಿ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಿ, ₹45 ಲಕ್ಷ ಮೌಲ್ಯದ 420 ಗ್ರಾಂ ಚಿನ್ನ ಜಪ್ತಿ.

Read Full Story

05:50 PM (IST) Oct 09

ಮಯೂರ ಶರ್ಮನಾದ ಅಪ್ಪು;‌ ನಿಧಿ ಹುಡುಕುವ ಶಿರಸಿ ಹುಡುಗರ Maarigallu ವೆಬ್ ಸಿರೀಸ್‌ ಒಟಿಟಿ ರಿಲೀಸ್‌ ಯಾವಾಗ?

ನಟ ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ‘ಮಾರಿಗಲ್ಲು’ ವೆಬ್‌ ಸಿರೀಸ್‌ ರಿಲೀಸ್‌ ಆಗಲಿದೆ. ಕದಂಬ ರಾಜದ ಮಯೂರ ಶರ್ಮನ ಪಾತ್ರದಲ್ಲಿ ಪುನೀತ್‌ ನಟಿಸಿದ್ದು, ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಕಥೆ ಇಲ್ಲಿದೆ. ಹಾಗಾದರೆ ಒಟಿಟಿಯಲ್ಲಿ ರಿಲೀಸ್‌ ಆಗೋದು ಯಾವಾಗ?

 

Read Full Story

05:48 PM (IST) Oct 09

ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದಲ್ಲಿ ದಿಟ್ಟ ಮಹಿಳೆಯ ಪಾತ್ರ - ನಟಿ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ, ಕುಮಾರ್‌ ಬಂಗಾರಪ್ಪ ಮುಖ್ಯ ಪಾತ್ರಗಳಲ್ಲಿರುವ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಸಿನಿಮಾದ ಕ್ಯಾರೆಕ್ಟರ್‌ ಟೀಸರ್‌ ಬಿಡುಗಡೆಯಾಗಿದೆ. ನನ್ನ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ ಎಂದು ರಾಗಿಣಿ ತಿಳಿಸಿದರು.

Read Full Story

05:19 PM (IST) Oct 09

ಡೆವಿಲ್‌ನಲ್ಲಿ ಬೇರೆ ರೀತಿಯ ದರ್ಶನ್‌ ಕಾಣಿಸುತ್ತಾರೆ, ಅವರ ಲುಕ್ಕು.. ನಟಿ ರಚನಾ ರೈ ಹೇಳಿದ್ದೇನು?

ಬರವಣಿಗೆ ನನ್ನ ಆಸಕ್ತಿ ಕ್ಷೇತ್ರವೂ ಹೌದು. ‘ಓ ಮೈ ಡಾಗ್’ ಎನ್ನುವ ಪುಸ್ತಕ ಬರೆದಿದ್ದೇನೆ. ತುಳು ಭಾಷೆಯಲ್ಲಿ ‘ಸರ್ಕಸ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಅದು ಸೂಪರ್‌ ಹಿಟ್‌ ಆಗಿದೆ ಎಂದು ನಟಿ ರಚನಾ ರೈ ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story

More Trending News