ನಟ ಪುನೀತ್ ರಾಜ್‌ಕುಮಾರ್ ನಟಿಸಿರುವ ‘ಮಾರಿಗಲ್ಲು’ ವೆಬ್ ಸಿರೀಸ್ ರಿಲೀಸ್ ಆಗಲಿದೆ. ಕದಂಬ ರಾಜದ ಮಯೂರ ಶರ್ಮನ ಪಾತ್ರದಲ್ಲಿ ಪುನೀತ್ ನಟಿಸಿದ್ದು, ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಕಥೆ ಇಲ್ಲಿದೆ. ಹಾಗಾದರೆ ಒಟಿಟಿಯಲ್ಲಿ ರಿಲೀಸ್ ಆಗೋದು ಯಾವಾಗ?
ಪಿಆರ್‌ಕೆ ಪ್ರೊಡಕ್ಷನ್ಸ್‌ನ ಸಹಯೋಗದಲ್ಲಿ 'ಮಾರಿಗಲ್ಲು' ವೆಬ್ ಸಿರೀಸ್ ರಿಲೀಸ್ ಆಗಲಿದೆ. ಘೋಷಿಸಿದೆ. ಅಕ್ಟೋಬರ್ 31ರಿಂದ zee5ನಲ್ಲಿ ಈ ಸಿರೀಸ್ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಮಾರಿಗಲ್ಲು ವೆಬ್‌ಸಿರೀಸ್ ಟೀಸರ್ ರಿಲೀಸ್ ಆಗಿದೆ. ನಟ ಧನಂಜಯ ನಿರೂಪಣೆಯ ಮೂಲಕ ಈ ಸಿರೀಸ್ ಟೀಸರ್ ಶುರುವಾಲಿದೆ.
ಕದಂಬ ರಾಜವಂಶದ ಸ್ಥಾಪಕ, ಕರ್ನಾಟಕದ ಮೊದಲ ರಾಜ ಮಯೂರ ಶರ್ಮ ಪಾತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇದು ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ.
4ನೇ ಶತಮಾನದಲ್ಲಿ ಕದಂಬರು ಆಳ್ವಿಕೆ ಮಾಡಿದ್ದರು. ಈ ಕಥೆ ಇಲ್ಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮ ಪರಂಪರೆಯನ್ನು ತಿಳಿಸುತ್ತದೆ. ಕದಂಬರ ಕಾಲದಲ್ಲಿ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಕಥೆ ಇಲ್ಲಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದವುಗಳಿಗೆ ಒಳಗಾದ ಪಾತ್ರಗಳು ಈ ವೆಬ್ ಸಿರೀಸ್‌ನಲ್ಲಿವೆ. ಅಷ್ಟೇ ಅಲ್ಲದೆ ಶಿರಸಿಯ ಪ್ರಖ್ಯಾತ ಬೇಡರ ವೇಷವನ್ನು ಕೂಡ ನೋಡಬಹುದು.
ಪಾತ್ರವರ್ಗದಲ್ಲಿ ಯಾರು?
ಈ ಸಿರೀಸ್‌ನಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ, ಪ್ರವೀಣ್ ತೇಜ್ ನಟಿಸಿದ್ದಾರೆ. ಡ್ರಾಮಾ ಜೂನಿಯರ್ಸ್ ಶೋ ಖ್ಯಾತಿಯ ಎಎಸ್ ಸೂರಜ್, ಪ್ರಶಾಂತ್ ಸಿದ್ದಿ, ನಿನಾದ್ ಹರಿತ್ಸ ತಾರಾಬಳಗದಲ್ಲಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಈ ಸಿರೀಸ್ ನಿರ್ಮಿಸಿದ್ದು, ದೇವರಾಜ್ ಪೂಜಾರಿ ಅವರು ಬರೆದು ನಿರ್ದೇಶಿಸಿದ್ದಾರೆ. ಎಸ್ ಕೆ. ರಾವ್ ಛಾಯಾಗ್ರಹಣ, ಎಲ್ ವಿ ಮುತ್ತು, ಎಲ್ ವಿ ಗಣೇಶ್ ಸಂಗೀತ ನಿರ್ದೇಶನ, ರವಿ ಹಿರೇಮಠ್ ಸೌಂಡ್ ಡಿಸೈನ್ ಇದಕ್ಕಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಏನಂದ್ರು?
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, "ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ಮೂಡಿಬಂದ ಸಿನಿಮಾ, ಸಿರೀಸ್‌ನಲ್ಲಿ ಮಾರಿಗಲ್ಲು ತುಂಬ ವಿಶೇಷವಾಗಿದೆ. ಇದು ಪುನೀತ್ ರಾಜ್‌ಕುಮಾರ್ ಅವರ ಕನಸುಗಳಲ್ಲಿ ಒಂದು. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್ ಸಿರೀಸ್ ಮೂಲಕ ತೆರೆ ಮೇಲೆ ತರಲು ಬಯಸುತ್ತಿದ್ದರು. ನಮ್ಮ ನೆಲದಲ್ಲಿ ಬೇರೂರಿರುವ ಕಥೆಗಳು ಇದಾಗಿದೆ. ಇದು ಭಾವನೆಯಲ್ಲಿ ಸಾರ್ವತ್ರಿಕವಾಗಿದೆ. ಇದು ನಿಗೂಢತೆ, ಭಕ್ತಿ, ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ವಿಷಯವನ್ನು ಹೊಂದಿದೆ. ZEE5 ನಲ್ಲಿ ರಿಲೀಸ್ ಆಗ್ತಿರೋದು ಖುಷಿ ಕೊಟ್ಟಿದೆ” ಎಂದು ಹೇಳಿದ್ದಾರೆ.
ನಟ ರಂಗಾಯಣ ರಘು ಏನಂದ್ರು?
ನಟ ರಂಗಾಯಣ ರಘು ಮಾತನಾಡಿ, "ನಾನು ಮಾರಿಗಲ್ಲು ಸಿನಿಮಾದ ಭಾಗವಾಗಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ದೈವಿಕವಾದ ಒಂದು ಸಸ್ಪೆನ್ಸ್, ಆಳವಾದ ಭಾವನಾತ್ಮಕ, ಸಾಂಸ್ಕೃತಿಕ ಬೇರುಗಳನ್ನು ಸಂಯೋಜಿಸುವ ಕಥೆ ಇಲ್ಲಿದೆ. ಈ ಸಿರೀಸ್‌ನ ಪ್ರತಿಯೊಂದು ಪಾತ್ರವು ಮಾನವೀಯತೆ, ಸಂಘರ್ಷದ ಛಾಯೆಗಳನ್ನು ಹೊಂದಿದೆ. ಇಲ್ಲಿರುವ ನಿಗೂಢತೆ, ಹಾಸ್ಯ, ಸಾಂಸ್ಕೃತಿಕ ವಿಷಯಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ” ಎಂದು ಹೇಳಿದ್ದಾರೆ.
"ನಮ್ಮ ಭಾಷೆ ನಮ್ಮ ಕಥೆಗಳು" ಎಂಬ ನಮ್ಮ ಭರವಸೆಯಂತೆ, ಮಾರಿಗಲ್ಲು ನಾವು ಇದುವರೆಗೆ ಮಾಡಿದ ಯಾವುದೇ ವೆಬ್‌ಸಿರೀಸ್‌ಗಿಂತ ಭಿನ್ನವಾಗಿದೆ. ಕರ್ನಾಟಕದ ದಂತಕಥೆಗಳನ್ನು ನಿಗೂಢ, ಭಾವನಾತ್ಮಕ, ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಇದನ್ನು ಜೀವಂತಗೊಳಿಸುವ ದೈವಿಕ ಜಾನಪದ ಥ್ರಿಲ್ಲರ್ ಇದಾಗಿದೆ. ನಂಬಿಕೆ, ಜಾನಪದದಿಂದ ರಕ್ಷಿಸಲ್ಪಟ್ಟ ಕಳೆದುಹೋದ ಕದಂಬ ನಿಧಿಯನ್ನು ಕಂಡುಹಿಡಿಯುವ ಕಥೆ ಇದಾಗಿದೆ" ಎಂದು ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೇಳಿದ್ದಾರೆ.
