ಸೋಷಿಯಲ್ ಮೀಡಿಯಾ ಸ್ಟಾರ್ ಕಿಪ್ಪಿ ಕೀರ್ತಿ, ಖಾಸಗಿ ವಿಡಿಯೋ ಲೀಕ್ ಪ್ರಕರಣದಲ್ಲಿ ಗೆಳೆಯನ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ವಿಡಿಯೋ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ, ಮರಿ ಹುಟ್ಟಿದ ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. 

ಹೇಳಿ ಜನರೇ ಎನ್ನುತ್ತಲೇ ಸೋಷಿಯಲ್​​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸ್ತಿರೋ ಯುವತಿ ಕಿಪ್ಪಿ ಕೀರ್ತಿ (Kipi Keerthi). ಕೆಲವು ದಿನಗಳಿಂದ ಈಕೆಯ ಖಾಸಗಿ ವಿಡಿಯೋ ಲೀಕ್ ಆಗಿ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡಿತ್ತು. ಈಕೆಯ ಸ್ನೇಹಿತರು ಡ್ರಿಂಕ್ಸ್​ನಲ್ಲಿ ಏನೋ ಮಿಕ್ಸ್​ ಮಾಡಿ ಕೊಟ್ಟು ವಿಡಿಯೋ ಮಾಡಿದ್ದಾರೆ, ಫೋಟೋ ಲೀಕ್​ ಮಾಡಿದ್ದಾರೆ ಎಂದು ಕಿಪ್ಪಿ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿದ್ದಳು. ಅಷ್ಟಕ್ಕೂ ತನ್ನಷ್ಟಕ್ಕೆ ತಾನು ವಿಡಿಯೋ ಮಾಡಿ ಒಂದಿಷ್ಟು ಫಾಲೋವರ್ಸ್​ ಪಡೆದದ್ದ ಕಿಪ್ಪಿಗೆ ರಿಯಾಲಿಟಿ ಷೋ ಒಂದರಲ್ಲಿ ಆಫರ್​ ಬಂದು ಇನ್ನೂ ಫೇಮಸ್​ ಆದಳು. ಇದರ ಬೆನ್ನಲ್ಲೇ ಇವಳ ಜೊತೆ ಫ್ರೆಂಡ್​ಷಿಪ್​ಗೂ ಮೀರಿದ ಸ್ನೇಹ ಮಾಡಲು ಬಂದರು ಕೆಲವರು. ಆ ಬಗ್ಗೆ ಸಾಕಷ್ಟು ಪ್ರಚಾರವೂ ಆಗಿ ಫೇಮಸ್ಸೂ ಆದರು. ಇದಾದ ಬಳಿಕ, ವಿಡಿಯೋ ಲೀಕ್​ ಆಗಿ ಹೋಯ್ತು.

ಗೆಳೆಯನ ವಿರುದ್ಧ ಕೇಸ್​

ಕೊನೆಗೆ, ಕಿಪ್ಪಿ ಕೀರ್ತಿ ಗೆಳೆಯನ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದಳು. ಈಗ ಸದ್ಯ ಎಲ್ಲ ಗಲಾಟೆ ಮುಗಿದಿರುವ ನಡುವೆಯೇ, ಕಿಪ್ಪಿ ಕೀರ್ತಿಯ ಕಣ್ಣಿಗೆ ಏನೋ ಸಮಸ್ಯೆಯಾಗಿದೆ. ಒಂದು ಕಣ್ಣು ಬಿಡಲಾರದ ಸ್ಥಿತಿಯಲ್ಲಿದ್ದಾಳೆ ಕಿಪಿ. ಇದರ ಬಗ್ಗೆ ಒಂದು ವಿಡಿಯೋ ಮಾಡಿರುವ ಆಕೆ, ಸದ್ಯ ಕಣ್ಣಿನ ಸಮಸ್ಯೆ ಇದೆ. ಗ್ಲಾಸ್​ ಹಾಕಿಕೊಂಡೇ ಹೋಗಬೇಕು. ಕಣ್ಣು ಬಿಡಲಾರದ ಸಮಸ್ಯೆ ಉಂಟಾಗಿದೆ ಎನ್ನುತ್ತಲೇ ಟ್ರೋಲ್​ ಏನೇ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ ಎಂದು ಟ್ರೋಲ್​​ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾಳೆ. ಆದರೆ ಕಣ್ಣಿಗೆ ಏನು ಆಯಿತು ಎಂದು ಹೇಳಲಿಲ್ಲ. ಇದನ್ನು ನೋಡಿದರೆ ಜೇನು ಹುಳವೋ ಅಥವಾ ಇನ್ನೇನೋ ಹುಳವೋ ಕಚ್ಚಿದಂತಿದೆ.

ಮಗು ಹುಟ್ಟಿದ ಸಂತಸ

ಅಷ್ಟಕ್ಕೂ ಕಿಪಿ ಕೀರ್ತಿ ಈ ವಿಡಿಯೋ ಮಾಡಿರುವ ಹಿಂದಿನ ಉದ್ದೇಶ ತನ್ನ ಮನೆಯಲ್ಲಿರುವ ಬೆಕ್ಕು ಮೋನುಗೆ ಮಗು ಹುಟ್ಟಿರುವ ಸಂತೋಷನ್ನು ಹಂಚಿಕೊಳ್ಳಲು. ಮೋನುನೇ ಚಿಕ್ಕ ಮಗು. ಅದಕ್ಕೆ ಮಗು ಹುಟ್ಟಿರುವುದು ತುಂಬಾ ಖುಷಿಯಾಯಿತು ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈಚೆಗಷ್ಟೇ ಕಿಪಿ, ತನಗಾದ ಹಿಂಸೆಯನ್ನು ಹೇಳಿಕೊಂಡಿದ್ದಳು. ನನಗೆ ಸ್ನೇಹಿತ ಮನೆಗೆ ಕರೆದುಕೊಂಡು ಹೋಗಿ ಡ್ರಿಂಕ್ಸ್​ನಲ್ಲಿ ಏನೋ ಮಿಕ್ಸ್​ ಮಾಡಿದ್ದು, ಆ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಹೀಗೆ ಅಂತ ಬೇರೆ ಬೇರೆಯವರು ಹೇಳಿದ್ರು, ಆಮೇಲೆ ಅದು ನನಗೂ ನಿಜ ಅನ್ನಿಸ್ತಿದೆ ಎಂದು ಕಿಪಿ ಹೇಳಿದ್ದಳು. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದರ್ಶನ್​ ಎಂಬಾತನ ವಿರುದ್ಧ ಕಿಪ್ಪಿ ಕೀರ್ತಿ ದೂರು ದಾಖಲಿಸಿದ್ದಳು.

ಲವ್​ ಬ್ರೇಕಪ್​

ಕಿಪಿ ಕೀರ್ತಿ ದಾಖಲು ಮಾಡಿರುವ ಕೇಸ್​ ಇನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಷ್ಟಕ್ಕೂ, ಈಕೆಯ ಲವ್ ಬ್ರೇಕಪ್‌ಗಳ ಕೆಲ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು ಇದೆ. ಮುತ್ತು ಜೊತೆಯಲ್ಲಿ ಬ್ರೇಕಪ್ ಮಾಡಿಕೊಂಡದ್ದೇನೆ. ನನ್ನ ಮತ್ತು ಮುತ್ತು ಜೊತೆ ಎಲ್ಲವೂ ಚೆನ್ನಾಗಿಯೇ ಇತ್ತು. ಸುನೀಲ್ ನನ್ನ ಒಳ್ಳೆಯ ಫ್ರೆಂಡ್. ಸ್ನೇಹ ಹೊರತುಪಡಿಸಿ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ. ಸುನೀಲ್ ಜೊತೆಗಿನ ಸ್ನೇಹವನ್ನು ಮುತ್ತು ಅನುಮಾನದಿಂದ ನೋಡಿದ್ದನು ಎಂದು ಕಿಪಿ ಕೀರ್ತಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಹೇಳಿಕೊಂಡಿದ್ದರು.

View post on Instagram